ಅಭಿಪ್ರಾಯ / ಸಲಹೆಗಳು

Crime Reported in: Mangalore North PS   

ಮಂಗಳೂರು ತಾಲೂಕು ಕುದ್ರೋಳಿ ಮೊಯಿದ್ದೀನ್ ಮಸೀದಿ ಹಿಂಭಾಗದ ಪರಿಸರದಲ್ಲಿ ಒಂದು ಕಡೆ ಹಳೆ ಆರೋಪಿಗಳಾದ ಅನಿಶ್ ಅಶ್ರಪ್ @ ಮಯಾ ಮತ್ತು ಅಬ್ದುಲ್ ಖಾದರ್ ಫಹಾದ್ ಎಂಬವರು ಅವರ ಸಹಚರರೊಂದಿಗೆ ಅಕ್ರಮ ಕೂಟ ಸೇರಿಕೊಂಡು  ಸಾರ್ವಜನಿಕರನ್ನು, ಶ್ರೀಮಂತರನ್ನು, ವ್ಯಾಪಾರಸ್ಥರನ್ನು ಬೆದರಿಸಿ ದರೋಡೆ ಮಾಡುವ ಬಗ್ಗೆ ತಯಾರಿ ನಡೆಸಿ ಸಂಚು ರೂಪಿಸುತ್ತಿದ್ದಾರೆ  ಎಂಬುದಾಗಿ ಬಂದ ಮಾಹಿತಿ ಮೇರೆಗೆ ದಿನಾಂಕ: 14-7-2022 ರಂದು ಮದ್ಯಾಹ್ನ 2-30 ಗಂಟೆಗೆ ಅಜೀಜುದ್ದೀನ್ ರಸ್ತೆ, ಕಂಡತ್ತ್ ಪಳ್ಳಿಯಿಂದಾಗಿ ಮಾಹಿತಿ ಬಂದ ಸ್ಥಳವಾದ ಕುದ್ರೋಳಿ ಮೊಯಿದ್ದೀನ್ ಮಸೀದಿ ರಸ್ತೆ ಪರಿಸರಕ್ಕೆ ಹೋಗಿ ಮೊಯಿದ್ದೀನ್ ಮಸೀದಿಯ ಹಿಂಭಾಗದ ಖಾಲಿ ಜಾಗದಲ್ಲಿ 2 ದ್ವಿ ಚಕ್ರ ವಾಹನದ ಹತ್ತಿರ ಸುಮಾರು 6 ಜನ  ವ್ಯಕ್ತಿಗಳು ಇದ್ದು, ಅವರಲ್ಲಿ ಅನಿಶ್ ಅಶ್ರಪ್ @ ಮಯಾ ಮತ್ತು ಅಬ್ದುಲ್ ಖಾದರ್ ಫಹಾದ್ ಎಂಬವರು ಮತ್ತು ಇತರ 4 ಜನ ಇದ್ದರು. ಅವರಲ್ಲಿ 3 ಜನರು ಮಾರಕಾಯುಧ ಹಿಡಿದುಕೊಂಡಿದ್ದರು. ಅವರು ಯಾವುದೋ ಬೇವಾರಂಟ್ ಕೃತ್ಯ ನಡೆಸಲು ತಯಾರಿ ಮಾಡಿ ಸಂಚು ರೂಪಿಸುತ್ತಿರುವುದು ಕಂಡುಬಂದಿದ್ದು, ಮದ್ಯಾಹ್ನ: 2-50 ಗಂಟೆಗೆ ಸ್ಥಳಕ್ಕೆ ದಾಳಿ ಮಾಡಿ ಅಲ್ಲಿದ್ದ 6 ಜನರನ್ನು ಹಿಡಿಯಲು ಹೋದಾಗ ಅದರಲ್ಲಿ ತಲವಾರು ಹಿಡಿದು ಕೊಂಡಿದ್ದ ಒಬ್ಬನು ಮತ್ತು ಅಬ್ದುಲ್ ಖಾದರ್ ಫಹಾದ್ ನೊಂದಿಗೆ  ಅಲ್ಲಿಯೇ ಇದ್ದ ಬೈಕನ್ನು  ಸ್ಟಾರ್ಟ್ ಮಾಡಿ ಪರಾರಿಯಾಗಿದ್ದು, ಉಳಿದವರ ಪೈಕಿ 4 ಜನರನ್ನು ಸುತ್ತುವರಿದು ಹಿಡಿದಿದ್ದು, ಅವರುಗಳು

  1. ಅನಿಶ್ ಅಶ್ರಫ್ @ ಮಾಯಾ, ಪ್ರಾಯ: 24 ವರ್ಷ ವಾಸ; ವಿರನ್ ಮಂಜಿಲ್, ಇ-ಆರ್ ಚಿಕನ್ ಸ್ಟಾಲ್ ನ ಮುಂದೆ, ಕುದ್ರೋಳಿ ಜಂಕ್ಷನ್ ಮಂಗಳೂರು
  2. ಶೇಖ್ ಮಹಮ್ಮದ್ ಹಾರಿಸ್ @ ಜಿಗರ್,  ಪ್ರಾಯ: 32 ವರ್ಷ, ವಾಸ: ಕೈಕಂಬ ರೋಡ್, ಬಟ್ರಕೆರೆ  ಬಜ್ಪೆ, ಹಾಲಿ ವಾಸ: ಜಾನಿಯ ಕಂಪೌಂಡು, ಕುದ್ರೋಳಿ ಮಂಗಳೂರು
  3. ಮಹಮ್ಮದ್ ಕೈಸ್, ಪ್ರಾಯ: 26 ವರ್ಷ, ವಾಸ; ಎಮ್ ಜಿ ಎಮ್, ಕಸಬಾ ಬೆಂಗ್ರೆ, ಸಹರಾ ಸ್ಕೂಲ್ ಹಿಂದೆ, ಬೆಂಗ್ರೆ, ಪಣಂಬೂರು ಮಂಗಳೂರು
  4. ಮೊಹಮ್ಮದ್ ಕಾಮಿಲ್ (33) ವಾಸಃ ಕುದ್ರೋಳಿ ಮಂಗಳೂರು

    ಶ್ರೀಮಂತ ವ್ಯಕ್ತಿಗಳನ್ನು ದರೋಡೆ ಮಾಡಿ ಹಣ ಸುಲಿಗೆ ಮಾಡಲು ತಯಾರಿ ಮಾಡಿಕೊಳ್ಳುತ್ತಿರುವುದಾಗಿ ಅದಕ್ಕೆ ಬೇಕಾದ ಎಲ್ಲಾ ಮಾರಕಾಯುಧವಾದ ತಲವಾರು, ಚೂರಿ ಮತ್ತು ಮೆಣಸಿನ ಹುಡಿ  ಇಟ್ಟು ಕೊಂಡು ದರೋಡೆ ಮಾಡಲು ತಯಾರಿ ಮಾಡಿ ಕೊಂಡಿರುವುದಾಗಿ  ಒಪ್ಪಿಕೊಂಡಿರುವ ಮೇರೆಗೆ ಆರೋಪಿಗಳ    ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿಯಾಗಿದೆ.

 

Crime Reported in: Konaje PS

ದಿನಾಂಕ 14.07.2022 ರಂದು ಮದ್ಯಾಹ್ನ ಸುಮಾರು 13.00 ಗಂಟೆಗೆ  ಉಳ್ಳಾಲ ತಾಲೂಕು  ಬೆಳ್ಮ ಗ್ರಾಮದ ಕೆಎಸ್ ಹೆಗ್ಡೆ ಆಸ್ಪತ್ರೆಯ ಎದುರು ಇರುವ ಜ್ಯೂಸ್ ಮ್ಯಾಜಿಕ್ ಹೋಟೆಲ್ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಬೆರೆಸಿ ಧೂಮಪಾನ ಮಾಡುತ್ತಿದ್ದ  ಮೊಹಮ್ಮದ್ ನಾಸಿರ್ (26) ವಾಸಃ ದೇರಳಕಟ್ಟೆ ಮಂಗಳೂರು ಎಂಬವರನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿ   THC (ಗಾಂಜಾ) ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.

 

Crime Reported in: Moodabidre PS

ಪಿರ್ಯಾದಿ Prema Jain  ರವರು  ದಿನಾಂಕ 14-07-2022 ರಂದು ತಮ್ಮ ಕರ್ತವ್ಯವನ್ನು ಮುಗಿಸಿ ಅವರ ತಮ್ಮನ ಮಾಲೀಕತ್ವದ KA-19-EQ-0340 ನಂಬ್ರದ ಮೋಟಾರು ಸೈಕಲ್ ನಲ್ಲಿ ಹಿಂಬದಿ ಸಹ ಸವಾರಳನ್ನಾಗಿ ಪ್ರಮೀಳಾ ಜೈನ್ ರವರನ್ನು ಕೂರಿಸಿಕೊಂಡು ಮಿಜಾರಿನಿಂದ ಪಣಪಿಲ ಕಡೆಗೆ ಹೋಗುತ್ತ ಸಮಯ ಸುಮಾರು ಸಾಯಂಕಾಲ 6.15 ಗಂಟೆಗೆ ಪಣಪಿಲ ತಲುಪುತ್ತಿದ್ದಂತೆ ನೆಲ್ಲಿಕಾರು ಕಡೆಯಿಂದ ಪಣಪಿಲ ಕಡೆಗೆ KA-19-MC-8844 ನಂಬ್ರದ ಕಾರು ಚಾಲಕನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಮೋಟಾರು ಸೈಕಲ್ ನ ಮುಂಭಾಗದ ಬಾಡಿ ಹಾಗೂ ಬಂಪರ್, ಡೂಮ್ ಜಖಂಗೊಂಡಿರುತ್ತದೆ ಎಂಬಿತ್ಯಾದಿ.

  

ಇತ್ತೀಚಿನ ನವೀಕರಣ​ : 15-07-2022 05:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080