ಅಭಿಪ್ರಾಯ / ಸಲಹೆಗಳು

Crime Reported in Bajpe PS

ಫಿರ್ಯಾದಿ Sundara Purush ದಾರರು ದಿನಾಂಕ 13.04.2022 ರಂದು ಸಂಜೆ ವೇಳೆಗೆ ನಿಶ್ಮಿತಾ ಬಸ್ ನಂಬ್ರ ಕೆಎ-20ಎಎ-1115 ನೇಯದರಲ್ಲಿ ಮೂಡಬಿದ್ರೆಯಿಂದ ಮಂಗಳೂರಿಗೆ ಪ್ರಯಾಣಿಸುತ್ತಿರುವಾಗ ಬಸ್ಸನ್ನು ಅದರ ಚಾಲಕನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದ ಪರಿಣಾಮ ರಾತ್ರಿ ಸುಮಾರು 8:15 ಗಂಟೆಗೆ ಮಂಗಳೂರು ತಾಲೂಕು, ಬಡಗುಳಿಪಾಡಿ ಗ್ರಾಮದ, ಗಂಜಿಮಠ ರಾಜ್ ಶಾಲೆ ಬಳಿ ಬಸ್ಸು ಒಮ್ಮೆಲೇ ರಸ್ತೆಯ ಎಡಬದಿಗೆ ಮಗುಚಿ ಬಿದ್ದ ಪರಿಣಾಮ ಫಿರ್ಯದಿದಾರರ ಎಡ ಕಿವಿ ಹರಿದಿದ್ದು, ಎಡಕಣ್ಣಿನ ಮೇ;ಲ್ಭಾಗಕ್ಕೆ ರಕ್ತಗಾಯ, ಬಲಭುಜಕ್ಕೆ, ಎಡಕಾಲಿನ ತೊಡೆಗೆ, ಮೈಕೈಗೆ  ಗುದ್ದಿದ ನೋವು ಉಂಟಾಗಿದ್ದು ಅಲ್ಲದೇ ಇತರ ಮೂರು ಜನ ಪ್ರಯಾಣಿಕರಿಗೂ ಕೂಡಾ ಗಾಯವಾಗಿರುತ್ತದೆ. ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಮಂಗಳೂರು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ” ಎಂಬಿತ್ಯಾದಿ.

 

Crime Reported in Mangalore North PS

ಪಿರ್ಯಾದಿದಾರರಾದ ಪುಂಡಲಿಕ ಮಾನಪ್ಪ ರಾಥೋಡ್ ಎಂಬುವರು ತನ್ನ ಅಣ್ಣನ ಮಗ ಕುಮಾರ್ ರವರ ಜೊತೆಯಲ್ಲಿ ಈಗ ಸುಮಾರು 03 ತಿಂಗಳಿನಿಂದ ಹೆಂಡತಿ ರುಕುಮವ್ವ, ಮಕ್ಕಳಾದ ಜ್ಯೋತಿ, ದರ್ಶನ್ ಮತ್ತು ಅನಿಲ್ ರವರು ರೊಂದಿಗೆ ಮಂಗಳೂರಿನ ಕಾರ್ ಸ್ಟ್ರೀಟ್ ಕಾಳಿಕಾಂಭ ದೇವಸ್ಥಾನದ ಹತ್ತಿರವಿರುವ ದಿನೇಶ್ ಪೈ /ಕಿರಣ್ ರವರ ಸೈಟ್ ನಲ್ಲಿ ವಾಸ ಮಾಡಿಕೊಂಡಿದ್ದಾರೆ.  ದಿನಾಂಕ 13-04-2022 ರಂದು ಎಂದಿನಂತೆ ಬೆಳಿಗ್ಗೆ 08:00 ಗಂಟೆಗೆ ಅದೇ ಸೈಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಸಮಯ ಬೆಳಿಗ್ಗೆ 09.45 ಗಂಟೆ ಸುಮಾರಿಗೆ ಮಗಳು ಜ್ಯೋತಿಯು(21) ಕಾಣದೇ ಇದ್ದು,  ಹುಡುಕಾಡಿದಲ್ಲಿ ಮಗಳು ಜ್ಯೋತಿಯು ಪತ್ತೆಯಾಗಿರುವುದಿಲ್ಲ ಎಂಬಿತ್ಯಾದಿ ಸಾರಾಂಶ.

 

ಕಾಣೆಯಾದ ನನ್ನ ಮಗಳು ಜ್ಯೋತಿಯ ಚಹರೆ ಗುರುತುಗಳು.

1) ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ

2) ಎತ್ತರ- 5 ½ ಅಡಿ

3) ಕನ್ನಡ, ಲಂಬಾಣಿ,  ಅಲ್ಪಸ್ವಲ್ಪ ಹಿಂದಿ ಮಾತಾಡುತ್ತಾಳೆ.ಮಾತಾಡುವಾಗ ಬಿಕ್ಕಳಿಸುತ್ತಾಳೆ.

4) ಎರಡು ಕಿವಿಗಳಲ್ಲಿ ಚಿನ್ನದ ರಿಂಗ್ ಮತ್ತು ಅದಕ್ಕೆ ಗುಂಡು ಇರುತ್ತದೆ.

5) ಮೂಗಿನಲ್ಲಿ ಚಿನ್ನದ ಮೂಗುತಿ ಇರುತ್ತದೆ

 

ಇತ್ತೀಚಿನ ನವೀಕರಣ​ : 14-04-2022 02:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080