ಅಭಿಪ್ರಾಯ / ಸಲಹೆಗಳು

Crime Reported in: Mangalore West Traffic PS                                

ಈ ಪ್ರಕರಣದ ಸಾರಂಶವೇನೆಂದರೆ ಪಿರ್ಯಾದಿದಾರರಾದ ಯತೀನ್ ರವರು ದಿನಾಂಕ:15-06-2022 ರಂದು ಸಂಜೆ ಸಮಯ ಸುಮಾರು 7-30 ಗಂಟೆಗೆ ಮನೆಯಿಂದ ಹೊರಟು ಉರ್ವಸ್ಟೋರ್ ಕಡೆಗೆ ಹೊರಡುತ್ತಿರುವಾಗ ಉರ್ವಸ್ಟೋರ್ ಕಡೆಯಿಂದ KA-19-EN-0481ನೇ ನಂಬ್ರದ ಆಕ್ಟೀವಾ ಸ್ಕೂಟರ್ ನಲ್ಲಿ ಬಂದು ಅಶೋಕ ನಗರ ಅಂಚೆ ಕಚೇರಿ ಬಳಿಯಿರುವ ಮೀಡಿಯನ್ ನಲ್ಲಿ “U” ಟರ್ನ್ ಮಾಡುತ್ತಿರುವಾಗ್ಗೆ ಕೊಟ್ಟಾರ ಚೌಕಿ ಕಡೆಯಿಂದ ಉರ್ವಸ್ಟೋರ್ ಕಡೆಗೆ KA-12-S-0848ನೇ ಬುಲೆಟ್ ದ್ವಿ ಚಕ್ರ ವಾಹನ ಸವಾರನು ಸಹಸವಾರನನ್ನು ಕುಳ್ಳಿರಿಸಿಕೊಂಡು ತೀರಾ ನಿರ್ಲಕ್ಷ್ಯತನ ಮತ್ತು ಅತೀ ವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು “U” ಟರ್ನ್ ಮಾಡುತ್ತಿದ್ದ KA-19-EN-0481ನೇ ನಂಬ್ರದ ಆಕ್ಟೀವಾ ಸ್ಕೂಟರ್ ನ ಎಡ ಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್ ಸವಾರ ಗುರುಪ್ರಸಾದ್ ನು ರಸ್ತೆಗೆ ಬಿದ್ದು ಎಡಕಾಲಿನ ಪಾದದ ಬಳಿ ಮೂಳೆ ಮುರಿತದ ಗಾಯ ಹಾಗೂ ಬುಲೆಟ್ ಸವಾರ ಅನಿರುದ್ದರವರಿಗೆ ಬಲಕೈಯಲ್ಲಿ ಮೂಳೆ ಮುರಿತದ ಗಾಯ ಹಾಗೂ ಸಹ ಸವಾರ ಗ್ಲೇನ್ ರವರಿಗೆ ಬಲ ಕೈಯ ಹಿಂಗೈಗೆ ತರಚಿದ ನಮೂನೆಯ ಗಾಯವಾಗಿದ್ದವರನ್ನು ಆ ರಸ್ತೆಯಲ್ಲಿ ಬಂದಿರುವ ರಿಕ್ಷಾವೊಂದರಲ್ಲಿ ನಾನು ಮತ್ತು ಲಕ್ಷ್ಮಣ ಜೊತೆಯಲ್ಲಿ ಗಾಯಾಳುಗಳನ್ನು ಎ.ಜೆ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿರುವುದಾಗಿದೆ ಎಂಬಿತ್ಯಾದಿ.

Crime Reported in: Traffic South Police Station  

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿದಾರರು HAMEED ದಿನಾಂಕ:11-07-2022 ರಂದು ಮುಕ್ಕಚೇರಿ ಮಸೀದಿಗೆ ಹೋಗಿ ನಮಾಝ್ ಮುಗಿಸಿಕೊಂಡು ವಾಪಾಸ್ಸು ಮನೆಯಾದ ಬಂಡಿಕೊಟೆಗೆ ಸುಲ್ತಾನ ನಗರದಿಂದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ರಾತ್ರಿ 09.00 ಗಂಟೆಗೆ ಸುಲ್ತಾನ್ ನಗರದ ಕ್ರಾಸ್ ಬಳಿ ತಲುಪಿದಾಗ ಪಿರ್ಯಾದಿದಾರರ ಹಿಂಬದಿಯಿಂದ ಅಂದರೆ ಉಳ್ಳಾಲದಿಂದ ಸೋಮೆಶ್ವರದ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ ಸೈಕಲ್ ನಂಬ್ರ KA-19-EG1917 ನೇದರ ಸವಾರನು ಮೋಟಾರ ಸೈಕಲನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿಮಾಡಿಕೊಂಡು ಬಂದು ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಪಿರ್ಯಾದಿದಾರರನ್ನು ಡಿಕ್ಕಿ ಪಡಿಸಿದ ಪರಿಣಾಮ ಡಾಮಾರು ರಸ್ತೆಗೆ ಬಿದ್ದು ಬಲಕೈ ಕೋಲುಕೈಗೆ ಮೂಳೆ ಮುರಿತದ ಗಾಯ ಎಡಕೈ ಮೊಣಕೈಗೆ ತರಚಿದ ಗಾಯ ಹಾಗೂ  ತಲೆಯ ಎಡಬದಿಯ ಮುಖಕ್ಕೆ ತರಚಿದ ಗಾಯವಾಗಿದ್ದು ಅಲ್ಲಿ ಸೇರಿದ ಸಾರ್ವಜನಿಕರು ಚಿಕಿತ್ಸೆಬಗ್ಗೆ ಕಣಚೂರು ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ.

Crime Reported in: CEN Crime PS Mangaluru City                          

ಈ ಪ್ರಕರಣದ ಸಂಕ್ಲಿಪ್ತ ಸಾರಾಂಶವೆನೇಂದರೆ ಹಳೆ ಆರೋಪಿಯಾದ ವಿಖ್ಯಾತ್ @ ವಿಕ್ಕಿ ಬಪ್ಪಾಲ್ ಮತ್ತು ಆತನ ಹೆಂಡತಿ ಶ್ರೀಮತಿ ಅಂಜನಾರವರು ಜೊತೆಯಲ್ಲಿ ಸೇರಿಕೊಂಡು ಆತನ ಪರಿಚಯದ ಶಕೀಲ್ ಅಬ್ರಾಹಂನಿಂದ ಕೇರಳ ಮತ್ತು ಬೆಂಗಳೂರಿನಿಂದ ತರಿಸಿದ ಮಾನವ ಜೀವಕ್ಕೆ ಹಾನಿಕರವಾದ ನಿಷೇದಿತ ಮಾದಕ ವಸ್ತುವಾದ ಗಾಂಜವನ್ನು ತನ್ನ ಮನೆಯಾದ ಕಾವೂರು ಗಾಂಧಿನಗರದಲ್ಲಿರುವ ಶಂಕರ ನಗರದ, ಕೆ.ಸಿ ಆಳ್ವ ಲೇ ಔಟ್ ನಲ್ಲಿರುವ ಶ್ರೀ.ದುರ್ಗಾ ದೇವಿ ನಿಲಯದಲ್ಲಿ ಇಟ್ಟುಕೊಂಡು ಸಾರ್ವಜಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಅಕ್ರಮ ಹಣಗಳಿಸುತ್ತಿರುವುದಾಗಿ ದಿನಾಂಕ 15-07-2022 ರಂದು 15-00 ಗಂಟೆಗೆ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ರೀ. ಮಹೇಶ್ ಪ್ರಸಾದ್ ರವರಿಗೆ ಬಂದ ಖಚಿತ ಮಾಹಿತಿಯಂತೆ ಸ್ಥಳಕ್ಕೆ ಧಾಳಿ ನಡೆಸಿ ಆರೋಪಿಗಳನ್ನು ದಸ್ತಗಿರಿ ಮಾಡುವರೇ ಉಪ ಪೊಲೀಸ್ ಆಯುಕ್ತರು, ಅಪರಾಧ ಮತ್ತು ಸಂಚಾರ ಮಂಗಳೂರು ನಗರ ರವರಿಗೆ ಮಾಹಿತಿ ನೀಡಿ ಶೋಧನ ವಾರಂಟನ್ನು ಪಡೆದುಕೊಂಡು ದಾಳಿಯ  ಬಗ್ಗೆ ಪೊಲೀಸ್ ನಿರೀಕ್ಷಕರು ಪೊಲೀಸ್ ಉಪ ನಿರೀಕ್ಷಕರಾದ ರಾಜೇಂದ್ರ ಬಿ ರವರಿಗೆ ಜ್ಞಾಪನ ನೀಡಿದಂತೆ ಪಂಚರಾದ ಸಂದೀಪ್ ಕುಲಾಲ್ ಮತ್ತು ಪಿರೋಜ್ ಅಬ್ದುಲ್ ಖಾದರ್  ಸೆನ್ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ರವರಾದ ಶ್ರೀಮತಿ ಲತಾ ಮತ್ತು ಪಾಂಡೇಶ್ವರ ಠಾಣೆಯ  ಮಹಿಳಾ ಹೆಚ್ ಸಿ 2231 ಶ್ರೀಮತಿ ರವಿಕಲಾ ಮತ್ತು ಸಿಸಿಬಿ ಘಟಕದ  ಪಿಎಸ್ ಐ  ರಾಜೇಂದ್ರ ಬಿ ಸಿಬ್ಬಂದಿಯವರಾದ ಹೆಚ್ ಸಿ 869 ಸುನೀಲ್, ಹೆಚ್ ಸಿ 399 ಭೀಮಪ್ಪ, ಹೆಚ್ ಸಿ 401 ಅಂಜನಪ್ಪ, ಹೆಚ್ ಸಿ 662 ಸಂತೋಷ್, ಹೆಚ್ ಸಿ 853 ಸುಧೀರ್ ಕುಮಾರ್  ಹೆಚ್ ಸಿ 802 ಕಿಶೋರ್ ಕುಮಾರ್, ಹೆಚ್ ಸಿ 595 ಗಿರೀಶ್ ಜೋಗಿ ಯವರು ಧಾಳಿಯ ಪೂರ್ವದಲ್ಲಿ ತಮ್ಮಲ್ಲಿ ಯಾವುದೇ ಮಾದಕ ವಸ್ತು ಇಲ್ಲವೆಂದು ಪರಸ್ಪರ ಸಿಸಿಬಿ ಕಚೇರಿಯಲ್ಲಿ ಪರಸ್ಪರ ಅಂಗ ಶೋಧನೆ ಮಾಡಿಕೊಂಡು ಖಚಿತಪಡಿಸಿ ಕೊಂಡು ಕೆಎ-19-ಜಿ-598 ನೇ ಇಲಾಖಾ ಟೆಂಪೋ ಟ್ರಾವೆಲ್ಲರ್ ವಾಹನದಲ್ಲಿ ಸಿಸಿಬಿ ಘಟಕದಿಂದ ದಿನಾಂಕ:15-07-2022 ರಂದು 16-30 ಗಂಟೆಗೆ ತನಿಖಾ ಸಲಕರರಣೆಗಳೊಂದಿಗೆ ಹೊರಟು, ಸ್ಥಳಕ್ಕೆ  17-00 ಗಂಟೆಗೆ ತಲುಪಿ  ಆರೋಪಿತರಿರುವ ಕಾವೂರು ಗಾಂಧಿನಗರದಲ್ಲಿರುವ ಶಂಕರ ನಗರದ, ಕೆ.ಸಿ ಆಳ್ವ ಲೇ ಔಟ್ ನಲ್ಲಿರುವ ಶ್ರೀ.ದುರ್ಗಾ ದೇವಿ ನಿಲಯ ಹೆಸರಿನ ಮನೆಗೆ 17-15 ಗಂಟೆಗೆ ಧಾಳಿ ಮಾಡಿ ಆರೋಪಿತರನ್ನು ವಶಕ್ಕೆ ಪಡೆದು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ವಿಖ್ಯಾತ್ @ ವಿಕ್ಕಿ ಬಪ್ಪಾಲ್ ವಶದಲ್ಲಿದ್ದ 2 ಕೆಜಿ 200 ಗ್ರಾಂ ತೂಕದ ಗಾಂಜಾ, ಆತನ ಹೆಂಡತಿಯ ವಶದಲ್ಲಿದ್ದ ಗಾಂಜಾ ಮಾರಾಟ ಮಾಡಿ ಬಂದಂತಹ ನಗದು ಹಣ ರೂ.1,500/- ಗಿರಾಕಿಗಳಿಗೆ ಸಂರ್ಪಕಕ್ಕೆ ಬಳಸಿದ ವಿವೋ ಕಂಪೆನಿಯಾ ಮೊಬೈಲ್  ಫೋನ್, ಗಾಂಜಾ ಸಾಗಾಟಕ್ಕೆ ಉಪಯೋಗಿಸಿದ KA-19-E-1502ನೇ ನಂಬ್ರದ ಯಮಹಾ RX 100 ದ್ವಿ ಚಕ್ರ ವಾಹನ ಮತ್ತು KA-19-HB-5052ನೇ ನೊಂದಣಿ ಸಂಖ್ಯೆಯ ಹೊಂಡಾ ಡಿಯೋ ಸ್ಕೂಟರ್ , ಒಂದು ಡಿಜಿಟಲ್ ಸ್ಕೇಲ್, 19 ಪ್ಲಾಸ್ಟಿಕ್ ಜಿಫ್ ಕವರ್ ಗಳನ್ನು ಸಂಜೆ 17-30 ಗಂಟೆಯಿಂದ ರಾತ್ರಿ 19-30 ಗಂಟೆಯ ತನಕ ಮಹಜರು ಮುಖೇನಾ  ಒಟ್ಟು ರೂ.91,700/- ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿ  ಹಾಗೂ ಸ್ವತ್ತುಗಳನ್ನು ವರದಿಯೊಂದಿಗೆ  ಠಾಣೆಗೆ ಹಾಜರುಪಡಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

 

 

ಇತ್ತೀಚಿನ ನವೀಕರಣ​ : 16-07-2022 07:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080