ಅಭಿಪ್ರಾಯ / ಸಲಹೆಗಳು

Crime Reported in Mangalore East Traffic PS        

ಪಿರ್ಯಾದಿದಾರರಾದ ಯಶವಂತ ರವರು 14-06-2022 ರಂದು ಮದ್ಯಾಹ್ನ ಸುಮಾರು 15.30 ಗಂಟೆಗೆ ತನ್ನ ಬಾಬ್ತು KA-19-MH-8405 ಮಾರುತಿ ಓಮಿನಿ ಕಾರಿನಲ್ಲಿ ಮರಿಯಾನಗರ RAYMAND GYM ಎದುರುಗಡೆಯಿಂದ ಮುಖ್ಯ ರಸ್ತೆಗೆ ಬಂದು, ಅಲ್ಲಿಂದ ಮುಂದಕ್ಕೆ ಚಲಿಸಿ ಮಾರ್ಟಿನ್ ಸೂಪರ್ ಮಾರ್ಕೇಟ್ ಎದುರುಗಡೆ ತೆರೆದ ಡಿವೈಡರ್  ಹತ್ತಿರ ವಾಹನವನ್ನು ನಿಲ್ಲಿಸಿಕೊಂಡು ವೆಲೆನ್ಸಿಯಾ ಕಡೆಯಿಂದ ಕೋಟಿ ಚೆನ್ನಯ್ಯ  ಸರ್ಕಲ್ ಕಡೆಗೆ ಸಾಗುವ  ವಾಹನಗಳನ್ನು ಗಮನಿಸುತ್ತಾ ನಿಂತಿದ್ದ ವೇಳೆ  ಕೋಟಿ ಚೆನ್ನಯ್ಯ ಸರ್ಕಲ್ ನಿಂದ ವೆಲೆನ್ಸಿಯಾ ಸರ್ಕಲ್ ಕಡೆಗೆ KA-19-HF-3614  ಮೋಟಾರ್ ಸೈಕಲ್ ನ್ನು ಮಿಥುನ್ ಮೊರಾಸ್ ಎಂಬಾತನು ನಿರ್ಲಕ್ಷ್ಯತನದಿಂದ  ಹಾಗೂ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ  ಚಲಾಯಿಸಿಕೊಂಡು ಬಂದು ಲಾರಿಯೊಂದನ್ನು  ಓವರ್ ಟೇಕ್ ಮಾಡುವ  ಭರದಲ್ಲಿ ಪಿರ್ಯಾದಿದಾರರ ಕಾರಿನ  ಬಲಗಡೆ ಹಿಂಬದಿಯ ಚಕ್ರದ ಮೇಲೆ ಭಾಗದ ಬಾಡಿಗೆ ಡಿಕ್ಕಿಹೊಡೆದಿದ್ದು, ಡಿಕ್ಕಿಯ ಪರಿಣಾಮ ಮೋಟಾರ್ ಸೈಕಲ್ ಸವಾರ ರಸ್ತೆಯ ಮೇಲೆ ಬಿದ್ದು, ಆತನ ಮರ್ಮಾಂಗಕ್ಕೆ ಗಾಯವಾಗಿದ್ದು,  ಪಿರ್ಯಾದಿದಾರರು ಹಾಗೂ ಅಲ್ಲಿ ಸೇರಿದ್ದ ಸಾರ್ವಜನಿಕರು ಗಾಯಾಳುವನ್ನು ಹತ್ತಿರದ ಫಾದರ್ ಮುಲ್ಲಾರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಗಾಯಾಳುವನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಎಂಬಿತ್ಯಾದಿ.

               

Crime Reported in Mangalore North PS

ಪಿರ್ಯಾದಿ AHAMMAD HUSEN ದಾರರು ಮಂಗಳೂರಿನ ಬಂದರ್ ಪೋರ್ಟ್ ರಸ್ತೆಯಲ್ಲಿ ರೀಮಾ ಟ್ರೇಡರ್ಸ್ ಎಂಬ ಅಂಗಡಿಯನ್ನು ನಡೆಸಿಕೊಂಡಿದ್ದು  ,ಕೆಲಸಕ್ಕಾಗಿ KA-19-EH-5612 ನೇ ನಂಬ್ರದ ಆಕ್ಟಿವಾ ದ್ವಿಚಕ್ರವನ್ನು  ಹೊಂದಿರುತ್ತಾರೆ,ಪಿರ್ಯಾದಿದಾರರು ಯಾವಾಗಲೂ ದ್ವಿಚಕ್ರ ವಾಹನವನ್ನು ಅಂಗಡಿಯ ಎದುರು ನಿಲ್ಲಿಸುತ್ತಿದ್ದು,  ದಿನಾಂಕ 06-06-2022 ರಂದು ಸಂಜೆ ಸುಮಾರು 7.30 ಗಂಟೆಯ ವೇಳೆಗೆ ದ್ವಿಚಕ್ರ ವಾಹನವನ್ನು, ಅಂಗಡಿಯ  ಎದುರು ನಿಲ್ಲಿಸಿರುತ್ತಾರೆ.  ಪಿರ್ಯಾದಿದಾರರು ದಿನಾಂಕ 07-06-2022 ರಂದು ರಾತ್ರಿ 08.00 ಗಂಟೆಯ ವೇಳೆಗೆ ವಾಹನವನ್ನು ನೋಡಲಾಗಿ ಇಟ್ಟ ಸ್ಥಳದಲ್ಲಿರದೇ  ಕಾಣೆಯಾಗಿರುವುದು ಕಂಡು ಬಂದಿರುತ್ತದೆ.  ಪಿರ್ಯಾದಿದಾರರು ಅಂಗಡಿಯಲ್ಲಿ ಕೆಲಸ ಮಾಡುವ  ಕೆಲಸದವರಿಗೆ  ದ್ವಿಚಕ್ರ ವಾಹವನ್ನು  ಅಗತ್ಯ ಕೆಲಸಕ್ಕೆ ಕೊಡುತ್ತಿದ್ದು,  ಕೆಲಸದವರು  ಯಾರಾದರೂ ತೆಗೆದುಕೊಂಡು ಹೋಗಿರಬಹುದಾಗಿ ಭಾವಿಸಿ ಇಷ್ಟರವರೆಗೆ  ಹುಡುಕಿ, ಸಿಗದೇ ಇದ್ದು ,ಯಾರೋ ಕಳ್ಳರು  ಕಳವು ಮಾಡಿಕೊಂಡು ಹೋಗಿರುವುದಾಗಿ ದೃಢ ಪಟ್ಟಿರುವುದರಿಂದ  ಪಿರ್ಯಾದಿದಾರರು ಈ ದಿನ ತಡವಾಗಿ ದೂರನ್ನು ನೀಡಿದ್ದು, ಕಳವಾದ ಸ್ಕೂಟರ್ KA 19 EH 5612  ನೊಂದಣಿ ನಂಬ್ರದ ACTIVA WHITE COLOUR SCOOTER ,CHASSIS NO ME4JF501CD7143228ENGINE NO JP50E70143357,ಮಾಡೆಲ್ 2013, ಅಂದಾಜು ಮೌಲ್ಯ ರೂ,15,000/-ಆಗಬಹುದು ಎಂಬಿತ್ಯಾದಿ ಸಾರಾಂಶವಾಗಿದೆ.

ಇತ್ತೀಚಿನ ನವೀಕರಣ​ : 15-06-2022 07:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080