ಅಭಿಪ್ರಾಯ / ಸಲಹೆಗಳು

Crime Reported in : Mangalore Rural PS     

ದಿನಾಂಕ 14-02-2022 ರಂದು ಪಿರ್ಯಾದಿ VINAYAKA BHAVIKATTE ದಾರರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ರಾತ್ರಿ ಸಮಯ 21.30 ಗಂಟೆಗೆ ಮಂಗಳೂರು ತಾಲೂಕು ನೀರುಮಾರ್ಗ ಬಸ್ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದ ಬಳಿ ಮಾದಕ ವಸ್ತುವಾದ ಗಾಂಜ ಸೇವನೆ ಮಾಡುತ್ತಿದ್ದ ಅ ಇಮ್ರಾನ್ (27) ವಾಸ: ವಳಬೈಲು ಹೌಸ್, ನೀರುಮಾರ್ಗ ಮಂಗಳೂರು ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿದೆ.

 

Crime Reported in Konaje PS

ಪಿರ್ಯಾದಿ Mallikarjun Biradar ದಾರರು ದಿನಾಂಕಃ 15.02.2022 ರಂದು ಬೆಳಿಗ್ಗೆ 09.00 ಗಂಟೆಗೆ ಠಾಣೆಯಲ್ಲಿರುವ ಸಮಯ ಬಾತ್ಮೀದಾರರಿಂದ ಮಂಜನಾಡಿ ಗ್ರಾಮದ ನಾಟೇಕಲ್ ವಿಜಯನಗರ ಕ್ರಾಸ್ ಬಳಿ ಮೂರು ಜನ ವ್ಯಕ್ತಿಗಳು ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ದೊರೆತ ಮೇರೆಗೆ ಪಿರ್ಯಾದಿದಾರರು ಸಿಬ್ಬಂದಿಗಳೊಂದಿಗೆ  ತಕ್ಷೀರು ಸ್ಥಳಕ್ಕೆ ತೆರಳಿ ದಾಳಿ ಮಾಡಿ, ಆರೋಪಿಗಳಾದ ಮಹಮ್ಮದ್ ಹನೀಫ್(28), ಹಬೀಬ್ (30), ಮಹಮ್ಮದ್ ನಸೀಬ್(19) ಎಂಬವರುಗಳನ್ನು ದಸ್ತಗಿರಿ ಮಾಡಿ ಆರೋಪಿಗಳಿಂದ 1310 ಗ್ರಾಂ ಗಾಂಜಾ, ಹಾಗೂ ಕೃತ್ಯಕ್ಕೆ ಬಳಸಿದ ಕೆಎ-19-ಇವೈ-7655 ಸ್ಕೂಟರನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಸ್ವಾಧೀನಪಡಿಸಿಕೊಳ್ಳಲಾದ ಒಟ್ಟು ಸೊತ್ತುಗಳ ಮೌಲ್ಯ 38100/- ರೂ.ಗಳು ಆಗಿದ್ದು, ಆರೋಪಿಗಳು ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಸಾಗಾಟ ಮಾಡಿ ಮಾರಾಟ ಮಾಡಲು ತಂದು ಸ್ವಾಧೀನದಲ್ಲಿಟ್ಟುಕೊಂಡಿರುವುದಾಗಿದೆ ಎಂಬಿತ್ಯಾದಿ.

Crime Reported in CEN Crime PS

ಪಿರ್ಯಾದಿದಾರರು ಮಂಗಳೂರು ನಗರದ ಶಂಕರ ಬಿಲ್ಡೆಡ್ ಪ್ರಾಡಕ್ಟ್ಸ್ ಕಂಪನಿಯಲ್ಲಿ ಮೆನೇಜರ್ ಆಗಿ ಕರ್ತವ್ಯ ನಿರ್ವಯಿಸಿಕೊಂಡಿರುತ್ತಾರೆ ಅಂತೆಯೇ ದಿನಾಂಕ 25-01-2022  ರಂದು ಯಾರೋ ಅಪರಿಚಿತ ವ್ಯಕ್ತಿ 6900789640 ಮತ್ತು 9735403133 ನೇ ದರಿಂದ ಅರ್ಜಿದಾರರ ದೂರವಾಣಿ ಗೆ ಕರೆ ಮಾಡಿ ತಾನು ಭಾರತೀಯ ಸೇನೆಯ ಸೇವಕನಾಗಿದ್ದು ನಮ್ಮ  PEACE PUBLIC SCHOOL  ಕೆಲಸಕ್ಕಾಗಿ 300 ಚೀಲ ಸಿಮೆಂಟ್ ಅಗತ್ಯವಿದೆ ಎಂದು  ತಿಳಿಸಿ ತನ್ನ ಗುರುತಿನ ಚೀಟಿ ಹಾಗೂ ಇತರ ವಿವರಗಳನ್ನು ಪಿರ್ಯಾದಿದಾರರ ವಾಟ್ಸಪ್ ನಂಬ್ರಗೆ ಕಳುಹಿಸಿರುತ್ತಾನೆ. ಇದನ್ನು ನಂಬಿದ  ಪಿರ್ಯಾದಿದಾರರು ಸದ್ರಿ ಶಾಲೆಗೆ 300 ಚೀಲ ಸಿಮೆಂಟ್ ನ್ನು ವಾಹನದಲ್ಲಿ ತುಂಬಿಸಿ ಕಳುಹಿಸಿದ್ದು, ಆದರೆ ಆ ವ್ಯಕ್ತಿಯು ಸ್ವಲ್ಪ ಸಮಯದ ನಂತರ ಪಿರ್ಯಾದಿದಾರರಿಗೆ ಕರೆ ಮಾಡಿ ಮೊದಲಿಗೆ ಅರ್ಧ ಹಣ ಪಾವತಿಸುವುದಾಗಿಯು, ನಂತರ ಪೂರ್ತಿ ಹಣ ಪಾವತಿಸುವುದಾಗಿಯು ತಿಳಿಸಿ, ಅದರಂತೆ ಪಿರ್ಯಾದಿದಾರರ ಪೋನ್ ಪೇ ನಂಬ್ರ ವನ್ನು ವಾಟ್ಸಪ್ ಮುಖಾಂತರ ಪಡೆದುಕೊಂಡು ನಂತರ.ಆ ವ್ಯಕ್ತಿಯು ತನ್ನ ಕ್ಯೂ ಆರ್ ಕೋಡನ್ನು ಸದ್ರಿ ಪೋನ್  ಪೇ ನಂಬ್ರಗೆ ಕಳುಹಿಸಿರುತ್ತಾನೆ.ಪಿರ್ಯಾದಿದಾರರು ಆತನು ತಿಳಿಸಿದಂತೆ 1 .ರೂ.ಪಾಯಿಯನ್ನು ಯುಪಿಐ ಮುಖಾಂತರ ಆ ವ್ಯಕ್ತಿಗೆ ಪಾವತಿಸಿದ್ದು ನಂತರ ಸದ್ರಿ ವ್ಯಕ್ತಿಯು 4  ಕ್ಯೂ ಆರ್ ಕೋಡನ್ನು ವಾಟ್ಸಪ್ ಮೂಖಾಂತರ ಪಿರ್ಯಾದಿದಾರರಿಗೆ ಕಳುಹಿಸಿರುತ್ತಾರೆ. ಪಿರ್ಯಾದಿದಾರರು ಸದ್ರಿ ಕ್ಯೂ ಆರ್ ಕೋಡ್ ಗಳನ್ನು ಸ್ಕ್ಯಾನ್ ಮಾಡಿದ ಕೂಡಲೇ ಪಿರ್ಯಾದಿದಾರರ ಐ ಡಿ ಎಫ್ ಸಿ ಬ್ಯಾಂಕ್ ಖಾತೆ ಯಿಂದ ಹಂತ ಹಂತವಾಗಿ 96,996/- ರೂಪಾಯಿಗಳನ್ನು ಕರೆ ಮಾಡಿದ ಅಪರಿಚಿತ ವ್ಯಕ್ತಿಯು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚನೆ ಮಾಡಿರುತ್ತಾನೆ. ಎಂಬಿತ್ಯಾದಿ

Crime Reported in Kankanady Town PS              

ಪಿರ್ಯಾದು smt.Veena ರವರು ತಮ್ಮ ತಂದೆ, ತಾಯಿ ಮತ್ತು ಮಕ್ಕಳೂಂದಿಗೆ ಬಜಾಲ್ ಕಟ್ಟೆ ಎಂಬಲ್ಲಿ ವಾಸವಾಗಿದ್ದು, ಟೈಲರಿಂಗ್ ಕೆಲಸವನ್ನು ಮಾಡಿಕೊಂಡಿರುವುದಾಗಿದೆ. ಪಿರ್ಯಾದುದಾರರಿಗೆ 1999 ನೇ ಇಸ್ವಿಯಲ್ಲಿ ಮಂಗಳೂರು ನಗರದ ಕುಳಾಯಿ ಎಂಬಲ್ಲಿನ ಹರೀಶ್ (52) ಎಂಬುಬರೊಂದಿಗೆ ವಿವಾಹವಾಗಿದ್ದು, ಪಿರ್ಯಾದುದಾರರು ಗಂಡನ ಜೊತೆ ಕುಳಾಯಿ ಎಂಬಲ್ಲಿ ವಾಸವಿರುವುದಾಗಿದೆ. ನಂತರ ಪಿರ್ಯಾದುದಾರರ ಗಂಡ ಸರಿಯಾಗಿ ಕೆಲಸಕ್ಕೆ ಹೋಗದೆ ಕ್ರಿಕೆಟ್ ಬೆಟ್ಟಿಂಗ್ ನಂತಹ ಹಲವಾರು ಕೆಟ್ಟ ಚಟಕ್ಕೆ ಬಿದ್ದು ಪಿರ್ಯಾದುದಾರರಿಗೆ ತೊಂದರೆ ನೀಡುತ್ತಿರುವುದರಿಂದ ಪಿರ್ಯಾದುದಾರರು ಗಂಡನ ಹಿಂಸೆ ತಾಳಲಾರದೆ ತಮ್ಮ ಮಕ್ಕಳೊಡನೆ ತಮ್ಮ ತವರು ಮನೆಯಾದ ಬಜಾಲ್ ಎಂಬಲ್ಲಿಗೆ ಬಂದು ತಮ್ಮ ತಂದೆ-ತಾಯಿಯೊಂದಿಗೆ ಇರುವುದಾಗಿದೆ. ಸದ್ರಿ ಪಿರ್ಯಾದುದಾರರ ತವರು ಮನೆಗೂ ಹರೀಶ್ ರವರು ಆಗಾಗ ಬಂದು ಹೋಗುತ್ತಿರುವುದಾಗಿದೆ. ದಿನಾಂಕ 12-01-2020 ರಂದು ಬೆಳಗ್ಗೆ ಸುಮಾರು 9:00 ಗಂಟೆಗೆ ಬಜಾಲ್ ನಲ್ಲಿನ ಪಿರ್ಯಾದುದಾರರ ತಾಯಿಯ ಮನೆಯಿಂದ ಹರೀಶ್ ರವರು ಮನೆ ಬಿಟ್ಟು ಹೋದವರು ಈ ವರೆಗೆ ಮನೆಗೆ ಬಂದಿರುವುದಿಲ್ಲವಾಗಿದೆ. ಈ ಹಿಂದೆಯೂ ಕೂಡ ಪಿರ್ಯಾದುದಾರರ ಗಂಡ ಮನೆ ಬಿಟ್ಟು ಹೋದವರು ಸುಮಾರು ದಿನಗಳ ನಂತರ ಮನೆಗೆ ಬರುತ್ತಿದ್ದರು ಈ ಕಾರಣದಿಂದ ಪಿರ್ಯಾದುದಾರರು ಅವರ ಗಂಡ ವಾಪಾಸ್ಸು ಮನೆಗೆ ಬರಬಹುದು ಎಂದು ಕಾದುಕೊಂಡಿರುವುದಾಗಿದೆ. ಆದುದರಿಂದ ನಾಪತ್ತೆಯಾಗಿರುವ ಪಿರ್ಯಾದಿದಾರರ ಗಂಡ ಹರೀಶ್ ರವರನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿ.

Crime Reported in Bajpe PS   

 ಫಿರ್ಯಾದಿ Poovappa H.M. ದಾರರು ಈ ದಿನ ದಿನಾಂಕ 15.02.2022 ರಂದು ಠಾಣಾ ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದು ಬೆಳಿಗ್ಗೆ ಸುಮಾರು 09-00 ಗಂಟೆಗೆ ಮಂಗಳೂರು ತಾಲೂಕು, ಬಡಗ ಎಡಪದವು ಗ್ರಾಮದ, ದೂಮಚಡವು ಎಂಬಲ್ಲಿರುವ ಸಾರ್ವಜನಿಕ ಸ್ಥಳವಾದ ದೂಮಚಡವು ಗುಡ್ಡೆಯ ಬಳಿ ಬಂದಾಗ ಗುಡ್ಡೆಯಲ್ಲಿ ಸುಮಾರು 10-15 ಜನರು ನೆಲದ ಮೇಲೆ ಪೇಪರ್ ನ್ನು ಹಾಸಿ ಅದರ ಸುತ್ತಲು ವೃತ್ತಾಕಾರದಲ್ಲಿ ಕುಳಿತುಕೊಂಡಿದ್ದು ಅವರ ಪೈಕಿ ಒಬ್ಬಾತನು ಕೈಯಲ್ಲಿ ಇಸ್ಪಿಟ್ ಎಲೆಗಳನ್ನು ಹಿಡಿದು ಉಲಾಯಿ ಪಿದಾಯಿ ಎಂದು ಹೇಳುತ್ತಾ ಪೇಪರ್ ಮೇಲೆ ಹಣ ಹಾಕುತ್ತಿದ್ದು ಉಳಿದವರು ಹಣವನ್ನು ಪೇಪರ್ ಮೇಲೆ ಎಸೆದು ಜೂಜಾಟ ಆಡುತ್ತಿರುವುದು ಕಂಡು ಸದ್ರಿ ವ್ಯಕ್ತಿಗಳನು ಹಿಡಿದು ವಿಚಾರಿಸಲಾಗಿ ತಮ್ಮ ಹೆಸರು 1)ಕರುಣಾಕರ ಶೆಟ್ಟಿ, 2)ಬಾಲಕೃಷ್ಣ ಶೆಟ್ಟಿಗಾರ, 3)ಸಂತೋಷ ಶೆಟ್ಟಿ, 4)ರಾಜೇಶ 5)ನಿತ್ಯಾನಂದ ಸಪಲಿಗ 6)ರಂಜೀತ್ 7)ಸದಾನಂದ ನಾಯ್ಕ 8)ಚೇತನ್ ಶೆಟ್ಟಿ 9)ಪದ್ಮನಾಭ 10)ರಾಜೇಶ್ 11)ಮಹಾದೇವ ಪವಾರ 12)ರತ್ನಾಕರ ಶೆಟ್ಟಿ ಎಂಬುದಾಗಿ ತಿಳಿಸಿದ್ದು  ಆರೋಪಿಗಳು ಇಸ್ಪೀಟ್ ಎಲೆಗಳಿಂದ ಹಣವನ್ನು ಪಣವಾಗಿಟ್ಟು ಉಳಾಯಿ-ಪಿದಾಯಿ ಎಂಬ ಅದೃಷ್ಟದ ಜೂಜಾಟ ಆಡುತ್ತಿದ್ದು  ಜೂಜಾಟಕ್ಕೆ ಬಳಸಿರುವ ಒಟ್ಟು 6,800/- ರೂಪಾಯಿ ಹಣ, ನ್ಯೂಸ್ ಪೇಪರ್, 52 ಇಸ್ಪೀಟ್ ಎಲೆಗಳನ್ನು ಸ್ವಾಧೀನ ಪಡಿಸಿಕೊಂಡು  ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.      

ಇತ್ತೀಚಿನ ನವೀಕರಣ​ : 15-02-2022 07:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080