ಅಭಿಪ್ರಾಯ / ಸಲಹೆಗಳು

Crime Reported in Mangalore East Traffic PS  

ಪಿರ್ಯಾದಿದಾರರಾದ ಶ್ರೀಮತಿ ಶೋಭಾ ಶೆಟ್ಟಿ(58) ರವರ ಪತಿ ನಾಗೇಂದ್ರ ಶೆಟ್ಟಿ(65) ರವರು ದಿನಾಂಕ:14-12-2021 ರಂದು  ಸಂಜೆ ತನ್ನ ಮನೆಯಿಂದ ಟೈಲರಿಂಗ್ ಗೆ  ಸಂಬಂಧಿಸಿದ  ವಸ್ತುಗಳನ್ನು ತರಲು ನಡೆದುಕೊಂಡು ಹೋಗಿದ್ದು ಸಂಜೆ ಸಮಯ ಸುಮಾರು 6.15 ಗಂಟೆಗೆ ಕರಂಗಲ್ಪಾಡಿ ರಸ್ತೆಯಲ್ಲಿರುವ ಪವಿ ವೈನ್ಸ್ ಎದುರುಗಡೆ  ರಸ್ತೆ ದಾಟಲು ನಿಂತಿದ್ದಾಗ ಪಿ.ವಿ.ಎಸ್ ಕಡೆಯಿಂದ ಬಂಟ್ಸ್ ಹಾಸ್ಟೇಲ್ ಕಡೆಗೆ KA-19-AC-4623  ನೊಂದಣಿ ನಂಬ್ರದ ಖಾಸಗಿ ಬಸ್ಸನ್ನು ಅದರ ಚಾಲಕ ಸಂಪತ್ ಪಿ ಕೊಟ್ಯಾನ್ ಎಂಬವರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಪಾದಚಾರಿ ನಾಗೇಂದ್ರ ಶೆಟ್ಟಿ(65) ರವರಿಗೆ ಡಿಕ್ಕಿ ಹೊಡೆದ ಪರಿಣಾಮ  ನಾಗೇಂದ್ರ ಶೆಟ್ಟಿರವರು ರಸ್ತೆಯ ಮೇಲೆ ಬಿದ್ದು, ಬಸ್ಸಿನ ಎಡಬದಿಯ ಮುಂದಿನ ಚಕ್ರವು ಸದ್ರಿಯವರ ಎಡಕಾಲಿನ ಪಾದದ ಮೇಲೆ ಹರಿದು ಹೋಗಿ ತೀವ್ರ ತರಹದ ಗಂಭೀರ ಗಾಯಗೊಂಡವರನ್ನು ಅಪಘಾತಕ್ಕೆ ಸಂಬಂಧಿಸಿದ ಬಸ್ಸಿನ ನಿರ್ವಾಹಕ ಗಣೇಶ್ ರವರು ಆಟೋ ರಿಕ್ಷಾವೊಂದರಲ್ಲಿ ಗಾಯಾಳುವನ್ನು ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು,ವೈದ್ಯರು ನಾಗೇಂದ್ರ ಶೆಟ್ಟಿ(65) ರವರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ ಎಂಬಿತ್ಯಾದಿ.

2) ಪಿರ್ಯಾದಿದಾರರಾದ ಶ್ರೀ ಅಜಿತ್ ಆರ್ (25) ರವರು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ KA-19-EQ-8194 ರಲ್ಲಿ  ದಿನಾಂಕ 14-12-2021 ರಂದು  ಕಂಪನಿ ಕೆಲಸದ ನಿಮಿತ್ತ  ಸುಳ್ಯಕ್ಕೆ ತೆರಳಿದ್ದವರು  ಸಂಜೆ ವೇಳೆ ಕೆಲಸ ಮುಗಿಸಿ ತಾನು ಹಾಲಿ ವಾಸವಾಗಿರುವಗ ಮನೆಗೆ ಕಡೆಗೆ ವಾಪಾಸಾಗುತ್ತಾ ಪಡೀಲ್-ನಂತೂರು ಮಾರ್ಗವಾಗಿ ಬಂದು ಎನ್.ಹೆಚ್-66 ರಲ್ಲಿ ಬೀರಿ ಕಡೆಗೆ ತನ್ನ  ಮೋಟಾರು ಸೈಕಲನ್ನು ಚಲಾಯಿಸಿಕೊಂಡು  ನಂತೂರು ಸಂದೇಶದ  ಬಳಿ  ತೆರೆದಿರುವ ಡಿವೈಡರ್ ಬಳಿ ರಸ್ತೆಯಲ್ಲಿ ಚಲಿಸುತ್ತಿದ್ದಂತೆ  ಸಮಯ ಸುಮಾರು 18.45 ಗಂಟೆ ಸುಮಾರಿಗೆ ಪಂಪ್ ವೆಲ್ ಕಡೆಯಿಂದ ನಂತೂರು ಕಡೆಗೆ KA-19-AB-3748 ನೊಂದಣಿ ನಂಬ್ರದ ಆಟೋ ರಿಕ್ಷಾವನ್ನು ಅದರ ಚಾಲಕ  ಏಕಮುಖ ರಸ್ತೆಗೆ ವಿರುಧ್ಧವಾಗಿ ಅಜಾಗರೂಕತೆ ,ನಿರ್ಲಕ್ಷ್ಯತನದಿಂದ ಹಾಗೂ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು  ಫಿರ್ಯಾದುದಾರರ ಬಾಬ್ತು ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿಯವರು ಮೋಟಾರು ಸೈಕಲ್ ಸಮೇತಾ ರಸ್ತೆ ಬಿದ್ದು ಮೂಗಿನ ಮೂಳೆ ಮುರಿತದ ಗಾಯ ಮತ್ತು ಬಲ ಕೈ ಹೆಬ್ಬೆರಳಿಗೆ ಚರ್ಮ ಕಿತ್ತು ಗಾಯಗೊಂಡವರನ್ನು ಅಲ್ಲಿ ನೆರೆದ ಸಾರ್ವಜನಿಕರು ಚಿಕಿತ್ಸೆ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ

Crime Reported in Mulki PS  

ಪಿರ್ಯಾದಿ Jecinta Rego ದಾರರ ಗಂಡ ಪೆಡ್ರಿಕ್ ರವರು ಈ ಹಿಂದೆ ಹೊರದೇಶದಲ್ಲಿ ಕೆಲಸ ಮಾಡುತ್ತಿದ್ದು  ಸುಮಾರು 08 ವರ್ಷದ ಹಿಂದೆ ಊರಿಗೆ ಬಂದು ಮನೆಯಲ್ಲೇ ಇದ್ದವರು ವಿಪರೀತ ಕುಡಿತದ ಚಟವನ್ನು ಹೊಂದಿದ್ದು, ದಿನಾಂಕ 02-12-2021 ರಂದು ರಾತ್ರಿ ಸುಮಾರು 10.00 ಗಂಟೆಗೆ ಹೊರಗಡೆ ಹೋಗಿದ್ದು ಮನೆಗೆ ಬಾರದೇ ದಿನಾಂಕ 03-12-2021 ರಂದು ಸಮಯ ಸುಮಾರು ಬೆಳ್ಳಿಗ್ಗೆ 10.30 ಗಂಟೆಗೆ ಮನೆಗೆ ಬಂದವರು ಪಿರ್ಯಾದಿದಾರರಲ್ಲಿ ಇನ್ನು ನಿಮಗೆ ಏನೂ ತೊಂದರೆ ಮಾಡುವುದಿಲ್ಲ ಎಲ್ಲಿಯಾದರೂ ಹೋಗಿ ದುಡಿದು ತಿನ್ನುತ್ತೇನೆ ಎಂದು ಹೇಳಿ ಬೆಳಿಗ್ಗೆ ಸುಮಾರು 11.30 ಗಂಟೆಗೆ ಮನೆಯಿಂದ ಹೋದವರು ಮನೆಗೆ ಬಾರದೇ ಇದ್ದುದರಿಂದ ನೆರೆಕೆರೆಯವರಲ್ಲಿ ಹಾಗೂ   ಸಂಬಂಧಿಕರಿಗೆ ಪೋನ್ ಕರೆ ಮಾಡಿ ವಿಚಾರಿಸಿ ಪತ್ತೆಯ ಬಗ್ಗೆ ಪ್ರಯತ್ನಿಸಿದಲ್ಲಿ  ಈವರೆಗೆ ಪತ್ತೆಯಾಗಿರುವುದಿಲ್ಲ. ಎಂಬಿತ್ಯಾದಿ ಸಾರಾಂಶ.

ಕಾಣೆಯಾದವರ  ಚಹರೆ ಗುರುತುಗಳು

ಹೆಸರು : ಫೆಡ್ರಿಕ್ ರೆಗೋ

ವಯಸ್ಸು : 69 ವರ್ಷ

ಎತ್ತ ರ : 5.6”

ಮೈ ಬಣ್ಣ : ಎಣ್ಣೆ ಕಪ್ಪು ಮೈ ಬಣ್ಣ

ಭಾಷೆ: ತುಳು,ಕನ್ನಡ, ಕೊಂಕಣಿ,ಇಂಗ್ಲೀಷ್,ಹಿಂದಿ,ತಮಿಳು,ಭಾಷೆ ಬಲ್ಲವರಾಗಿರುತ್ತಾರೆ.

ಕೂದಲು : ಬೋಳು ತಲೆ , ಹಿಂದುಗಡೆ ಸ್ವಲ್ಪ ಬಿಳಿ ಕೂದಲು

ದುಂಡು ಮುಖ , ಸಪೂರ ಶರೀರ , ಮನೆಯಿಂದ ಹೋಗುವಾಗ ಆಕಾಶ ನೀಲಿ ಬಣ್ಣದ ಚೌಕಳಿ ಇರುವ ಉದ್ದ ತೋಳಿನ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟನ್ನು ಧರಿಸಿರುತ್ತಾರೆ.

Crime Reported in Kavoor PS

ಫಿರ್ಯಾದು VASANTHA SHETTYದಾರರು ದಿನಾಂಕ: 11-12-2021 ರಂದು ರಾತ್ರಿ ಸಮಯ ಸುಮಾರು 09-45  ಗಂಟೆಗೆ ಫಿರ್ಯಾದುದಾರರು ಹೊಂಡಾ ಆ್ಯಕ್ಟಿವಾ ಕಂಪನಿಯ 6 ಜಿ ಸ್ಕೂಟರ್ ನಂಬ್ರ  KA-19-HF 6992 ನೇಯದರ ಸ್ಕೂಟರ್ ನ್ನು ಕೂಳೂರಿನ ದೇವಿ ಪ್ರಸಾದ್ ಜನರಲ್ ಸ್ಟೋರ್ ನ ಬಳಿ ಕೀ ಯನ್ನು ಸ್ಕೂಟರ್ ನಲ್ಲಿಯೇ ಬಿಟ್ಟು ದೇವಿಪ್ರಸಾದ್ ಬಾರ್ ಹೋಗಿ ಅಮಲು ಪದಾರ್ಥ ಸೇವಿಸಿ ರಾತ್ರಿ ಸಮಯ ಸುಮಾರು 10-00 ಗಂಟೆಗೆ ಬಂದು ನೋಡಿದಾಗ ಫಿರ್ಯಾದುದಾರರು ನಿಲ್ಲಿಸಿದ್ದ ಸ್ಕೂಟರ್ ಕಾಣಿಸದೇ ಇದ್ದು, ನಂತರ ಸ್ಕೂಟರನ್ನು ಸುತ್ತಮುತ್ತಲಿನಲ್ಲಿ ಹಾಗು ಕೂಳೂರು ,ರಾಯಿಕಟ್ಟೆಯ ,ಮಂಗಳೂರು ಆಸುಪಾಸುಗಳಲ್ಲಿ ಹುಡುಕಾಡಿದ್ದಲ್ಲದೇ ಫಿರ್ಯಾದುದಾರರ ಸ್ನೇಹಿತರಲ್ಲಿ, ಪರಿಚಯಸ್ಥರಲ್ಲಿ ವಿಚಾರಿಸಿ ಹುಡುಕಾಡಿದಲ್ಲಿ ಪತ್ತೆಯಾಗಲಿಲ್ಲ. ನಂತರ ಫಿರ್ಯಾದುದಾರರು ಸ್ಕೂಟರ್ ಎಲ್ಲಿಯಾದರೂ ಸಿಗಬಹುದು ಎಂದು ಭಾವಿಸಿ ಈ ದಿನದ ವರೆಗೆ ಹುಡುಕಾಡಿದಲ್ಲಿ ಸ್ಕೂಟರ್ ಎಲ್ಲಿಯೂ ಪತ್ತೆಯಾಗದೇ ಇದ್ದ ಕಾರಣ ಈ ದಿನ ತಡವಾಗಿ ದೂರು ನೀಡುವುದಾಗಿದೆ. ಫಿರ್ಯಾದುದಾರರ ಬಾಬ್ತು KA-19-HF 6992  ನೇ ನಂಬ್ರದ HONDA ACTIVA 6G ಸ್ಕೂಟರ್ ನ್ನು ಯಾರೋ ಕಳ್ಳರು ದಿನಾಂಕ 11-12-2021 ರಂದು ರಾತ್ರಿ 09-45  ಗಂಟೆಯಿಂದ  ರಾತ್ರಿ 10-00 ಗಂಟೆಯ  ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿರುವುದಾಗಿದೆ.. ಕಳವಾದ ಸ್ಕೂಟರ್ ನ ಅಂದಾಜು ಮೌಲ್ಯ ರೂ 60,000/- ಆಗಬಹುದು. ಕಳವಾದ ಮೋಟಾರ್ ಬೈಕನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ

Crime Reported in Ullal PS

ದಿನಾಂಕ 14-12-2021 ರಂದು 11-30 ಗಂಟೆಗೆ ಪಿರ್ಯಾದಿSunil Kumar ದಾರರ ಮನೆಗೆ ಆರೋಪಿ 1ನೇ Rokesh K R ಯವನು ಬಂದು ಬಾಗಿಲು ಬಡಿದು ಪಿರ್ಯಾದಿಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದು ಮಾತನಾಡಲಿದೆ ಎಂದು ಹೊರಗೆ ಕರೆದುಕೊಂಡು ಹೋದಾಗ ಹೊರಗಡೆ ಆಟೋ ರಿಕ್ಷಾದಲ್ಲಿ ಆರೋಪಿ 2 Durgesh(A2) ನೇಯವನು ಕುಳಿತುಕೊಂಡಿದ್ದ ಸಮಯ ಆರೋಪಿ 1ನೇಯವನು  ಪಿರ್ಯಾದಿಯನ್ನು ಉದ್ದೇಶಿಸಿ “ ಬೇವರ್ಸಿ ..ಮಗ ನೀನು ದೊಡ್ಡ ಜನನಾ , ನನಗೆ ಬಾರಿ ಬುದ್ದಿ ಹೇಳಿತ್ತಿಯಾ ಎಂದು ಬೈಯ್ಯುತ್ತಿದ್ದಾಗ ಪಿರ್ಯಾದಿ ತನ್ನ ಗೆಳೆಯ ಜಯಪ್ರಕಾಶನನ್ನು ಬರುವಂತೆ ತಿಳಿಸಿದಾಗ  ಆತನು ಬಂದ ಸಮಯ ಆರೋಪಿ 2 ನೇ ಯವನು  ರಿಕ್ಷಾದಿಂದ ಇಳಿದು ಬಂದಾಗ ಆರೋಪಿ  1 ನೇ ಯವನು ತನ್ನ ಕಿಸೆಯಲ್ಲಿದ್ದ ಚಾಕುವನ್ನು ತೆಗೆದು ಪಿರ್ಯಾದಿಯ  ಎಡ ಬದಿಯ ಹೊಟ್ಟೆಗೆ ,ಬಲ ಕೈಗೆ , ಎಡ ಕಾಲಿನ ಮೊಣ ಗಂಟಿಗೆ ಮತ್ತು ಎಡ ಬದಿಯ ಬೆನ್ನಿಗೆ ಚೂರಿಯಿಂದ  ಇರಿದು ಆಗ ತಡೆಯಲು ಬಂದ ಜಯಪ್ರಕಾಶನಿಗೂ  ಆರೋಪಿ 1 ನೇ ಯವನು ನೀನು ಬಾರಿ ತಡೆಯಲು ಬರುತ್ತೀಯಾ ಎಂದು ಹೇಳಿ ಕೈಯಲ್ಲಿದ್ದ ಚಾಕುವಿನಿಂದ ಎಡ ಬದಿಯ ಕಿವಿಗೆ ಚುಚ್ಚಿ ಗಾಯಗೊಳಿಸಿದ ಸಮಯ  ಆರೋಪಿ 2 ನೇಯವನು ಕೈಗಳಿಂದ  ಯದ್ವಾ ತದ್ವಾ ಮೈ ಕೈ ಗಳಿಗೆ ಗುದ್ದಿ ಕಾಲಿನಿಂದ ತುಳಿದು ಸ್ಥಳದಿಂದ ಪರಾರಿಯಾಗಿದ್ದು  ಈ ಬಗ್ಗೆ ಪಿರ್ಯಾದಿ ಮತ್ತು ಜಯಪ್ರಕಾಶ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿರುವುದು ಎಂಬಿತ್ಯಾದಿ ಸಾರಾಂಶ

 

ಇತ್ತೀಚಿನ ನವೀಕರಣ​ : 15-12-2021 07:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080