ಅಭಿಪ್ರಾಯ / ಸಲಹೆಗಳು

Crime Reported in Traffic East  PS

ದಿನಾಂಕ;14-10-2021 ರಂದು ರಾತ್ರಿ ಸಮಯ ಪಿರ್ಯಾದಿ ಪ್ರಕಾಶ ಪ್ರಾಯ: 30 ವರ್ಷ ದಾರರು ಮಂಗಳೂರು ನಗರದ ಪಿ.ವಿ.ಎಸ್ ನ ಸಿಟಿ ಪ್ಲಾಜಾ ಕಮರ್ಷಿಯಲ್ ಕಟ್ಟಡದಲ್ಲಿರುವ ದುರ್ಗಾಂಬಾ ಮೋಟರ್ಸ್ ಕಚೇರಿಯಲ್ಲಿ ಕೆಲಸದಲ್ಲಿದ್ದ ವೇಳೆ ಸಮಯ ಸುಮಾರು 9-20 ಗಂಟೆಗೆ ಮಂಗಳೂರಿನಿಂದ ಚಳ್ಳಕೆರೆಗೆ ಸಂಚರಿಸುವ KA-51-C-0146 ನಂಬ್ರದ ದುರ್ಗಾಂಬಾ ಬಸ್ಸು ಕರಂಗಲ್ಪಾಡಿ ಕಡೆಯಿಂದ ಪಿ.ವಿ.ಎಸ್ ಕಡೆಗೆ ಹಾದು ಹೋಗಿರುವ ಕುದ್ಮುಲ್ ರಂಗರಾವ್  ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಬಂದು ನಿಂತಿದ್ದು, ಸದ್ರಿ ಬಸ್ಸಿನ ನಿರ್ವಾಹಕ ವಿಜಯ್ ಕುಮಾರ್ ಎಂಬವರು ಪ್ರಯಾಣಿಕರ ಚಾರ್ಟ್ ಲಿಸ್ಟನ್ನು ಪಡೆಯಲು ರಸ್ತೆ ದಾಟಿಕೊಂಡು ಕಚೇರಿಗೆ ಬಂದು ಚಾರ್ಟ್ ಲಿಸ್ಟನ್ನು ಪಡೆದುಕೊಂಡು ವಾಪಾಸು ಬಸ್ಸಿನ ಕಡೆಗೆ ಹೋಗಲು ರಸ್ತೆಯನ್ನು ದಾಟುತ್ತಿದ್ದ ವೇಳೆ ಪಿ.ವಿ.ಎಸ್ ಕಡೆಯಿಂದ ಕರಂಗಲ್ಪಾಡಿ ಕಡೆಗೆ ಹಾದು ಹೋಗಿರುವ ಕುದ್ಮುಲ್ ರಂಗರಾವ್  ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ KA-19-P-8597 ನಂಬ್ರದ ಓಮಿನಿ ಕಾರನ್ನು ಅದರ ಚಾಲಕ ಶ್ರವಣಕುಮಾರ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ  ದಾಟುತ್ತಿದ್ದ ವಿಜಯ್ ಕುಮಾರ್ ರವರಿಗೆ ಢಿಕ್ಕಿಪಡಿಸಿದ್ದು, ಪರಿಣಾಮ ವಿಜಯ್ ಕುಮಾರ್ ರವರು ಕಾಂಕ್ರೀಟ್ ರಸ್ತೆಗೆ ಬಿದ್ದು ಹಣೆಯ ಎಡಭಾಗಕ್ಕೆ ರಕ್ತ ಗಾಯ, ಎಡಕೈ ಬೆರಳುಗಳಿಗೆ, ಎಡಪಾದ, ಎಡಕಾಲಿನ ಬೆರಳುಗಳಿಗೆ, ಹೊಟ್ಟೆಯ ಮೇಲ್ಭಾಗ ಹಾಗೂ ಎಡ ಮೊಣಕಾಲಿಗೆ ತರಚಿದ ಗಾಯಗಳಾಗಿದ್ದು, ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

Crime Reported in  EAST PS

ಪಿರ್ಯಾದಿ ಐವನ್ ಡಿಮೆಲ್ಲೋ ರವರ  ತಮ್ಮ ಲಾನ್ಸಿ ಡಿ’ಮೇಲ್ಲೊ ಪ್ರಾಯ: 58 ರವರು ಅವಿವಾಹಿತರಾಗಿದ್ದು, ಯಾವುದೇ ಕೆಲಸವಿಲ್ಲದೇ ನಗರದ ಬಟ್ಟಗುಡ್ಡ ಬಳಿ ಅಸ್ಟ್ರಾ ಅಪಾರ್ಟ್ ಮೆಂಟ್ ನಲ್ಲಿ ಒಬ್ಬರೇ ವಾಸ ಮಾಡಿಕೊಂಡಿದ್ದು, ಪಿರ್ಯಾದಿದಾರರು ತನ್ನ ಹೆಂಡತಿ ಮಗುವಿನೊಂದಿಗೆ ವಿದೇಶದಲ್ಲಿದ್ದವರು ದಿನಾಂಕ 10-10-2021 ರಂದು ರಜೆಯಲ್ಲಿ ಊರಿಗೆ ಬಂದು ತಮ್ಮನೊಂದಿಗೆ ಇದ್ದು, ದಿನಾಂಕ 13-10-2021 ರಂದು ಬೆಳಗ್ಗೆ ಎದ್ದು ನೋಡಿದಾಗ ಪಿರ್ಯಾದಿದಾರರ ತಮ್ಮ ಮನೆಯಲ್ಲಿ ಇಲ್ಲದೇ ಇರುವುದನ್ನು ನೋಡಿ ಅಪಾರ್ಟ್ ಮೆಂಟಿನ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಬೆಳಗ್ಗೆ 06-47 ಗಂಟೆಗೆ ನಡೆದುಕೊಂಡು ಹೋರಗೆ ಹೋಗುವುದು ತಿಳಿದು ಬಂದಿದ್ದು, ಅವರ ಮೊಬೈಲ್ ಅನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದು ಬಳಿಕ ಪಿರ್ಯಾದಿದಾರರು ಸಂಬಂಧಿಕರ ಹಾಗೂ ನಗರದ ಬೇರೆ ಬೇರೆ ಕಡೆಗಳಲ್ಲಿ ಈವರೆಗೇ ಹುಡುಕಾಡಿದಲ್ಲಿ ಅವರ ಬಗ್ಗೆ  ಮಾಹಿತಿ ದೊರೆಯದೇ ಇದ್ದು ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ ಎಂಬಿತ್ಯಾದಿ.

Crime Reported in  BAJPE PS

ಫಿರ್ಯಾದಿ ಕುಮಾರಿ ಪೂವಮ್ಮ ಪ್ರಾಯ: 39 ವರ್ಷ  ದಾರರು ಸುಂಕದಕಟ್ಟೆ ಗೇರುಬೀಜ ಕಂಪನಿಯಲ್ಲಿ ಕೆಲಸಮಾಡಿಕೊಂಡಿದ್ದು,ಅದರಂತೆ ದಿನಾಂಕ 13-10-2021 ರಂದು ಎಂದಿನಂತೆ ಗೇರುಬೀಜ ಕಂಪನೆಗೆ ಕೆಲಸಕ್ಕೆ ಹೋಗಿ ಸಂಜೆ ವಾಪಸ್ಸು ಮನೆಗೆ ಹೋಗಲು ಬಸ್ಸಿನಲ್ಲಿ ಬಂದು ಕೈಕಂಬದಲ್ಲಿ ಇಳಿದುಕೊಂಡು ಸಂಜೆ 06 ಗಂಟೆ ವೇಳೆಗೆ ಮಳಲಿಗೆ ಹೋಗುವ ಬಸ್ಸಿಗೆ ಕೈಕಂಬ ಬಸ್ ನಿಲ್ದಾಣದಿಂದ ನಡೆದುಕೊಂಡು ಹೋಗುತ್ತಿರುವಾಗ ಅವರ ಹಿಂದಿನಿಂದ  ಕೆಎ 19 ಹೆಚ್ಇ 3285 ಸ್ಕೂಟರನ್ನು ಅದರ ಸವಾರ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದುದರಿಂದ ಅವರ ಎಡಕಾಲಿನ ಮೊಣಗಂಟಿಗೆ ಭಾರಿ ಗುದ್ದಿದ ಗಾಯವಾಗಿದ್ದು ಕೂಡಲೇ ಅವರನ್ನು ಕೈಕಂಬ ವಿನಾಯಕ ಆಸ್ಪತ್ರಗೆ ಕರೆದುಕೊಂಡು ಪ್ರಥಮ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಹೋಗಿದ್ದು,ಈ ದಿನ ದಿನಾಂಕ 14-10-2021 ರಂದು ಕಾಲುನೋವು ಜಾಸ್ತಿಯಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳುರಿನ ಏಜೆ ಆಸ್ಪತ್ರೆಯಲ್ಲಿ ಓಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

Crime Reported in ULLAL PS

ದಿನಾಂಕ. 13-10-2021 ರಂದು ಫಿರ್ಯಾದಿದಾರರು ರಾತ್ರಿ ಸಮಯದಲ್ಲಿ ಕೆಎ-05-ಎಬಿ-2232 ನೇ ನೀರಿನ ಟ್ಯಾಂಕರನ್ನು ಚಲಾಯಿಸಿಕೊಂಡು ಮಾಡೂರಿನಿಂದ ನೀರು ತುಂಬಿಸಿಕೊಂಡು ಉಳ್ಳಾಲ ಕೋಟೆಪುರ ಮೀನಿನ ಪ್ಯಾಕ್ಟರಿಗೆ ಕೊಟ್ಟು ಖಾಲಿ ಟ್ಯಾಂಕರನ್ನು ಚಲಾಯಿಸಿಕೊಂಡು ವಾಪಾಸು ಮಾಡೂರು ಕಡೆಗೆ ಹೋಗುತ್ತಾ ರಾತ್ರಿ 11-55 ಗಂಟೆಗೆ ಉಳ್ಳಾಲ ಮೊಗವೀರಪಟ್ನ ಕಡೆಗೆ ತಲುಪಿದಾಗ ಅಲ್ಲಿ ಆಕಾಶ್ ಎಂಬ ವ್ಯಕ್ತಿಯು ಕೈಯಲ್ಲಿ ಕಬ್ಬಿಣದ ಸಲಾಕೆಯಂತೆ ವಸ್ತುವನ್ನು ಹಿಡಿದುಕೊಂಡು ರಸ್ತೆಗೆ ಅಡ್ಡ ಬಂದು ಲಾರಿಯನ್ನು ತಡೆದು ನಿಲ್ಲಿಸಿ ಲಾರಿ ಚಾಲಕ ಫಿರ್ಯಾದಿದಾರರನ್ನು ಉದ್ದೇಶಿಸಿ “ಮಗ ಬೇವಾರ್ಸಿ, ನಿಮಗೆ ಟ್ಯಾಂಕರ್ ಲಾರಿಯವರಿಗೆ ಅಹಂಕಾರ ಆಗಿದೆ ಎಂದು ಅವಾಚ್ಯಶಬ್ದಗಳಿಂದ ಬೈದು  ಆತನ ಕೈಯಲ್ಲಿದ್ದ ಕಬ್ಬಿಣದ ಸಲಾಕೆಯಂತಿರುವ ವಸ್ತುವಿನಿಂದ ಟ್ಯಾಂಕರಿನ ಎದುರಿನ ಗಾಜು ಮತ್ತು ಚಾಲಕನ ಸೀಟಿನ ಬದಿಯ ಗಾಜಿಗೆ ಹೊಡೆದು ಗಾಜನ್ನು ಜಖಂಗೊಳಿಸಿ ಸುಮಾರು ರೂ.10,000/- ದಷ್ಟು ನಷ್ಟ ಉಂಟು ಮಾಡಿದ್ದು, ಆಗ ದಾರಿಯಲ್ಲಿ ಯಾರೋ ಕೆಲವರು ಬರುವುದನ್ನು ಕಂಡು ಓಡಿ ಹೋಗಿರುವುದು ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 15-10-2021 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080