ಅಭಿಪ್ರಾಯ / ಸಲಹೆಗಳು

Crime Reported in Traffic North PS

ದಿನಾಂಕ 12-09-2021 ರಂದು ಪಿರ್ಯಾದಿದಾರರಾದ ಮನೋಜ್ ಹೆಚ್ ಕೆ ರವರು KA-19-HE-0894 ನಂಬ್ರದ ಸ್ಕೂಟರಿನಲ್ಲಿ ಸುರತ್ಕಲ್ ಕಡೆಯಿಂದ ಹೊಸಬೆಟ್ಟು ಕಡೆಗೆ ರಾ.ಹೆ 66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 11:00 ಗಂಟೆಗೆ ಹೊಸಬೆಟ್ಟು ಜಂಕ್ಷನ್ ಬಳಿ ಬಲಕ್ಕೆ ತಿರುಗಲು ರೈಟ್ ಇಂಡಿಕೇಟರ್ & ಸೂಚನೆಯನ್ನು ನೀಡಿ ಸವಾರಿ ಮಾಡುತ್ತಿರುವಾಗ KL-19-J-2796 ನಂಬ್ರದ ಲಾರಿಯನ್ನು ಅದರ ಚಾಲಕ ಜಗನಿವಾಸನ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿನ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ, ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಅವರ ಎಡಕೈ ಭುಜದಲ್ಲಿನ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ಬೆನ್ನಿನಲ್ಲಿ ಚರ್ಮ ಹರಿದ ರೀತಿಯ ರಕ್ತಗಾಯ, ಎದೆಯ ಎಡಬದಿಯಲ್ಲಿ ಗುದ್ದಿದ ರೀತಿಯ ಗಾಯ ಹಾಗೂ ಬಲ ಕೋಲು ಕೈಯಲ್ಲಿ ಚರ್ಮ ಹರಿದಯ ರೀತಿಯ ಗಾಯಗಳಾಗಿದ್ದು ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

2) ದಿನಾಂಕ:12-09-2021 ರಂದು ಪಿರ್ಯಾದಿದಾರರಾದ ವಿಜಯ ವಿ ಚಿಪ್ಕರ್ ರವರು ತಮ್ಮ ಬಾಬ್ತು KA-21-N-6950 ನಂಬ್ರದ ಕಾರಿನಲ್ಲಿ  ಅವರ ಹೆಂಡತಿಯಾದ ಮಿಲನರವರ ಜೊತೆಯಲ್ಲಿ ಉಡುಪಿ ಕಡೆಯಿಂದ ಕಾವೂರು ಕಡೆಗೆ ಚಲಾಯಿಸಿಕೊಂಡು ಬರುತ್ತಾ ಸಮಯ 20-10 ಗಂಟೆಗೆ ರಾಹೆ 66 ರ ಜೋಕಟ್ಟೆ ಜಂಕ್ಷನ್ ನಿಂದ ಸ್ವಲ್ಪ ಮುಂದೆ ತಲುಪಿದಾಗ ಪಣಂಬೂರು ಕಡೆಯಿಂದ KA-19-AC-3376 ನಂಬ್ರದ ಆಟೋರಿಕ್ಷಾವನ್ನು ಅದರ ಚಾಲಕ ಕಲಂದರ್ ಷಾ ಎಂಬಾತನು ನಿರ್ಲಕ್ಷ್ಯತನ ಹಾಗೂ ದುಡುಕುತನದಿಂದ ರಾಹೆ 66 ರ ಉಡುಪಿ – ಮಂಗಳೂರು ರಸ್ತೆಯ ವಿರುದ್ದ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಮುಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಆಟೋರಿಕ್ಷಾವು ರಾಹೆ 66 ರ ಡಾಮರು ರಸ್ತೆಗೆ ಮಗುಚಿ ಬಿದ್ದು ಆಟೋರಿಕ್ಷಾ ಚಾಲಕನಿಗೆ ಗುದ್ದಿದ ರಕ್ತಗಾಯವಾಗಿರುವುದಲ್ಲದೆ ಪಿರ್ಯಾದಿದಾರರ ಕಾರು ಜಂಖಗೊಂಡಿರುವುದಾಗಿದೆ ಎಂಬಿತ್ಯಾದಿ.

Crime Reported in Traffic South PS

ದಿನಾಂಕ :12.09.2021 ದಂದು ಪಿರ್ಯಾದಿ Ahamad Imbrahim ದಾರರು ತಮ್ಮ ಬಾಬ್ತು ಓಮಿನಿ ನಂಬ್ರ:KA-19-MH-8446 ನೇದರಲ್ಲಿ ತಮ್ಮ ಸಂಬಂದಿಕರೊಬ್ಬರ ಮನೆಯಾದ ಉಳ್ಳಾಲಕ್ಕೆ  ಮುಡಿಪು ಮೂಲಕ  ಓಮಿನಿ ಕಾರನ್ನು ಚಲಾಯಿಸಿಕೊಂಡು ಹೊಗುತ್ತಾ ಸಮಯ ಸುಮಾರು ಸಂಜೆ 04:00 ಗಂಟೆಗೆ ನಾಟೆಕಲ್ ಬಳಿ ಚತುಷ್ಪಥ  ರಸ್ತೆಯಲ್ಲಿ ತಲುಪುತ್ತಿದಂತೆ  ದೇರಳಕಟ್ಟೆ ಕಡೆಯಿಂದ  ಅಸೈಗೋಳಿ ಕಡೆಗೆ  ಹೋಗುವ ರಸ್ತೆಯಲ್ಲಿ ಬರುತ್ತಿದ್ದ  KA-19-EW-0569 ನಂಬ್ರದ ಸ್ಕೂಟರನ್ನು ಅದರ ಸವಾರ  ಅಭೀಷೆಕ್  ಎಂಬಾತನು ಸಚಿನ ಎಂಬವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ  ಸವಾರಿಮಾಡಿಕೊಂಡು ಬಂದು ರಸ್ತೆ ಮದ್ಯದ ಡಿವೈಡರ್ ಗೆ ಡಿಕ್ಕಿ ಪಡಿಸಿದ ಪರಿಣಾಮ  ಸ್ಕೂಟರ್ ಸವಾರ ಹಾಗೂ ಸಹ ಸವಾರ ಇಬ್ಬರೂ ಪಿರ್ಯಾದಿದಾರರು ಕಾರನ್ನು ಚಲಾಯಿಸಿಕೊಂಡು  ಹೊಗುತ್ತಿದ್ದ  ರಸ್ತೆಗೆ ಎಸೆಯಲ್ಪಟ್ಟು ಪಿರ್ಯಾದಿದಾರರ ಓಮಿನಿ ಕಾರಿನ ಮುಂಭಾಗದ ಬಲಬದಿಗೆ  ತಾಗಿದರು ಹಾಗೂ ಅವರು ಸವಾರಿ ಮಾಡುತ್ತಿದ್ದ ಸ್ಕೂಟರ್ ರಸ್ತೆಗೆ ಬಿದ್ದು  ಸ್ಕೂಟರ್ ಸವಾರ ಅಭೀಷೆಕ್ ನ  ಮುಖಕ್ಕೆ ಗುದಿದ್ದ ರೀತಿಯಾ ತೀವ್ರ ಸ್ವರೂಪದ ರಕ್ತ ಗಾಯ, ಎದೆಗೆ ಗುದ್ದಿದ ರೀತಿಯ ಗಾಯ ಹಾಗೂ ಎಡಗೈಗೆ ತೆರಚಿದ ಗಾಯವಾಗಿದ್ದು ಸಹ ಸವಾರ ಸಚಿನ್ ನಿಗೆ ತಲೆಯ ಬಲಬದಿಗೆ,  ಕೆನ್ನೆಗೆ ಗುದ್ದಿದ  ತೀವ್ರ ಸ್ವರೂಪದ ರಕ್ತ ಗಾಯ ಹಾಗೂ ಹೊಟ್ಟೆಯ ಬಲಬದಿಗೆ ತೆರಚಿದ  ರೀತಿಯ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕಣಚೂರು ಆಸ್ಪತ್ರೆಗೆ ಕರೆದುಕೋಂಡು ಹೋಗಿ  ದಾಖಲಿಸಿದ್ದು ಬಳಿಕ  ಹೆಚ್ಚಿನ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ  ಎಂಬಿತ್ಯಾಧಿ

 

Crime Reported in  Kankanady Town PS

ಪಿರ್ಯಾದಿ Smt Baby Kundar (54) ದಾರರು  ಸೇರಾವೋ ರಸ್ತೆ  ವೆಂಕಮ್ಮ ಕಂಪೌಂಡು  ಎಂಬಲ್ಲಿ ತನ್ನ ಗಂಡ ರಮೇಶ ಬಂಗೇರಾ ಹಾಗೂ ಮಗ ಅಶ್ವಿನ್ ಕುಂದರ್ ಎಂಬಾತನ ಜತೆಯಲ್ಲಿ ವಾಸ್ತವ್ಯವಿದ್ದು, ಮನೆ ವಾರ್ತೆ ಕೆಲಸ ಮಾಡಿಕೊಂಡಿರುತ್ತಾರೆ.   ನಿನ್ನೆ ದಿನ ತಾರೀಕು 11-09-2021 ರಂದು ರಾತ್ರಿ ಸುಮಾರು 8:00 ಗಂಟೆಗೆ ಪಿರ್ಯಾದಿದಾರರ  ಗಂಡ ರಮೇಶ್ ಬಂಗೇರಾ ರವರು ಮನೆಗೆ ಬಂದವರು ಊಟ ಮಾಡಿ ಕುಳಿತುಕೊಂಡಿದ್ದವರು, ಪಿರ್ಯಾದಿದಾರರು ಮತ್ತು ಅವರ ಮಗ ಅಶ್ವಿನ್ ಕೂಡಾ ಊಟ ಮಾಡಿ ಮಲಗುವುದಕ್ಕೆ ತಯಾರಿಯಲ್ಲಿದ್ದಂತೆ ಸಮಯ ರಾತ್ರಿ ಸುಮಾರು 10:30 ಗಂಟೆಗೆ ರಮೇಶ್ ಬಂಗೇರಾರವರು ಪಿರ್ಯಾದಿದಾರರನ್ನು ಉದ್ದೇಶಿಸಿ ಬೈದಾಡುತ್ತಾ, ನೀನು ಬೇರೆಯವರ ಜತೆಯಲ್ಲಿ, ಬೇವಾರ್ಸಿ, ಎಂಬಿತ್ಯಾದಿಯಾಗಿ ಅವಾಚ್ಯ ಶಬ್ಧಗಳಿಂದ ಬೈದುದಲ್ಲದೇ, ಕೈಯಲ್ಲಿ ಚೂರಿಯೊಂದನ್ನು ಹಿಡಿದುಕೊಂಡು ಪಿರ್ಯಾದಿದಾರರ ಹೊಟ್ಟೆಗೆ ತಿವಿಯಲು ಬಂದಾಗ ಅವರು ಎಡಕೈಯಿಂದ ತಡೆದಾಗ, ಚೂರಿಯು  ಪಿರ್ಯಾದಿದಾರರ ಎಡಕೈ ಮಣಿಗಂಟಿನ  ಬಳಿ ತಾಗಿ ತೀವ್ರ ರಕ್ತ ಬರುವ ಗಾಯ ಉಂಟಾಗಿದ್ದು,  ಇದನ್ನು ನೋಡಿದ ಪಿರ್ಯಾದಿದಾರರ ಮಗ ಅಶ್ವಿನ್ ತಡೆಯಲು ಬಂದಾಗ ರಮೇಶ್ ಬಂಗೇರಾರವರು ಚೂರಿಯಿಂದ  ಅಶ್ವಿನ್ ನ ಬಲ ಕೈಗೆ ತಿವಿದು ಆತನ ಬಲ ಕೈಯ ಹೆಬ್ಬೆರಿಳಿನ ಮೇಲ್ಬಾಗದಲ್ಲೂ ತೀವ್ರ ರಕ್ತ ಗಾಯ ಉಂಟು ಮಾಡಿದ್ದು, ಆಗ   ಪಿರ್ಯಾದಿದಾರರು  ಜೋರು ಬೊಬ್ಬೆ ಹೊಡೆದಾಗ ನೆರೆಕರೆಯವರು ಮನೆಗೆ ಬಂದಾಗ, ರಮೇಶ್ ಬಂಗೇರಾನು ಈ ಮನೆ ಮತ್ತು ಜಾಗ ನನ್ನದು, ನೀವಿಬ್ಬರೂ ಇಲ್ಲಿಂದ ಹೋಗಬೇಕು ಎಂಬುದಾಗಿ ಹೇಳಿ ನೀವು ಹೋಗದಿದ್ದರೆ, ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಬಳಿಕ ಅಲ್ಲಿಗೆ ಬಂದ ನೆರೆಕರೆಯವರು ಗಾಯಗೊಂಡ ಪಿರ್ಯಾದಿದಾರರನ್ನು ಮತ್ತು ಅಶ್ವಿನ್ ನನ್ನು ಉಪಚರಿಸಿ, ಕುಶಾಲ್ ಎಂಬವರು ಚಿಕಿತ್ಸೆಯ ಬಗ್ಗೆ ಆಟೋ ರಿಕ್ಷಾವೊಂದರಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು  ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 13-09-2021 08:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080