ಅಭಿಪ್ರಾಯ / ಸಲಹೆಗಳು

Crime Reported in Barke PS

ಪಿರ್ಯಾದಿದಾರರಾದ Stany Dsouza ರವರು ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡು ಒಬ್ಬಂಟಿಯಾಗಿ ಮನೆಯಲ್ಲಿ ಉಳಿದುಕೊಂಡಿದ್ದು, ಸದ್ರಿ ಅವರ ನೆರೆಯ ರವಿ ಎಂಬುವರ ಅಣ್ಣನ ಮಗನಾದ ನಿತೀನ್ ಎಂಬುವನು ತನ್ನ ಆಟೋ ರಿಕ್ಷಾ ವನ್ನು ಪಿರ್ಯಾದಿ ಮನೆಯ ಹಿಂಭಾಗದ ಶೌಚಾಲಯ ಪೈಪಿಗೆ ತಾಗಿಸಿಕೊಂಡು ಇಡುತ್ತಿದ್ದು ಸದ್ರಿ ಪೈಪು ಹುಡಿಯಾದಾಗ ಪಿರ್ಯಾದಿ ಮತ್ತು ಪಿರ್ಯಾದಿ ತಮ್ಮ ಪೈಪ್ ನ್ನು ರಿಪೇರಿ ಮಾಡಿಕೊಡುವಂತೆ ಕೇಳಿದರೂ ಸರಿ ಮಾಡದೇ ರಿಕ್ಷಾವನ್ನು ದಿನಾಲೂ ಅಲ್ಲೇ ಇಡುತ್ತಿದ್ದು ಮೊನ್ನೆ ಬುಧವಾರ ಪಿರ್ಯಾದಿಯು ರಿಕ್ಷಾವನ್ನು ದೂಡಿ ತಳ್ಳಿದ ಕಾರಣ ರಿಕ್ಷಾ ತೂಡಿಗೆ ಬಿದ್ದು ಅಲ್ಲೇ ನಿಂತಿತ್ತು, ಪಿರ್ಯಾದಿಯು ಮನೆಯಲ್ಲಿ ಇಲ್ಲದ ಸಮಯ ಪಿರ್ಯಾದಿಯ ಮನೆಯ ಕಿಟಕಿ, ಗಾಜು, ಚೇರ್ ಗಳನ್ನು ರವಿ ನೀತಿನ, ಸುದೀರ ಯಶವಂತ ಎಂಬುವರ ದೊಡ್ಡ ಮಗ, ವಿಶಾಲ ಎಂಬುವರ ಎರಡು ಗಂಡು ಮಕ್ಕಳು ಸೇರಿ ಹುಡಿ ಹುಡಿ ಮಾಡಿರುತ್ತಾರೆ. ನಂತರ  ದಿನ ದಿನಾಂಕ: 11-02-2022 ರಂದು ಸಂಜೆ ಸಮಯ ಸುಮಾರು 04-00 ಗಂಟೆಗೆ ಪಿರ್ಯಾದಿದಾರರು ಚಹಾ ಕುಡಿಯಲು ಹೋಗುತ್ತಿರುವ ಸಮಯ ರೈಸ್ ಮಿಲ್ ನ ಹತ್ತಿರ ನಾಲ್ಕು ಜನ ಹಿಂದಿನಿಂದ ಬಂದು ಪಿರ್ಯಾದಿದಾರರ ತಲೆಗೆ ಕಾಲಿಗೆ ಕಲ್ಲು ಹಾಗೂ ರೀಪ್ ನಿಂದ ಹೊಡೆದು, ರಕ್ತ ಗಾಯಗೊಳಿಸಿದ್ದು ಪಿರ್ಯಾದಿಯನ್ನು ಜಿಲ್ಲಾ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿಲಾಗಿದ್ದು ತದನಂತರ ಫಾಧರ್ ಮುಲ್ಲರ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿರುವುದು ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 12-02-2022 09:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080