ಅಭಿಪ್ರಾಯ / ಸಲಹೆಗಳು

 

Crime Reported in BARKE PS

ಪಿರ್ಯಾದಿದಾರರಾದ ಶ್ರೀ ಅಹಮದ್ ಮೆಹಜೂಬ್  22 ವರ್ಷ ಇವರು ಕ್ರಿಯೇಟಿವ್ ಇಂಜಿನಿಯರ್ಸ್ ಕಂಪನಿಯಲ್ಲಿ ಸೈಟ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿರುವುದಾಗಿದೆ.ಮಂಗಳಾ ಸ್ಟೇಡಿಯಂ ಬಳಿ ದಿನಾಂಕ 01-01-2022 ರಿಂದ ಪೆವಿಲಿಯನ್ ಕೆಲಸ ಮಾಡುತ್ತಾ ಇದ್ದು ದಿನಾಂಕ 10-01-2022 ರಂದು ಎಂದಿನಂತೆ ಬೆಳಿಗ್ಗೆ 08.30 ಗಂಟೆಗೆ ಕೆಲಸಕ್ಕೆ ಬಂದಿದ್ದು ಪಿರ್ಯಾದಿದಾರರ ಬಾಬ್ತು KA-19-HG-0549 ನೇ SUZUKI MOTOR CYCLE ಎಂಬ ಗಾಡಿಯನ್ನು ಸ್ಟೇಡಿಯಂ ಹೊರಗಡೆ ಪಾರ್ಕ್ ಮಾಡಿ ಕೆಲಸ ಮಾಡುವ ಜಾಗಕ್ಕೆ ತೆರಳಿರುತ್ತಾರೆ. ವಾಪಾಸ್ಸು 13.00 ಗಂಟೆಗೆ ಬೈಕ್ ನಿಲ್ಲಿಸಿದಂತಹ ಸ್ಥಳಕ್ಕೆ ಬಂದು ನೋಡಿದಾಗ ಪಿರ್ಯಾದಿದಾರರ ಬಾಬ್ತು KA-19-HG-0549 ನೇ SUZUKI MOTOR CYCLE ಕಾಣದೇ ಇದ್ದು  ನಂತರ ಪಿರ್ಯಾದಿದಾರರು ಮಂಗಳೂರು ನಗರದ ಪರಿಸರದಲ್ಲಿ ಈವರೆಗೂ ಹುಡುಕಾಡಿದರೂ ಸಿಕ್ಕಿರುವುದಿಲ್ಲವಾದ್ದರಿಂದ ಪಿರ್ಯಾದಿದಾರರು ಠಾಣೆಗೆ ಬಂದು ದಿನಾಂಕ: 10-01-2022 ರಂದು ಬೆಳಿಗ್ಗೆ ಸಮಯ 08-30 ಗಂಟೆಯಿಂದ  ದಿನಾಂಕ: 10-01-2022 ರ ಮಧ್ಯಾಹ್ನ 13.00 ಗಂಟೆಯ ಮಧ್ಯೆ ಯಾರೋ ಕಳ್ಳರು ಪಿರ್ಯಾದಿದಾರರ ಬಾಬ್ತು  KA-19-HG-0549 ನೇ SUZUKI MOTOR CYCLE ದ್ವಿ ಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಪಿರ್ಯಾದಿ ನೀಡಿರುತ್ತಾರೆ. ಎಂಬಿತ್ಯಾದಿ ಸಾರಾಂಶ. 

ಕಳುವಾದಂತಹ ವಾಹನದ ವಿವರ

*ನೊಂದಣಿ ಸಂಖ್ಯೆ –KA 19 HG 0549

*ಬಣ್ಣ  -  MATT BLACK

*ಮೊಡೆಲ್ -   ACCESS 125

*ಚಾಸಿಸ್ ನಂಬ್ರ –MB8DP12DAM8546684

*ಇಂಜಿನ್ ನಂಬ್ರ – AF216564750

* ಅಂದಾಜು ಮೌಲ್ಯ- 60,000-/ರೂ

Crime Reported in Traffic South PS

ದಿನಾಂಕ: 13-01-2022 ರಂದು ಪಿರ್ಯಾದಿ SOUDHA AYUB ISMAILದಾರರು ತೊಕ್ಕಟ್ಟು ಸಾಗರ ಕಲೆಕ್ಷನ್ ಅಂಗಡಿ ಎದುರು ತೊಕ್ಕಟ್ಟು ಬಸ್ಸುಸ್ಟಾಪ್ ಕಡೆಗೆ ನೆಡೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು 20:30 ಗಂಟೆಗೆ ಕುತ್ತಾರು ಕಡೆಯಿಂದ ತೊಕ್ಕಟ್ಟು ಕಡೆಗೆ ಬರುತ್ತಿದ್ದ ಮೋಟರು ಸೈಕಲ್ ನಂಬ್ರ:KA-19-EU-7027  ನೇದರ ಸವಾರ ಮೊಹಮ್ಮದ್ ಶಾಹಿಲ್ ಎಂಬುವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ಹೊಗುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಡಾಮಾರು ರಸ್ತೆಗೆ ಬಿದ್ದವರನ್ನು ಮೋಟರು ಸೈಕಲ್ ಸವಾರ ಹಾಗೂ ಸ್ಥಳಿಯರು ಉಪಚಾರಿಸಿ ಚಿಕಿತ್ಸೆ ಬಗ್ಗೆ ಹತ್ತಿರದ ಸಹಾರ ಆಸ್ವತ್ರೆಗೆ ದಾಖಲಿಸಿರುತ್ತಾರೆ ಅವರನ್ನು ಪರಿಕ್ಷಿಸಿದ ವೈದ್ಯರು ಪಿರ್ಯಾದಿದಾರರಿಗೆ ಎಡಗಾಲಿನ ಮೊಣಕಾಲಿಗೆ ಮೂಳೆ ಮುರಿತದ ಗಾಯ  ಹಾಗೂ ಕೈಗಳಿಗೆ ತರಚಿದ ರಕ್ತ ಗಾಯವಾಗಿರುತ್ತದೆ ಎಂದು ತಿಳಿಸಿರುತ್ತಾರೆ  ಎಂಬಿತ್ಯಾದಿ

Crime Reported in Kavoor

ಪಿರ್ಯಾದಿ SURESH Kದಾರರ ತಂದೆಯಾದ ಕೃಷ್ಣಪ್ (50) ಎಂಬವರು ಒಂದು ವಾರದ ಮೊದಲು  ಫಿರ್ಯಾದುದಾರರ ತಂಗಿ ಜ್ಯೋತಿ ಎಂಬವರ ಮನೆ ಆಕಾಶಭವನ ಮಂಜಲಕಟ್ಟೆ 2ನೇ ಅಡ್ಡ ರಸ್ತೆ ಕಾವೂರು ಇಲ್ಲಿಗೆ ಬಂದಿದ್ದು, ದಿನಾಂಕ 11.01.2022 ರಂದು ಸಮಯ ಬೆಳಿಗ್ಗೆ ಸುಮಾರು 8.00ಗಂಟೆಯ ವೇಳೆಗೆ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ದಾರಿ ತಪ್ಪಿ ಹೋದವರು ಈ ವರೆಗೂ ವಾಪಾಸ್ಸು ಬಾರದೇ ಕಾಣೆಯಾಗಿರುತ್ತಾರೆ,ಎಂಬಿತ್ಯಾದಿ.

ಚಹರೆ:

  1. ಕೃಷ್ಣಪ್ಪ (50 ವರ್ಷ್) ತಂದೆ: ಹೊನ್ನುರುಪ್ಪ

ಎತ್ತರ: 5.6 ಅಡಿ,  ಎಣ್ಣೆ ಕಪ್ಪು ಮೈಬಣ್ಣ, ಸಾದಾರಣಾ ಮೈಕಟ್ಟು

ಧರಿಸಿರುವ ಬಟ್ಟೆ:  ಬಿಳಿ ಬಣ್ಣದ ಬನಿಯನ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಮಾತನಾಡುವ ಭಾಷೆ: ಕನ್ನಡ

Crime Reported inMangaluru East PS

ಪಿರ್ಯಾದಿದಾರರಾದ  ಶರಣಪ್ಪ ಬಸವರಾಜ್ ಬಿಂಗಿ ರವರು ತನ್ನ ಬಾಬ್ತು ಕೆಎ-19-ಹೆಚ್.ಬಿ – 2468 ನೇ ಬಜಾಜ್ ಪಲ್ಸರ್ ಎನ್ ಎಸ್ ಬೈಕ್ ನ್ನು ದಿನಾಂಕ: 12-01-2022 ರಂದು ರಾತ್ರಿ  9-30 ಗಂಟೆಗೆ ಮಂಗಳೂರು ನಗರದ ಪಂಪವೆಲ್ ನ ತಾರೆತೋಟದ ಪ್ರೆಂಡ್ಸ್ ಕಾರ್ ಶಾಪ್ ನ ಹತ್ತಿರ ಇರುವ ರಸ್ತೆಯಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಅದನ್ನು ಮರು ದಿನ ದಿನಾಂಕ: 13-01-2022 ರಂದು ಬೆಳಿಗ್ಗೆ 7-00 ಗಂಟೆ ಮಧ್ಯೆ ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿದ್ದು, ಇದರ ಅಂದಾಜು ಮೌಲ್ಯ ರೂ: 90,000/- ಆಗಬಹುದು. ಇದರ ಚಾಸಿಸ್ ನಂ: MD2A36FY7KCL07818 ಇಂಜಿನ್ ನಂಬರ್:  JLYCKL49204, ಮಾಡೆಲ್- 2019 ಬಣ್ಣ: ಪೆರ್ಲ್ ಮೆಟಾಲಿಕ್ ,  ಪಿರ್ಯಾದಿದಾರರು ಕಳವಾದ ತನ್ನ ಬೈಕ್ ನ್ನು ನಗರ ಎಲ್ಲಾ ಕಡೆ ಹುಡುಕಾಡಿ, ಸಿಗದ ಕಾರಣ ತಡವಾಗಿ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

Crime Reported in WOMEN PS

ಪಿರ್ಯಾದಿದಾರರಿಗೆ ದಿನಾಂಕ 21-07-20211 ರಂದು ಬಿ.ಸಿ ರೋಡ್ ನ  1 ನೇ ಆರೋಪಿ ಮಹಮ್ಮದ್ ಮುಸ್ತಾಫ್  ಎಂಬವರೊಂದಿಗೆ ಮುಸ್ಲಿಂ ಸಂಪ್ರದಾಯದ ಪ್ರಕಾರ ಮದುವೆ  (ನಿಖಾ) ಆಗಿದ್ದು, ಮದುವೆ ಸಮಯದಲ್ಲಿ ಉಡುಗೊರೆಯಾಗಿ ಬಂಗಾರದ ಒಡವೆಗಳನ್ನು ತವರು ಮನೆಯಿಂದ ಪಿರ್ಯಾದಿದಾರರಿಗೆ ನೀಡಿರುತ್ತಾರೆ. ಮದುವೆಯ ನಂತರ ಪಿರ್ಯಾದಿದಾರರಲ್ಲಿ “1 ನೇ ಆರೋಪಿ ನೀನು ಕೇವಲ 30 ಪವನ್ ಬಂಗಾರವನ್ನು ತಂದಿದ್ದು, ಇನ್ನೂ 20 ಪವನ್ ಬಂಗಾರವನ್ನು ನಿನ್ನ ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂಬುದಾಗಿ ಕಿರುಕುಳ ನೀಡಲು ಪ್ರಾರಂಭಿಸಿದ್ದಲ್ಲದೇ ನಂತರದ ದಿನಗಳಲ್ಲಿ 1 ನೇ ಆರೋಪಿ ಮಹಮ್ಮದ್ ಮುಸ್ತಾಫಾ ಎಂಬಾತನು ಪಿರ್ಯಾದಿದಾರರಲ್ಲಿ ನಿನಗೆ ಬೇರೆಯವರ ಜೊತೆ ಅನೈತಿಕ ಸಂಬಂಧವಿದೆ, ನೀನು ಬೇಡ, ನಿನಗೆ ತಲಾಖ್ ಕೊಡುತ್ತೇನೆ ಎಂಬುದಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡುತ್ತಿದ್ದರು. ದಿನಾಂಕ 09-11-2011 ರಂದು 1 ನೇ ಆರೋಪಿ ಉದ್ಯೋಗದ ನಿಮಿತ್ತ ವಿದೇಶಕ್ಕೆ ಹೋಗುವವರೆಗೂ  2 ನೇ ಆರೋಪಿ ಕುಲ್ಸು ಎಂಬವರು ಕೂಡ ಸೇರಿಕೊಂಡು “ನಿನ್ನ ತವರು ಮನೆಯವರು ಗತಿಯಿಲ್ಲದವರು 50 ಪವನ್ ಚಿನ್ನವನ್ನು ನೀಡುವ ಯೋಗ್ಯತೆಯಿಲ್ಲ, ಅಷ್ಟು ಗತಿಯಿಲ್ಲದವರು ಯಾಕೆ ಮಾದುವೆಯಾಗಿದ್ದು ಎಂಬುದಾಗಿ ನಿರಂತರ ಮಾನಸಿಕ ಹಿಂಸೆಯನ್ನುನೀಡಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 14-01-2022 07:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080