Feedback / Suggestions

Crime Reported in Barke PS  

ಪಿರ್ಯಾದಿ SHALINI (49)ದಾರರ ಮಗಳು ಕುಮಾರಿ ಶೀಲ್ಪಾ ಪ್ರಾಯ(21) ವರ್ಷ ರವರು ದಿನಾಂಕ: 11-10-2021 ರಂದು ಬೆಳಿಗ್ಗೆ 09:00 ಗಂಟೆಗೆ ಮನೆಯಿಂದ ಕುದ್ರೋಳಿ ದೇವಸ್ಥಾನ ಎದುರುಗಡೆ ಇರುವ ಕಂಪ್ಯೂಟರ್ ತರಭೇತಿ ಕೇಂದ್ರಕ್ಕೆ ಹೋಗಿದ್ದು,ಮರಳಿ ಮನೆಗೆ ಬಾರದೇ ಇದ್ದು, ತನ್ನ ಸ್ನೇಹಿತರ ಮನೆಗೂ ಹೋಗದೇ,ಸಂಭಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದು,  ಈ ವರೆಗೂ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ ಎಂಬಿತ್ಯಾದಿ ಸಾರಾಂಶ.

ಕಾಣೆಯಾದವರ ವಿವರ:

ಹೆಸರು: ಶೀಲ್ಪಾ ಪ್ರಾಯ 21 ವರ್ಷ

ತಂದೆ: ದಿ.ಚಂದ್ರಶೇಖರ

ಎತ್ತರ: 4 ಅಡಿ

Crime Reported in Bajpe PS

ದಿನಾಂಕ 11.10.2021 ರಂದು ರಾತ್ರಿ 10.00 ಗಂಟೆಗೆ ಕಾರು ನಂಬ್ರ ಕೆಎ 18 ಪಿ 3940 ನೇದನ್ನು ಅದರ ಚಾಲಕನು ಕಾರನ್ನು ಕೈಕಂಬ ಕಡೆಯಿಂದ - ಬಜಪೆ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಮಂಗಳೂರು ತಾಲೂಕು ಕೊಳಂಬೆ ಗ್ರಾಮದ ಫೆರ್ನಾಂಡಿಸ್ ಕಂಪೌಂಡ್ ಬಳಿ ತಲುಪುವಾಗ  ರಸ್ತೆಯ ಬದಿಯಲ್ಲಿ  ನಡೆದುಕೊಂಡು ಹೋಗುತ್ತಿದ್ದ ಸುಮಾರು 70 ವರ್ಷ ಪ್ರಾಯದ ಅಪರಿಚಿತ ಪಾದಾಚಾರಿ ವ್ಯಕ್ತಿಗೆ ಕಾರು ಡಿಕ್ಕಿಯಾದ ಪರಿಣಾಮ, ಅಪರಿಚಿತ ವ್ಯಕ್ತಿಯ ಎಡಕಾಲಿನಲ್ಲಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿ ರಸ್ತೆ ಬದಿಯ ನೀರು ಹರಿಯುವ ತೋಡಿಗೆ ಬಿದ್ದು ಮೃತಪಟ್ಟಿರುವುದಾಗಿದೆ. ಅಪಘಾತ ನಂತರ ಆರೋಪಿಯು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸದೇ ಹಾಗೂ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡದೇ ಪರಾರಿಯಾಗಿರುವುದು ಎಂಬಿತ್ಯಾದಿ

Crime Reported in Moodabidre PS     

ದಿನಾಂಕ: 10-10-2021 ರಂದು ಬೆಳಗ್ಗೆ ಸುಮಾರು 6.30 ಗಂಟೆಗೆ ಸಮಯಕ್ಕೆ ಮೂಡಬಿದ್ರೆ ತಾಲೂಕು ಶಿರ್ತಾಡಿ ಗ್ರಾಮದ ಪಡ್ಡಾಯ ಬೆಟ್ಟು  ಎಂಬಲ್ಲಿ ಪಿರ್ಯಾದಿ Sukumar ದಾರರು ತನ್ನ ಮನೆಯಲ್ಲಿರುವ ಸಮಯ ಆರೋಪಿಗಳಾದ ಶಕುಂತಲಾ, ವಿನಯ, ಮಹೇಶ್ ಮತ್ತು ಇತರ ಇಬ್ಬರು ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಆರೋಪಿಯಾದ ಶಕುಂತಲರವರು ತುಳು ಭಾಷೆಯಲ್ಲಿ ಪಿರ್ಯಾದಿದಾರರನ್ನು ಉದ್ದೇಶಿಸಿ " ಓಲು ಉಲ್ಲಂಬೆ ಸುಕುಮಾರ್ ಪಿದಾಯಿ ಬಲ ಬೆವಾರ್ಸಿ" ಎಂದು ಅವಾಚ್ಯ ಶಬ್ದಗಳಿಂದ ಬೈದು, ಆರೋಪಿಗಳ ಪೈಕಿ ಮಹೇಶ್ ನು ಪಿರ್ಯಾದಿದಾರರಿಗೆ ದೊಣ್ಣೆಯಿಂದ ಹೊಡೆದಿದ್ದು, ಇತರ ಆರೋಪಿಗಳು ಕಾಲಿನಿಂದ ತುಳಿದು ಎಳೆದಾಡಿರುವುದಾಗಿದೆ. ಆರೋಪಿ ಶಕುಂತಲರವರ ಸ್ಕೂಟರ್ ನ್ನು ಪಿರ್ಯಾದಿದಾರರು ಖರೀದಿ ಮಾಡಿದ್ದು,  ಪಿರ್ಯಾದಿ ಮತ್ತು ಆರೋಪಿ ಶಕುಂತಲ ರವರ ಮಧ್ಯೆ ಇರುವ ಹಣದ ವಿಚಾರವೇ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ ಎಂಬಿತ್ಯಾದಿ.

 

Crime Reported in Konaje PS

1) ಪಿರ್ಯಾದಿ Narayana Rai ದಾರರು ದೇರಳಕಟ್ಟೆಯಲ್ಲಿರುವ ಕೆನರಾ ಬ್ಯಾಂಕ್ (ಈ ಹಿಂದೆ ಸಿಂಡಿಕೇಟ್ ಬ್ಯಾಂಕ್) ನ ಬ್ರಾಂಚ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 14.05.2019 ರಂದು 1ನೇ ಆರೋಪಿ Isubu(A1) / Late Ismail,D No 3-96-C Chambugudde,Permannuru VillageMangaluru City ಯು ಸದ್ರಿ ಬ್ಯಾಂಕ್ ಗೆ ಭೇಟಿ ನೀಡಿ ತನ್ನ ಬಾಬ್ತು ಚೆಂಬುಗುಡ್ಡೆಯಲ್ಲಿರುವ M/s ಸುಪರ್ ಬ್ರದರ್ಸ್ ಎಂಬ ಹೆಸರಿನ ಅಂಗಡಿಯ ನವೀಕರಣ ಮತ್ತು ಪುನರಾರಂಭಿಸುವ ಉದ್ದೇಶದಿಂದ 7,00,000/- ರೂ ಅವಧಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದು, ಆರೋಪಿಯು ಸಲ್ಲಿಸಿದ ದಾಖಲಾತಿಗಳಾದ ಟ್ರೇಡ್ ಲೈಸನ್ಸ್, ಬಾಡಿಗೆ ಕರಾರು ಪತ್ರ ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಿ ದಿನಾಂಕ 16.05.2019 ರಂದು 1ನೇ ಆರೋಪಿಗೆ 84 ಕಂತುಗಳಲ್ಲಿ ಮಾಸಿಕ ಕಂತು ರೂ 11,638/- ರಂತೆ 7,00,000/- ರೂ ಸಾಲದ ಮೊತ್ತವನ್ನು ಮಂಜೂರು ಮಾಡಿದ್ದು, 2ನೇ ಆರೋಪಿ Nasira(A2),14-76/42 GUL NHIF Villa, T C Road, Near Womens Col,UllalMangaluru City ಯು 1ನೇ ಆರೋಪಿಗೆ ಜಾಮೀನುದಾರರಾಗಿರುತ್ತಾರೆ. ಆರೋಪಿಯು ಸಾಲವನ್ನು ಪಡೆದುಕೊಂಡ ಬಳಿಕ ಸರಿಯಾದ ಸಮಯದಲ್ಲಿ ಸಾಲದ ಮೊತ್ತವನ್ನು ಪಾವತಿಸದೇ ಇದ್ದು, ಪರಿಶೀಲಿಸಿದಾಗ ಸಾಲದ ಮೊತ್ತವನ್ನು ಪಡೆದುಕೊಂಡ ಉದ್ದೇಶಕ್ಕೆ ಬಳಸಿಕೊಳ್ಳದೆ ಇರುವುದು ಕಂಡು ಬಂದಿರುತ್ತದೆ. ಪಿರ್ಯಾದಿದಾರರು ಆರೋಪಿಯು ಸಲ್ಲಿಸಿದ್ದ ದಾಖಲಾತಿಗಳನ್ನು ಪುನಃ ಪರಿಶೀಲಿಸಲಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ ಗೆ ಸಲ್ಲಿಸಿದ್ದು, ಸ್ಥಳ ಪರಿಶೀಲನೆ ನಡೆಸಿದಾಗ M/s ಸುಪರ್ ಬ್ರದರ್ಸ್ ಎಂಬ ಹೆಸರಿನ ಅಂಗಡಿಯು ಕೂಡಾ ಕಂಡು ಬಾರದೆ ಪಿರ್ಯಾದಿದಾರರು ಆರೋಪಿಗೆ ಸಾಲದ ಮೊತ್ತವನ್ನು ಪಾವತಿಸುವಂತೆ ಹಲವಾರು ಬಾರಿ ತಿಳಿಸಿದ್ದರೂ ಕೂಡಾ ಈವರೆಗೆ ಪಾವತಿಸದೇ ಇದ್ದು, ಈ ಬಗ್ಗೆ ಪಿರ್ಯಾದಿದಾರರು ದಿನಾಂಕ 12-12-2019 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಗೆ ದೂರನ್ನು ಸಲ್ಲಿಸಿದ್ದು, ಆರೋಪಿಗೆ ಸಹಕರಿಸಿದ ಬ್ಯಾಂಕ್ ಉದ್ಯೋಗಿಗಳ ವಿರುದ್ಧ ಕೂಡಾ ವಿಚಾರಣೆ ನಡೆಸಿರುತ್ತದೆ. ಆರೋಪಿಯು ಬ್ಯಾಂಕ್ ಗೆ ವಿಶ್ವಾಸ ದ್ರೋಹವನ್ನು ಎಸಗಿ ನಕಲಿದಾಖಲೆಗಳನ್ನು ಸೃಷ್ಟಿಸಿ ಲೋನ್ ಪಡೆಯುವ ಸಮಯದಲ್ಲಿ ಸಲ್ಲಿಸಿ ಸುಮಾರು 7,85,000/- ರೂ ವಂಚನೆಯನ್ನು ಮಾಡಿ ಬ್ಯಾಂಕ್ ಗೆ ನಷ್ಟವನ್ನು ಉಂಟುಮಾಡಿರುತ್ತಾನೆ ಎಂಬಿತ್ಯಾದಿ.

 

2) ಪಿರ್ಯಾದಿ Narayana Rai ದಾರರು ದೇರಳಕಟ್ಟೆಯಲ್ಲಿರುವ ಕೆನರಾ ಬ್ಯಾಂಕ್ (ಈ ಹಿಂದೆ ಸಿಂಡಿಕೇಟ್ ಬ್ಯಾಂಕ್) ನ ಬ್ರಾಂಚ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 05.11.2018 ರಂದು 1ನೇ ಆರೋಪಿ Mahammed Fayaz(A1) / Late Moidin Kunhi,D No 5 - 58/2 Adambala House, Mangalanthi,Manjanady Village ಯು ಸದ್ರಿ ಬ್ಯಾಂಕ್ ಗೆ ಭೇಟಿ ನೀಡಿ ತೊಕ್ಕೊಟ್ಟಿನ ಸ್ಮಾರ್ಟ್ ಸಿಟಿ ಬಿಲ್ಡಿಂಗ್ ಕಟ್ಟಡದಲ್ಲಿ ಮೈ ಗೋಲ್ಡ್ ಎಂಬ ಹೆಸರಿನ ಅಂಗಡಿಯನ್ನು ತೆರೆಯುವ ಉದ್ದೇಶದಿಂದ 5,00,000/- ರೂ ಸಾಲಕ್ಕೆ ಅರ್ಜಿ ಸಲ್ಲಿಸಿದ್ದು, ಆರೋಪಿಯು ಸಲ್ಲಿಸಿದ ದಾಖಲಾತಿಗಳಾದ ಟ್ರೇಡ್ ಲೈಸನ್ಸ್ ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಿ ದಿನಾಂಕ 22.11.2018 ರಂದು 1ನೇ ಆರೋಪಿಗೆ 84 ಕಂತುಗಳಲ್ಲಿ ಮಾಸಿಕ ಕಂತು ರೂ 16,586/- ರಂತೆ 5,00,000/- ರೂ ಸಾಲದ ಮೊತ್ತವನ್ನು ಮಂಜೂರು ಮಾಡಿದ್ದು, 2ನೇ ಆರೋಪಿ Abdul ravoof(A2) / Puttu Bavu,3-121/A Belma Deralakatte,Belma ಯು 1ನೇ ಆರೋಪಿಗೆ ಜಾಮೀನುದಾರರಾಗಿರುತ್ತಾರೆ. ಆರೋಪಿಯು ಸಾಲವನ್ನು ಪಡೆದುಕೊಂಡ ಬಳಿಕ ಸರಿಯಾದ ಸಮಯದಲ್ಲಿ ಸಾಲದ ಮೊತ್ತವನ್ನು ಪಾವತಿಸದೇ ಇದ್ದು, ಪರಿಶೀಲಿಸಿದಾಗ ಸಾಲದ ಮೊತ್ತವನ್ನು ಪಡೆದುಕೊಂಡ ಉದ್ದೇಶಕ್ಕೆ ಬಳಸಿಕೊಳ್ಳದೆ ಇರುವುದು ಕಂಡು ಬಂದಿರುತ್ತದೆ. ಪಿರ್ಯಾದಿದಾರರು ಆರೋಪಿಯು ಸಲ್ಲಿಸಿದ್ದ ದಾಖಲಾತಿಗಳನ್ನು ಪುನಃ ಪರಿಶೀಲಿಸಲಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ ಗೆ ಸಲ್ಲಿಸಿ ಸಾಲ ಪಡೆದುಕೊಂಡಿದ್ದು, ಪಿರ್ಯಾದಿದಾರರು ಆರೋಪಿಗೆ ಸಾಲದ ಮೊತ್ತವನ್ನು ಪಾವತಿಸುವಂತೆ ಹಲವಾರು ಬಾರಿ ತಿಳಿಸಿದ್ದರೂ, ನೋಟೀಸ್ ನೀಡಿದ್ದರೂ ಕೂಡಾ ಈವರೆಗೆ ಪಾವತಿಸದೇ ಇದ್ದು, ಈ ಬಗ್ಗೆ ಪಿರ್ಯಾದಿದಾರರು ದಿನಾಂಕ 12-12-2019 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಗೆ ದೂರನ್ನು ಸಲ್ಲಿಸಿದ್ದು, ಆರೋಪಿಗೆ ಸಹಕರಿಸಿದ ಬ್ಯಾಂಕ್ ಉದ್ಯೋಗಿಗಳ ವಿರುದ್ಧ ಕೂಡಾ ವಿಚಾರಣೆ ನಡೆಸಿರುತ್ತದೆ. ಆರೋಪಿಯು ಬ್ಯಾಂಕ್ ಗೆ ವಿಶ್ವಾಸ ದ್ರೋಹವನ್ನು ಎಸಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಲೋನ್ ಪಡೆಯುವ ಸಮಯದಲ್ಲಿ ಸಲ್ಲಿಸಿ ಸುಮಾರು 4,44,819/- ರೂ ವಂಚನೆಯನ್ನು ಮಾಡಿ ಬ್ಯಾಂಕ್ ಗೆ ನಷ್ಟವನ್ನು ಉಂಟುಮಾಡಿರುತ್ತಾನೆ ಎಂಬಿತ್ಯಾದಿ.

 

Crime Reported in Mangalore South PS

ಪಿರ್ಯಾದಿದಾರರಾದ ಬಾಲಕೃಷ್ಣ ಪ್ರಾಯ 35 ವರ್ಷ ರವರು ಸುಮಾರು 10 ವರ್ಷಗಳೀಂದ ಮಂಗಳೂರಿಗೆ ಬಂದು Treasureoffancy ಬೋಟ್ ನ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದು, ಸುಮಾರು 4 ದಿನಗಳಿಂದ “ಇಮ್ಯಾನುವಲ್ “ ಎಂಬ ಬೋಟ್ ನಂಬ್ರ IND-KA-01-MM-3338 ನೇ ಚಾಲಕನಾಗಿ ದುಡಿಯುತ್ತಿದ್ದು, ಪ್ರಾನ್ಸೀಸ್, ಪಿಲೀಫ್ ಮತ್ತು ಪ್ರಕಾಶ ವರು ಸದ್ರಿ ಬೋಟಿನ ಮಾಲಕರಾಗಿರುತ್ತಾರೆ.   ದಿನಾಂಕ: 10/11/2021 ರಂದು ಬೆಳಗ್ಗಿನ ಜಾವ ಸುಮಾರು 01.00 ಗಂಟೆಗೆ ಸದ್ರಿ ಬೋಟಿನಲ್ಲಿ ಪಿರ್ಯಾದಿದಾರರು, ವಾಹಿಲಾ ಆದಮ್ ಹಾಗೂ ಇತರ 9 ಜನರು ಸೇರಿ ಮೀನುಗಾರಿಕೆಗೆ ಸಮುದ್ರ ತೆರಳಿದ್ದು, ಸುಮಾರು  2 ಗಂಟೆಗಳ ನಂತರ ಪಿರ್ಯಾದಿದಾರರು ಬಂದು ವಾಹಿಲಾ ಆದಮ್ ನನ್ನು ಹುಡುಕಾಡಿದಾಗ  ಆತ ಕಾಣೆಯಾಗಿರುತ್ತಾನೆ. ಆತನನ್ನು ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಡಿದ್ದು, ಇದುವರೆಗೆ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಆತನನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ. ಎಂಬಿತ್ಯಾದಿ.

ಕಾಣೆಯಾದವರ ಚಹರೇ; ಹೆಸರು – ವಾಹಿಲ ಆದಮ್   ಪ್ರಾಯ-37 ವರ್ಷ, ಎತ್ತರ-5 ಅಡಿ 3 ಇಂಚು, ಕೂದಲು- ಕಪ್ಪು ಕೂದಲು,ಮೈ ಬಣ್ಣ- ಗೋದಿ ಮೈಬಣ್ಣ, ಶರೀರ-ಸಧಾರಣ ಶರೀರ, ಧರಿಸಿದ ಬಟ್ಟೆ-ಕಪ್ಪು ಬಣ್ಣದ  ಅರ್ಧ ಚಡ್ಡಿ , ಕಪ್ಪು ಮತ್ತು ನೀಲಿ ಮಿಶ್ರಿತ ಟಿ ಶರ್ಟ್ ಧರಿಸಿರುತ್ತಾರೆ. ಮಾತನಾಡುವ ಭಾಷೆ- ತೆಲುಗು

 

Crime Reported in Moodabidre PS

1) ಪಿರ್ಯಾದಿ Bhimanayak ದಾರರು ಬೆಳುವಾಯಿ ಗ್ರಾಮ ಪಂಚಾಯತ್ ನ ಅಭಿವೃದ್ದಿ ಅಧಿಕಾರಿಯಾಗಿದ್ದು ದಿನಾಂಕ: 11-10-2021 ರಂದು ಸಂಜೆ 17-00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರು ಕಚೇರಿಯಲ್ಲಿರುವ ಸಮಯ ಆರೋಪಿ ಮಹಮ್ಮದ್ ಮುಬೀನ್ ತಂದೆ: ಅಬ್ದುಲ್ ಸತ್ತಾರ್ ಎಂಬವರು ಕಚೇರಿಗೆ ಬಂದು ತನಗೆ 9 & 11 ಮತ್ತು ಉದ್ಯಮ ಪರವಾನಿಗೆ ನೀಡುವಂತೆ ಕೇಳಿದ್ದು ಅದಕ್ಕೆ ಪಿರ್ಯಾದಿದಾರರು ನಮೂನೆ 9 & 11 ನೀಡಲು ಪೂರಕ ದಾಖಲೆಗಳನ್ನು ಒದಗಿಸಿದಲ್ಲಿ ಸ್ಥಳ ತನಿಖೆ ಮಾಡಿ ನಮೂನೆ 9 & 11 ಮಾಡಿಕೊಡುತ್ತೇನೆಂದು ತಿಳಿಸಿದ್ದು, ಇದಕ್ಕೆ ಆಕ್ರೋಶಗೊಂಡ ಆರೋಪಿಯು ಈಗಲೇ ವಾಣಿಜ್ಯ ಉದ್ದೇಶಕ್ಕೆ ಖಾತ ನೀಡಬೇಕೆಂದು ಹೇಳಿ, ಇಲ್ಲದಿದ್ದಲ್ಲಿ ನಿನ್ನನ್ನು ನೋಡಿಕೊಳ್ಳುತ್ತೇನೆಂದು ಹೇಳಿ ಜೀವ ಬೆದರಿಕೆ ಹಾಕಿ ನೀನೊಬ್ಬ ಕಳ್ಳ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯ ನಿರ್ವಹಿಸಲು ಬಿಡದೇ ಹಲ್ಲೆ ಮಾಡಲು ಮುಂದಾಗಿದ್ದು ಈ ಕೃತ್ಯವನ್ನು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಶೌಖತ್ ಬಾನು ಮತ್ತು ಪಂಚಾಯತ್ ನ ಕ್ಲರ್ಕ ಆದ ರಕ್ಷಿತಾ ನೋಡಿರುತ್ತಾರೆ. ಆದುದರಿಂದ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿದ ಮಹಮ್ಮದ್ ಮುಬೀನ್ ತಂದೆ: ಅಬ್ದುಲ್ ಸತ್ತಾರ್ ಎಂಬವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬಿತ್ಯಾದಿ.

 

2)  ದಿನಾಂಕ: 11-10-2021 ರಂದು ಸಂಜೆ 20.00 ಗಂಟೆಗೆ ಪಿರ್ಯಾದಿ SURESH ದಾರರು ಕರ್ತವ್ಯದಲ್ಲಿರುವ ಸಮಯ ಮೂಡಬಿದರೆ ಠಾಣಾ ಸರಹದ್ದಿನ ಕಡಂದಲೆ ಗ್ರಾಮದಲ್ಲಿ ಹರಿಯುವ ಶಾಂಭವಿ ಹೊಳೆಯಲ್ಲಿ ಯಾರೋ ವ್ಯಕ್ತಿಗಳು ಡ್ರೆಜ್ಜಿಂಗ್ ಮಷಿನ್ ಅಳವಡಿಸಿರುವ ದೋಣಿ, ಪೈಪ್ ಮುಂತಾದ ಸಾಮಗ್ರಿಗಳನ್ನು ಬಳಸಿಕೊಂಡು ಅಕ್ರಮವಾಗಿ ಮರಳು ತೆಗೆಯುತ್ತಿದ್ದಾರೆ, ಎಂಬುದಾಗಿ ಕಡಂದಲೆ ಗ್ರಾಮದ ಸಾರ್ಜನಿಕರಿಂದ ಪಿರ್ಯಾದಿದಾರರಿಗೆ ಖಚಿತ ಮಾಹಿತಿ ನೀಡಿದಂತೆ. ಸದ್ರಿ ಜಾಗದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಿ, ಶಾಂಭವಿ ನದಿಯಿಂದ ಮರಳನ್ನು ಕಳವು ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಪ್ರಕರಣ ದಾಖಲಿಸಬೇಕು ಎಂಬಿತ್ಯಾದಿ.

 

3) ದಿನಾಂಕ: 11-10-2021 ರಂದು 20.30 ಗಂಟೆಗೆ ಪಿರ್ಯಾದಿ PARVATHI RANGAPPA SIDDAPPANAVARA ದಾರರು ಮನೆಯಲ್ಲಿರುವಾಗ ಗಂಡನಾದ ಆರೋಪಿ RANGAPPA(A1) / GOWDAPPAಯು ಪಿರ್ಯಾದುದಾರರ ಮೇಲೆ ಅನುಮಾನವನ್ನು ಹೊಂದಿದ್ದು ಮದ್ಯಪಾನ ಮಾಡಿಕೊಂಡು ಪಿರ್ಯಾದುದಾರರೊಂದಿಗೆ ಜಗಳ ಮಾಡಿಕೊಂಡಿದ್ದು ಪಿರ್ಯಾದಿದಾರರಿಗೆ  ಮಗಳೆ ನಿನಗೆ ಈ ದಿನ ಒಂದು ಗತಿ ಕಾಣಿಸುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದುದಾರರನ್ನು ತಡೆದು ನಿಲ್ಲಿಸಿ ಕೊಲ್ಲುವ ಉದ್ದೇಶದಿಂದ ಕತ್ತಿಯಿಂದ ಕುತ್ತಿಗೆಗೆ ಕಡಿಯಲು ಬಂದಿದ್ದು ಪಿರ್ಯಾದುದಾರರು ಅದನ್ನು ತಪ್ಪಿಸಲು ತನ್ನ ಎಡಗೈಯನ್ನು ಅಡ್ಡ ಹಿಡಿದಿದ್ದರಿಂದ  ಎಡಗೈಯ ಕೋಲುಕೈಗೆ ಪೆಟ್ಟು ಬಿದ್ದಿದ್ದು ಪರಿಣಾಮ ರಕ್ತಗಾಯವಾಗಿದ್ದು, ಭುಜದ ಭಾಗ ಮತ್ತು ಸೊಂಟದ ಭಾಗಗಳಲ್ಲಿ ತರಚಿದ ಗಾಯವಾಗಿರುತ್ತದೆ. ನಂತರವು ಕೂಡ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು ಅಲ್ಲಿಯ ನರೆಕರೆಯವರ ಸಹಾಯದಿಂದ ಚಿಕಿತ್ಸೆಗಾಗಿ ಮೂಡಬಿದರೆಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ತೆರಳುತ್ತಿರುವುದು ಎಂಬಿತ್ಯಾದಿ.

 

Last Updated: 12-10-2021 06:50 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080