ಅಭಿಪ್ರಾಯ / ಸಲಹೆಗಳು

Crime Reported in Surathkal PS    

V T ROAD KULAI ನಿವಾಸಿ ಈ ಪ್ರಕರಣದ ಪಿರ್ಯಾದಿ PRABHAKAR KULAI ದಾರರ ಬಾಬ್ತು ಮನೆಯ ಕಂಪೌಂಡಿನ ಒಳಗಡೆ ಇರುವ ಧೂಮಾವತಿ ಬಂಟ ಮತ್ತು ಮೈಸಂದಾಯ ದೈವದ ದೈವಸ್ಥಾನ ಇದ್ದು , ದೈವಕ್ಕೆ ಅಳವಡಿಸಿದ ಬೆಳ್ಳಿಯ ಕವಚ ಇರುವ ಖಡ್ಸಾಲೆ (ಖಡ್ಗ) ವನ್ನು ದಿನಾಂಕ 10.10.2021 ರಂದು ರಾತ್ರಿ 10.00 ಗಂಟೆಯಿಂದ ದಿನಾಂಕ 11.10.2021 ಬೆಳಿಗ್ಗೆ 7.00 ಗಂಟೆಯ ಮಧ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಅಂದಾಜು ಮೌಲ್ಯ  ಸುಮಾರು 25,000/- ರೂ ಆಗಿರುತ್ತದೆ ಎಂಬಿತ್ಯಾದಿ

Crime Reported in Mangalore West Traffic PS                          

ಪಿರ್ಯಾದಿ SATHISHA ರವರು ಸಹದ್ಯೋಗಿ ಸೆಕ್ಯುರಿಟಿ ಗನ್ ಮ್ಯಾನ್ ಧನಂಜಯ್ ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಪಿರ್ಯಾದಿದಾರರ ಮನೆ ಯೆಯ್ಯಾಡಿಯಿಂದ ನಗರದ ಕೆಪಿಟಿ ಮುಖಾಂತರವಾಗಿ NH-66 ರಲ್ಲಿ ಸುರತ್ಕಲ್ ಕಡೆಗೆ ದಿನಾಂಕ: 09-10-2021 ರಂದು ಸಮಯ ರಾತ್ರಿ 7.25 ಗಂಟೆಗೆ ಕೊಟ್ಟಾರ ಚೌಕಿಯ ಮೇಲು ಸೇತುವೆಯಲ್ಲಿ ಹೋಗುತ್ತಿರುವಾಗ, ಅಂದರೆ ಉದ್ಭವ ಹೋಟೆಲಿನ ಎದುರು ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಬಂದ KA-20-MD-6999ನೇ ದರ ಚಾಲಕರಾದ ಪ್ರಶಾಂತ್ ಶೆಟ್ಟಿ ರವರು ಸದರಿ ಕಾರನ್ನು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿನ ಹಿಂದುಗಡೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹ ಸವಾರ ಧನಂಜಯ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ತಲೆಯ ಹಿಂಭಾಕ್ಕೆ ಗುದ್ದಿದ ರಕ್ತಗಾಯ, ಎಡ ಹಣೆಯ ಭಾಗಕ್ಕೆ ರಕ್ತಗಾಯ, ಎಡ ಕೈ ಹಾಗೂ ಬಲ ಕೈ ಯ ಮೊಣಗಂಟಿಗೆ ತಕ್ತಗಾಯ ಎಡಗಾಲಿನ ಪಾದದ ಭಾಗಕ್ಕೆ ಮತ್ತು ಬಲಗಾಲಿನ ಮಂಡಿಯ ಭಾಗಕ್ಕೆ ರಕ್ತಗಾಯವಾಗಿರುತ್ತದೆ. ಅದೇ ರೀತಿ ಸಹ ಸವಾರರಾದ ಧನಂಜಯ್ ರವರ ಹಣೆಯ ಭಾಗಕ್ಕೆ ಗುದ್ದಿದ ರಕ್ತಗಾಯ, ಮುಖದ ಭಾಗಕ್ಕೆ ಅಲ್ಲಲ್ಲಿ ರಕ್ತಗಾಯ, ಎಡ ಕೈ ಯ ಬೆರಳುಗಳು ಹಾಗೂ ಎಡಕೈಯ ಮೊಣಗಂಟಿಗೆ ರಕ್ತಗಾಯ ಎಡಕಾಲಿನ ಮಂಡಿಗೆ ರಕ್ತಗಾಯವಾಗಿದ್ದು ಅಂತೆಯೆ ಅಲ್ಲಿಗೆ ಬಂದ ಹೈವೇ ಪೊಲೀಸರು ಕುಂಟಿಕಾನ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರನ್ನು ಮತ್ತು ಧನಂಜಯ್ ರವರನ್ನು  ಹೊರ ರೋಗಿಯಾಗಿ ದಾಖಲಿಸಿರುವುದಾಗಿದೆ.

Crime Reported in Traffic North PS

ಪಿರ್ಯಾದಿ Chandrakala ರವರು ದಿನಾಂಕ:07-10-2021 ತನ್ನ ಅಣ್ಣನ ಬಾಬ್ತು KA-19-EX-4079 ನಂಬ್ರದ ಸ್ಕೂಟರಿನಲ್ಲಿ ತನ್ನ ಮನೆಯಿಂದ ಕೊಟ್ಟಾರ  ಚೌಕಿ, ಕೋಡಿಕಲ್ ಕ್ರಾಸ್ ಮೂಲಕ ಸುರತ್ಕಲ್ ನಾಡ ಕಛೇರಿ ಕಡೆಗೆ ಹೋಗುತ್ತಾ  ಬೆಳಿಗ್ಗೆ ಸುಮಾರು 11:00 ಗಂಟೆಗೆ ನೋಂದಣಿ ಸಂಖ್ಯೆ ತಿಳಿಯದ ಕಂದು ಬಣ್ಣದ ಕಂಟೈನರ್ ಲಾರಿಯನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರನ್ನು ಬಲಬದಿಯಿಂದ ಓವರ್ ಟೇಕ್ ಮಾಡುವ ಭರದಲ್ಲಿ ಪಿರ್ಯಾದಿದಾರರ ಸ್ಕೂಟರಿನ ಬಲಬದಿಗೆ ಡಿಕ್ಕಿ ಪಡಿಸಿದ ಪರಿಣಾಮ, ಪಿರ್ಯಾದಿದಾರರು ಸ್ಕೂಟರ್ ಸಮೇತ ರಾ ಹೆ 66 ನೇ ಡಾಮಾರು ರಸ್ತೆಗೆ ಬಿದ್ದು ಹಣೆಗೆ, ಎಡಕಣ್ಣಿನ ಎಡ ಬದಿ, ಬಲಕಾಲಿನ ಮೊಣಗಂಟಿಗೆ ಅಲ್ಲಲ್ಲಿ ಗುದ್ದಿದ ಹಾಗೂ ತರಚಿದ  ರೀತಿಯ ಗಾಯವಾಗಿರುತ್ತದೆ. ಎಂಬಿತ್ಯಾದಿ.

Crime Reported in Kavoor PS

ಫಿರ್ಯಾದಿ ANANDU KUSHALI KOTHARKAR ರವರ ಮಗಳು ಅಂಜಲಿ ಆನಂದು ಕೊಠರಕರ (ಪ್ರಾಯ 24) ಎಂಬುವರು ಮಂಗಳೂರಿನ ಗಾಂಧಿನಗರದ ಲಿಖಿತ ಎಂಬುವರ ರೀನಾ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಅಂಜಲಿ ಆನಂದು ಕೊಠರಕರ ರವರಿಗೆ ಮದುವೆ ನಿಶ್ಚಯವಾಗಿದ್ದು,ಇದಕ್ಕೆ ಅಂಜಲಿ ಕೂಡಾ ಮದುವೆಗೆ ಒಪ್ಪಿರುತ್ತಾರೆ.ತದ ನಂತರ ಒಂದು ತಿಂಗಳ ಹಿಂದೆ ಫಿರ್ಯಾದಿದಾರರ ಸ್ವಂತ ಊರದ ಕಾರವಾರಕ್ಕೆ ಬಂದು ಮನೆಯಲ್ಲಿ 15 ದಿನಗಳವರೆಗೆ ಇದ್ದು ಮನೆಯಿಂದ ವಾಪಸ್ಸು ಕೆಲಸಕ್ಕೆಂದು ಮಂಗಳೂರಿನ ರೀನಾ ಗಾರ್ಮೆಂಟ್ಸ್ ಗೆ ಬಂದಿರುತ್ತಾಳೆ.ದಿನಾಂಕ 03/10/2021 ರಂದು ಫಿರ್ಯಾದಿದಾರರ ಮಗಳು ಅಂಜಲಿ ಸಂಬಳದ ಹಣ ತೆಗೆದುಕೊಂಡು ಕಾರವಾರದ ಮನೆಗೆ ಬರುವುದಾಗಿ ಪೋನ್ ಮಾಡಿ ತಿಳಿಸಿರುತ್ತಾಳೆ. ಆದರೆ ಆ ದಿನ ಸಂಜೆಯಾದರೂ ಮನೆಗೆ ಬಾರದೇ ಇರುವ ಕಾರಣ ಅಂಜಲಿ ಪೋನ್ ನಂಬರ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬರುತ್ತಿದ್ದು,ನಂತರ ಫಿರ್ಯಾದಿದಾರರು ಅಂಜಲಿ ಕೆಲಸ ಮಾಡುತ್ತಿದ್ದ ಮಂಗಳೂರಿನ ಗಾರ್ಮೆಂಟ್ಸ್ ಗೆ ಬಂದು ವಿಚಾರಿಸಿದಾಗ ಅಂಜಲಿ ದಿನಾಂಕ 03/10/2021 ರಂದು ಬೆಳಗ್ಗೆ 10:00 ರ ವೇಳೆಗೆ ಊರಿಗೆ ಹೋಗುವುದಾಗಿ ತಿಳಿಸಿ ಹೋಗಿರುತ್ತಾರೆ. ಅಂಜಲಿ ಆನಂದು ಕೊಠರಕರ ಗಾರ್ಮೆಂಟ್ಸ್ ನಲ್ಲೂ ಇರದೇ, ಕಾರವಾರದ ಮನೆಗೂ ಬಾರದೇ,ಸ್ನೇಹಿತರ ಹಾಗೂ ಸಂಬಂಧಿಕರ ಮನೆಗೂ ಹೋಗದೇ ಕಾಣಿಯಾಗಿರುತ್ತಾರೆ ಎಂಬಿತ್ಯಾದಿ.

ಚಹರೆ:

1.ಅಂಜಲಿ ಆನಂದು ಕೊಠರಕರ (ಪ್ರಾಯ 24)

ಎತ್ತರ: 5.6 ಅಡಿ,ದುಂಡು ಮುಖ, ಗೋಧಿ ಮೈ ಬಣ್ಣ, ಸಾಧಾರಣ ಶರೀರ

 

Crime Reported in Konaje PS

ಪಿರ್ಯಾದಿ Abdul Ashiq ದಾರರಿಗೆ  ದಿನಾಂಕಃ 08.10.2021 ರಂದು ಸಂಜೆ 16.30 ಗಂಟೆಗೆ ಅಪ್ಪಿ@ ಹಫೀಜ್ ಎಂಬಾತನು ಪೋನ್ ಕರೆ ಮಾಡಿ “ನಾನು ಭಂಗಿ ಮಾರುವ ಬಗ್ಗೆ ಎಲ್ಲರಿಗೂ ಹೇಳಿಕೊಂಡು ಬರುತ್ತೀದ್ದಿ, ನೀನು ನೋಡಿದ್ದೀಯಾ,  ಬೇವಾರ್ಸಿ ಎಂದು ಬೈದು ಪೋನು ಕಟ್ ಮಾಡಿದ್ದು, ನಂತರ ಸಂಜೆ 19.10 ರ ವೇಳೆಗೆ ಪಿರ್ಯಾದಿದಾರರ ಮುಡಿಪುವಿನ ವೆಲ್ ಕಮ್ ಎಂಬ ಹೋಟೆಲ್ ಬಳಿ ಚಾ ಕುಡಿದು ಕರೀಂ ಎಂಬವರೊಂದಿಗೆ ಮಾತನಾಡಿಕೊಂಡಿರುವಾಗ ಸಂಜೆ ಪೋನ್ ಮಾಡಿದ್ದ ಆರೋಪಿ  ಅಪ್ಪಿ @ ಹಫೀಜ್ ಎಂಬಾತನು ಆತನ ಸ್ನೇಹಿತರಾದ ನಜೀಮ್ @ ನೆಜ್ಜು, ಮುಶ್ರಫ್, ಆಶೀಕ್, ಇಬ್ರಾಹಿಂ ಎಂಬವರೊಂದಿಗೆ ಆಕ್ರಮ ಕೂಟ ಸೇರಿಕೊಂಡು ಪಿರ್ಯಾದಿದಾರರನ್ನು ಕೊಲೆ ಮಾಡುವ ಉದ್ದೇಶದಿಂದ ಇನ್ನೋವಾ ಕಾರಿನಲ್ಲಿ ಪಿರ್ಯಾದಿದಾರರ ಬಳಿ ಬಂದು ಏಕಾಏಕಿಯಾಗಿ ಅಪ್ಪಿ @ ಹಫೀಜ್ ನು “ಎಲ್ಲರಿಗೂ ಹೇಳಿಕೊಂಡು ಬರುತ್ತೀಯಾ, ನಿನ್ನನ್ನು ಕೊಂದು ಬಿಡುತ್ತೇನೆ ಬೇವಾರ್ಸಿ, ಮಗನೇ, ಎಂದು ಹೇಳಿ ಅವನ ಕೈಯಲ್ಲಿದ್ದ ರಾಡ್ ನಿಂದ ನನ್ನ ತಲೆಗೆ ಬಲವಾಗಿ ಹೊಡೆಯಲು ಬಂದಾಗ  ಪಿರ್ಯಾದಿ ಎಡ ಕೈಯನ್ನು ಮೇಲಕ್ಕೆತ್ತಿದ್ದು ಆತನು ಹೊಡೆದ ಪೆಟ್ಟು ಪಿರ್ಯಾದಿ ಎಡ ಕೈಗೆ ತಾಗಿರುತ್ತದೆ. ನೆಜ್ಜಿ ಎಂಬಾತನ ಕೈಯಲ್ಲಿದ್ದ ಯಾವುದೋ ಒಂದು ಆಯುಧದಿಂದ  ತಲೆಗೆ, ಕಾಲಿಗೆ, ಬೆನ್ನಿಗೆ ಹೊಡೆದಿದ್ದು, ಗಾಯವಾಗಿ  ರಕ್ತ ಬಂದಿರುತ್ತದೆ. ನಂತರ ನೆಜ್ಜಿನು ಪಿರ್ಯಾದಿ ಎರಡು ಕೈಗಳನ್ನು ಹಿಂದಕ್ಕೆ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಉಳಿದವರು ನನ್ನ ಎದೆಗೆ, ಕಾಲಿಗೆ, ಹೊಟ್ಟೆಗೆ ತುಳಿದಿರುತ್ತಾರೆ. ಅಲ್ಲಿ ಜನರು ಸೇರುವುದನ್ನು ಕಂಡು ಆರೋಪಿಗಳು ಹೊರಟಿದ್ದು, ಅಪ್ಪಿ @ ಹಫೀಜ್ ನು ಗಲಾಟೆ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ನಿನ್ನನ್ನು ಮುಂದೆಯಾದರೂ ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಬಂದ ಕಾರಿನಲ್ಲಿ ಹೊರಟು ಹೋಗಿರುತ್ತಾರೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 11-10-2021 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080