ಅಭಿಪ್ರಾಯ / ಸಲಹೆಗಳು

Daily Crime Report. Date 12-04-2022

Crime Reported in Ullal PS

ಪಿರ್ಯಾದಿದಾರರಾದ ನಿತೇಶ್ H  ಎಂಬುವರು ಮೆಸ್ಕಾಂ ಉಳ್ಳಾಲ ಉಪವಿಭಾಗದ ಉಳ್ಳಾಲ-2 ಶಾಖೆಯಲ್ಲಿ ಶಾಖಾಧಿಕಾರಿಯವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ 10-04-2022 ರಂದು ಬೆಳಿಗ್ಗೆ ಸುಮಾರು 06-05 ಸಮಯಕ್ಕೆ ಮುನ್ನೂರು ಗ್ರಾಮದ ಮದನಿನಗರ ಎಂಬಲ್ಲಿ ಕಾಂಟ್ಯನರ್ ವಾಹನವೊಂದು ಅಜಾಗರೂಕತೆಯಿಮದ ಚಲಾಯಿಸಿ ಮೆಸ್ಕಾಂ ಕಂಪನಿಯ ವಿದ್ಯುತ್ ಪರಿವರ್ತಕ ಕೇಂದ್ರ 3 ಸಂಖ್ಯೆಯ 8 ಮೀ ಪಿಯುಸಿ ಕಂಬ, 2 ಸಂಕ್ಯೆಯ 9 ಮೀ RCC ಕಂಬ ಮತ್ತು 4 ಸಂಖ್ಯೆಯ 9 ಮೀ PSC ಕಂಬಗಳನ್ನು ಹಾನಿ ಮಾಡಿ ಪರಾರಿಯಾಗಿದ್ದು , ಇದರಿಂದ ಸರ್ಕಾರಿ ಸೌಮ್ಯಕ್ಕೆ ಒಳಪಟ್ಟ  ಮೆಸ್ಕಾಂ ಕಂಪನಿಗೆ ಸುಮಾರು 3 ಲಕ್ಷ ರೂ ಹಾನಿಯಾದ ಬಗ್ಗೆ ನೀಡಿದ ದೂರಿನ ಸಾರಾಂಶ.

 

Crime Reported in Bajpe PS  

ದಿನಾಂಕ 11-04-2022 ರಂದು ಬಜಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನೀರಿಕ್ಷಕ ರಾಘವೇಂದ್ರ ನಾಯ್ಕ್ ರವರು ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ ಮಡುತ್ತಾ ಸಂಜೆ ಸುಮಾರು 5-00 ಗಂಟೆಗೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಡೆಮೂಲ ಗ್ರಾಮದ ಗಿಡಿಗೆರೆ ಕಟೀಲ್ ಎಂಬಲ್ಲಿ ಬಂದಾಗ ಅಲ್ಲಿ ಯುವಕನೊಬ್ಬ ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು ವಿಚಾರಿಸಿದಾಗ ಸದ್ರಿಯವರು ತಮ್ಮ ಹೆಸರು ಶೈಲೇಶ್,ಪ್ರಾಯ 26 ವರ್ಷ ವಾಸ ಆಳ್ವಾಸ್ ಕಾಲೇಜ್ ಬಳಿ,ವಿದ್ಯಗಿರಿ,ಪುತ್ತಿಗೆ ಗ್ರಾಮ ಮೂಡಬಿದ್ರೆ ಮಂಗಳೂರು ತಾಲೂಕು ಎಂಬುದಾಗಿ ತಿಳಿಸಿದ್ದು, ಸದ್ರಿಯವರಲ್ಲಿ ಪ್ರಶ್ನಿಸಿದಾಗ ಸೀಗರೆಟಿನ ಒಳಗೆ ಗಾಂಜಾ ತುಂಬಿಸಿ ಸೇದುತ್ತಿರುವುದಾಗಿ ತಿಳಿಸಿದಂತೆ ಸದ್ರಿಯವರನ್ನು ವಶಕ್ಕೆ ಪಡೆದು ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆರೋಪಿಯು ಗಾಂಜಾ ಸೇವನೆ ಮಾಡಿರುವುದಾಗಿ ವೈದ್ಯಾಧಿಕಾರಿಯವರು ದೃಡಪತ್ರ ನೀಡಿದ ಮೇರೆಗೆ ಆರೋಪಿಯ ವಿರುದ್ದ ಎನ್ ಡಿ ಪಿ ಎಸ್ ಆಕ್ಟ್ ನಂತೆ ಪ್ರಕರಣ ದಾಖಲಿಸಿರುವುದಾಗಿದೆ

 

Crime Reported in Traffic South Police Station       

ದಿನಾಂಕ: 11-04-2022 ರಂದು ಪಿರ್ಯಾದಿ BIN RATAN ATTAVAR ದಾರರು ಆಟೋರಿಕ್ಷಾ ನಂಬ್ರ: KA-19AC-1801 ನೇದರಲ್ಲಿ ಪ್ರಯಾಣಿಕರಾಗಿ ಕುಳಿತು ಮನೆಯಾದ ಅತ್ತಾವರ ಕಡೆಯಿಂದ ಅರ್ಕುಳ ಯಶಸ್ವಿ ಹಾಲ್ ಕಡೆಗೆ ಹೋಗುತ್ತಾ ಕಣ್ಣೂರು ಜಂಕ್ಷನ್ ಬಳಿ ಪಿರ್ಯಾದಿದಾರರ ಸಂಬಂಧಿಕರಾದ ರಜನಿ ಮತ್ತು ವೀಣಾರಾಣಿ ರವರನ್ನು ಆಟೋರಿಕ್ಷಾದಲ್ಲಿ ಕುಳ್ಳಿರಿಸಿಕೊಂಡು ಕಣ್ಣೂರು ಕಡೆಯಿಂದ ಅರ್ಕುಳದ ಕಡೆಗೆ ಹೋಗುತ್ತಿರುವಾಗ ಮಧ್ಯಾಹ್ನ ಸಮಯ ಸುಮಾರು 13-15 ಗಂಟೆಗೆ ಸೋಮನಾಥಕಟ್ಟೆ ಬಳಿ ರಾಹೆ – 73 ರ ಡಾಮಾರು ರಸ್ತೆಯ ತೆರೆದ ವಿಭಾಜಕದ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರು ಹಾಗೂ ಅವರ ಸಂಬಂಧಿಕರು ಪ್ರಯಾಣಿಸುತ್ತಿದ್ದ ಆಟೋರಿಕ್ಷಾವು ಏಕಮುಖ ರಸ್ತೆಯ ಬಲಬದಿಯಲ್ಲಿ ಹೋಗುತ್ತಿರುವಾಗ ಅದೇ ರಸ್ತೆಯ ಎಡಬದಿಯಲ್ಲಿ ಬರುತ್ತಿದ್ದ ಪಿಕ್ ಅಪ್ ನಂಬ್ರ: KA-19-AC-1721 ನೇದರ ಚಾಲಕ ಗುರುರಾಜ್ ಎಂಬುವರು ವಾಹನವನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಒಮ್ಮೆಲೇ ತೆರೆದ ರಸ್ತೆ ವಿಭಜಕದ ಬಳಿ ರಸ್ತೆಯ ಬಲಬದಿಗೆ ತಿರುಗಿಸಿದಾಗ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಆಟೋರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಸಂಬಂಧಿಕರು ಆಟೋರಿಕ್ಷಾ ಸಮೇತ ಡಾಮಾರು ರಸ್ತೆಗೆ ಮಗುಚಿ ಬಿದ್ದಿರುತ್ತದೆ. ಈ ಅಪಘಾತದಿಂದ ಪಿರ್ಯಾದಿದಾರರ ಚಿಕ್ಕಮ್ಮ ರಜನಿ ರವರಿಗೆ ಹಣೆಗೆ ರಕ್ತಗಾಯ ಹಾಗೂ ಪಿರ್ಯಾದಿದಾರರ ಅತ್ತೆ ವೀಣಾರಾಣಿ ರವರ ತಲೆಗೆ ತೀವ್ರ ಸ್ವರೂಪದ ರಕ್ತಗಾಯ, ಎಡಭುಜ ಮತ್ತು ಎಡಪಕ್ಕೆಲುಬಿಗೆ ಮೂಳೆಮುರಿತದ ಗಾಯವಾಗಿರುತ್ತದೆ ಹಾಗೂ ಪಿರ್ಯಾದಿದಾರರು ಮತ್ತು ಆಟೋರಿಕ್ಷಾ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ. ಕೂಡಲೇ ಅಲ್ಲಿ ಸೇರಿದ ಜನರು ಪಿರ್ಯಾದಿದಾರರು ಅವರ ಸಂಬಂಧಿಕರಾದ ರಜನಿ ಮತ್ತು ವೀಣಾರಾಣಿ ರವರನ್ನು ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ಪಡೀಲ್ ಫರ್ಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 12-04-2022 03:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080