ಅಭಿಪ್ರಾಯ / ಸಲಹೆಗಳು

Crime Reported in Traffic North PS

ದಿನಾಂಕ 10-11-2021 ರಂದು ಪಿರ್ಯಾದಿ Ganesh ದಾರರ ಪತ್ನಿಯಾದ ಶ್ರೀಮತಿ ಉಷಾ ರವರು ಕೊಟ್ಟಾರ ಚೌಕಿಯಲ್ಲಿ ತನ್ನ ಕೆಲಸ ಮುಗಿಸಿಕೊಂಡು ವಾಪಸ್ಸು ತನ್ನ ಮನೆ ಕಡೆಗೆ ಹೋಗುವ ಸಲುವಾಗಿ ಕೊಟ್ಟಾರ ಚೌಕಿ ಜಂಕ್ಷನ್ ನಿಂದ ಸ್ವಲ್ಪ ಮುಂದೆ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸಂಜೆ ಸಮಯ ಸುಮಾರು 3:50 ಗಂಟೆಗೆ ಮಾಲೇಮಾರ್, ದೇರೆಬೈಲ್ ಕ್ರಾಸ್ ಬಳಿ ಸಮೀಪಿಸುತ್ತಿದ್ದಂತೆ KA-19-HF-9275 ನಂಬ್ರದ ಬುಲೆಟ್ ಮೋಟಾರ್ ಸೈಕಲನ್ನು ಅದರ ಸವಾರನಾದ ಸಚಿನ್ ಕುಮಾರ್ ಎಂಬತಾನು ಕೊಟ್ಟಾರ ಚೌಕಿ ಜಂಕ್ಷನ್ ಕಡೆಯಿಂದ ಕೆಪಿಟಿ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶ್ರೀಮತಿ ಉಷಾ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಉಷಾ ರವರ ಬಲ ಕಾಲಿನ ಮೊಣಗಂಟಿನ ಬಳಿ ಮೂಳೆ ಬಿರುಕು ಬಿಟ್ಟ ರೀತಿಯ ಗಂಭೀರ ಸ್ವರೂಪದ ಗಾಯವಾಗಿದ್ದು, ಎಡಕೈ ಭುಜಕ್ಕೆ ಗುದ್ದಿದ ರೀತಿಯ ಗಾಯವಾಗಿದ್ದು ಎಜೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಅಲ್ಲದೇ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರನಿಗೂ ಮುಖಕ್ಕೆ ಹಾಗೂ ಎಡಕೈ ಭುಜಕ್ಕೆ ಗಾಯವಾಗಿ ಎಜೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

2) ಈ ದಿನ ದಿನಾಂಕ : 11-11-2021 ರಂದು ಪಿರ್ಯಾದಿ IDINABBA  KULURU HUSAIN

ದಾರರ ಅಣ್ಣ ಉಜೀರೆ ಕೂಳೂರು ಅಬ್ದುಲ್ ರಹೀಂ ರವರು ತನ್ನ ಬಾಬ್ತು KA-19-EX-7673 ನಂಬ್ರದ ಸ್ಕೂಟರಿನಲ್ಲಿ ರಾ.ಹೆ 66ರ ಪಣಂಬೂರು ಜಂಕ್ಷನ್ ಕಡೆಯಿಂದ ಬೈಕಂಪಾಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಬೆಳಿಗ್ಗೆ ಸಮಯ ಸುಮಾರು 09:20 ಗಂಟೆಗೆ ಬೈಕಂಪಾಡಿಯ ಜೋಕಟ್ಟೆ ಕ್ರಾಸ್ ಸಮೀಪ ತಲುಪುತ್ತಿದ್ದಂತೆ ಪಣಂಬೂರು ಜಂಕ್ಷನ್ ಕಡೆಯಿಂದ ಬೈಕಂಪಾಡಿ ಕಡೆಗೆ KA-01-AM-0304 ನಂಬ್ರದ ದೊಡ್ಡ ಟ್ಯಾಂಕರ್ ವಾಹನವನ್ನು ಅದರ ಚಾಲಕ ಪ್ರವೀಣ್ ಎಂಬಾತನು  ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಅಣ್ಣನವರು ಸವಾರಿ ಮಾಡುತ್ತಿದ್ದ ಸ್ಕೂಟರನ್ನು ಬಲಬದಿಯಿಂದ ಓವರ್ ಟೇಕ್ ಮಾಡುವ ಬರದಲ್ಲಿ ಉಜೀರೆ ಕೂಳೂರು ಅಬ್ದುಲ್ ರಹೀಂ ರವರ  ಸ್ಕೂಟರಿನ ಬಲಬದಿ ಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ಸಮೇತ ರಾ.ಹೆ  66 ರ ಕಾಂಕ್ರೀಟ್ ರಸ್ತೆಗೆ ಬಿದ್ದ ವೇಳೆ ಅಪಘಾತ ಪಡಿಸಿದ ಟ್ಯಾಂಕರ್ ವಾಹನದ ಎದುರಿನ ಎಡಬದಿಯ ಚಕ್ರವು ಯು.ಕೆ. ಅಬ್ದುಲ್ ರಹೀಂ ರವರ ಸೊಂಟ ಹಾಗೂ ಕಾಲಿನ ಮೇಲೆ ಹರಿದು ಸೊಂಟ ಹಾಗೂ ಕಾಲುಗಳಿಗೆ ಗಂಭೀರ ಸ್ವರೂಪದ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿರುವುದಾಗಿದೆ ಎಂಬಿತ್ಯಾದಿ.

Crime Reported in Kankanady Town PS

ಪಿರ್ಯಾದಿ Smt. R Padmashri ದಾರರಿಗೆ ಮಂಗಳೂರು ತಾಲೂಕು ಫೈಜಲ್ ನಗರ ನೇತ್ರಾವತಿ ನದಿ ವ್ಯಾಪ್ತಿ ಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಉಪನಿರ್ದೇಶಕರ  ಮೌಖಿಕ ಆದೇಶದಂತೆ ಪಿರ್ಯಾದಿದಾರರು ಹಾಗೂ ಸಿಬ್ಬಂದಿಗಳೊಂದಿಗೆ ದಿನಾಂಕ:27-10-2021 ಸಂಜೆ 06 45 ಗಂಟೆಗೆ ನದಿಯಲ್ಲಿ(ನೇತ್ರಾವತಿ) ದೋಣಿಗಳ ಮೂಲಕ ಹೋಗಿ ದಾಳಿ ನಡೆಸಿ ಸದ್ರಿ ಮರಳುಗಾರಿಕೆ ನಡೆಯುತ್ತಿದ್ದ ಪ್ರದೇಶದಲ್ಲಿ  ಅಕ್ರಮ ಮರಳು ಗಾರಿಕೆಗೆ ಬಳಸಿರುವ ಹತ್ತು ದೋಣಿಗಳನ್ನು ನದಿಯ ತೋಡಿನ ಪೊದೆಯಲ್ಲಿ ಅಡಗಿಸಿಟ್ಟಿದ್ದು,ಸದ್ರಿ ದೋಣಿಗಳ ವಾರಸುದಾರರು ಯಾರೆಂಬುದು ತಿಳಿದು ಬಂದಿರುವುದಿಲ್ಲ, ಸದರಿ ತೋಡಿನಲ್ಲಿ ನೀರಿನ ಇಳಿತ ಇರುವ ಕಾರಣ ಸದ್ರಿ 10 ದೋಣಿಗಳು ಕೆಸರಿನ ಮೇಲೆ ಸಿಕ್ಕಿಕೊಂಡಿದ್ದು ದೋಣಿಗಳನ್ನು ಸಾಗಿಸಲು ಕಷ್ಟ ಸಾಧ್ಯವಾಗಿದ್ದು ,10 ದೋಣಿಗಳನ್ನು ಪೊಲೀಸರ ಸಹಕಾರದೊಂದಿಗೆ 27-10-2021 ರ ರಾತ್ರಿ ಇಡಿ ನಿಗಾ ವಹಿಸಿ ಮೋಟಾರು ದೋಣಿ ಚಾಲನೆ ಮಾಡುವ ಮೋಗವೀರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಬರಮಾಡಿಕೊಂಡು ಸದ್ರಿ 10 ದೋಣಿಗಳನ್ನು  ಪೈಸಲ್ ನಗರ ದಿಂದ ನೀರಿನ ಮೂಲಕ ಸಾಗಿಸಿ ಜಪ್ಪಿನಮೊಗೆರು ಕಡೇಕಾರು ನಂದರಾಜ್ ಇವರ ಮರಳು ದಕ್ಕೆಯಲ್ಲಿ ಕ್ರೇನ್ ನ್ನು ಬಾಡಿಗೆಗೆ ಪಡೆದು 10 ದೋಣಿಗಳನ್ನು ವಶಪಡಿಸಿಕೊಂಡು ನೆಲದ ಮೇಲೆ ಒಂದರ ಮೇಲೊಂದು  ದೋಣಿಗಳನ್ನು ಇರಿಸಲಾಗಿದೆ. ಸದ್ರಿ ದೋಣಿಗಳ ಮಾಲೀಕರ ಮಾಹಿತಿ ಲಭ್ಯವಾಗಿರುವುದಿಲ್ಲ. ಸದ್ರಿ ಕೃತ್ಯದಲ್ಲಿ ಸರ್ಕಾರಿ ಸ್ವತ್ತನ್ನು ಕಳ್ಳತನದಿಂದ ತೆಗೆದು ಸಾಗಣಿಕೆ ಮಾಡಿರುತ್ತಾರೆ. ಹಾಗಾಗಿ ಸದ್ರಿ ದೋಣಿಗಳ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ  ಅಕ್ರಮ ಮರಳುಗಾರಿಕೆ ನಡೆಸುವವರ ವಿವರ ಪತ್ತೆ ಮಾಡುವ ಪ್ರಯತ್ನದಲ್ಲಿ ಸದ್ರಿ ದೂರು ದಾಖಲಿಸಲು ವಿಳಂಬವಾಗಿರುತ್ತದೆ  ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 11-11-2021 07:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080