ಅಭಿಪ್ರಾಯ / ಸಲಹೆಗಳು

Crime Reported in : Traffic North Police Station                                                      

ದಿನಾಂಕ 12-03-2022 ರಂದು ಪಿರ್ಯಾದಿದಾರರಾದ Prashanth B Shetty  ರವರ ಹೆಂಡತಿಯಾದ ಶ್ರೀಮತಿ ನಳಿನಿ ಶೆಟ್ಟಿ ರವರು ಅವರ ಬಾಬ್ತು KA-19-HB-0318 ನಂಬ್ರದ ಸ್ಕೂಟರಿನಲ್ಲಿ ಪತಂಜಲಿ ಮತ್ತು ಮೋದಿಕೇರ್ ಉತ್ಪನ್ನಗಳ ಮಾರಟದ ಬಗ್ಗೆ ಕಾವೂರು ಕಡೆಯಿಂದ ಏರ್ ಪೋರ್ಟ್ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಉಲ್ಲಾಸ್ ನಗರ ಕ್ರಾಸ್ ಬಳಿ ಬಲಕ್ಕೆ ತಿರುಗಲು ಇಂಡಿಕೇಟರ್ ಹಾಕಿ ಉಲ್ಲಾಸ್ ನಗರದ ರಸ್ತೆ ತೆರದ ಡಿವೈಡರ್ ಬಳಿ ನಿಂತಿರುವಾಗ ಸಮಯ ಸುಮಾರು 16:15 ಗಂಟೆಗೆ ಹಿಂದಿನಿಂದ ಅಂದರೆ ಕಾವೂರು ಕಡೆಯಿಂದ ಬಜಪೆ ಕಡೆಗೆ KL-14-U-9994 ನಂಬ್ರದ ಬಿಳಿಬಣ್ಣದ TATA Tiago ಕಾರನ್ನು ಅದರ ಚಾಲಕಿ ಸೈದಾ ಹೆಚ್ ಪರ್ವಿನ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಶ್ರೀಮತಿ ನಳಿನಿ ಶೆಟ್ಟಿ ರವರ ಸ್ಕೂಟರಿನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಶ್ರೀಮತಿ ನಳಿನಿ ಶೆಟ್ಟಿ ರವರು ಸ್ಕೂಟರ್ ಸಮೇತ ಕಾಂಕ್ರೀಟ್ ರಸ್ತೆಗೆ ಎಸೆಯಲ್ಪಟ್ಟು ಬಿದ್ದು ಅವರ ಎಡ ಕಾಲಿನ ಮೊಣಗಂಟಿನ ಬಳಿ ಮೂಳೆ ಮುರಿತದ ಗುದ್ದಿದ ಗಂಭೀರ ಸ್ವೂರಪದ ಗಾಯವಾಗಿದ್ದು ಅಲ್ಲದೇ ಎಡ ಕೈ ಮೊಣಗಂಟಿಗೆ ತರಚಿದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

2) ದಿನಾಂಕ 12-03-2022 ರಂದು ಪಿರ್ಯಾದಿದಾರರಾದ Shashidhar  ರವರು ತನ್ನ ಬಾಬ್ತು ಮೋಟಾರ್ ಸೈಕಲಿನಲ್ಲಿ ತನ್ನ ಮನೆಯಿಂದ ಕೂಳೂರು ಮಾರ್ಗವಾಗಿ ಬೈಕಂಪಾಡಿ ಕಡೆಗೆ ರಾ ಹೆ 66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 07:00 ಗಂಟೆಗೆ ಕೂಳೂರು ಜಂಕ್ಷನ್ ನಿಂದ ಸ್ವಲ್ಪ ಮುಂದೆ ಕೂಳೂರು ಸೇತುವೆ ಬಳಿ ಸಮೀಪಿಸುತ್ತಿದ್ದಂತೆ ಪಿರ್ಯಾದಿದಾರರ ಎದುರಿನಿಂದ ಅಂದರೆ ಕೂಳೂರು ಜಂಕ್ಷನ್ ಕಡೆಯಿಂದ ಬೈಕಂಪಾಡಿ ಕಡೆಗೆ KA-19-EK-2467 ನಂಬ್ರದ ಸ್ಕೂಟರನ್ನು ಅದರ ಸವಾರ ಅರುಣ್ ಜೆರೋಮ್ ಡೆಸ್ಸಾ ರವರು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಪಿರ್ಯಾದಿದಾರರ ಎಡ ಭಾಗದಿಂದ KA-25-C-3119 ನಂಬ್ರದ ಟಾಟಾ ಗೂಡ್ಸ್ ಲಾರಿಯನ್ನು ಅದರ ಚಾಲಕ MALLIKARJUNA ALLAPUR ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆಯನ್ನು ನೀಡದೆ ಒಮ್ಮೇಲೆ ಬಲಕ್ಕೆ ತಿರುಗಿಸಿ ಲಾರಿಗೆ ಒಮ್ಮೇಲೆ ಬ್ರೇಕ್ ಹಾಕಿ ನಿಲ್ಲಿಸಿದರ ಪರಿಣಾಮ ಲಾರಿಯ ಹಿಂಬದಿಯಿಂದ ಹೋಗುತ್ತಿದ್ದ ಅಂದರೆ ಪಿರ್ಯಾದಿದಾರರ ಎದುರಿನಿಂದ ಹೋಗುತ್ತಿದ್ದ ಅರುಣ್ ಜೆರೋಮ್ ಡೆಸ್ಸಾ ರವರ ಸ್ಕೂಟರ್ ಟಾಟಾ ಗೂಡ್ಸ್ ಲಾರಿಯ ಹಿಂಭಾಗಕ್ಕೆ ಡಿಕ್ಕಿಯಾಗಿ ಸ್ಕೂಟರ್ ಸವಾರ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು, ಸವಾರ ಅರುಣ್ ಜೆರೋಮ್ ಡೆಸ್ಸಾ ರವರ ಕುತ್ತಿಗೆಗೆ ಗುದ್ದಿದ ಗಂಭೀರ ಸ್ವರೂಪದ ಗಾಯವಾಗಿರುತ್ತದೆ ಹಾಗೂ ಮೂಗಿನಿಂದ ರಕ್ತ ಹೊರ ಬಂದಿದ್ದು ಅಲ್ಲದೇ ಸೊಂಟಕ್ಕೆ ಗುದ್ದಿದ ಗಾಯ, ಹಣೆಯ ಎಡಭಾಗದಲ್ಲಿ, ಹೊಟ್ಟೆಯ ಎಡಭಾಗದಲ್ಲಿ ತರಚಿದ ಗಾಯ, ಬಲ ಕೆನ್ನೆ ಮತ್ತು ಮುಖಕ್ಕೆ ಗುದ್ದಿದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಗಾಯಾಳುವನ್ನು ಪರಿಕ್ಷೀಸಿದ ವೈದ್ಯರು ಗಾಯಾಳು ಅರುಣ್ ಜೆರೋಮ್ ಡೆಸ್ಸಾ ರವರು ಆಸ್ಪತ್ರೆಗೆ ಕರೆ ತರುವ ದಾರಿ ಮದ್ಯೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

Crime Reported in Urva PS

ತಾರೀಖು 12-03-2022 ರಂದು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳೂರು ಗ್ರಾಮದ ಮಾರಿಗುಡಿ ಬಳಿ ಇರುವ ಚಿಕಿತ ಬಾರ್ ನಲ್ಲಿ ಮಧ್ಯಾಹ್ನ ಸಮಯ ಸುಮಾರು 15-30 ರ ವೇಳಗೆ ಪ್ರಕರಣದ ಪಿರ್ಯಾದಿದಾರರಾದ Ajjith Shetty ರವರು ಹಾಗೂ ಕೆಲಸಗಾರರಾದ ವಿಕೇಶ್ ಮತ್ತು ದಯಾನಂದ್ ರವರು ಬಾರ್ ಕೌಂಟರ್ ನಲ್ಲಿರುವ ಸಮಯ ರಿತೇಶ್ ಎಂಬಾತನು ಬಂದು ಪಿರ್ಯಾದಿ ಹಾಗೂ ಅವರ ಕೆಲಸದವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೆಲಸಗಾರಾದ ವಿಕೇಶ್ ಮತ್ತು ದಯಾನಂದರವರಿಗೆ ಕೆನ್ನೆಗೆ ಕೈಯಿಂದ ಹೊಡೆದು ಹಲ್ಲೆಗೊಳಿಸಿರುವುದಲ್ಲದೆ ವಾಪಸ್ಸು ಸ್ಕೂಟರ್ ನಲ್ಲಿ ಹೋಗಿ ತಲವಾರನ್ನು ಹಿಡಿದುಕೊಂಡು ಬಂದು ಪಿರ್ಯಾದಿದಾರರಿಗೆ ಹಾಗೂ ಅಲ್ಲಿದ್ದ ಕೆಲಸದವರರಾದ ದಯಾನಂದ್ ಹಾಗೂ ವಿಕೇಶ್ ರವರಿಗೆ ತಲವಾರು ತೋರಿಸಿ ಬೆದರಿಸಿದ್ದಲ್ಲದೆ ವಿಕೇಶ್ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಬಲವಾಗಿ ತಲವಾರನ್ನು ತಲೆಗೆ ಬೀಸಿದಾಗ ಅವರು ತಪ್ಪಿಸಿಕೊಂಡಾಗ ತಲವಾರ್ ನ ಹಿಂಬದಿ ಎಡ ಭುಜಕ್ಕೆ ತಾಗಿದ್ದು ಇದರಿಂದ ಕೋಪಗೊಂಡ ಆಪಾದಿತ ರಿತೇಶ್ ವಾಪಸ್ಸು ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ತಲವಾರನು ಬೀಸಲು ಪ್ರಯತ್ನಿಸಿದಾಗ ಪಿರ್ಯಾದಿದಾರರು ಮತ್ತು ಕೆಲಸದವರು ಹೆದರಿ  ಜೋರಾಗಿ ಬೊಬ್ಬೆ ಹೊಡೆದಾಗ ಬಾರ್ ನ ಒಳಗಡೆ ಇದ್ದ ಜನರು ಹೊರಗಡೆ ಬರುವುದನ್ನು ಕಂಡು ಆಪಾದಿತ ರಿತೇಶನು ತಾನು ಬಂದಿದ್ದ ಕೆ.ಎ.19 ಹೆಚ್.ಇ-1766 ನೇ ನಂಬ್ರ ದ ಸ್ಕೂಟರ್ ನಲ್ಲಿ ಪರಾರಿಯಾಗಿ ತಪ್ಪಿಸಿಕೊಂಡಿರುತ್ತಾನೆ. ಈತನು ರೌಡಿ ಸ್ವಭಾವನಾಗಿದ್ದು ಕೆಲವೊಮ್ಮೆ ಪಿರ್ಯಾದಿದಾರರ ಬಾರ್ ಗೆ ಬಂದು ಕೆಲಸದವರಿಗೆ ಹೆದರಿಸಿ ಪುಕ್ಕಟೆ ಮದ್ಯ ಕುಡಿದು ಹೋಗುತ್ತಿದ್ದು ಈ ದಿನ ಕೂಡಾ ಇದೇ ರೀತಿ ಬಂದು ಕೇಳಿದಾಗ ಕೆಲಸದವರು ಪುಕ್ಕಟೆ ಮದ್ಯ ನೀಡಲು ನಿರಾಕರಿಸಿರುವುದೇ ಈ ಘಟನೆಗೆ ಕಾರಣವಾಗಿರುತ್ತದೆ ಎಂಬಿತ್ಯಾದಿ.

Crime Reported in Surathkal PS

ಪಿರ್ಯಾದಿದಾರರಾದ  HANUMANTHA VARIKAL ರವರ  ಪತ್ನಿ ಶ್ರೀಮತಿ ಶರಣಮ್ಮ(26) ಇವರು ದಿನಾಂಕ: 09-03-2022 ರಂದು ಮಧ್ಯಾಹ್ನ12-00 ಗಂಟೆ ಸುಮಾರಿಗೆ ಪಿರ್ಯಾದಿದಾರರ ಜೊತೆ ಮೋಬೈಲ್ ನಲ್ಲಿ ಮಾತನಾಡುವ ವಿಚಾರದಲ್ಲಿ ಗಲಾಟೆಯಾಗಿ ಸುರತ್ಕಲ್ ಗ್ರಾಮದ ತಡಂಬೈಲ್ ಭೋಜ ಶೆಟ್ಟಿಯವರ ಬಾಡಿಗೆ ಮನೆಯಿಂದ ಸೀದಾ ಗದ್ದೆಯಲ್ಲಿ  ಹೋದವರು, ವಾಪಸ್ಸು ಮನೆಗ ಬಂದಿರುವುದಿಲ್ಲ. ಕಾಣೆಯಾದವರ ಪತ್ತೆಯ ಬಗ್ಗೆ ತಡಂಬೈಲ್, ಸುರತ್ಕಲ್ ಮಾರುಕಟ್ಟೆ, ಇಡ್ಯಾ ಗ್ರಾಮ, ಪಣಂಬೂರು ಕಡೆಗಳಲ್ಲಿ ಹುಡುಕಿ, ಪಿರ್ಯಾದಿದಾರರ ಮತ್ತು ಕಾಣೆಯಾದ ಶರಣಮ್ಮ ರವರ ಸಂಬಂಧಿಕರಲ್ಲಿ ವಿಚಾರಿಸಲಾಗಿ ಇವರೆಗೆ ಪತ್ತೆಯಾಗಿರುವುದಿಲ್ಲ, ಕಾಣೆಯಾದ ಶರಣಮ್ಮ ರವರನ್ನು ಪತ್ತೆ ಮಾಡುವರೇ ಎಂಬಿತ್ಯಾದಿಯಾಗಿರುತ್ತದೆ.

ಕಾಣೆಯಾದವರ ಚಹರೆ:

ಹೆಸರು: ಶರಣಮ್ಮ ಪ್ರಾಯ 26 ವರ್ಷ

ಎತ್ತರ: 5 ಅಡಿ

ಮೈಬಣ್ಣ:.ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು

ಗೊತ್ತಿರುವ ಭಾಷೆಗಳು: ಕನ್ನಡ

ಧರಿಸಿರುವ ಬಟ್ಟೆ : ಕಪ್ಪು ಬಣ್ಣದ ನೈಟಿ ಹಾಕಿಕೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 13-03-2022 10:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080