ಅಭಿಪ್ರಾಯ / ಸಲಹೆಗಳು

Crime Reported in Moodabidre PS

ದಿನಾಂಕ: 12-09-2021 ರಂದು 19:45 ಗಂಟೆಗೆ  ಪಿರ್ಯಾದಿ Rathish Kumar ದಾರರು ತನ್ನ ಮೋಟಾರು ಸ್ಕೂಟರ್ ನಂಬ್ರ: ಕೆಎ-19-ಈಯು-1617 ನೇ ಸ್ಕೂಟರ್ ನಲ್ಲಿ ಬಂದು ಮೂಡಬಿದರೆಯ ಅಮರಶ್ರೀ ಟಾಕೀಸಿನ ಬಳಿಯಿರುವ ನಮ್ಮ ಕುಡ್ಲ ಕೇಬಲ್ ಕಚೇರಿಯ ಬಳಿ ನಿಲ್ಲಿಸಿ  ಸ್ಕೂಟರ್ ನ ಕೀಯನ್ನು ಅದರಲ್ಲಿಯೇ  ಬಿಟ್ಟು ಕಚೇರಿಗೆ ಹೋಗಿ ಕೆಲಸ ಮುಗಿಸಿ ವಾಪಾಸು 10 ನಿಮಿಷ ಬಿಟ್ಟು ಪಿರ್ಯಾದಿದಾರರು ತನ್ನ ಸ್ಕೂಟರ್ ನ ಬಳಿಗೆ ಬಂದು ನೋಡಿದಾಗ ಪಿರ್ಯಾದಿದಾರರ ಸ್ಕೂಟರ್ ನಿಲ್ಲಿಸಿದ ಜಾಗದಲ್ಲಿ ಕಂಡು ಬಾರದೇ ಇದ್ದುದರಿಂದ ಪಿರ್ಯಾದಿದಾರರು ಅಕ್ಕಪಕ್ಕದಲ್ಲಿ ಹುಡುಕಾಡಿ ನೋಡಿದಾಗ ಎಲ್ಲಿಯೂ ಸಿಕ್ಕಿರುವುದಿಲ್ಲ. ಪಿರ್ಯಾದಿದಾರರ ಸ್ಕೂಟರನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ. ಕಳುವಾದ ಸ್ಕೂಟರ್ ನ ಅಂದಾಜು ಮೌಲ್ಯ  ಸುಮಾರು  30,000/-  ಆಗಬಹುದು.

 

2) ದಿನಾಂಕ: 13-09-2021 ರಂದು ಪ್ರಕರಣದ ಪಿರ್ಯಾದಿWHC Saraswathi ದಾರರು ಸಿಬ್ಬಂದಿಯವರೊಂದಿಗೆ ಹೊಯ್ಸಳ 2 ನೇ ಕರ್ತವ್ಯದಲ್ಲಿರುವಾಗ ಸಂಜೆ ಸುಮಾರು 16:30 ಗಂಟೆಗೆ ನಿಸ್ತಂತು ಕೊಠಡಿಯಿಂದ ಬಂದ ಮಾಹಿತಿ ಆಧಾರದಂತೆ ನಿಸ್ತಂತು ಕೊಠಡಿಯಿಂದ ತಿಳಿಸಿದ ಸ್ಥಳವಾದ ಮೂಡಬಿದರೆ ತಾಲೂಕು ಬೆಳುವಾಯಿ ಗ್ರಾಮದ ಕಾಂತವಾರ ಕ್ರಾಸ್ ಕುಕ್ಕುಡೇಲು ಎಂಬಲ್ಲಿಗೆ ತೆರಳಿದಾಗ ಕುಕ್ಕುಡೇಲ್ ನ ಪೊದೆಗಳ ನಡುವಿನ ಬಯಲು ಪ್ರದೇಶದಲ್ಲಿ ಆರೋಪಿಗಳಾದ 1. ಆನಂದ ಪೂಜಾರಿ, 2. ಪ್ರಭಾಕರ ಶೆಟ್ಟಿ, 3. ಅಪಕ್, 4. ಸುರೇಶ್ ಪೂಜಾರಿ, 5. ಬೊಗ್ಗು ಪೂಜಾರಿ ಎಂಬವರುಗಳು ಸುಮಾರು 25 ರಿಂದ 30 ಜನರನ್ನು ಬೊಗ್ಗು ನಾಯ್ಕ್ ಎಂಬವರಿಗೆ ಸೇರಿದ ಬಯಲು ಪ್ರದೇಶದಲ್ಲಿ ಕೋವಿಡ್ 19 ನಿಯಾಮಾಳಿಯನ್ನು ಉಲ್ಲಂಘಿಸಿ ದಿನಾಂಕ: 13-09-2021 ರಂದು 13:00 ಗಂಟೆಯಿಂದ 17:00 ಗಂಟೆಯ ಮದ್ಯಾವದಿಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಸೇರಿಸಿ ಕೋಳಿ ಅಂಕ ನಡೆಸಿತ್ತಿದ್ದು , ಇತ್ತೀಚಿಗೆ ಕೋವಿಡ್-19 ಕೊರೋನಾ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ವೇಗವಾಗಿ ಹರಡುತ್ತಿದ್ದು ಇದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರವು ಸಾಮಾಜಿಕ ಅಂತರವನ್ನು ಪಾಲನೆ ಮಾಡುವಂತೆಯೂ ಮುಖಕ್ಕೆ ಮಾಸ್ಕ್ ಹಾಗೂ, ಕೈಗಳಿಗೆ ಸ್ಯಾನಿಟೇಸರ್ ಮಾಡುವಂತೆ ಆದೇಶವನ್ನು ಮಾಡಿದರೂ ಸಹ ಸರ್ಕಾರದ ಆದೇಶವನ್ನು ಉಲ್ಲಂಗಿಸಿ ಮಾನವ ಪ್ರಾಣಕ್ಕೆ ಅಪಾಯಕಾರಿಯಾದ ರೋಗವು ಹರಡುವ ಸಂಭವ ಇದೆ ಎಂದು ತಿಳಿದು ಕೂಡಾ ನಿರ್ಲಕ್ಷತನ ವಹಿಸಿ ಈ ಮೇಲಿನ ವ್ಯಕ್ತಿಗಳು ಹಾಗೂ ಪರಾರಿಯಾದ ವ್ಯಕ್ತಿಗಳೊಂದಿಗೆ ಸೇರಿ  ಗುಂಪು ಗುಂಪಾಗಿ ಸೇರಿ ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟು, ಸಾರ್ವಜನಿಕ ಸ್ಥಳದಲ್ಲಿ ಕೋಳಿಗಳ ಕಾಲಿಗೆ ಹರಿತವಾದ ಬಾಳನ್ನು ಕಟ್ಟಿ ಕೋಳಿ ಅಂಕವನ್ನು ನಡೆಸಿರುವುದಾಗಿ ಪಿರ್ಯಾದಿ ಸಾರಾಂಶವಾಗಿರುತ್ತದೆ

ಇತ್ತೀಚಿನ ನವೀಕರಣ​ : 14-09-2021 06:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080