ಅಭಿಪ್ರಾಯ / ಸಲಹೆಗಳು

Crime Reported in Mangalore Rural PS

ತಾರೀಕು 12-11-2021 ರಂದು ಪಿರ್ಯಾದಿ Vinayaka Bhavikatti ದಾರರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ 9.00 ಗಂಟೆಗೆ ಮಂಗಳೂರು ತಾಲೂಕು ಬೊಂಡಂತಿಲ ಗ್ರಾಮದ ಕಾಪೆಟ್ಟು ಸೈಟ್ ಬಳಿ ಮಾದಕ ವಸ್ತುವಾದ ಗಾಂಜ ಸೇವನೆ ಮಾಡುತ್ತಿದ್ದ ಆರೋಪಿ ಇಮ್ರಾನ್ (27 ವರ್ಷ) ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ

 

Crime Reported in Mangalore North PS

ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಹರೀಶ್ ರವರು ದಿನಾಂಕ 11-11-2021 ರಂದು ಸಮವಸ್ತ್ರದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದ ಬಗ್ಗೆ ಠಾಣಾ ಸಿಬ್ಬಂದಿ  ಈಶಪ್ರಸಾದ್ ರವರನ್ನು ಚಾಲಕರಾಗಿ ಠಾಣಾ ಇಲಾಖಾ ವಾಹನ ರಲ್ಲಿ ಠಾಣೆಯಿಂದ 23-00  ಗಂಟೆಗೆ ಹೊರಟು ಠಾಣಾ ಸರಹದ್ದಿನಲ್ಲಿ ಸಂಚರಿಸಿಕೊಂಡು ದಿನಾಂಕ: 12-11-2021 ರಂದು ಬೆಳಗ್ಗಿನ ಜಾವ ಸುಮಾರು 02-30 ಗಂಟೆಗೆ ಸೆಂಟ್ರಲ್ ಮಾರ್ಕೇಟ್‌ ಬಳಿಯ ಲಿಂಕಿಂಗ್ ಟವರ್ಸ್‌ ಕಟ್ಟಡದ ಬಳಿಗೆ ತಲುಪಿದಾಗ ಆ ಕಟ್ಟಡ ಕೆಳ ಅಂತಸ್ತಿನ ಅಂಗಡಿ ಶಟರ್‌‌‌ನ ಬಳಿ ಇಬ್ಬರು ವ್ಯಕ್ತಿಗಳು ಕತ್ತಲೆಯಲ್ಲಿ ತಮ್ಮಗಳ ಮುಖವನ್ನು ಅವರುಗಳ ಶರ್ಟ್‌‌‌ನಿಂದ ಮುಚ್ಚಿ ತಮ್ಮಗಳ ಇರುವಿಕೆಯನ್ನು ಮರೆಮಾಚಲು ಕುಳಿತಿದ್ದು, ಪಿರ್ಯಾದಿದಾರರು ವಾಹನವನ್ನು ನಿಲ್ಲಿಸಿ ಅವರುಗಳ ಕಡೆಗೆ ಟಾರ್ಚ್‌ ಲೈಟ್‌ನ್ನು ಹಾಯಿಸಿದಾಗ ಅವರಿಬ್ಬರು ಪಿರ್ಯಾದಿದಾರರನ್ನು ಕಂಡು ಓಡಲು ಪ್ರಯತ್ನಿಸಿದವರನ್ನು ಹಿಡಿದು ಅಪರಾತ್ರಿ ವೇಳೆಯಲ್ಲಿ ಇದ್ದ ಬಗ್ಗೆ ವಿಚಾರಿಸಿದಲ್ಲಿ ಅವರಿಬ್ಬರು ಒಮ್ಮೆ ಕೆಲಸಕ್ಕೆ ಬಂದಿರುವುದಾಗಿಯೂ, ಮತ್ತೊಮ್ಮೆ ಮನೆಗೆ ಹೋಗಲು ಕಾಯುತ್ತಿರುವುದಾಗಿ  ತಿಳಿಸಿರುತ್ತಾರೆ.  ಇವರಿಬ್ಬರು ತಮ್ಮ ಇರುವಿಕೆಯ ಬಗ್ಗೆ ಯಾವುದೇ ರೀತಿಯ ಸಮರ್ಪಕ ಉತ್ತರ ನೀಡದೇ ಇದ್ದು, ಹೆಸರು ವಿಳಾಸ ಕೇಳಿದಾಗ ಒಬ್ಬಾತನು ತನ್ನ ಹೆಸರು ಹರೀಶ್ ಪೂಜಾರಿ ಪ್ರಾಯ 37 ವರ್ಷ ವಾಸ ಪಾಲ್ದನೆ, ನೀರುಮಾರ್ಗ, ಮಂಗಳೂರು ತಾಲೂಕು ಎಂಬುದಾಗಿ ತಿಳಿಸಿದನು. ಇನ್ನೊಬ್ಬಾತನು  ತನ್ನ ಹೆಸರು  ರಾಜೇಶ್ ಸುವರ್ಣ ಪ್ರಾಯ 22 ವರ್ಷ ವಾಸ ಚಿತ್ರಾಂಜಲಿನಗರ, ಕುಂಪಲ, ಕೋಟೆಕಾರು ಗ್ರಾಮ, ಮಂಗಳೂರು ತಾಲೂಕು ಎಂಬುದಾಗಿ ತಿಳಿಸಿರುತ್ತಾರೆ.  ಸದ್ರಿಯವರು ಈ ಅಪರಾತ್ರಿ ಸಮಯದಲ್ಲಿ ಸದ್ರಿ ಸ್ಥಳದಲ್ಲಿ ಕತ್ತಲೆಯಲ್ಲಿ ಇದ್ದು, ಹಾಗೂ ಇವರುಗಳ ಚಲನ ವಲನದಿಂದ ಇವರುಗಳು ಕನ್ನ ಕಳವು ಅಥವಾ ಯಾವುದೋ ಬೇವಾರಂಟು ತಕ್ಷೀರು ನಡೆಸುವ ಉದ್ದೇಶದಿಂದ, ತಮ್ಮಗಳ ಇರುವಿಕೆಯನ್ನು ಮರೆಮಾಚಿಕೊಂಡು ಸದ್ರಿ ಸ್ಥಳದಲ್ಲಿ ಅಂಗಡಿ ಶಟರ್ ನ ಬೀಗ ಮುರಿಯಲು ಹೊಂಚು ಹಾಕುತ್ತಿದ್ದರೆಂದು ಬಲವಾದ ಸಂಶಯಗೊಂಡು ಸದ್ರಿ ವ್ಯಕ್ತಿಗಳನ್ನು ಬೆಳಗ್ಗಿನ ಜಾವ 03-00 ಗಂಟೆಗೆ ವಶಕ್ಕೆ ಪಡೆದುಕೊಂಡು  ಆರೋಪಿತರ ವಿರುದ್ದ  ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂಬಿತ್ಯಾದಿ.

Crime Reported in Kavoor PS

 

ಪಿರ್ಯಾದಿದಾರರ ಅಜ್ಜಿಯಾದ ಗಂಗಮ್ಮ (62) ವರ್ಷ ಕೇರ್ ಆಫ್ ವೇಣುಗೋಪಾಲ್ ವಾಸ: ನ್ಯೂ ಪ್ರಂಡ್ಸ್ ಕ್ಲಬ್ ಹಿಂದುಗಡೆ, ಆಕಾಶಭವನ, ಕಾವೂರು ಮಂಗಳೂರುನಲ್ಲಿ ಮನೆಯಲ್ಲಿ ಇಬ್ಬರೇ ವಾಸ ಮಾಡಿಕೊಂಡಿದ್ದು,ಇವರಿಗೆ ಪದೇಪದೇ ಮನೆ ಬಿಟ್ಟು ಹೋಗಿ ಪುನಃ ಕೆಲವು ದಿನಗಳ ನಂತರ ಮನೆಗೆ ಬರುವ ಹವ್ಯಾಸವನ್ನು ಹೊಂದಿದ್ದು,  ದಿನಾಂಕ 08/10/2021 ರಂದು ಬೆಳಿಗ್ಗೆ ಸುಮಾರು 10.00 ಗಂಟೆಗೆ ಮನೆಯಿಂದ ಹೋದವರು ವಾಪಸ್ ಮನೆಗೆ ಬಂದಿರುವುದಿಲ್ಲ, ಈ ಬಗ್ಗೆ ಫಿರ್ಯಾದುದಾರರು ತಮ್ಮಸಂಬಂಧಿಕರಲ್ಲಿ ಹಾಗೂ ನೆರೆಹೊರೆಯವರಲ್ಲಿ ವಿಚಾರಿಸಿದ್ದು  ಫಿರ್ಯಾದುದಾರರ ಅಜ್ಜಿ ಗಂಗಮ್ಮ ರವರ ಬಗ್ಗೆ ಯಾವುದೇ ಉಪಯುಕ್ತ  ಮಾಹಿತಿ ತಿಳಿದಿರುವುದಿಲ್ಲ, ಆದುದರಿಂದ ಕಾಣೆಯಾದ ಫಿರ್ಯಾದುದಾರರ ಅಜ್ಜಿ ಗಂಗಮ್ಮ ರವರನ್ನು ಪತ್ತೆ ಮಾಡಿಕೊಡಬೇಕಾಗಿ ಎಂಬಿತ್ಯಾದಿ.

ಚಹರೆ:   

  1. ಹೆಸರು: ಗಂಗಮ್ಮ (62)

ಎತ್ತರ: 5 ಅಡಿ,  ಎಣ್ಣೆ ಕಪ್ಪು ಮೈಬಣ್ಣ, ದುಂಡು ಮುಖ, ಸಪೂರ ಮೈಕಟ್ಟು

Crime Reported in Ullal PS         

ದಿನಾಂಕ 11-11-2021 ರಂದು ಪಿರ್ಯಾದಿ Shivakumar P ದಾರರು ಇಲಾಖಾ ವಾಹನ ನಂಬ್ರ KA-19-G-0694 ರಲ್ಲಿ ಚಾಲಕ  ಸತೀಶ್ , ಪಿಸಿ  ಚಿದಾನಂದ ಕಟೆರವರೊಂದಿಗೆ ರೌಂಡ್ಸ್ ಕರ್ತವ್ಯ ಮಾಡಿಕೊಂಡು ಉಳ್ಳಾಲ ಗ್ರಾಮದ ಕೋಟೆಪುರ ಫಿಶ್ ಮಿಲ್ ಬಳಿಯಲ್ಲಿ ಒರ್ವ ವ್ಯಕ್ತಿ ಗಾಂಜಾ ಸೇವನೆ ಮಾಡಿ ನಶೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ಬಂದ ಮಾಹಿತಿಯಂತೆ ಮಾದ್ಯಾಹ್ನ 2-30 ಗಂಟೆ್ಗೆ ತಲುಪಿ ಕೋಟೆಪುರ ದೋಣಿ ಕಟ್ಟುವ ಕಲ್ಲು ಹಾಸಿಗೆಯ ಮೇಲೆ ಒಬ್ಬ ವ್ಯಕ್ತಿಯು ಕುಳಿತುಕೊಂಡು ಯಾವುದೇ ನಶೆಯ ಅಮಲಿನಲ್ಲಿ ತೂರಾಡಿ ಅವನಷ್ಟಕ್ಕೆ ಮಾತನಾಡುತ್ತಿದ್ದವನನ್ನು ವಿಚಾರಿಸಲಾಗಿ ಆತನು Abdul Samad(A1) Padinachetty Parambel house ಎಂಬವನಾಗಿದ್ದು ಗಾಂಜಾ ಅಮಲು ಪದಾರ್ಥ ಸೇವಿಸಿರುವುದಾಗಿ ತಿಳಿಸಿದಂತೆ ಆತನನ್ನು ವಶಕ್ಕೆ ಪಡೆದು ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರು ಪಡಿಸಿ ಅವರು ಅಬಿಪ್ರಾಯದೊಂದಿಗೆ ದೃಡಪತ್ರ ನೀಡಿರುತ್ತಾರೆ  ಆದುದರಿಂದ  ಕಾನೂನು ಬಾಹಿರವಾದ  ನಿಷೇದಿತ ಮಾದಕ  ವಸ್ತು ಗಾಂಜಾ ಸೇವನೆ ಮಾಡಿರುವ  ಸದ್ರಿ ವ್ಯಕ್ತಿಯ ಮೇಲೆ  ಕಾನೂನು ರೀತಿ ಪ್ರಕರಣ ದಾಖಲಿಸಿಕೊಂಡಿರುವುದು ಪ್ರಕರಣದ ಸಾರಾಂಶ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 13-11-2021 02:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080