ಅಭಿಪ್ರಾಯ / ಸಲಹೆಗಳು

Crime Reported in : Konaje PS

ಪಿರ್ಯಾದಿ Sachindra U ದಾರರು ಕಾಸರಗೂಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕೊಡ್ಲಮೊಗರು ಗ್ರಾಮದ ಊರ್ನಿ ಮನೆ  ಎಂಬಲ್ಲಿ ಪಿರ್ಯಾದಿ ಅಣ್ಣನಾದ ವಿನಯ್ ಕುಮಾರ್ ಶೆಟ್ಟಿ ಹಾಗೂ ತಾಯಿ ಮತ್ತು ಅಣ್ಣನ ಹೆಂಡತಿ ಭಾರತಿ ಶೆಟ್ಟಿ ಹಾಗೂ ಮಗಳು ಸ್ವಾತಿ ಯು ರವರ ಜೊತೆ ವಾಸವಾಗಿದ್ದು ಪಿರ್ಯಾದಿದಾರರ ಅಣ್ಣನ ಮಗಳಾದ ಸ್ವಾತಿ 23 ವರ್ಷ ಪ್ರಾಯಾದವಳಾಗಿದ್ದು ಇವಳು ದೇರಳಕಟ್ಟೆ ಮಾಡೂರು ಸಂತ ಆಲೋಶಿಯಸ್ ಕಾಲೇಜ್ ನಲ್ಲಿ ಅಂತಿಮ ವರ್ಷದ ಎಂಬಿಎ ವ್ಯಾಸಂಗ ಮಾಡುತಿದ್ದು ಪ್ರತಿದಿನವು ಮನೆಯಿಂದ ಮುಡಿಪು ಮಾರ್ಗವಾಗಿ ಬಸ್ಸಿನಲ್ಲಿ  ಹೋಗುತಿರುತ್ತಾಳೆ  ದಿನಾಂಕ 14.03.2022ರಂದು ಬೆಳಗ್ಗೆ ತನ್ನ ದ್ವಿ ಚಕ್ರ ಸ್ಕೂಟರ್ ನಲ್ಲಿ  ಮುಡಿಪು ಗೆ ಹೋಗಿ ಅಲ್ಲಿಂದ ಬಸ್ಸಿನಲ್ಲಿ ಹೋಗಿರುತ್ತಾಳೆ ಸಮಾನ್ಯವಾಗಿ ಸಂಜೆ 18.00 ಗಂಟೆಗೆ ಮನೆಗೆ ವಾಪಸ್ಸು ಬರುತಿದ್ದು ಈ ದಿನ ಮನೆಗೆ ಬರದೆ ಇರುವಾಗ ಪಿರ್ಯಾದಿದಾರರ ಅಣ್ಣ ಸ್ವಾತಿಗೆ ಕರೆ ಮಾಡಿದಾಗ ಸ್ವಾತಿಯ ಮೊಬೈಲ್ ಫೋನ್ ಸ್ವಿಚ್ ಆಪ್ ಆಗಿರುತ್ತದೆ ಮತ್ತು ಹಲವಾರು ಕಡೆ ಹುಡುಕಿದರೂ ಸ್ವಾತಿಯ ಸುಳಿವು ಸಿಕ್ಕರುವುದಿಲ್ಲ ಆದುದರಿಂದ ಕಾಣೆಯಾದ ಸ್ವಾತಿಯನ್ನು ಹುಡುಕಿಕೊಡಬೇಕಾಗಿ ಎಂಬಿತ್ಯಾದಿ

 

Crime Reported in Traffic North PS

ದಿನಾಂಕ: 14-03-2022 ರಂದು ಪಿರ್ಯಾದಿ Abdul Jaleel ದಾರರ ಜೊತೆಯಲ್ಲಿ ಕೆಲಸ ಮಾಡಿಕೊಂಡಿದ್ದ ಪರಿಚಯದ  ಮಂಜ@ಹನುಮಂತ ಎಂಬುವರು ಕೃಷ್ಣಾಪುರ 7 ನೇ ಬ್ಲಾಕ್ ಕುಕ್ಕಾಡಿ ಬಳಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಯ ಸುಮಾರು ರಾತ್ರಿ 8:00 ಗಂಟೆಗೆ ಕಾಟಿಪಳ್ಳ ಕಡೆಯಿಂದ ಸುರತ್ಕಲ್ ಕಡೆಗೆ KA-19-EH-7624 ನೇ ನಂಬ್ರದ ಸ್ಕೂಟರನ್ನು ಅದರ ಸವಾರನಾದ ಸಾಧಿಕ್ ಅಹಮ್ಮದ್ ಎಂಬುವರು ನಿರ್ಲಕ್ಷತನ ಹಾಗೂ ದುಡುಕುತನದಿಂದ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಂಜ@ಹನುಮಂತನಿಗೆ ಡಿಕ್ಕಿ ಪಡಿಸಿದ ಪರಿಣಾಮ ಮಂಜ@ ಹನುಮಂತನು ಕಾಂಕ್ರೀಟ್ ರಸ್ತೆಗೆ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಇದ್ದು ಪ್ರಥಮ ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ದಾಖಲಾಗಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಅಲ್ಲದೇ ಸೂಟ್ಕರ್ ಸವಾರನಾದ ಸಾಧಿಕ್ ಅಹಮ್ಮದ್ ಎಂಬುವರು ಗಾಯಗೊಂಡು ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಎಂಬಿತ್ಯಾದಿ

 

Crime Reported in Bajpe PS          

“ಪಿರ್ಯಾದಿ M H Hameed ದಾರರ ಹೆಂಡತಿ ಶ್ರೀಮತಿ ಮುಮ್ತಾಝ್, ಪ್ರಾಯ 43 ವರ್ಷ ಎಂಬವರು ಮಂಗಳೂರು ತಾಲೂಕು, ಬಜಪೆ ಗ್ರಾಮದ, ಡೈಮಂಡ್ ಹೋಂ, ಸ್ವಾಮಿಲಪದವು ಎಂಬಲ್ಲಿರುವ ತನ್ನ ವಾಸದ ಮನೆಯಲ್ಲಿ ದಿನಾಂಕ : 14-03-2022 ರಂದು ರಾತ್ರಿ 10.00 ಗಂಟೆಗೆ ಊಟ ಮಾಡಿ ಮಲಗಿದ್ದವರು ದಿನಾಂಕ: 15-03-2022 ರಂದು ಬೆಳಗ್ಗೆ 07.00 ಗಂಟೆಗೆ ಪಿರ್ಯಾದಿದಾರರು ಎದ್ದು ನೋಡಲಾಗಿ ಶ್ರೀಮತಿ ಮಮ್ತಾಝ್ ರವರು ಮನೆಯಲ್ಲಿ ಇಲ್ಲದೇ ಇದ್ದು ಇವರ ಬಗ್ಗೆ ಎಲ್ಲಾ ಕಡೆ ಹುಡುಕಾಡಿ ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಕೂಡಾ ಶ್ರೀಮತಿ ಮುಮ್ತಾಝ್  ಇವರು ಪತ್ತೆಯಾಗಿರುವುದಿಲ್ಲ. ಎಂಬಿತ್ಯಾದಿ.

ಕಾಣೆಯಾದವರ ಚಹರೆ:

ಹೆಸರು :ಶ್ರೀಮತಿ ಮುಮ್ತಾಝ್ (43 ವರ್ಷ)

ಎತ್ತರ : 5 ಅಡಿ 3 ಇಂಚು

ಮೈ ಬಣ್ಣ : ಗೋಧಿ ಮೈ ಬಣ್ಣ

ಕೂದಲು : ಕಪ್ಪು ತಲೆ ಕೂದಲು

ಧರಿಸಿದ ಬಟ್ಟೆ : ಕಪ್ಪು ಬಣ್ಣದ ಬುರ್ಖಾ, ಕಪ್ಪು ಬಣ್ಣದ ಹಿಜಾಬ್ ಧರಿಸಿರುತ್ತಾರೆ.

ಮಾತನಾಡುವ ಭಾಷೆ: ಬ್ಯಾರಿ, ತುಳು, ಕನ್ನಡ ಭಾಷೆ ಮಾತನಾಡುತ್ತಾರೆ.

 

ಇತ್ತೀಚಿನ ನವೀಕರಣ​ : 15-03-2022 07:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080