ಅಭಿಪ್ರಾಯ / ಸಲಹೆಗಳು

Crime Reported in : CEN Crime PS

ದಿನಾಂಕ 12-06-2022 ರಂದು ಮಾದಕ ದ್ರವ್ಯ ಸಾಗಾಟ ,ಮಾರಾಟ ಮತ್ತು ಸೆವನೆಯಂತಹ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಣೆ ಹಾಗೂ ರೌಂಡ್ಸ್ ಕರ್ತವ್ಯಕ್ಕೆ ಹೋಗಿದ್ದ ಸಿ,ಇ,ಎನ್ ಕ್ರೈಂ ಪೊಲೀಸ್ ಠಾಣಾ ಎ ಎಸ್ ಐ ವಿಜಯ ಕಾಂಚನ್ ಮತ್ತು ಪಿ ಸಿ ಭೀಮಣ್ಣ ಪೂಜಾರಿ ನೇ ರವರು ಬೆಳಿಗ್ಗೆ ಸುಮಾರು 10-30 ಗಂಟೆಗೆ ಮಂಗಳೂರು ನಗರದ ಕೊಟ್ಟಾರ ಕ್ರಾಸ್ ಬಳಿ ಓರ್ವ ಯುವಕ ಯಾವುದೋ ಅಮಲು ವಸ್ತುವನ್ನು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ಮಾಹಿತಿ   ಬಂದಿದ್ದು ಸ್ಥಳಕ್ಕೆ 10-40 ಗಂಟೆಗೆ ದಾಳಿ ನಡೆಸಿ ಮಾದಕ ವಸ್ತು ಸೇವನೆ ಮಾಡಿ ನಶೆಯಲ್ಲಿ ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದ ಪ್ರದೀಪ್ ಪ್ರಾಯ  (24) ವರ್ಷ ಎಂಬಾತನನ್ನು ವಶಕ್ಕೆ ಪಡೆದು ಮಂಗಳೂರು ನಗರದ ಕುಂಟಿಕಾನದಲ್ಲಿರುವ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ ಆಪಾದಿತನು ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಾಧಿಕಾರಿಯವರು ನೀಡಿದ ವೈದ್ಯಕೀಯ ಧೃಢಪತ್ರದ ಮೇರೆಗೆ ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Crime Reported in Bajpe PS

 ಪಿರ್ಯಾಧಿ Vijay Suvarna ದಾರರ ಅಕ್ಕ ಸುಂದರಿ ಎಂಬವರ ಮಗ ಬಾಲು ಎಂಬವರು ಪಿರ್ಯಾದಿದಾರರಿಗೆ ಮದ್ಯಾಹ್ನ ಸಮಯ ಸುಮಾರು 3-00 ಗಂಟೆಗೆ  ಪೋನ್‌ ಮಾಡಿ ತನ್ನ ತಮ್ಮ ಪ್ರವೀಣ್ ರವರು ತನ್ನ ಬಾಬ್ತು ಮೋಟಾರ್‌ ಸೈಕಲ್‌ ನಂಬ್ರ ಕೆಎ-19 ಇಡಬ್ಲ್ಯೂ-5536 ನೇ ದರಲ್ಲಿ ತನ್ನ ಮನೆಯಾದ ಮೂಡಬಿದ್ರೆಯಿಂದ ಕೈಕಂಬ ಕಡೆಗೆ ಬರುತ್ತಿರುವಾಗ ಸುಮಾರು 1-15 ಗಂಟೆಗ ಸಮಯಕ್ಕೆ ಕೈಕಂಬ ಕೊಯ್ಲಾ ಹೋಟೆಲ್‌ನ ಹತ್ತಿರ ತಲುಪಿದಾಗ ಎದುರಿನಿಂದ ಅಂದರೆ ಕೈಕಂಬ ಕಡೆಯಿಂದ ಮೂಡಬಿದ್ರೆ ಕಡೆಗೆ ಒಂದು ಕಾರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ಬಲಗಡೆ  ಬಂದು ಪ್ರವೀಣ್ ರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪ್ರವೀಣ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಗಾಯವಾದವರನ್ನು ಅಲ್ಲಿ ಸೇರಿದ ಜನ ಉಪಚರಿಸಿ ನಂತರ ಆಂಬುಲೆನ್ಸ್ ನಲ್ಲಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮದ್ಯೆ ಮೃತಪಟ್ಟಿದ್ದು, ಇದಕ್ಕೆ   ಕೆಎ-20 ಜೆಡ್‌-2946 ನೇ ಕಾರಿನ ಚಾಲಕನು ತನ್ನ ಕಾರನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪ್ರವೀಣ್ ರವರು ಚಲಾಯಿಸುತ್ತಿದ್ದ ಕೆಎ-19 ಇಡಬ್ಲ್ಯೂ-5536 ನೇ ದಕ್ಕೆ ಡಿಕ್ಕಿ ಪಡಿಸಿರುವುದೇ ಕಾರಣವಾಗಿದ್ದು, ಸದ್ರಿ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ನೀಡಿದ ದೂರಿನ ಸಾರಾಂಶ.

 

 

ಇತ್ತೀಚಿನ ನವೀಕರಣ​ : 13-06-2022 12:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080