ಅಭಿಪ್ರಾಯ / ಸಲಹೆಗಳು

Crime Reported in: Mangalore East Traffic PS

ಪಿರ್ಯಾದಿದಾರರಾದ ಕುಮಾರನ್ ಪಿ. ಎಂಬುವರು ದಿನಾಂಕ: 12/07/2022 ರಂದು ತಮ್ಮ ಕಾರು ನೊಂದಣಿ ಸಂಖ್ಯೆ: AP-26-AS-5299 ನೇಯದನ್ನು ಚಲಾಯಿಸಿಕೊಂಡು ಗೋವಾ ಕಡೆಯಿಂದ ಕಾಸರಗೋಡು ಕಡೆಗೆ ಇರುವ ರಾ.ಹೆ 66 ನೇಯದರಲ್ಲಿ ಮಂಗಳೂರು ಮೂಲಕ ಹೋಗುತ್ತಿರುವಾಗ ಮಂಗಳೂರಿನ ಎ.ಜೆ ಆಸ್ಪತ್ರೆಯ ಬಳಿ ಇರುವ ಫೈರ್ ಸ್ಟೇಷನ್ ಎದುರುಗೆಡೆ ಬಂದು ತಲುಪುತ್ತಿದ್ದಂತೆ ಸಮಯ ಸುಮಾರು ಮಧ್ಯಾಹ್ನ 3-00 ಗಂಟೆ ವೇಳೆಗೆ ಅವರ ಕಾರಿನ ಹಿಂಭಾಗದಿಂದ ಕಂಟೇನರ್ ಲಾರಿ ನೊಂದಣಿ ಸಂಖ್ಯೆ: KA52A5861 ನೇಯದನ್ನು ಅದರ ಚಾಲಕನು ದುಡುಕುತನ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸುತ್ತಾ ಪಿರ್ಯಾದಿದಾರರ ಕಾರನ್ನು ಬಲಗಡೆಯಿಂದ ಓವರ್ ಟೇಕ್ ಮಾಡುವ ಭರದಲ್ಲಿ ಡಿಕ್ಕಿ ಪಡಿಸಿದ್ದರಿಂದ ಕಾರಿನ ಬಲ ಹಿಂಭಾಗದ ಬಂಪರ್ ನಿಂದ ಬಲ ಮುಂಭಾಗದ ಬಂಪರ್ ವರೆಗಿನ ಬಾಡಿಯು ಕಾರಿನ ಬಲ ಬದಿಯ ಎರಡೂ ಡೋರ್ ಸಮೇತ ಸಂಪೂರ್ಣ ಜಖಂಗೊಂಡಿರುವುದಾಗಿದೆ.

 

Crime Reported in: Traffic South Police Station                                        

ಪಿರ್ಯಾದಿದಾರರು  PETER LOBO ನಿನ್ನೆ ದಿನ  ದಿನಾಂಕ:12-07-2022 ರಂದು ಅವರ ಸಂಬಂದಿ ವಾಲ್ಟರ್ ಲೊಬೊ ರವರ ಮೋಟಾರ್ ಸೈಕಲ್ ನಂಬ್ರ:KA-19-EA-0855 ನೇದರಲ್ಲಿ ವಾಲ್ಟರ್ ಲೊಬೊ ಸವಾರನಾಗಿ ಪಿರ್ಯಾದಿದಾರರು ಸಹ ಸವಾರನಾಗಿ ಕುಳ್ಳಿತುಕೊಂಡು ಮಜಿಕಟ್ಟೆಯಿಂದ ಮಲಾರ್ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವ ಸಮಯ ಸುಮಾರು ಮದ್ಯಾಹ್ನ 1-45 ಗಂಟೆಗೆ ಮಲಾರ್ ಪದವು ಎಂಬಲ್ಲಿಗೆ ತಲುಪುತ್ತಿದ್ದಂತೆ ಮಲಾರ್ ಕಡೆಯಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ:KA19-EV-7595 ನೇದರ ಸವಾರ ಸರ್ಪ್ ರಾಜ್ ಎಂಬಾತನು ಸಹ ಸವಾರೆ ಬುಶ್ರ ಎಮ್ ರವರನ್ನು ಸಹ ಸವಾರಳಾನಾಗಿ ಕುಳ್ಳಿರಿಸಿಕೊಂಡು ಮೋಟಾರ್ ಸೈಕಲ್ ನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಗಾಲಿಗೆ,ಬೆನ್ನಿಗೆ ರಕ್ತ ಗಾಯವಾಗಿದ್ದು ,ತಲೆಗೆ ಗುದ್ದಿದ ಗಾಯವಾಗಿದ್ದು ಸವಾರ ವಾಲ್ಟರ್ ಲೊಬೊ ರವರ ಬಲಕಾಲಿಗೆ ,ಬಲ ಕೈಗೆ,ಬೆನ್ನಿಗೆ ಮೂಳೆ ಮುರಿತದ ಗಾಯವಾಗಿದ್ದು ಅಲ್ಲಿ ಸೇರಿದ ಜನರು ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಪಿರ್ಯಾದಿದಾರರನ್ನು ಹೊರ ರೋಗಿಯಾಗಿ ವಾಲ್ಟರ್ ಲೊಬೊ ರವರನ್ನು ಒಳ ರೋಗಿಯಾಗಿ ದಾಖಲಿಸಿರುತ್ತಾರೆ.ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 13-07-2022 05:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080