ಅಭಿಪ್ರಾಯ / ಸಲಹೆಗಳು

Crime Reported in CEN Crime PS

 ದಿನಾಂಕ 12-01-2022 ರಂದು C.E.N .ಕ್ರೈಂ. ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ಸತೀಶ ಎಂ ಪಿ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ  ಬೆಳಿಗ್ಗೆ 11.50 ಗಂಟೆಗೆ ಬಾತ್ಮಿದಾರರಿಂದ  ಮಂಗಳೂರು ನಗರದ ಬಿಜೈ 4 ನೇ ಅಡ್ಡರಸ್ತೆಯ ಮತಾಯಸ್ ರೋಡ್ ನ SHIVA’S  PAYING GUESTHOUSE ಬಳಿ 4-5 ಮಂದಿ ಯುವಕರು ಯಾವುದೋ ಅಮಲು ವಸ್ತುವನ್ನು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ನೀಡಿದ ಮಾಹಿತಿಯಂತೆ ತಕ್ಷೀರು ಸ್ಥಳಕ್ಕೆ ದಾಳಿ ನಡೆಸಿ ಮಾದಕ ವಸ್ತು ಸೇವನೆ ಮಾಡಿ ನಶೆಯಲ್ಲಿ ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದ 01. ಕೋಲಿನ್ ಡಿಸೊಜ ಪ್ರಾಯ 28 ವರ್ಷ 02. ದೀಪಕ್ ಸಾಲಿಯಾನ್ ಪ್ರಾಯ 29 ವರ್ಷ 03. ಅಬಿಲಾಷ್ ಪ್ರಾಯ 31 ವರ್ಷ 04. ಕರುಂಬಯ್ಯ ಎನ್.ಬಿ ಪ್ರಾಯ 27 ವರ್ಷ 05. ಶಿವ ಬೊಪ್ಪಣ್ಣ ಎನ್.ಬಿ ಪ್ರಾಯ 23 ವರ್ಷ ಎಂಬುವವರನ್ನು ವಶಕ್ಕೆ ಪಡೆದು ಮಂಗಳೂರು ನಗರದ ಕುಂಟಿಕಾನದಲ್ಲಿರುವ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ ಆಪಾದಿತರು ಮಾದಕ ವಸ್ತುವಾದ ಗಾಂಜಾ/ಕೊಕೈನ್ ಪೌಡರ್ ಸೇವನೆ ಮಾಡಿದ ಬಗ್ಗೆ ವೈದ್ಯಾಧಿಕಾರಿಯವರು ನೀಡಿದ ವೈದ್ಯಕೀಯ ಧೃಢಪತ್ರದ ಮೇರೆಗೆ ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Crime Reported in Ullal PS

 ಪಿರ್ಯಾದಿ Shakeela K ದಾರರು ಹಾಗೂ ಅವರ ಗಂಡ ತಲಪಾಡಿ ತಚ್ಚಣಿಯಲ್ಲಿರುವ ಅವರ ಮನೆಗೆ ವಾರಕ್ಕೊಮ್ಮೆ ಬಂದು ಹೋಗುವುದು ಮಾಡುತ್ತಿದ್ದು ದಿನಾಂಕ 5-1-2022 ರಂಧು ಸಂಜೆ 5 ಗಂಟೆಗೆ ತಚ್ಚಾಣಿಯ ಮನೆಗೆ ತೆರಳಿ ಮನೆಯನ್ನು ಕ್ಲೀನ್ ಮಾಡಿ ಬೀಗ ಭದ್ರ ಮಾಡಿ ಮಂಗಳೂರಿಗೆ ಬಂದಿರುತ್ತಾರೆ.ದಿನಾಂಕ 11-1-2022 ರಂದು ಸಂಜೆ ಪಿರ್ಯಾದಿದಾರರು ಮತ್ತು ಅವರ ಗಂಡ ತಚ್ಚಾಣಿಯ ಮನೆಗೆ ಮನೆಯನ್ನು ಕ್ಲೀನ್ ಮಾಡಲು ತೆರಳಿದ್ದು ಮನೆಯ ಮುಂಧಿನ ಬಾಗಿಲನ್ನು ನೋಡಿದಾಗ ಅರ್ಧ ಓಪನ್ ಆಗಿದ್ದು ಯಾರೋಕಳ್ಳರು ಯಾವುದೋ ಸಾದನ ಉಪಯೋಗಿಸಿ ಬಾಗಿಲು ತೆರೆದಿರುವುದು ಕಂಡು ಬಂದಿರುತ್ತದೆ. ಮನೆಯ ಒಳಗಡೆ ನೋಡಿದಾಗ ಮನೆಯ ಬೆಡ್ ರೂಮ್ ನಲ್ಲಿದ್ದ ಕಪಾಟನ್ನು ನೋಡಿದಾಗ ಬೆಲೆಬಾಳುವ ವಸ್ತುಗಳಿಗೆ ಹುಡುಕಾಟ ಮಾಡಿರುವುದು ಕಂಡು ಬಂದಿದ್ದು ನಂತರ ದೇವರ ಕೋಣೆ ಯಲ್ಲಿದ್ದ 2 ಬೆಳ್ಳಿಯ ದೀಪ ಮತ್ತು 2 ಸಣ್ಣ ಒಳ್ಳೆಯ ದೀಪಗಳು ಕಳುವಾಗಿದ್ದು ಅಂದಾಜು ಮೌಲ್ಯ 20,000/- ಆಗಿರುತ್ತದೆ.ದೇವರ ಕೋಣೆಯಲ್ಲಿರಿಸಿದ ನಗದು 5000/-ರೂಪಾಯಿ   ಹಾಗೂ ಗೋಡೆಯಲ್ಲಿರಿಸಿದ ಎಲ್ ಇ ಡಿ ಟೀವಿ ಕಳುವಾಗಿದ್ದು   ಅಂದಾಜು ಮೌಲ್ಯ 20,000/- ಆಗಿರುತ್ತದೆ.ದಿನಾಂಕ 5-1-2022 ರಂದು ಸಂಜೆ 6 ಗಂಟೆಯಿಂಧ ದಿನಾಂಕ 11-1-2022 ರ ಸಂಜೆ 5-30 ಗಂಟೆಯ ಒಳಗೆ ಯಾರೋ ಕಳ್ಳರು ಯಾವುದೋ ಸಾಧನ ಉಪಯೋಗಿಸಿ ಕಳವು ಮಾಡಿದ್ದು  ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂಬಿತ್ಯಾದಿ.

Crime Reported in Traffic North Police Station                      

ದಿನಾಂಕ:11-01-2022 ರಂದು ಪಿರ್ಯಾದಿ Padmanabha R Karkera ದಾರರು ಅವರ ಬಾಬ್ತು KA-19-HG-1733  ನಂಬ್ರದ ಸ್ಕೂಟರಿನಲ್ಲಿ ತನ್ನ ಮನೆಯಾದ ಕುಳಾಯಿ ಹೊಸಬೆಟ್ಟು ಎಂಬಲ್ಲಿಂದ ಮೀನಕಳಿಯ ಬಳಿಯಿರುವ ತನ್ನ ಪತ್ನಿಯನ್ನು ಕರೆ ತರುವ ಸಲುವಾಗಿ ಹೋಗುತ್ತಾ ಸಾಯಂಕಾಲ ಸಮಯ ಸುಮಾರು 4:00 ಗಂಟೆಗೆ ಶ್ರೀ ಪಾಂಡುರಂಗ ಫ್ಯಾನ್ಸಿ & ಜನರಲ್ ಸ್ಟೋರ್ ಅಂಗಡಿ ಕಟ್ಟಡದ ಎದುರಿನಲ್ಲಿ ಹೋಗುತ್ತಿದ್ದಂತೆ ಕೋಡಿಕಲ್ ಮೀನಕಳಿಯ ಕಡೆಯಿಂದ ಕುಳಾಯಿ ಹೊಸಬೆಟ್ಟು ಕಡೆಗೆ KA-19-EM-8848 ನಂಬ್ರದ ಸ್ಕೂಟರನ್ನು ಅದರ  ಸವಾರೆ TEJASWI  ಎಂಬವರು ಶ್ರೀಮತಿ ಅನುಸೂಯ ಎಂಬವರನ್ನು ಸಹ ಸವಾರೆಯನ್ನಾಗಿ ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬರುತ್ತಾ ತಾರನಾಥ ರವರ ಹಂಚಿನ ಮನೆಯ ಎದುರಿನಲ್ಲಿರುವ ರಸ್ತೆಯ ಹಂಪ್ಸ್ ನಲ್ಲಿ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿದ್ದರಿಂದ ಸದ್ರಿ ಸ್ಕೂಟರಿನ ಹಿಂಬದಿಯಲ್ಲಿ ಸಹ ಸವಾರಳಾಗಿ ಕುಳಿತಿದ್ದ ಶ್ರೀಮತಿ ಅನುಸೂಯ ರವರು ಸ್ಕೂಟರಿನಿಂದ ಎಸೆಯಲ್ಪಟ್ಟು ಕಾಂಕ್ರೀಟ್ ರಸ್ತೆಗೆ ಬಿದ್ದ ಪರಿಣಾಮ ಅನುಸೂಯರವರ ತಲೆಗೆ ಗುದ್ದಿದ ರೀತಿಯ ಗಂಭೀರ ಸ್ವರೂಪದ ಒಳ ಗಾಯವಾಗಿದ್ದು ಹಾಗೂ ಬಲಕೈ ಮೊಣಗಂಟಿನ ಬಳಿ ತರಚಿದ ರೀತಿಯ ಗಾಯವಾಗಿ ಚಿಕಿತ್ಸೆ ಬಗ್ಗೆ ಎ ಜೆ ಆಸ್ಪತ್ರೆಗೆ ಸಾಗಿಸಲ್ಪಟ್ಟು ಬಳಿಕ ಅಪಘಾತದ ವಿಷಯ ತಿಳಿದು ಎ.ಜೆ ಆಸ್ಪತ್ರೆಗೆ ಬಂದ ಶ್ರೀಮತಿ ಅನುಸೂಯಳ ಅಣ್ಣ ವಿಜಯರವರು ಶ್ರೀಮತಿ ಅನುಸೂಯರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಜ್ಯೋತಿ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಎಂಬಿತ್ಯಾದಿ.

Crime Reported in Mangalore South PS

ವಲೆನ್ಸಿಯಾ ನಿವಾಸಿ ಆರೋಪಿ ಮನೋಹರ ಪ್ಯಾಸ್ ಎಂಬುವನು ಸುಮಾರು 3-4 ವರ್ಷಗಳಿಂದ ನಾಯಿ, ಬೆಕ್ಕುಗಳನ್ನು ವಿಷ ಹಾಕಿ ಕೊಲ್ಲುವುದರಲ್ಲಿ ನಿಪುಣನಾಗಿದ್ದು, ಈತನಿಂದ  ನೆರೆಕೆರೆಯವರು ರಕ್ಷಣೇ ಪಡೆಯುವುದಕ್ಕೆ ವಿಫಲಾಗಿರುತ್ತಾರೆ. ಒಂದು ವಾರದ ಹಿಂದೆ ನಾಯಿ,ಬೆಕ್ಕುಗಳನ್ನು ವಿಷ ಇಟ್ಟು ಕೊಂದಿದ್ದು, ಇಂದು ಪಿರ್ಯಾದಿ Melwil Pinto ದಾರರ ನಾಯಿ ಕೂಡಾ ವಿಷಕಾರಿ ಸತ್ತು ಹೋಗಿರುತ್ತದೆ. ಆದುದರಿಂದ ಸದ್ರಿ ಆರೋಪಿ ಮೇಲೆ ಸೂಕ್ತ ಕ್ರಮಕ್ಕಾಗಿ ಕೋರಿದ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿಯಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 12-01-2022 08:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080