ಅಭಿಪ್ರಾಯ / ಸಲಹೆಗಳು

Crime Reported in Traffic North PS

ದಿನಾಂಕ 12-01-2022 ರಂದು ಪಿರ್ಯಾದಿ Gangadhara Poojary ಹಾಗೂ ಅವರ ಮೂವರು ಗೆಳೆಯರಾದ ಶ್ರೀಧರ ಸಾಲಿಯಾನ್, ಸತೀಶ್ ಶೆಟ್ಟಿ, ಭಾಸ್ಕರ್ ಶೆಟ್ಟಿ ರವರೊಂದಿಗೆ ಹಳೆಯಂಗಡಿಯ ಮಾತಾ ರೆಸಿಡೆನ್ಸಿ ಕಟ್ಟಡದ ಸೊಸೈಟಿ ಮೀಟಿಂಗ್ ಬಗ್ಗೆ ಬಂದಿದ್ದವರು ಮೀಟಿಂಗ್ ಮುಗಿದ ಬಳಿಕ ಹಳೆಯಂಗಡಿ ಜಂಕ್ಷನಿನಲ್ಲಿರುವ ಕೋಸ್ಟಲ್ ರೆಸ್ಟೋರೆಂಟಿನಲ್ಲಿ ರಾತ್ರಿ ಊಟ ಮುಗಿಸಿ ವಾಪಸು ಮಾತಾ ರೆಸಿಡೆನ್ಸಿ ಕಟ್ಟಡದ ಕಡೆಗೆ ಹೋಗುವ ಸಲುವಾಗಿ ರಸ್ತೆ ದಾಟುತ್ತಾ ರಸ್ತೆಯ ಇನ್ನೊಂದು ಬದಿಗೆ ಸಮೀಪಿಸುತ್ತಿದ್ದಂತೆ ರಾತ್ರಿ ಸಮಯ ಸುಮಾರು 10:00 ಗಂಟೆಗೆ ಪಾವಂಜೆ ಜಂಕ್ಷನ್ ಕಡೆಯಿಂದ ಮುಲ್ಕಿ ಕಡೆಗೆ KA-19-MD-3096 ನಂಬ್ರದ ಬಿಳಿ ಬಣ್ಣದ ಆಡಿ ಕಾರನ್ನು ಅದರ ಚಾಲಕನಾದ MOHAMMED SAJJAD ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ತೆರದ ಡಿವೈಡರ್ ಜಾಗದಲ್ಲಿ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಭಾಸ್ಕರ್ ಶೆಟ್ಟಿ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಭಾಸ್ಕರ್ ಶೆಟ್ಟಿ ರವರು NH 66 ನೇ ಡಾಮಾರು ರಸ್ತೆಗೆ ಎಸೆಯಲ್ಪಟ್ಟು ಬಿದ್ದು ಭಾಸ್ಕರ್ ಶೆಟ್ಟಿ ರವರ ತಲೆಯ ಹಿಂಭಾಗಕ್ಕೆ ಚರ್ಮ ಹರಿದ ರೀತಿಯ ಗಂಭೀರ ಸ್ವರೂಪದ ರಕ್ತ ಗಾಯವಾಗಿದ್ದು ಅಲ್ಲದೇ ಎಡ ಕೈಯ ತೊಳು ಭಾಗದಲ್ಲಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಸಾಗಿಸಲ್ಪಟ್ಟವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ದಿನಾಂಕ 12-01-2022 ರಂದು ರಾತ್ರಿ 11:00 ಗಂಟೆಗೆ ಮೃತ ಪಟ್ಟಿರುತ್ತಾರೆ ಎಂಬಿತ್ಯಾದಿ.

Crime reported in Traffic South PS

 ದಿನಾಂಕ: 12-01-2022 ರಂದು ಪಿರ್ಯಾದಿ THANVIದಾರರ ಹೆಂಡತಿ ಸುನೀತರವರು ಮಗಳಾದ ತನ್ವಿ (4 ವರ್ಷ) ರವರನ್ನು ಅಂಗನವಾಡಿ ಶಾಲೆಗೆ ಬಿಟ್ಟು ಬರಲೆಂದು ಹೋದ ಸಮಯ ಸುಮಾರು ಬೆಳಿಗ್ಗೆ 10-00 ಗಂಟೆಗೆ ಬಡಂಬಲೆ-2 ಗೇಟ್ ನ ಬಳಿ ರಸ್ತೆ ದಾಟುತ್ತಿರುವಾಗ ಮೊಂಟುಗೊಳಿ ಕಡೆಯಿಂದ ಅಂದರೆ ವಿದ್ಯಾನಗರದ ಕಡೆಗೆ ಹೋಗುತ್ತಿದ್ದ ಆಟೋರಿಕ್ಷಾ ನಂಬ್ರ:KA-19-AD-1232 ನೇದರ ಸವಾರ ಇಬ್ರಾಹೀಂ ಕೆ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ಮಗಳು ತನ್ವಿಗೆ ಆಟೋರಿಕ್ಷಾ ವನ್ನು ಡಿಕ್ಕಿ ಪಡಿಸಿದ ಪರಿಣಾಮ ತನ್ವಿ ರಸ್ತೆಗೆ ಬಿದ್ದ ಪರಿಣಾಮ ಅವಳಿಗೆ ತಲೆಗೆ ಗಂಭೀರ ಸ್ವರೂಪದ ಗುದ್ದಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಬೆರೊಂದು ಆಟೋರಿಕ್ಷಾದಲ್ಲಿ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಎಂಬಿತ್ಯಾದಿ.

Crime Reported in Mangaluru South PS

ಪಿರ್ಯಾದು PREM NARAYANA TYAGIದಾರು  ದಿನಾಂಕ 12-01-2022 ರಂದು ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಗೆ ಬಂದು ಅಲ್ಲಿ ಸುತ್ತಾಡಿ ನಂತರ ನೆಹರೂ ಮೈದಾನ ಬಳಿಯಲ್ಲಿರುವ ಪುಟ್ ಬಾಲ್ ಪೇವಿಲಿಯನ್ ಮೈದಾನ ಬಳಿಯಲ್ಲಿ ಸಿಂಮೆಂಟ್ ದಂಡೆಯಲ್ಲಿ ಮಲಗಿರುವಾಗ ಸಂಜೆ ಸಮಯ ಸುಮಾರು 3-30 ಗಂಟೆ ಸುಮಾರಿಗೆ ಮೂರು ಜನ ಯುವಕರು ಪಿರ್ಯಾದಿ ಹತ್ತಿರಕ್ಕೆ ಬಂದು ಏಕಾಎಕಿ ಎಬ್ಬಿಸಿ ಆತನ ಹೆಸರು ಕೇಳಿದಾಗ ಪಿರ್ಯಾದುದಾರರು ಹಿಂದಿ ಬಾಷೆಯಲ್ಲಿ “ಮೇರಾ ನಾಮ್ ಪ್ರೇಮ್ ನಾರಾಯಣ ತ್ಯಾಗಿ” ಎಂಬುದಾಗಿ ಹೇಳಿದ್ದ ನಂತರ ಆತನಲ್ಲಿರುವ ವಸ್ತುಗಳನೆಲ್ಲ ತೆಗೆದು ತೋರಿಸುವಂತೆ ದರ್ಪದಿಂದ ಅವರು ಹಿಂದಿ ಬಾಷೆಯಲ್ಲಿ ಹೇಳಿದಾಗ ಪಿರ್ಯಾದಿದಾರರು ತೋರಿಸಲು ನಿರಾಕರಿಸಿದ್ದು ಆಗ ಅವರ ಪೈಕಿ ಒಬ್ಬಾತ ಪಿರ್ಯಾದಿಯನ್ನು ಗಟ್ಟಿಯಾಗಿ ಹಿಡಿದು ಮತ್ತಿಬ್ಬರು ಪಿರ್ಯಾದಿಗೆ ಹೊಡೆದು ಪಿರ್ಯಾದಿ  ಕಿಸೆಗೆ ಕೈ ಹಾಕಿ ಸಾಮ್ ಸಂಗ್ ಕಂಪನಿಯ A-10 ಮೊಬೈಲ್ ಹಾಗೂ ಇಯರ್ ಪೋನ್ ಹಾಗೂ 150 ರೂಪಾಯಿಯನ್ನು ಬಲತ್ಕಾರವಾಗಿ ಕಿತ್ತುಕೊಂಡು ಮೈನ್ ರೋಡ್ ಕಡೆಗೆ ಬಂದಾಗ ಪಿರ್ಯಾದಿದಾರರು ಕೂಡ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದು. ಆಗ ಸಮವಸ್ತ್ರದಲ್ಲಿ ಪೊಲೀಸರು ಹಾಗೂ ಇತರ ಸಾರ್ವಜನಿಕರು ಇರುವುದನ್ನು ಕಂಡು ಪಿರ್ಯಾದಿ ಗಟ್ಟಿಯಾಗಿ “ಚೋರ್-ಚೋರ್ ಪಕಡೋ’ ಎಂಬುದಾಗಿ ಅವರನ್ನು ತೋರಿಸಿ ಹೇಳಿದಾಗ ಸಮವಸ್ತ್ರದಲ್ಲಿದ್ದ ಪೊಲೀಸರು ಹಾಗೂ ಸಾರ್ವಜನಿಕರು ಅವರ ಪೈಕಿ ಇಬ್ಬರನ್ನು ಬೆನ್ನಟ್ಟಿ ಹಿಡಿದಿರುತ್ತಾರೆ. ಓರ್ವ ಓಡಿ ತಪ್ಪಿಸಿಕೊಂಡನು. ಆ ಮೂರು ಜನ ಯುವಕರು ಸೇರಿ ಪಿರ್ಯಾದಿದಾರರ ಸಾಮ್ ಸಂಗ್ ಕಂಪನಿಯ A-10 ಮೋಡಲ್ ನ ಮೊಬೈಲ್ ಸೆಟ್ ಸುಲಿಗೆ ಮಾಡಿರುವುದು ಎಂಬಿತ್ಯಾದಿಯಾಗಿರುತ್ತದೆ..

ಇತ್ತೀಚಿನ ನವೀಕರಣ​ : 13-01-2022 07:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080