ಅಭಿಪ್ರಾಯ / ಸಲಹೆಗಳು

Crime Reported in: Traffic South Police Station        

ದಿನಾಂಕ  14-07-2022 ರಂದು    ಪಿರ್ಯಾದಿ Mohammed Rafiq   ಸ್ಕೂಟರ್  ನಂಬರ್  KA-19-EY-3541  ನೇದರಲ್ಲಿ   ಸವಾರರಾಗಿ ಮತ್ತು   ಅವರ   ಹೆಂಡತಿಯಾದ   ಸಮೀಮರವರನ್ನು  ಸಹ ಸವಾರಳನ್ನನ್ನಾಗಿ   ಕುಳ್ಳಿರಿಸಿಕೊಂಡು  ಹೂ ಹಾಕುವಕಲ್ಲು ಸರ್ಕಾರಿ ಶಾಲೆಯ  ಕಡೆಗೆ   ಹೋಗುತ್ತಿರುವ  ಸಮಯ  ಸುಮಾರು   ಬೆಳಿಗ್ಗೆ   09:45 ಗಂಟೆಗೆ   ಹೂಹಾಕುವ  ಕಲ್ಲು   ಶಾಲೆ   ಎದುರು   ತಲುಪುತ್ತಿದ್ದಂತೆ  ಅವರ   ಹಿಂದಿನಿಂದ   ಟಿಪ್ಪರ್  ಲಾರಿ ನಂಬ್ರ    KA-19-A-2691   ನೇದನ್ನು   ಅದರ  ಚಾಲಕ ಉಮೇಶ್ ಎಂಬಾತನು  ದುಡುಕುತನ ಹಾಗೂ  ನಿರ್ಲಕ್ಷ್ಯತನದಿಂದ   ಚಲಾಯಿಸಿಕೊಂಡು  ಹೋಗಿ ಪಿರ್ಯಾದಿದಾರರು   ಸವಾರಿ ಮಾಡುತ್ತಿದ್ದ  ಸ್ಕೂಟರಿನ  ಹಿಂಭಾಗಕ್ಕೆ   ಡಿಕ್ಕಿ ಹೊಡೆದ   ಪರಿಣಾದ ಪಿರ್ಯಾದಿದಾರರು  ಮತ್ತು  ಅವರ  ಹೆಂಡತಿ ಸ್ಕೂಟರ್   ಸಮೇತ   ಡಾಮಾರು ರಸ್ತೆಗೆ   ಬಿದ್ದರು. ಈ   ಅಪಘಾತದಿಂದ  ಪಿರ್ಯಾದಿದಾರರ  ತಲೆಯ  ಹಿಂಭಾಗಕ್ಕೆ  ಗುದ್ದಿದ   ರಕ್ತ ಗಾಯ  ಮತ್ತು   ಎಡ ಮೊಣಕೈ , ಎಡ   ಭುಜಕ್ಕೆ   ಗುದ್ದಿದ   ರಕ್ತಗಾಯವಾಗಿರುತ್ತದೆ.ಮತ್ತು  ಸಹ ಸವಾರಳಾದ  ಸಮೀಮ ರವರಿಗೆ  ತಲೆಯ ಹಿಂಬದಿಗೆ  ಗುದ್ದಿದ  ರೀತಿಯ  ಗಂಭೀರ ಸ್ವರೂಪದ  ಗಾಯ  ಹಾಗೂ  ಎಡ ಮೊಣಕೈಗೆ   ಮೂಳೆ ಮುರಿತದ  ಗಾಯ  ಎರಡು ಕಾಲುಗಳಿಗೆ ತರಚಿದ ರಕ್ತಗಾಯವಾಗಿದ್ದು  ಅವರನ್ನು ಚಿಕಿತ್ಸೆ ಬಗ್ಗೆ ಅಲ್ಲಿ ಸೇರಿದ   ಸಾರ್ವಜನಿಕರು  ಮತ್ತು  ಅಪಘಾತ  ಪಡಿಸಿದ  ಲಾರಿ ಚಾಲಕನು  ವಾಹನವೊಂದರಲ್ಲಿ ಕೆ ಎಸ್  ಹೆಗ್ಡೆ  ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಅಲ್ಲಿ ಪ್ರಥಮ ಚಿಕಿತ್ಸೆ  ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ  ದೆರಳಕಟ್ಟೆ  ಯೆನಪೋಯ ಆಸ್ಪತ್ರೆಗೆ  ಹೋಗಿ  ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

2) ಪಿರ್ಯಾದಿ NITHESH GOWDA  ದಿನಾಂಕ:13-07-2022 ರಂದು ಅವರ ಬಾಬ್ತು ಮೋಟರ್ ಸೈಕಲ್ ನಂಬ್ರ KA-19-HD-4006 ನೇದರಲ್ಲಿ ವಿಟ್ಲ ಕಡೆಯಿಂದ ಮಂಗಳೂರು ಕಡೆಗೆ ಸವಾರಿಮಾಡಿಕೊಂಡು ಬರುತ್ತಾ ರಾ.ಹೆ-73 ರ ರಸ್ತೆಯಲ್ಲಿ ವಳಚ್ಚಿಲ್ ಬಳಿ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಪಿರ್ಯಾದಿದಾರರ ಹಿಂದಿನಿಂದ ಬರುತ್ತಿದ್ದ KA-19-EM-2329 ನೇ ನಂಬ್ರದ ಸ್ಕೂಟರ್ ಸವಾರ ಅಬೂಬ್ಕರ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿಮಾಡಿಕೊಂಡು ಬಂದು ಮಧ್ಯಾಹ್ನ ಸಮಯ ಸುಮಾರು 02:30 ಗಂಟೆಗೆ ಪಿರ್ಯಾದಿದಾರರು ಸವಾರಿ ಮಾಡಿತ್ತಿದ್ದ ಮೋಟರ್ ಸೈಕಲನ್ನು ಅವರ ಹಿಂಬದಿಯಿಂದ ಬರುತ್ತಿದ್ದ ಸ್ಕೂಟರ್ ಸವಾರ ಪಿರ್ಯಾದಿದಾರರ ಎಡಬದಿಯಿಂದ ಓವರ್ ಟೇಕ್ ಮಾಡುತ್ತಾ ರಸ್ತೆಯ ತೆರೆದ ಡಿವೈಡರ್ ನಲ್ಲಿ ಒಮ್ಮೆಲೆ ಬಲ ಬದಿ ತಿರುಗಿಸಿದ ಪರಿಣಾಮ ಸ್ಕೂಟರ್ ನ ಬಲ ಭಾಗವು ಪಿರ್ಯಾದಿದಾರರ ಮೋಟರ್ ಸೈಕಲ್ ನ ಮುಂಭಾಗಕ್ಕೆ ಡಿಕ್ಕಿಯಾಗಿ ಸ್ಕೂಟರ್ ಸವಾರ ಹಾಗೂ ಪಿರ್ಯಾದಿದಾರರು ಮೋಟರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಎಡಗೈ ಬೆರಳುಗಳಿಗೆ ಮೂಳೆ ಮುರಿತದ ಗಾಯ ಹಾಗೂ ಎಡ ಭುಜಕ್ಕೆ ಗುದ್ದಿದ ರೀತಿಯ ಮೂಳೆ ಮುರಿತದ ಗಾಯ ಮತ್ತು ಕೈ ಕಾಲು ಬೆನ್ನಿಗೆ ತರಚಿದ ಗಾಯವಾಗಿದ್ದು ಅಲ್ಲಿ ಸೇರಿದ್ದ ಸಾರ್ವಜನಿಕರು ಚಿಕಿತ್ಸೆ ಬಗ್ಗೆ ಎ ಜೆ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಪರೀಕ್ಷಿಸಿದ ವೈಧ್ಯಾಧಿಕಾರಿಗಳು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ, ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 14-07-2022 07:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080