ಅಭಿಪ್ರಾಯ / ಸಲಹೆಗಳು

Crime Reported in Traffic North Police Station       

ದಿನಾಂಕ; 15-04-2022 ರಂದು ಪಿರ್ಯಾದಿ P A Hasanabba ದಾರರು ಕಾಟಿಪಳ್ಳದ ತನ್ನ ಮನೆಯಿಂದ ಜಂಕ್ಷನ್ ಕಡೆಗೆ ಹಾದು ಹೋಗುವ ರಸ್ತೆಯ ಬದಿಯಲ್ಲಿ TAB ಜನರಲ್ ಸ್ಟೋರ್ ಅಂಗಡಿಯ ಎದುರು ನಡೆದುಕೊಂಡು ರಸ್ತೆಯ ದಾಟುತ್ತಾ ರಸ್ತೆಯ ಇನ್ನೊಂದು ಬದಿಗೆ ತಲುಪುತ್ತಿದ್ದಂತೆ ಸಂಜೆ ಸಮಯ 6-30 ಗಂಟೆಗೆ ಗಣೇಶಪುರ ಕೈಕಂಬ ಕಡೆಯಿಂದ ಕಾಟಿಪಳ್ಳ ಕಡೆಗೆ ಸ್ಕೂಟರ್ ನಂಬ್ರ KA-19-EU-6758 ನೇಯ ಸವಾರ ಮೊಹಮ್ಮದ್ ಬಶೀರ್ ಸಹ ಸವಾರ ಮೊಹಮ್ಮದ್ ರಹೀಲ್ ರವರನ್ನು ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಸವಾರಿಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು, ಸ್ಕೂಟರ್ ಸವಾರ, ಹಾಗೂ ಸಹಸವಾರ ಕಾಂಕ್ರಿಟ್ ರಸ್ತೆಗೆ ಸ್ಕೂಟರ್ ಸಮೇತ ಬಿದ್ದುದರಿಂದ ಸ್ಕೂಟರ್ ಸವಾರಿನಿಗೆ ಎಡಕಾಲಿನ ಮೊಣಗಂಟಿಗೆ ಹಾಗೂ ಪಾದಕ್ಕೆ ತರಚಿದ ರೀತಿಯ ಗಾಯವಾಗಿದ್ದು ಹಾಗೂ ಪಿರ್ಯಾದಿದಾರರ ಹಣೆಗೆ ಕೆನ್ನೆಗೆ ಗಲ್ಲಕ್ಕೆ ಬಲಕೈಯ ಬೆರಳುಗಳಿಗೆ ಗುದ್ದಿದ ರೀತಿಯ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ  ಹಾಗೂ ಸಹ ಸವಾರನಿಗೆ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮಂಗಳೂರಿನ ಮಂಗಳ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.     

Crime Reported in Ullal PS

ದಿನಾಂಕ :16-04-2022 ರಂದು ಪಿರ್ಯಾದಿ Pradeep T R PSI ದಾರರು ಠಾಣಾ ಸರಹದ್ದಿನಲ್ಲಿ  ರೌಂಡ್ಸ್ ಕರ್ತವ್ಯದ ಬಗ್ಗೆ ಸಿ.ಪಿ.ಸಿ  ಸತೀಶ ಇವರನ್ನು ಕರೆದುಕೊಂಡು ಠಾಣೆಯಿಂದ ಬೆಳಿಗ್ಗೆ 10-00 ಗಂಟೆಗೆ ಹೊರಟು ಠಾಣಾ ಸರಹದ್ದಿನಲ್ಲಿ ಸಂಚರಿಸಿಕೊಂಡಿದ್ದು, ಬೆಳಿಗ್ಗೆ 10-30 ಗಂಟೆಗೆ ಮೊಗವೀರ ಪಟ್ನದ ಬಳಿಯಲ್ಲಿ ಇರುವಾಗ, ಕೋಟೆಪುರದಲ್ಲಿ ಹರಿಯುತ್ತಿರುವ ನೇತ್ರಾವತಿ ನದಿ ತೀರದಿಂದ ಪಿಕ್ ಅಪ್ ವಾಹನದಲ್ಲಿ ಅಕ್ರಮ ಮರಳು ತೆಗೆಯುತ್ತಿರುವ ಬಗ್ಗೆ  ಪೊಲೀಸ್ ನಿರೀಕ್ಷಕರು ಮಾಹಿತಿ ನೀಡಿದ್ದು ಕೂಡಲೇ ಸ್ಥಳಕ್ಕೆ ಬರುವಂತೆ ಹೊಯ್ಸಳ ಕರ್ತವ್ಯದಲ್ಲಿ ಇರುವ ಸಿಬ್ಬಂದಿಯವರಿಗೆ ತಿಳಿಸಿದ್ದು  ಹೊಯ್ಸಳ ಕರ್ತವ್ಯದಲ್ಲಿದ್ದವರು ಮತ್ತು ಪಿರ್ಯಾದಿದಾರರು ಇಲಾಖಾ ವಾಹನದಲ್ಲಿ ಬೆಳಿಗ್ಗೆ 10-40 ಗಂಟೆಗೆ ಕೋಟೆಪುರ ಜಂಕ್ಷನ್ ಬಳಿಗೆ ಬರುತ್ತಿದ್ದಂತೆ ಪಿರ್ಯಾದಿದಾರರ ಮುಂದಿನಿಂದ  ಪಿಕ್ ಅಪ್ ವಾಹನ ಬರುತ್ತಿದ್ದುದನ್ನು ಕಂಡು ನಿಲ್ಲಿಸಲು ಸೂಚಿಸಿದ್ದು, ಪಿಕ್ಅಪ್ ಚಾಲಕನು ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದು, ಪಿಕ್ ಅಪ್ ವಾಹನದ ಬಳಿಗೆ ಹೋಗುತ್ತಿದ್ದಂತೆ, ಪಿಕ್ ಅಪ್ ವಾಹನದ ಚಾಲಕನು ಪಿಕ್ ಅಪ್ ವಾಹನದಿಂದ ಇಳಿದು ಮುಂದಕ್ಕೆ ರಸ್ತೆಯಲ್ಲಿ ಓಡಿರುತ್ತಾನೆ. ನಂತರ ಪಿಕ್ ಅಪ್ ವಾಹನ ನೊಂದಣಿ ನಂಬ್ರ ನೋಡಲಾಗಿ KL 56 E-5101 ಆಗಿದ್ದು, ಇದು Mahindra ಕಂಪೆನಿಯ BOLERO MAXITRUCK ಪಿಕ್ ಅಪ್ ವಾಹನ ಆಗಿರುತ್ತದೆ.  ಪಿಕ್ ಅಪ್ ಬಾಡಿಯಲ್ಲಿ ಪರಿಶೀಲಿಸಿದಾಗ ಸಾಮಾನ್ಯ ಮರಳು ತುಂಬಿರುವುದು ಕಂಡು ಬಂದಿರುತ್ತದೆ. KL 56 E-5101 ಪಿಕ್ ಅಪ್ ವಾಹನದ ಚಾಲಕ ಮತ್ತು ಮಾಲಕರು ಸೇರಿಕೊಂಡು ಕರ್ನಾಟಕ ರಾಜ್ಯ ಸರಕಾರದಿಂದ ಯಾವುದೇ ಪರವಾನಿಗೆ ಪಡೆಯದೆ ರಾಜ್ಯಸ್ವಕ್ಕೆ ನಷ್ಟವನ್ನುಂಟು ಮಾಡಿ ಅಕ್ರಮ ಲಾಭಗಳಿಸುವ ಉದ್ದೇಶದಿಂದ ಸರಕಾರಿ ಪೊರಂಬೋಕು ಸ್ಥಳವಾದ ನೇತ್ರಾವದಿ ನದಿಯಿಂದ ಸಾಮಾನ್ಯ ಮರಳನ್ನು ಕಳವು ಮಾಡಿ ಪಿಕ್ ಅಪ್ ವಾಹನಕ್ಕೆ  ತುಂಬಿಸಿಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದ ಕಾರಣ ಸಾಮಾನ್ಯ ಮರಳನ್ನು ತುಂಬಿಕೊಂಡಿದ್ದ ಪಿಕ್ ಅಪ್  ವಾಹನವನ್ನು  ಠಾಣೆಗೆ ತಂದು ಈ ಬಗ್ಗೆ  ವರದಿಯನ್ನು ತಯಾರಿಸಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

Crime Reported in Kavoor PS

ದಿನಾಂಕ: 15/04/2022 ರಂದು ಪಿರ್ಯಾದಿ RAGHAVA S PADIL  ದಾರರು ಸಿಬ್ಬಂದಿಗಳ ಜೊತೆ ಇಲಾಖಾ ವಾಹನದಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಾ ಬೊಂದೆಲ್ ಜಂಕ್ಷನ  ಕಡೆ ಇದ್ದಾಗ ಬೊಂದೆಲ್ ಗ್ರೌಂಡ್ ಬಳಿ ಓರ್ವ ವ್ಯಕ್ತಿಯು ಗಾಂಜಾ ಸೇವನೆ ಮಾಡಿ ಅಮಲಿನಲ್ಲಿರುವಂತೆ ಕಂಡು ಬರುತ್ತಿರುವುದಾಗಿ ಸಾರ್ವಜನಿಕರು ನೀಡಿದ ಮಾಹಿತಿಯಂತೆ ಸಮಯ ಸಂಜೆ 17:30 ಗಂಟೆಗೆ ಬೊಂದೆಲ್ ಗ್ರೌಂಡ್ ಬಳಿ ತಲುಪಿದಾಗ ಆರೋಪಿತನಾದ ರಾಮಕೃಷ್ಣ (24) ಎಂಬವನು ಮೈದಾನದ ಬಳಿ ನಿಂತುಕೊಂಡಿದ್ದು ಮಾತನಾಡುವಾಗ ತೊದಲುತ್ತಿದ್ದು ಹಾಗೂ ಗಾಂಜಾ ವಾಸನೆ ಬರುತ್ತಿದ್ದರಿಂದ ಅವನನ್ನು ಸಿಬ್ಬಂದಿಗಳ ಸಹಾಯದಿಂದ ವಶಕ್ಕೆ ಪಡೆದುಕೊಂಡು ಸದ್ರಿಯವನಲ್ಲಿ ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಲಾಗಿದೆಯೇ ಎಂದು ಕೇಳಲಾಗಿ ಸಿಗರೇಟಿನೊಳಗೆ ಗಾಂಜಾ ತುಂಬಿಸಿ ಗಾಂಜಾ ಸೇವನೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಆತನನ್ನು ವೈದ್ಯಕೀಯ ತಪಾಸಣೆ ಬಗ್ಗೆ  ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ತಜ್ಞ ವೈದ್ಯರು ಆರೋಪಿತನನ್ನು ಪರೀಕ್ಷಿಸಿ ಆರೋಪಿತನು ಗಾಂಜಾ ಸೇವನೆ ಮಾಡಿರುವುದಾಗಿ  ದೃಡಪತ್ರ ನೀಡಿರುತ್ತಾರೆ ಎಂಬಿತ್ಯಾದಿ.

 Crime Reported in Mulki PS

ದಿನಾಂಕ: 13-04-2022 ರಂದು ಪಿರ್ಯಾದಿ Kusumadhara K-PI ದಾರರು ಸಿಬ್ಬಂದಿಯವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ 18:30 ಗಂಟೆಗೆ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡಿನಿಂದ ರೈಲ್ವೇ ನಿಲ್ದಾಣಕ್ಕೆ ಹೋಗುವ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಅಹಮ್ಮದ್ ನಾಸೀರ್, ಪ್ರಾಯ : 30 ವರ್ಷ, ವಾಸ: ಡೋರ್ ನಂಬ್ರ # 19-89/103G4, ಕೆ.ಎಸ್.ರಾವ್ ನಗರ, ಹಿಂದೂ ರುದ್ರಭೂಮಿ ಹಿಂಭಾಗ, ಕಾರ್ನಾಡು ಗ್ರಾಮ, ಮಂಗಳೂರು ತಾಲೂಕು ಎಂಬಾತನು ಹೊಗೆಬತ್ತಿಯನ್ನು ಸೇದುತ್ತಿರುವುದು ಕಂಡುಬಂದಿದ್ದು, ವಾಹನವನ್ನು ನಿಲ್ಲಿಸಿ ಆತನ ಬಳಿ ತೆರಳಿ ವಿಚಾರಿಸಿದಾಗ ಆತ ಹೊಗೆ ಬತ್ತಿಯೊಂದಿಗೆ ಗಾಂಜಾ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಆತನನ್ನು ವೈದ್ಯಕೀಯ ತಪಾಸಣೆ ಬಗ್ಗೆ  ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ತಜ್ಞ ವೈದ್ಯರು ಆರೋಪಿತನನ್ನು ಪರೀಕ್ಷಿಸಿ ಆರೋಪಿತನು ಗಾಂಜಾ ಸೇವನೆ ಮಾಡಿರುವುದಾಗಿ  ದೃಡಪತ್ರ ನೀಡಿರುವ ಮೇರೆಗೆ ಆರೋಪಿ ವಿರುದ್ದ ಎನ್.ಡಿ.ಪಿ.ಎಸ್. ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 16-04-2022 04:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080