ಅಭಿಪ್ರಾಯ / ಸಲಹೆಗಳು

Crime Reported in CEN Crime PS

ಪಿರ್ಯಾದಿದಾರಿಗೆ  19-10-2021 ಸುಮಾರು 11:00 ಗಂಟೆಗೆ ಅವರ ಮೊಬೈಲ್ ನಂಬರ್ ಗೆ  ಆದಿತ್ಯ ಬಿರ್ಲಾ ಫಿನಾನ್ಸ್ ಕಂಪೆನಿ ಸಿಬ್ಬಂದಿ ಎಂಬುವುದಾಗಿ ತಿಳಿಸಿ 7303554551 ನೇ ವ್ಯಕ್ತಿ ಯು ಮಾತನಾಡಿ ಯಾರೋ ಅಪರಿಚಿತ ವ್ಯಕ್ತಿಗೆ  ಕಾನ್ಫರೆನ್ಸ ಕಾಲ್ ಹಾಕಿ ಪಿರ್ಯಾದಿದಾರರ ಜೊತೆಯಲ್ಲಿ ಮಾತನಾಡಿಸಿ 12 ಲಕ್ಷ ಸಾಲವನ್ನು ಕಂಪೆನಿಯಿಂದ ಕೊಡುವುದಾಗಿ ತಿಳಿಸಿ ನಂತರ ಪಿರ್ಯಾದಿದಾರರ ಆಧಾರ ಕಾರ್ಡ ಹಾಗೂ PAN ಕಾರ್ಡ ಅನ್ನು  7303554551 ನಂಬ್ರದ  ವ್ಯಕ್ತಿಯ WHATSAPP ಗೆ  ಕಳಿಸಿರುತ್ತಾರೆ ನಂತರ  8506846935 ನೇ ನಂಬ್ರದಿಂದ ಯಾರೋ ಅಪರಿಚಿತ ವ್ಯಕ್ತಿಯು ಕರೆ ಮಾಡಿ ಭಾರತೀಯ ಅಕ್ಸ ಇನ್ಸೂರೆನ್ಸ್ POLICY BOND  ಅನ್ನು ಆದಿತ್ಯ ಬಿರ್ಲಾ ಫಿನಾನ್ಸ್ ಕಂಪೆನಿ ಸಿಬ್ಬಂದಿಗೆ  ಎಂದು ತಿಳಿಸಿದ ಸದ್ರಿ ಮೊಬೈಲ್ ನಂಬರ್ ಗೆ  7303554551  ನೇ ದಕ್ಕೆ POLICY BOND  ಕಳಿಸಲು ತಿಳಿಸಿರುತ್ತಾರೆ. ನಂತರ ದಿನಾಂಕ 23-10-2021  ಭಾರತೀಯ AXA ಇನ್ಸೂರೆನ್ನ್ ಸಿಬ್ಬಂದಿ ಎಂದು ತಿಳಿಸಿ 97736122271  ನೇ ನಂಬರ್ ನಿಂದ ಕರೆ ಮಾಡಿ ಅರ್ಧ ವರ್ಷದ ಪ್ರೀಮಿಯಂ 60,000/- ಮತ್ತು ಜೆ.ಸ್.ಟಿ 2,700 ಪಾವತಿಸುವಂತೆ ತಿಳಿಸಿ ಒಂದು LINK ಅನ್ನು ಕಳಿಸಿರುತ್ತಾರೆ (https://buy.stripe.com/cN2bKT6rzeTj3JK9Ad--)  ಸದ್ರಿ LINK ಅನ್ನು ಕ್ಲಿಕ್ ಮಾಡಿದಾಗ ಭಾರತೀಯ AXA ಲೈಫ್ ಎಂದು ಒಪನ್ ಅಗಿರುತ್ತಾರೆ ನನ್ನ SBI CRIDIT CARD ನಿಂದ 22,700 ಹಾಗೂ IDFC CRIDIT CARD ನಿಂದ 40,000/- ವನ್ನು ಪಾವತಿ ಮಾಡಿರುತ್ತಾರೆ ನಂತರ ದಿನಾಂಕ 28-10-2021 ರಂದು 8506846935 ನೇ ನಂಬರ್ ವ್ಯಕ್ತಿಯು ಕರೆ ಮಾಡಿ ಒಂದು ವರ್ಷದ ಪ್ರೀಮಿಯಂ ಪಾವತಿಸಿದರೆ ಲೋನ್ ನೀಡುವುದಾಗಿ ತಿಳಿಸಿರುತ್ತಾರೆ ದಿನಾಂಕ 29-10-2021 ರಂದು 97736122271  ನೇ ನಂಬರ್ ನಿಂದ ಕರೆ ಮಾಡಿ LINK ಅನ್ನು ಕಳಿಸಿರುತ್ತಾರೆ (Lhttps://buy.stripe.com/00gcOXeK17qr800aEl--) ಸದ್ರಿ LINK ಅನ್ನು ಕ್ಲಿಕ್ ಮಾಡಿದಾಗ ಭಾರತೀಯ ಅಕ್ಸ ಲೈಫ್ ಎಂದು ಒಪನ್ ಅಗಿರುತ್ತಾರೆ ಪಿರ್ಯಾದಿಯು ತನ್ನ  ಪತ್ನಿಯ IDBI FIRST BANK CRIDIT CARD ನಿಂದ 62,700 ಪಾವತಿಸಿರುತ್ತಾರೆ. ಅವರು ಕಳುಹಿಸಿರುವ  LINK ಗೆ ಹಂತ ಹಂತವಾಗಿ ಒಟ್ಟು ರೂ 1,25,400/- ರೂ ಅನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ. 

Crime Reported in Traffic North PS

ದಿನಾಂಕ 14-11-2021 ರಂದು ಪಿರ್ಯಾದಿದಾರರಾದ ಶ್ರೀಮತಿ ಯಶೋಧ ರವರ ತಂದೆ ಕೃಷ್ಣ ಶೆಟ್ಟಿ ರವರು ಮರವೂರು  ಸೇತುವೆ ಸಮೀಪದ ಬಸ್ ಸ್ಟಾಪ್ ಬಳಿ ರಸ್ತೆ ದಾಟುವ ಸಲುವಾಗಿ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವೇಳೆ ಸಂಜೆ ಸಮಯ ಸುಮಾರು 6:15 ಗಂಟೆಗೆ KA-19-D-2463 ನಂಬ್ರದ 3 ಚಕ್ರದ ಆಟೋ ಟೆಂಪೋವನ್ನು ಅದರ ಚಾಲಕ ರಾಜೇಶ್ ಎಂಬವರು ಬಜ್ಪೆ ಕಡೆಯಿಂದ ಮರಕಡ/ಕಾವೂರು ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿಕೊಂಡು ಬಂದು ರಸ್ತೆ ದಾಟುವ ಸಲುವಾಗಿ ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಪಿರ್ಯಾದಿದಾರರ ತಂದೆ ಕೃಷ್ಣ ಶೆಟ್ಟಿ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ಹಣೆಯ ಮಧ್ಯ ಭಾಗದಲ್ಲಿ ಚರ್ಮ ಹರಿದ ರೀತಿಯ ಗಂಭೀರ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ಎಂಬಿತ್ಯಾದಿ.

Crime Reported in Moodabidre PS

ಪಿರ್ಯಾದಿ Sushma Shashi B ದಾರರು ಗಣಿ ಮತ್ತು ಭೂ ವಿಜ್ಞಾನಿ ಯಾಗಿದ್ದು ದಿನಾಂಕ: 12-11-2021 ರಂದು ಸಂಜೆ 6-00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರು ಕಂದಾಯ ಇಲಾಖೆಯ ಆಧಿಕಾರಿಗಳೊಂದಿಗೆ ಮೂಡಬಿದ್ರೆ ತಾಲೂಕು ಶಿರ್ತಾಡಿ ಗ್ರಾಮದ ಕಜೆ ಎಂಬಲ್ಲಿರುವ ಫಲ್ಗುಣಿ ನದಿಗೆ ಸೇರುವ ತೋಡಿನ ಬಳಿ ದಾಳಿ ನಡೆಸಿ ಸ್ಥಳ ಪರಿಶೀಲಿಸಿದ ಸಮಯ ಆರೋಪಿಗಳು Jerald Heri De silva, Appanna ಸರ್ಕಾರಕ್ಕೆ ಯಾವುದೇ ರಾಜಧನ ಪಾವತಿಸದೇ ಆಕ್ರಮವಾಗಿ 20 ಮೆಟ್ರಿಕ್ ಟನ್ ರಷ್ಟು ಮರಳನ್ನು ಕಳವು ಮಾಡಿ ತೆಗೆದು ಮಾರಾಟ ಮಾಡುವ ಉದ್ದೇಶದಿಂದ ನದಿ ದಂಡೆಯಲ್ಲಿ ದಾಸ್ತಾನು ಇರಿಸಿರುತ್ತಾರೆ ಎಂಬಿತ್ಯಾದಿ ಪಿರ್ಯಾದಿಯ ಸಾರಾಂಶವಾಗಿರುತ್ತದೆ.

Crime Reported in Urva PS

ಫಿರ್ಯಾದಿ DHANARAJ Sದಾರರು ಸಿಬ್ಬಂದಿಗಳಾದ ಪುಷ್ಪರಾಜ್, ಶಶಿಕುಮಾರ, ಸತೀಶ್ ಸತ್ತಿಗೇರಿ ರವರೊಂದಿಗೆ ಠಾಣಾ ಸಹರದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ  ದಿನಾಂಕ 14-11-2021 ರಂದು ಬೆಳಿಗ್ಗೆ ಸುಮಾರು 10.30 ಗಂಟೆಗೆ ಮಂಗಳೂರು ಉರ್ವಾ, ಅಶೋಕನಗರ, ಕುದ್ರು ಕಲ್ಲುರ್ಟಿ ದೈವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕ ನಿಂತು ಸಿಗರೇಟು ಸೇದುತ್ತಿದ್ದುದನ್ನು ಕಂಡು ವಾಹನ ನಿಲ್ಲಿಸಿ ಆತನ ಬಳಿ ಹೋಗುತ್ತಿದ್ದಂತೆ ತಾನು ಸೇದುತ್ತಿದ್ದ ಸಿಗರೇಟನ್ನು ಸ್ವಲ್ಪ ದೂರ ಬಿಸಾಡಿದ್ದು, ಆತನನ್ನು ವಿಚಾರಿಸಲಾಗಿ ತನ್ನ ಹೆಸರು ರಿತೇಶ್ ಶೆಟ್ಟಿ (25 ವರ್ಷ),  ವಾಸ- ಪಿ.ಕೆ ರಾವ್ ಕಂಪೌಂಡ್, ಗುರುಂಪೆ, ಅಶೋಕನಗರ, ಮಂಗಳೂರು ಎಂಬುದಾಗಿ ತಿಳಿಸಿದ್ದು ಆತನು ಮಾತನಾಡುವಾಗ ಗಾಂಜಾ ಸೇವನೆ ವಾಸನೆ ಬರುತ್ತಿದ್ದು, ತಾನು ಸಿಗರೇಟ್ ಒಳಗಡೆ ಗಾಂಜಾ ಹಾಕಿ ಸೇವನೆ ಮಾಡುತ್ತಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಆತನನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಮಂಗಳೂರು ಕುಂಟಿಕಾನ ಎ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ರಿತೇಶ್ ಶೆಟ್ಟಿಯು ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಲ್ಲಿ ವೈದ್ಯರು DRUG SCREENING TEST ನಲ್ಲಿ “ POSITIVE “ ಎಂಬುದಾಗಿ ವರದಿ ನೀಡಿದ್ದು ಸದ್ರಿ ವರದಿಯಂತೆ NARCOTIC DRUGS AND PSYCHOTROPIC SUBSTANCES ACT 1985 ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ

ಇತ್ತೀಚಿನ ನವೀಕರಣ​ : 15-11-2021 06:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080