ಅಭಿಪ್ರಾಯ / ಸಲಹೆಗಳು

Crime Reported in: Mangalore East Traffic PS                                                   

ದಿನಾಂಕ 12-07-2022 ರಂದು ಪ್ರಕರಣದ ಪಿರ್ಯಾದುದಾರರಾದ ಕೆ ಸುರೇಶ್ ಕುಮಾರ್ ರವರು ತನ್ನ ಬಾಬ್ತು KA-19-EN-8404 ನೋಂದಣಿ ನಂಬ್ರದ ಸ್ಕೂಟರನ್ನು  NH 73  ರಸ್ತೆಯಲ್ಲಿ ನಂತೂರು ಕಡೆಯಿಂದ ಬಿಕರ್ನಕಟ್ಟೆ ಕೈಕಂಬ ಕಡೆಗೆ ಚಲಾಯಿಸುತ್ತಾ ಸಮಯ ಸುಮಾರು ಬೆಳಿಗ್ಗೆ 11.00 ಗಂಟೆಗೆ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ರಸ್ತೆಯ ಬಳಿ ಬಂದು ತಲುಪುತ್ತಿದ್ದಂತೆ  ನಂತೂರು ಕಡೆಯಿಂದ ಬಿಕರ್ನಕಟ್ಟೆ ಕೈಕಂಬ ಕಡೆಗೆ KA-19-AB-7895 ನೋಂದಣಿ ನಂಬ್ರದ ಬಸ್ಸನ್ನು ಅದರ ಚಾಲಕ ನಿರ್ಲಕ್ಷ್ಯತನದಿಂದ ಮತ್ತು ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರ್ ನ ಬಲಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ವಾಹನ ಸಮೇತ ರಸ್ತೆಯ ಎಡಬದಿಗೆ ಬಿದ್ದು, ಎಡ ಕಾಲಿನ  ಕೋಲು ಕಾಲಿಗೆ ಮೂಳೆ ಮುರಿತದ ಗಾಯ, ಎಡ ಭುಜದ ಮೇಲೆ ತರಚು ಗಾಯ, ಬಲ ಕೈ ತೋಳಿಗೆ ಗುದ್ದಿದ ನಮೂನೆಯ ಗಾಯ ಉಂಟಾದವರನ್ನು ಸಾರ್ವಜನಿಕರು ಉಪಚರಿಸಿದ್ದು, ನಂತರ ಬಸ್ಸು ನಿರ್ವಾಹಕರು ಆಟೋರಿಕ್ಷಾ ಒಂದರಲ್ಲಿ ಚಿಕಿತ್ಸೆ ಬಗ್ಗೆ ಮಂಗಳೂರು ನರ್ಸಿಂಗ್ ಹೋಂ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ವೈದ್ಯರು ಗಾಯಾಳುವನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿದ್ದು,  ಚಿಕಿತ್ಸೆಯಲ್ಲಿರುತ್ತಾರೆ ಎಂಬಿತ್ಯಾದಿ.

Crime Reported in: Mangalore East PS

ಫಿರ್ಯಾದಿದಾರರಾದ  ರಹೀಂ ರವರು ತನ್ನ ಬಾಬ್ತು ಕೆಎ-19-ಇ. ಡಬ್ಲ್ಯೂ – 2845 ನೇ ಹೊಂಡಾ ಡಿಯೋ ಸ್ಕೂಟರ್ ನ್ನು ದಿನಾಂಕ: 19-06-2022 ರಂದು ಮದ್ಯಾಹ್ನ 3-00 ಗಂಟೆಗೆ ಕಂಕನಾಡಿಯ ಮ್ಯಾಕ್ ಮಾಲ್ ನ ಎದುರುಗಡೆ ಪಾರ್ಕ್ ಮಾಡಿ ಮಾಲ್ ಹೋಗಿ ಬಂದು 3-05 ಗಂಟೆಗೆ ಬಂದು ನೋಡಿದಾಗ ತನ್ನ ಸ್ಕೂಟರ್ ಇಲ್ಲದೇ ಇದ್ದು ಕಾಣೆಯಾಗಿರುತ್ತದೆ, ಈ ಸ್ಕೂಟರ್ ನ್ನು ತಾನು ನಗರದ ಎಲ್ಲಾ ಕಡೆ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ.  ಸ್ಕೂಟರ್ ನ್ನು ದಿನಾಂಕ: 19-06-2022 ರಂದು ಮದ್ಯಾಹ್ನ 3-00 ಗಂಟೆಯಿಂದ 3-05 ಗಂಟೆಯ ಮದ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಇದರ ಅಂದಾಜು ಮೌಲ್ಯ ರೂ. 35,000/-, ಇದರ ಚಾಸಿಸ್ ನಂ. ME4JF39EHH7014776, ಇಂಜಿನ್ ನಂಬರ್: JF39E72072953, ಮಾಡೆಲ್: 2013, ಬಣ್ಣ: ಗ್ರೇ ಆಗಿರುತ್ತದೆ,  ಎಂಬಿತ್ಯಾದಿ.

Crime Reported in: Mangalore North PS                                    

ಪಿರ್ಯಾದಿದಾರರಾದ  ರಾಹುಲ್ ರಾವ್  ರವರು ಕೆ ಎಸ್ ರಾವ್ ರೋಡ್ ಮಂಗಳೂರು ಇಲ್ಲಿನ ಖಾಸಗೀ ಅಪಾರ್ಟ್ ಮೆಂಟ್ ನಲ್ಲಿ ಹಲವು ವರ್ಷಗಳಿಂದ  ವಾಸವಿದ್ದು ಅದೇ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿರುವ  ಫ್ರೆಡ್ರಿಕ್ ಮಚಡಾಸ್ ಎಂಬುವರು  ರಾಹುಲ್ ರಾವ್ ರವರಿಗೆ   ದಿನಾಂಕ 05-02-2021 ರಂದು  ನಾನು ಯಾರು ಅಂತ ನಿನಗೆ ತಿಳಿದಿಲ್ಲ ಎಂದು ಹೇಳಿ ವಿನಾಕಾರಣ ತೊಂದರೆ ನೀಡಿ ಅವ್ಯಾಚ ಶಬ್ದಗಳಾದ ನೀನು ಬ್ಲಾಕ್ ಮಂಕಿ ಮತ್ತು ಬ್ಲಾಕ್ ಡಾಗ್ ಎಂದು ನನಗೂ ಹಾಗೂ ನನ್ನ ದಿವಂಗತ ತಂದೆಗೂ ಬೈದು ಬೆದರಿಕೆ ನೀಡಿದ  ಬಗ್ಗೆ ದೂರು ನೀಡಿದ್ದು ಸದ್ರಿ ಫ್ರೆಡ್ರಿಕ್ ಮಚಡಾಸ್ ರವರ ವಿರುದ್ದ ಕಾನೂನುನಡಿ ಸೂಕ್ತ ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸಿ ಕೊಡಬೇಕೆಂದು ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 12-07-2022 05:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080