ಅಭಿಪ್ರಾಯ / ಸಲಹೆಗಳು

Crime Reported in : Mangalore Rural

ಪಿರ್ಯಾದಿ Mahesh Prasad ರವರು ಮಂಗಳೂರು ನಗರದ ಸಿಸಿಬಿ ವಿಭಾಗದ ಪೊಲೀಸ್ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮಾನ್ಯ ಪೊಲೀಸ್ ಆಯುಕ್ತರ ಆದೇಶದಂತೆ ಪಿರ್ಯಾದಿದಾರರು ಮತ್ತು ಸಿಸಿಬಿ ಘಟಕದ ಸಿಬ್ಬಂದಿಗಳು ದಿನಾಂಕ 14-03-2022 ರಂದು ವಿಶೇಷ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಸುಮಾರು ಬೆಳಗಿನ ಜಾವ 02-00 ಗಂಟೆಗೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಂಗಳೂರು ನಗರದ ಅಡ್ಯಾರ್ ಬಿರ್ಪುಗುಡ್ಡೆ ಮೈದಾನದ ಖಾಲಿ ಜಾಗದಲ್ಲಿ ಯಾರೋ ಅಪರಿಚಿತರು ಯಾವುದೇ ಪರವಾನಿಗೆಯಿಲ್ಲದೇ ಎಲ್ಲಿಂದಲೋ ಮರಳನ್ನು ಕದ್ದು ತಂದು ಸುಮಾರು 15 ಲೋಡ್ ಗಳಷ್ಟು ಮರಳನ್ನು ಸಾಗಾಟ ಮಾಡಲು ಅಕ್ರಮವಾಗಿ ದಾಸ್ತಾನು ಮಾಡಿದ್ದು. ಮರಳನ್ನು ವಶಕ್ಕೆ ಪಡೆದು , ಅಕ್ರಮವಾಗಿ ದಾಸ್ತಾನು ಮಾಡಿದ ವ್ಯಕ್ತಿಗಳ  ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ಪಿರ್ಯಾದಿಯ ಸಾರಾಂವಾಗಿರುತ್ತದೆ. ಎಂಬಿತ್ಯಾದಿ.

 

Crime Reported in ; CEN Crime PS Mangaluru City

ಪಿರ್ಯಾದಿದಾರರಿಗೆ ದಿನಾಂಕ 14-03-2022 ರಂದು ಸಮಾರು 12-00 ಗಂಟೆ ಗೆ +918979379863 ನಂಬ್ರದಿಂದ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿಯು ತಾನು AXIS ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ನವರೆಂದು ಹೇಳಿ, ನಂಬಿಸಿ, ಪಿರ್ಯಾದಿದಾರರಿಗೆ REWARDS POINST ಬಂದಿರುವುದಾಗಿ ತಿಳಿಸಿ REWARDS POINST ನೋಡಲು OTP ನೀಡುವಂತೆ ತಿಳಿಸಿರುತ್ತಾರೆ ಅವರನ್ನು ಬ್ಯಾಂಕ್‌ ನವರೆಂದು ನಂಬಿದ ಪಿರ್ಯಾದಿದಾರರು ಕರೆ ಮಾಡಿದ ವ್ಯಕ್ತಿಗೆ  OTP ನಂಬ್ರ ನೀಡಿರುತ್ತಾರೆ. ನಂತರ REWARDS POINST ಅನ್ನು ACTIVATION ಮಾಡುಲು ಇನ್ನೊಮ್ಮೆ OTP ನೀಡುವಂತೆ ತಿಳಿಸಿರುತ್ತಾರೆ. ಪಿರ್ಯಾದಿದಾರರು ತಮ್ಮ ಮೊಬೈಲ್ ಗೆ ಬಂದ ಇನ್ನೊಂದು OTPಯನ್ನು ಸಹ ನೀಡಿರುತ್ತಾರೆ. ನಂತರ ಸುಮಾರು 14-00 ಗಂಟೆಗೆ ಪಿರ್ಯಾದಿದಾರರ ಮೊಬೈಲ್ ನಂಬ್ರಕ್ಕೆ ಅಪರಿಚಿತ ವ್ಯಕ್ತಿ    +917860434553 ನೇ ನಂಬ್ರದಿಂದ ಕರೆ ಮಾಡಿ, ಫಿರ್ಯಾದಿದಾರರ ಬ್ಯಾಂಕ್ ನ DEBIT  Card ನ LIMITATION  ಹೆಚ್ಚು ಗೊಳಿಸಲು ತಿಳಿಸಿದಂತೆ,  ಪಿರ್ಯಾದಿದಾರರು ಸದ್ರಿ ಕರೆ ಮಾಡಿದ ವ್ಯಕ್ತಿಯು AXIS ಬ್ಯಾಂಕ್ ನವರು ಎಂದು ನಂಬಿ. ಫಿರ್ಯಾದಿದಾರರು ಹೊಂದಿರುವ AXIS ಬ್ಯಾಂಕ್‌‌ನ DEBIT  Card ನಂಬ್ರ ಹಾಗೂ ಅದರ ಸಿವಿವಿ ನಂಬ್ರ ನ್ನು ತಿಳಿಸಿದ್ದು, ಆ ಕೂಡಲೇ ಅವರ ಖಾತೆಯಿಂದ ರೂ. 90,000/- ಹಣ ವರ್ಗಾವಣೆಯಾದ ಬಗ್ಗೆ ಸಂದೇಶ ಬಂದಿರುತ್ತದೆ. ಈ ರೀತಿ AXIS ಬ್ಯಾಂಕ್‌‌ ನ ಅಧಿಕಾರಿ ಎಂದು ಕರೆ ಮಾಡಿ ನಂಬಿಸಿ ಪಿರ್ಯಾದಿದಾರರ CREDIT CARD ನಿಂದ 90000/- ಹಾಗೂ DEBIT CARD ನಿಂದ ರೂ. 90,000/- ಹಣವನ್ನು ಹೀಗೆ ಒಟ್ಟು  1,80,000/- ಲಪಟಾಯಿಸಿ ಮೋಸ ಮಾಡಿರುತ್ತಾರೆ ಎಂಬಿತ್ಯಾದಿಯಾಗಿದೆ                         

 

Crime Reported in  Mangalore East Traffic PS                

ದಿನಾಂಕ:13-03-2022 ರಂದು ಪಿರ್ಯಾದಿ BERNARD DSOUZA ದಾರರ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಜಯಪ್ರಸಾದ ಎಂಬವರು ತನ್ನ ಬಾಬ್ತು KA-21-Y-7105 ಸ್ಕೂಟರಿನಲ್ಲಿ ಪದ್ಮನಾಭ ಪೂಜಾರಿ(55) ರವರನ್ನು ಹಿಂಬದಿ ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ವೆಲೆನ್ಸಿಯಾ ಜಂಕ್ಷನ್ ನಿಂದ ಸೂಟರಪೇಟೆಯಲ್ಲಿರುವ ತಮ್ಮ ರೂಮಿಗೆ ಹೋಗುತ್ತಾ ರಾತ್ರಿ ಸಮಯ ಸುಮಾರು 10:30 ಗಂಟೆಗೆ ಸೂಟರಪೇಟೆಯ 9 ನೇ ಕ್ರಾಸ್ ಬಳಿ ತಲುಪುತ್ತಿದ್ದಂತೆ ಸವಾರ ಜಯಪ್ರಸಾದ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸದ್ರಿ ರಸ್ತೆಯಲ್ಲಿದ್ದ ತಗ್ಗು ಜಾಗಕ್ಕೆ ಒಮ್ಮೇಲೆ ಸ್ಕೂಟರನ್ನು  ಚಲಾಯಿಸಿಕೊಂಡು ಹೋದ ಪರಿಣಾಮ ಸ್ಕೂಟರ್ ಜಂಪ್ ಆದಂತಾಗಿ ಹಿಂಬದಿ ಸವಾರನಾಗಿ ಕುಳಿತಿದ್ದ ಪದ್ಮನಾಭ ಪೂಜಾರಿ(55)ರವರು ಹಿಡಿತ ತಪ್ಪಿ ಹಿಮ್ಮುಖವಾಗಿ ಪಲ್ಟಿಯಾಗಿ ಸಾರ್ವಜನಿಕ ಡಾಮಾರು ರಸ್ತೆಗೆ ಬಿದ್ದು ಎಡಕಾಲಿನ ಮೊಣಕಾಲಿಗೆ ಮತ್ತು ಮೂಗಿಗೆ ರಕ್ತ ಗಾಯವಾಗಿ ಅರೆಪ್ರಜ್ಞಾವಸ್ಥೆಯಲ್ಲಿದ್ದವರನ್ನು ಅಪಘಾತದ ವಿಷಯ ತಿಳಿದ ಪಿರ್ಯಾದಿದಾರರು ಅಪಘಾತ ಸ್ಥಳಕ್ಕೆ ಬಂದು ತಮ್ಮ ಗೂಡ್ಸ್ ಟೆಂಪೋದಲ್ಲಿ ಚಿಕಿತ್ಸೆಯ ಬಗ್ಗೆ ಹತ್ತಿರದ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ಅಲ್ಲಿನ ವೈದ್ಯರು ಪದ್ಮನಾಭ ಪೂಜಾರಿ(55)ಯವರ ತಲೆಯ ಒಳಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿ ಬಲಕಿವಿಯಿಂದ ರಕ್ತ ಸೋರುತ್ತಿರುವುದಾಗಿ ತಿಳಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ಸ್ಕೂಟರ ಸವಾರ ಜಯಪ್ರಸಾದರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

 

Crime Reported in Traffic North PS           

ದಿನಾಂಕ:13-03-2022 ರಂದು ಪಿರ್ಯಾದಿ Mohan Dasದಾರರ ತಮ್ಮ ಪ್ರವೀಣರವರು ಕೇಶವ ಎಂಬವರ ಬಾಬ್ತು KA-19-HF-5632 ನಂಬ್ರದ ಸ್ಕೂಟರಿನಲ್ಲಿ ಹೆಂಡಿತಿಯ ಮನೆಯಾದ ಶೇಡಿಗುರಿ ತೋಕೂರು ಎಂಬಲ್ಲಿಗೆ ಹೋಗಿ ಅಲ್ಲಿಂದ ವಾಪಸ್ಸು ಬೊಂದೇಲ್ ಮಾರ್ಗವಾಗಿ ಒಳರಸ್ತೆಯಲ್ಲಿ ಮೂಡುಶೆಡ್ಡೆ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಅಪರಾಹ್ನ ಸಮಯ 3:30 ಗಂಟೆಗೆ ಜಾರ ಎಂಬಲ್ಲಿ ತಲುಪುತ್ತಿದ್ದಂತೆ ಪ್ರವೀಣರವರು ಸ್ಕೂಟರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ತಿರುವು ರಸ್ತೆಯಲ್ಲಿ ಸ್ಕೂಟರ್ ಸವಾರಿಯ ಹತೋಟಿ ತಪ್ಪಿ ಸ್ಕೂಟರ್ ಸಮೇತ ರಸ್ತೆ ಬದಿಗೆ ಸ್ಕಿಡ್ ಆಗಿ, ರಸ್ತೆ ಎಡಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಒರೆಸಿಕೊಂಡು, ರಸ್ತೆಬದಿಯಲ್ಲಿ ಕಲ್ಲು, ಮಣ್ಣು ಇರುವ ಜಾಗಕ್ಕೆ ಬಿದ್ದ ಪರಿಣಾಮ ಪ್ರವೀಣರವರ ಬಲಕಿವಿಯ ಹಿಂಭಾಗ ತಲೆಗೆ ಗಂಭಿರ ಸ್ವರೂಪದ ರಕ್ತಗಾಯವಾಗಿ, ಅಲ್ಲದೇ ಬೆನ್ನಿನಲ್ಲಿ ತರಚಿದ ಗಾಯ, ಬಲಕಾಲಿನ ಪಾದದಲ್ಲಿ ಹಾಗೂ ಬಲ ಕೋಲು ಕಾಲಿನಲ್ಲಿ ತರಚಿದ ರಕ್ತಗಾಯವಾಗಿ ಮಾತನಾಡದೇ ಇರುವ ಸ್ಥಿತಿಯಲ್ಲಿ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಎಂಬಿತ್ಯಾದಿ.

 

Crime Reported in Traffic South PS

ದಿನಾಂಕ 14-03-2022 ರಂದು ಬೆಳಿಗ್ಗೆ ಮೋಟಾರ್ ಸೈಕಲ್ ನಂಬ್ರ KA-19-HD-5119 ನೇದರಲ್ಲಿ ನಿಸಾರ್ ಎ.ಎಮ್ ಎಂಬವರು ಸವಾರರಾಗಿ ಹಾಗೂ ಪಿರ್ಯಾದಿದಾರರಾದ ಮಹಮ್ಮದ್ ಆಸೀಫ್ ರವರು ಸಹ ಸವಾರರಾಗಿ ಮಂಜನಾಡಿಯಿಂದ ಮಂಗಳೂರು ಕಡೆಗೆ ರಾ.ಹೆ.66 ರ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 11.30 ಗಂಟೆಗೆ ನೇತ್ರಾವತಿ ಸೇತುವೆ ರಸ್ತೆ ಮೇಲೆ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಅವರ ಹಿಂದಿನಿಂದ ಬರುತ್ತಿದ್ದ ಕಾರು ನಂಬ್ರ KA-19-MH-0994 ನೇದನ್ನು ಅದರ ಚಾಲಕ ಸ್ಟೀವ್ ಹೆಡ್ಲಿ ಬರ್ಬೋಜಾ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರೂ ಹೋಗುತ್ತಿದ್ದ ಮೋಟಾರ್ ಸೈಕಲಿನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರೂ ಹಾಗೂ ಮೋಟಾರ್ ಸೈಕಲ್ ಸವಾರ ನಿಸಾರ್ ಎ.ಎಮ್ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಸೊಂಟಕ್ಕೆ ಗುದ್ದಿದ ಗಾಯ ಹಾಗೂ ಎರಡು ಕೈಗಳ ಮೊಣಗಂಟಿಗೆ ಮತ್ತು ಎಡಗಾಲಿಗೆ ಗುದ್ದಿದ ರೀತಿಯ ತರಚಿದ ಗಾಯ ಹಾಗೂ ಮೋಟಾರ್ ಸೈಕಲ್ ಸವಾರ ನಿಸಾರ್ ಎ.ಎಮ್ ರವರಿಗೆ ಬಲಗೈಗೆ ಮೂಳೆ ಮುರಿತದ ಗಾಯ ಹಾಗೂ ಎಡಗಾಲಿಗೆ ಮತ್ತು ಸೊಂಟಕ್ಕೆ ಗುದ್ದಿದ ರೀತಿಯ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಗಾಯಾಳುಗಳಿಬ್ಬರನ್ನೂ ಅಂಬುಲೆನ್ಸ್ ವೊಂದರಲ್ಲಿ ಚಿಕಿತ್ಸೆ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಇಬ್ಬರೂ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 14-03-2022 07:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080