ಅಭಿಪ್ರಾಯ / ಸಲಹೆಗಳು

Crime Reported in : Konaje PS   

ಪಿರ್ಯಾದಿದಾರರಾದ Sudesh Kumar ರವರು  ಪಜೀರ್ ಗ್ರಾಮದ ಕಂಬ್ಲಪದವಿನಲ್ಲಿರುವ ಇನ್ಪೋಸಿಸ್ ಸಂಸ್ಥೆ ಇಲ್ಲಿ ಸೆಕ್ಯೂರಿಟಿ ಆಫಿಸರ್ ಆಗಿ ಕೆಲಸ ನಿರ್ವಹಿಸಿಕೊಂಡಿದ್ದು ಈ ದಿನ ದಿನಾಂಕ 15.02.2022 ರಂದು  ಮುಲ್ಕಿ ನಿವಾಸಿ ರಾಜೇಶ್ ಕುಮಾರ್ ,ಪ್ರಾಯ:33 ವರ್ಷ, ಇವರು ಸುಮಾರು ವರ್ಷಗಳಿಂದ ಹೊರಗುತ್ತಿಗೆ ಆದಾರದಲ್ಲಿ ಇಲ್ಲಿ ಪ್ಲಂಬಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು ಈ ದಿನ ದಿನಾಂಕ 15.02.2022 ರಂದು ಎಂದಿನಂತೆ ಕೆಲಸಕ್ಕೆ ಬಂದಿದ್ದು ಸಂಜೆ 4 ಗಂಟೆ ವರೆಗೆ ಪ್ಲಂಬ್ಬಿಂಗ್ ಕೆಲಸ ನಿರ್ವಹಿಸಿರುತ್ತಾರೆ ನಂತರ ಸಂಜೆ 05.30 ಗಂಟೆಗೆ ಮನೆಗೆ ಹೋಗಬೇಕಾದವರು ಹೋಗದೇ ಇದ್ದು ಈ ಬಗ್ಗೆ ಆತನ ಸಹೋದರ ನಮ್ಮ  ಸಂಸ್ಥೆಗೆ ಸುಮಾರು ರಾತ್ರಿ 09.30 ಗಂಟೆಗೆ ಕರೆಮಾಡಿ ರಾಜೇಶ್ ಮನೆಗೆ ಬಾರದ ಇರುವ ಬಗ್ಗೆ ವಿಚಾರಿಸಿದ್ದು ಈ ಬಗ್ಗೆ ನಮ್ಮ ಸಂಸ್ಥೆಯ ಸಿಸಿ ಕ್ಯಾಮಾರಗಳನ್ನು ಪರಿಶೀಲಿಸಲಾಗಿ ಎಸ್ ಡಿ ಬಿ -04 ನೇ ಕಟ್ಟಡದ ಒಳಗೆ ಸುಮಾರು 04 ಗಂಟೆಗೆ ಪ್ರವೇಶಿಸಿದಂತೆ ಕಂಡುಬಂದಿದ್ದು ಆನಂತರ ಅಲ್ಲಿಂದ ಕಾಣೆಯಾಗಿರುತ್ತಾರೆ ಎಂಬಿತ್ಯಾದಿ.

 

Crime Reported in CEN Crime PS

ಪಿರ್ಯಾದಿದಾರರು ನಿರಂತರವಾಗಿ ಗೂಗಲ್ ನಲ್ಲಿ https://getnaukri.in ಎಂಬ ವೆಬ್ ಸೈಟ್ ನಲ್ಲಿ ನೌಕರಿಯ ಬಗ್ಗೆ ವೈಯಕ್ತಿಕ ವಿವರಗಳನ್ನು ಹಾಕಿದ್ದು, ಹೀಗಿರುವಾಗ ದಿನಾಂಕ 14-01-2022 ರಂದು ಗೌರವ್ ಎಂಬ ವ್ಯಕ್ತಿ 9911566528 ನೇದರಿಂದ ಪಿರ್ಯಾದಿದಾರರ ದೂರವಾಣಿ ಸಂಖ್ಯೆ ಗೆ ಕರೆ ಮಾಡಿ ಪಿರ್ಯಾದಿದಾರರಿಗೆ https://getnaukri.inಎಂಬ ವೆಬ್ ಸೈಟ್ ನಲ್ಲಿ ಹೋಗಿ ತಮ್ಮ ವೈಯಕ್ತಿಕ ವಿವರಗಳನ್ನು ನೀಡಿ ನೋಂದಾಯಿಸಿಕೊಳ್ಳುವಂತೆ ತಿಳಿಸಿರುತ್ತಾರೆ ಅದರಂತೆ ಪಿರ್ಯಾದಿದಾರರು  ರೂ.4,130/- ರೂಗಳನ್ನು ಪಾವತಿಸಿ ನೋಂದಾಯಿಸಿಕೊಂಡಿರುತ್ತಾರೆ, ನಂತರದಲ್ಲಿ ದಾಖಲಾತಿ ಪರಿಶೀಲನೆಗಾಗಿ ರೂ.13,227/- ರೂಗಳನ್ನು,ಸಂದರ್ಶನಗಾಗಿ ರೂ.20,886/- ರೂಗಳನ್ನು,ಪೊಲೀಸ್ ಪರಿಶೀಲನೆಗಾಗಿ ರೂ.18,101/- ರೂಗಳನ್ನು,ಸಂಬಳ ಪರಿಶೀಲನೆಗಾಗಿ ರೂ.25,063/- ರೂಗಳನ್ನು,ಪಾವತಿಸಿದ ಹಣ ಮರುಪಾವತಿ ಆಗುತ್ತದೇ ಎಂತಲೂ ತಿಳಿಸಿ ರೂ.65,025/- ರೂಗಳನ್ನು ನಂತರ ಪ್ರಸ್ತಾಪ ಪತ್ರ ನೀಡುವುದಕ್ಕೆ ರೂ.32,500/-ಹಣವನ್ನು ನೀಡುವಂತೆ ತಿಳಿಸಿದಂತೆ ಪಿರ್ಯಾದಿದಾರರು ಈ ರೀತಿಯಾಗಿ ದಿನಾಂಕ 14-01-2022 ರಿಂದ 17-01-2022 ರವರೆಗೆ ಪಿರ್ಯಾದಿದಾರರ ತನ್ನ ಹೆಚ್.ಡಿ.ಎಪ್.ಸಿ ಖಾತೆ ಮತ್ತು  ಡೇಬಿಟ್ ಕಾರ್ಡ ಹಾಗೂ ಕ್ರೇಡಿಟ್ ಕಾರ್ಡ ಮುಖಾಂತರ  ಹಂತ ಹಂತವಾಗಿ  ಒಟ್ಟು ರೂ,1,78,933/-ರೂಪಾಯಿ ಹಣವನ್ನು  UPI ಮುಖಾಂತರ ವರ್ಗಾವಣಿ ಮಾಡಿರುತ್ತಾರೆ.ನಂತರದಲ್ಲಿ ಸದ್ರಿ ಕಂಪನಿಯವರು ದಿನಾಂಕ 02-02-2022 ರಂದು ಪಿರ್ಯಾದಿದಾರರ ಹೆಚ್.ಡಿ.ಎಪ್.ಸಿ ಖಾತೆಗೆ ರೂ.17,430/- ರೂಪಾಯಿ ಹಣವನ್ನು ಮರುಪಾವತಿಸಿರುತ್ತಾರೆ ಆದರೆ ಇನ್ನುಳಿದ ರೂ.1,61,503/-  ಹಣವನ್ನು     ಮರುಪಾವತಿಸಿರವುದಿಲ್ಲ  ಆರೋಪಿಗಳಾದ ಗೌರವ್ ಮತ್ತು ಅಶ್ವಿನ್ ಎಂಬುವವರು ಪಿರ್ಯಾದಿದಾರರಿಗೆ ಉದ್ಯೋಗ ಕೊಡಿಸುತ್ತೇನೆಂದು ತಿಳಿಸಿ ಪಿರ್ಯಾದಿದಾರರ ಹೆಚ್.ಡಿ.ಎಪ್.ಸಿ ಬ್ಯಾಂಕ್ ಖಾತೆ, ಡೇಬಿಟ್ ಕಾರ್ಡ ಹಾಗೂ ಕ್ರೇಡಿಟ್ ಕಾರ್ಡ ಮುಖಾಂತರ ಹಂತ ಹಂತವಾಗಿ ಒಟ್ಟು ರೂ.1,61,503/- ರೂಪಾಯಿ  ಹಣವನ್ನು ಮೋಸದಿಂದ ಪಡೆದುಕೊಂಡು ವಂಚಿಸಿರುತ್ತಾರೆ ಎಂಬಿತ್ಯಾದಿಯಾಗಿದೆ.

Crime Reported in Surathkal PS         

ಪಿರ್ಯಾದಿದಾರರಾದ ASIF APATHBANDHAVA ರವರು ಸುರತ್ಕಲ್ ಎನ್.ಐ.ಟಿ.ಕೆ ಯ ಬಳಿ ಇರುವ ಟೋಲ್ ಗೇಟನ್ನು ರದ್ದು ಪಡಿಸುವಂತೆ ದಿನಾಂಕ: 07-02-2022 ರಿಂದ ಅನಿದಿಷ್ಷಾವಧಿ ಮುಷ್ಕರ  ನಿರತನಾಗಿರುತ್ತಾರೆ.  ದಿನಾಂಕ: 16-02-2022 ರಂದು  ರಾತ್ರಿ 00-30 ಗಂಟೆಯ ವೇಳೆಗೆ ಪಿರ್ಯಾದಿದಾರರು ಮುಷ್ಕರದ ಶಿಬಿರದ ಒಳಗಡೆ ಇರುವ ಸಮಯ 10 ಕಿಂತ ಹೆಚ್ಚು ಮಂದಿ  ಮಂಗಳಮುಖಿಯರು ಶಿಬಿರದ ಬಳಿಗೆ ಬಂದು ಅವಾಚ್ಯ ಶಬ್ದದಿಂದ ಬೈದು ಹಲ್ಲೆ ಮಾಡಲು ಪ್ರಯತ್ನಿಸಿ ಜೀವ ಬೆದರಿಕೆ ಹಾಕಿರುವುದಾಗಿ  ಪಿರ್ಯಾದಿ ಸಾರಾಂಶವಾಗಿರುತ್ತದೆ.

Crime Reported in Bajpe PS               

 “ಫಿರ್ಯಾದಿದಾರರಾದ P.M. Abdul Majeed ರವರು ದಿನಾಂಕ 15.02.2022 ರಂದು ತನ್ನ ಬಾಬ್ತು ಸ್ಕೂಟರ್ ನಂಬ್ರ ಕೆಎ-19ಹೆಚ್.ಜಿ-7611ನೇಯದರಲ್ಲಿ ಹೆಲ್ಪರ್ ಜೆಸಿಲ್ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಪಡ್ಡಾಯಿಪದವು ಎಂಬಲ್ಲಿಗೆ ಕೆಲಸಕ್ಕೆಂದು ಹೋಗಿ ಕೆಲಸ ಮುಗಿಸಿ ವಾಪಾಸ್ಸು ಕೈಕಂಬಕ್ಕೆ ಸದ್ರಿ ಸ್ಕೂಟರಿನಲ್ಲಿ ಹೆಲ್ಪರ್ ಜೆಸಿಲ್ ರವರನ್ನು ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಬರುತ್ತಿರುವಾಗ ಬೆಳಿಗ್ಗೆ ಸುಮಾರು 11:00 ಗಂಟೆಗೆ ಮಂಗಳೂರು ತಾಲೂಕು, ಕಂದಾವರ ಗ್ರಾಮದ ಪೊಂಪೈ ಚರ್ಚ್ ದ್ವಾರದ ಬಳಿ ತಲುಪುತ್ತಿದ್ದಂತೆಯೇ ಫ್ಲಾಟಿನ ಬಳಿ ನಿಲ್ಲಿಸಿದ್ದ ಕಾರ್ ನಂಬ್ರ ಕೆಎ-20ಎಂಎ-2284 ನೇಯದನ್ನು ಅದರ ಚಾಲಕನು ನಿರ್ಲಕ್ಷತನದಿಂದ ಅತೀವೇಗವಾಗಿ ಹಿಂದಕ್ಕೆ ಚಲಾಯಿಸಿದ ಪರಿಣಾಮ ಕಾರು ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಎಸೆಯಲ್ಪಟ್ಟು ಬಲ ಕೈ ಭುಜಕ್ಕೆ ಮುರಿತದ ಗಾಯ ಎಡಕಾಲಿನ ಮೊಣಗಂಟು, ಕೋಲು ಕಾಲಿಗೆ ರಕ್ತಗಾಯ ಸೊಂಟಕ್ಕೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳು ಫಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ” ಎಂಬಿತ್ಯಾದಿ. 

ಇತ್ತೀಚಿನ ನವೀಕರಣ​ : 16-02-2022 07:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080