ಅಭಿಪ್ರಾಯ / ಸಲಹೆಗಳು

Crime Reported in CEN Crime PS

ಪಿರ್ಯಾದಿದಾರರು  ಬ್ಯಾಂಕ್ ಆಫ್ ಬರೋಡಾ ಕೊಣಾಜೆ ಬ್ರಾಂಚಿನಲ್ಲಿ ಖಾತೆ ಯನ್ನು ಹೊಂದಿರುವುದಾಗಿದೆ. ದಿನಾಂಕ 02-07-2021 ರಂದು ಬೆಳಿಗ್ಗೆ 10.00 ಗಂಟೆ ಸಮಯಕ್ಕೆ ಪಿರ್ಯಾದಿದಾರರಿಗೆ  9432961373ನೇ ನಂಬ್ರದ ಮೊಬೈಲ್ ನಂಬ್ರದಿಂದ ಯಾವುದೋ ವ್ಯಕ್ತಿ ಕರೆ ಮಾಡಿ  ನಿಮಗೆ  12,50,000/-  ಲಕ್ಕಿ ಬಹುಮಾನ ಸಿಕ್ಕಿದೆ ಅದನ್ನು ಪಡೆಯಬೇಕಾದರೆ ನೀವು 01% ಹಣ ನೀಡಬೇಕೆಂದು ತಿಳಿಸಿದರು ಅದರಂತೆ ಪಿರ್ಯಾದಿದಾರರು 12500/- ರೂ ವನ್ನು ಅವರ ಗೂಗಲ್ ಪೇ ನಂಬ್ರ 8017976436ನೇ ದಕ್ಕೆ ಕಳುಹಿಸಿರುತ್ತಾರೆ.  ಮತ್ತೆ ದಿನಾಂಕ 16-07-2021 ರಂದು ಸದ್ರಿ ವ್ಯಕ್ತಿಯು  ಕರೆ ಮಾಡಿ ನೀವು 3%  ಹಣ ನೀಡಿದರೆ ನಾವು ನಿಮಗೆ ಬಹುಮಾನದ ಹಣ ನೀಡುವುದಾಗಿ ತಿಳಿಸಿದ್ದು ಪಿರ್ಯಾದಿದಾರರು ಪುನಃ ಆ ವ್ಯಕ್ತಿಯ ಗೂಗಲ್ ಪೇ ನಂಬ್ರ 9477219953ನೇ ದಕ್ಕೆ ರೂ.37,500/- ಹಣ ಕಳುಹಿಸಿದ್ದು ನಂತರ ಸದ್ರಿ ವ್ಯಕ್ತಿ ಹಾಗೂ ಇತರ ವ್ಯಕ್ತಿಗಳು ಪಿರ್ಯಾದಿದಾರರಿಗೆ  ಪದೇ ಪದೇ ಬೇರೆ ಬೇರೆ ನಂಬ್ರದಿಂದ ಕರೆ ಮಾಡಿ ಪಿರ್ಯಾದಿದಾರರ ಖಾತೆಯಿಂದ ಹಂತ ಹಂತವಾಗಿ ಒಟ್ಟು ರೂ.2,19,800/- ಹಣವನ್ನು ತನ್ನ ಖಾತೆಗೆ . ವರ್ಗಾಯಿಸಿಕೊಂಡಿದ್ದು ಸದ್ರಿ ವ್ಯಕ್ತಿಗಳ ಮೇಲೆ  ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ

Crime Reported in Moodabidre PS

ಪಿರ್ಯಾದಿ Meriyan Dsouza ದಾರರು ಕಾರ್ಕಳ ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾರಾಗಿದ್ದು ಅವರ ಸಂಸ್ಥೆಗೆ ಸಂಬಂಧಪಟ್ಟ ಶಾಲಾ ಮಕ್ಕಳನ್ನು ಕರೆದೊಯ್ಯುವ ಕೆಎ-52- 9275 ನೇ ಬಸ್ಸನ್ನು ಅದರ ಚಾಲಕರಾದ ಸುಧಾಕರ ದೇವಾಡಿಗರವರು ಮಕ್ಕಳನ್ನು ಅವರವರ ಮನೆಗೆ ಬಿಟ್ಟು ದಿನಾಂಕ: 11-12-2021 ರಂದು ಸಂಜೆ ಸುಮಾರು 3.30 ಗಂಟೆಗೆ ಬೆಳುವಾಯಿ ಗ್ರಾಮದ ಬೆಳುವಾಯಿ ಚರ್ಚ್ ಕಂಪೌಂಡ್ ನ ಹೊರಗೆ ನಿಲ್ಲಿಸಿದ್ದು,  ದಿನಾಂಕ: 13-12-2021 ರಂದು ಬೆಳಗ್ಗೆ 7.30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಬಸ್ಸಿನಿಂದ ಸುಮಾರು 120 ಲೀಟರ್ ನಷ್ಟು ಡೀಸಲ್ ನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತಿನ ಒಟ್ಟು ಮೌಲ್ಯ 10136/- ರೂಪಾಯಿ ಆಗಬಹುದು ಎಂಬಿತ್ಯಾದಿಯಾಗಿದೆ.

2) ಪಿರ್ಯಾದಿ Manjula ದಾರರ ಅಣ್ಣ ಪ್ರವೀಣ್ ನಾಯ್ಕ್ ಎಂಬುವರು ದಿನಾಂಕ: 11-12-2021 ರಂದು ತನ್ನ ಬಾಬ್ತು ಕೆಎ-19-ಇವಿ-9848 ಸ್ಕೂಟರ್ ನು ಮುಲ್ಕಿ ಕಡೆಯಿಂದ ಮೂಡಬಿದ್ರೆ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಸಂಜೆ ಸುಮಾರು 7.00 ಗಂಟೆಯ ಸಮಯಕ್ಕೆ ಕಲ್ಲಮುಂಡ್ಕೂರು ಗ್ರಾಮದ ಕಲ್ಲಮುಂಡ್ಕೂರು ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಅವರ ಎದುರಿನಿಂದ ಅಂದರೆ ಮೂಡಬಿದ್ರೆ ಕಡೆಯಿಂದ ಕೆಎ-19-ಎಮ್‌ಕೆ- 9980 ನೇ ಕಾರಿನ ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಅಣ್ಣನಾದ ಪ್ರವೀಣ್ ನಾಯ್ಕ್ ರವರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪ್ರವೀಣ್ ನಾಯ್ಕ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದಿದ್ದು, ಇದರಿಂದ ಪ್ರವೀಣ್ ನಾಯ್ಕ್ ರವರಿಗೆ ಬಲಗೈ ಭುಜ, ಬಲಗೈ ಕೈಗಂಟು, ಬಲಕಾಲಿನ ಪಾದಕ್ಕೆ, ಬಲಕಾಲಿನ ಮೊಣಗಂಟಿಗೆ ಗುದ್ದಿದ ನಮೂನೆಯ ಗಾಯಗಳಾಗಿದ್ದು ಇವರನ್ನು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕಾರ್ಕಳದ ಸ್ಪಂದನ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

 

Crime Reported in Mangalore Rural PS

 ಪಿರ್ಯಾದಿ Mohammed Sharookದಾರರ ತಂಗಿಯಾದ 25 ವರ್ಷ ಪ್ರಾಯದ ಶಾಹಿನಾ ಎಂಬಾಕೆ ದಿನಾಂಕ 13/12/2021 ರಂದು ಬೆಳಿಗ್ಗೆ 10-30 ಗಂಟೆಗೆ ತನ್ನ ತಾಯಿಯಲ್ಲಿ ಮಂಗಳಜ್ಯೋತಿ ಎಸ್.ಡಿ.ಎಮ್ ಐ.ಟಿ.ಐ ಯಿಂದ ಹೊಲಿಗೆ ತರಭೇತಿಯ ಸರ್ಟಿಫಿಕೆಟ್ ತರುತ್ತೇನೆಂದು ಹೋದಾಕೆ ಬಳಿಕ ಮನೆಗೆ ಬಾರದೆ ಸಂಬಂಧಿಕರ ಮನೆಗೆ ಹೋಗದೆ ಹುಡುಕಾಡಿದರೂ ಪತ್ತೆಯಾಗದಿರುವುದರಿಂದ ಪತ್ತೆಗಾಗಿ ನೀಡಿದ ಪಿರ್ಯಾದಿಯಾಗಿರುತ್ತದೆ.

ಕಾಣೆಯಾದವರ ಚಹರೆ ವಿವರ

ಹೆಸರು: ಶಾಹಿನಾ

ವಯಸ್ಸು-25 ವರ್ಷ

ಎತ್ತರ: 5.4 ಅಡಿ,

ಬಿಳಿ ಮೈಬಣ್ಣ, ದುಂಡು ಮುಖ,

ಮಾತನಾಡುವ ಭಾಷೆ: ತುಳು, ಕನ್ನಡ, ಬ್ಯಾರಿ

ವಿದ್ಯಾಭ್ಯಾಸ: 8 ನೆ ತರಗತಿ

ಧರಿಸಿದ್ದ ಬಟ್ಟೆ : ಕೆಂಪು ಬಣ್ಣದ ಸಲ್ವಾರ್, ಟಾಪ್ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮೆರೂನ್ ಬಣ್ಣದ ಸ್ಕಾರ್ಪ್ ಇವುಗಳ ಮೇಲೆ ಕಪ್ಪು ಬುರ್ಖಾ ಹಾಗೆಯೆ ಕಾಲಿನಲ್ಲಿ ಕಪ್ಪು ಬಣ್ಣದ ಕ್ಯಾನ್ ವಾಸ್ ಶೂ ಧರಿಸಿರುತ್ತಾಳೆ

Crime Reported in Kankanady Town PS

ಪಿರ್ಯಾದಿದಾರರಾದ ಪೊಲೀಸ್ ಉಪನಿರೀಕ್ಷಕ ಕೃಷ್ಣ .ಬಿ    ರವರು ದಿನಾಂಕ 13-12-2021 ರಂದು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ಸುಮಾರು  18:00  ಗಂಟೆಗೆ ಯುವಕನೊಬ್ಬ ಯಾವುದೂ ಅಮಲು ಪದಾರ್ಥ ಸೇವಿಸುತ್ತಿದ್ದಾನೆ ಎಂಬುದಾಗಿ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿಯಂತೆ ಸಾರ್ವಜನಿಕ ಸ್ಥಳವಾದ ಕಣ್ಣೂರು ಬಸ್ಸ್ ನಿಲ್ದಾಣದ ಬಳಿ ಬಂದಾಗ ಯುವಕನೊಬ್ಬನು  ನಿಂತು ಸಿಗರೇಟು ಸೇದುತ್ತಿದ್ದು, ಸದ್ರಿ ಯುವಕನನ್ನು ಹತ್ತಿರ ಕರೆದು ವಿಚಾರಿಸಿದಲ್ಲಿ ಅವನು  ತನ್ನ ಹೆಸರು    ಶಂಶುದ್ದೀನ್ ಪ್ರಾಯ:30 ವರ್ಷ ವಾಸ : ಬಡೀಲ ಮನೆ ಕಣ್ಣೂರು ಚಕ್ಕ್ ಪೋಸ್ಟ್ ಬಳಿ ಕಣ್ಣೂರು ಎಂಬುದಾಗಿ ತಿಳಿಸಿದನು. ಅಲ್ಲದೇ ಅವನು ಮಾತನಾಡುವಾಗ ಮಾತು ತೊದಲುತ್ತಿದ್ದು, ಬಾಯಿಯಿಂದ ಯಾವುದೂ ಅಮಲು ಪದಾರ್ಥ ಸೇವನೆ ಮಾಡಿರುವ ವಾಸನೆ ಬರುತ್ತಿದ್ದುದರಿಂದ ಅವನನ್ನು ವಿಚಾರಣೆ ನಡೆಸಿದಾಗ ಆತನು ಎಂ.ಡಿ.ಎಂ ಸೇವಿಸಿರುವುದನ್ನು ಒಪ್ಪಿಕೊಂಡಿರುತ್ತಾನೆ. ಆದರೂ ಅವನು ಎಂ.ಡಿ.ಎಂ ಸೇವಿಸಿದ್ದು ದೃಡೀಕರಿಸುವರೇ ಖಚಿತಪಡಿಸಿಕೊಳ್ಳುವ ಸಲುವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಲ್ಲಿ ವೈದ್ಯರು ಎಂ.ಡಿ.ಎಂ ಸೇವನೆ ಮಾಡಿರುವುದಾಗಿ ಧೃಢಿಕರಣ ಪತ್ರವನ್ನು ನೀಡಿರುವುದರಿಂದ ಆತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Crime Reported in Ullal PS

ದಿನಾಂಕ 13/12/2021 ರಂದು ಪಿ.ಎಸ್.ಐ ರೇವಣಸಿದ್ದಪ್ಪ ರವರು ಸಿಬ್ಬಂದಿಗಳೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಕೋಟೆಕಾರು ಗ್ರಾಮದ ದೇರಳಕಟ್ಟೆ ಯೇನಪೋಯ ಆಸ್ಪತ್ರೆಗೆ ಸಂಬಂದಪಟ್ಟ ಗಾರ್ಡೇನಿಯ ಲೆಡೀಸ್ ಹಾಸ್ಟೆಲ್‌ ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿ ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ತಂದಿರಿಸಿದ್ದ ಮಾದಕ ವಸ್ತು ಗಾಂಜಾವನ್ನು ಗಿರಾಕಿಗಳಿಗೆ ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ ಪಿ.ಎಸ್‌.ಐ ರವರು ಸಿಬ್ಬಂದಿಯವರೊಂದಿಗೆ ಬೆಳಗ್ಗೆ 11-30 ಗಂಟೆಗೆ ಸ್ಥಳಕ್ಕೆ ದಾವಿಸಿದಾಗ ಆರೋಪಿಗಳು KL-60 D-1645 ನೇ ದ್ವಿಚಕ್ರ ವಾಹನದಲ್ಲಿ ಕುಳಿತುಕೊಂಡಿದ್ದು ಪಿ.ಎಸ್‌.ಐ ಮತ್ತು ಸಿಬ್ಬಂದಿಗಳನ್ನು ನೋಡಿದ ಸದ್ರಿ ವ್ಯಕ್ತಿಗಳು ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವರನ್ನು ವಶಕ್ಕೆ ಪಡೆದು ಹೆಸರು ವಿಳಾಸ ವಿಚಾರಿಸಿದಾಗ ತಮ್ಮ ಹೆಸರು ಆದರ್ಶ್‌ ಜೋತಿ (22 ವರ್ಷ) ವಾಸ : ಅಂಜನಮ್, ಮುಲ್ಲಶ್ಯೇರಿ, ಮುಲ್ಲಶ್ಯೇರಿ ಗ್ರಾಮ, ತ್ರಿಶೂರು ಜಿಲ್ಲೆ, ಕೇರಳ ರಾಜ್ಯ. ಜೋಯಲ್ ಜೊಸ್ (22 ವರ್ಷ) ವಾಸ: ಕುಟ್ಟಿಲೆಟ್ಟು, ಕಲತ್ತೊರು, ಕಾನಕಾರಿ ಗ್ರಾಮ, ಕೊಟ್ಟಾಯಂ ಜಿಲ್ಲೆ, ಕೇರಳ ರಾಜ್ಯ. ಎಂದು ತಿಳಿಸಿದ್ದು, ಸದ್ರಿಯವರು ತಮ್ಮ ದ್ವಿಚಕ್ರವಾಹನದ ಸೀಟಿನ ಅಡಿಭಾಗದಲ್ಲಿ (ಡಿಕ್ಕಿಯಲ್ಲಿ) ಗಿರಾಕಿಗಳಿಗೆ ಹಣಕ್ಕಾಗಿ ಮಾರಾಟಮಾಡುವ ಉದ್ದೇಶಕ್ಕಾಗಿ ಸುಮಾರು 200 ಗ್ರಾಂನಷ್ಟು ತೂಕವಿರುವ ಮಾದಕ ವಸ್ತು ಗಾಂಜಾವನ್ನು ಪ್ಲಾಸ್ಟಿಕ್‌ ಕೈ ಚೀಲದಲ್ಲಿ ತುಂಬಿಸಿ ಅದನ್ನು ಕಪ್ಪು ಬಣ್ಣದ ಏರ್‌ ಬ್ಯಾಗ್‌ನಲ್ಲಿಟ್ಟಿದ್ದು ಮತ್ತು ಗಾಂಜಾವನ್ನು ತೂಕಮಾಡಲು ಉಪಯೋಗಿಸಲು ಇರಿಸಿದ್ದ ಎಲೆಕ್ಟ್ರಾನಿಕ್‌ ತೂಕ ಮಾಪನ ಇರುವುದನ್ನು ಖಚಿತ ಪಡಿಸಿಕೊಂಡಿದ್ದು ಅಲ್ಲದೇ ಇವರ ವಶದಲ್ಲಿದ್ದ ಎರಡು ಮೊಬೈಲ್ ಫೋನ್‌ಗಳನ್ನು ಮತ್ತು ದ್ಚಿ ಚಕ್ರ ವಾಹನವನ್ನು ವಶಕ್ಕೆ ತೆಗೆದು ಸದ್ರಿಯವರ ವಿರುದ್ದ ಸೂಕ್ತ ಕ್ರಮಕ್ಕಾಗಿ ಪಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ ಎಂಬಿತ್ಯಾದಿ.

 

 

ಇತ್ತೀಚಿನ ನವೀಕರಣ​ : 14-12-2021 07:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080