ಅಭಿಪ್ರಾಯ / ಸಲಹೆಗಳು

Crime Reported in Mangalore West Traffic PS

ಪಿರ್ಯಾದಿ SOWMYA ದಾರರು ಮಂಗಳೂರಿನ ಬಿಜೈಯಲ್ಲಿರುವ ಪ್ಲಾಮಾ ಸೆಂಟರ್ ವಾಣಿಜ್ಯ ಸಂಕೀರ್ಣದಲ್ಲಿರುವ ವಿ. ಎಕ್ಸೂಕ್ಲೂಸಿವ್ ಸೆಲೂನ್ ಸೆಂಟರನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ:13-06-2022 ರಂದು ರಾತ್ರಿ ಕೆಲಸ ಮುಗಿಸಿ ಸ್ನೇಹಿತರಾದ ಕುಮಾರಿ ಪ್ರಿಯಾ, ಯಶವಂತ, ಹರೀಶ್ ರವರೊಂದಿಗೆ ಮನೆ ಕಡೆಗೆ ಹೋಗಲು ಬಾಳಿಗಾ ಸ್ಟೋರ್ ಎದುರುಗಡೆ ರಸ್ತೆಯ ಡಿವೈಡರ್ ದಾಟಿ ಕುಂಟಿಕಾನ ಕಡೆಯಿಂದ ಕೆ.ಎಸ್. ಆರ್.ಟಿ.ಸಿ ಕಡೆಗೆ ಹಾದು ಹೋಗುವ ರಸ್ತೆಯನ್ನು ಗಮನಿಸಿ ದಾಟುತ್ತಿರುವ ಸಮಯ ಸುಮಾರು 8-45 ಗಂಟೆಗೆ ಕೆಎಲ್-60-ಎಫ್-2278ನೇ ಮೋಟಾರು ಸೈಕಲ್ ಸವಾರ ಜಾಫರ್ ಎಂಬವರು ದ್ವಿ ಚಕ್ರ ವಾಹನವನ್ನು ಸಹ ಸವಾರನನ್ನು ಕುಳ್ಳಿರಿಸಿಕೊಂಡು ಕುಂಟಿಕಾನ ಕಡೆಯಿಂದ ಕೆ.ಎಸ್. ಆರ್.ಟಿ.ಸಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡ ಕಾಲಿಗೆ ಮೂಳೆ ಮುರಿತವಾಗಿದ್ದು  ಚಿಕಿತ್ಸೆಯ ಬಗ್ಗೆ ಮೊದಲಿಗೆ ಎ.ಜೆ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆಯನ್ನು ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

 

Crime Reported in Mulki PS

ದಿನಾಂಕ 13-06-2022 ರಂದು ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಮಾರುತಿ ಪಿ ರವರು ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದ ಬಗ್ಗೆ ಖಾಸಗಿ ವಾಹನದಲ್ಲಿ ಠಾಣೆಯಿಂದ 15:45 ಗಂಟೆಗೆ ಹೊರಟು ಮುಲ್ಕಿ, ಕಾರ್ನಾಡು, ದರ್ಗಾ ರೋಡ್ ಕಡೆಗಳಲ್ಲಿ ಸಂಚರಿಸುತ್ತಾ 16:00 ಗಂಟೆಗೆ ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ದರ್ಗಾರೋಡ್ ಎಂಬಲ್ಲಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಓರ್ವ ವ್ಯಕ್ತಿಯು ಹೊಗೆಬತ್ತಿಯನ್ನು ಸೇದುತ್ತಿರುವುದು ಕಂಡು ಬಂದಂತೆ ಆತನ ಹೆಸರು, ವಿಳಾಸ ಕೇಳಲಾಗಿ ನಾಗರಾಜ್, ಪ್ರಾಯ : 25 ವರ್ಷ,  ವಾಸ: ಮನೆ ನಂಬ್ರ : 19/122, ನಾಗಬನದ ಬಳಿ, ಲಿಂಗಪ್ಪಯ್ಯಕಾಡು, ಕಾರ್ನಾಡು ಗ್ರಾಮ, ಮಂಗಳೂರು ತಾಲೂಕು ಎಂಬುದಾಗಿ ತಿಳಿಸಿರುತ್ತಾನೆ. ಆರೋಪಿಯನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸುವ ಬಗ್ಗೆ ಎ.ಜೆ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದ್ದು, ನಾಗರಾಜನು ಗಾಂಜಾ ಸೇವನೆ ಮಾಡಿರುವುದಾಗಿ ಎ.ಜೆ. ಆಸ್ಪತ್ರೆಯ ವೈದ್ಯರು, ದೃಡಪತ್ರವನ್ನು ನೀಡಿದ್ದು, ಈ ದೃಡಪತ್ರವನ್ನು ಸ್ವೀಕರಿಸಿಕೊಂಡು ಆರೋಪಿಯ ವಿರುದ್ದ ಕ್ರಮಕ್ಕಾಗಿ ದೂರು ನೀಡಿರುವುದಾಗಿದೆ.

 

Crime Reported in Traffic North Police Station                               

ದಿನಾಂಕ: 14-06-2022 ರಂದು ಪಿರ್ಯಾದಿ Ramseenaದಾರರ ಗಂಡ ಮೊಹಮ್ಮದ್ ಶಹಜಹಾನ್ ರವರು ಪಿರ್ಯಾದಿದಾರರ ಅಮ್ಮನ ಮಾಲಕತ್ವದ KA-19-HJ-4845 ನಂಬ್ರದ ಮೊಟಾರ್ ಸೈಕಲ್ ನಲ್ಲಿ ಅವರ ಕಾಟಿಪಳ್ಳದ ಕುಟುಂಬದ ಮನೆಯಿಂದ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಬೆಳಗಿನ ಜಾವ ಸುಮಾರು 03:00 ಗಂಟೆಗೆ ಕಾಟಿಪಳ್ಳ  2ನೇ ಬ್ಲಾಕ್ ಬಳಿ ಬರುತ್ತಾ ಮೊಟಾರ್ ಸೈಕಲ್ ನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಮೋಟಾರ್ ಸೈಕಲ್ ಸ್ಕಿಡ್ ಆಗಿ ರಸ್ತೆಗೆ ಬಿದ್ದು ರಸ್ತೆಯಲ್ಲಿ ಜಾರಿಕೊಂಡು ಹೋಗಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಅವರ ತಲೆ ತಾಗಿದ್ದು ಇದರ ಪರಿಣಾಮ ತಲೆಗೆ, ಎಡ ಕಿವಿಯ ಬಳಿ, ತುಟಿಗೆ, ಮುಖಕ್ಕೆ ಗುದ್ದಿದ ರೀತಿಯ ಗಾಯ ಹಾಗೂ ಎರಡೂ ಕೈಗಳಿಗೆ ಮತ್ತು ಬೆನ್ನಿಗೆ ಅಲ್ಲಲ್ಲಿ ತರಚಿದ ರೀತಿಯ ರಕ್ತಗಾಯವಾಗಿದ್ದು ತಲೆಗೆ  ಗಂಬೀರ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳ ರೊಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

                                                       

ಇತ್ತೀಚಿನ ನವೀಕರಣ​ : 14-06-2022 05:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080