ಅಭಿಪ್ರಾಯ / ಸಲಹೆಗಳು

Crime Reported in Kankanady Town PS

ದಿನಾಂಕ 16/09/2021 ರಂದು ಬೆಳಿಗ್ಗೆ  ಮಂಗಳೂರು ನಗರ ಮಾನ್ಯ ಪೊಲೀಸ್ ಉಪ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ ರವರ ನಿರ್ದೇಶನದಂತೆ ಮರೋಳಿ ಎಂಬಲ್ಲಿರುವ ಯಮುನಾ ಅರ್ಥ್ ಮೂವರ್ಸ್ ಶೆಡ್ ನಲ್ಲಿ ದಹಿಸುವ ವಸ್ತುವಾದ ಇಂಧನವನ್ನು ಅಕ್ರಮವಾಗಿ ದಾಸ್ತಾನು ಮಾಡಿ ತಮ್ಮ ವಾಹನಗಳಿಗೆ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ  ಪಿರ್ಯಾದಿ Ravish S Nayak ACP ದಾರರು ಸಿಬ್ಬಂದಿಗಳ ಸಮೇತ  ಮರೋಳಿ ಎಂಬಲ್ಲಿರುವ  ಯಮುನಾ ಅರ್ಥ ಮೂವರ್ಸ್‌ ಶೆಡ್ ಗೆ ಬೆಳಿಗ್ಗೆ 10.40 ಗಂಟೆಗೆ ದಾಳಿ ಮಾಡಿದ್ದು, ಅಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಇಂಧನವನ್ನು ದಾಸ್ತಾನು ಇಟ್ಟಿರುವ ಟ್ಯಾಂಕರ್ ಲಾರಿಯ ಟ್ಯಾಂಕ್ ಇದ್ದು ಸದ್ರಿ ಟ್ಯಾಂಕರ್ ನ ಟ್ಯಾಂಕ್ ನಲ್ಲಿ ಸುಮಾರು 15000 ಲೀಟರ್ ಇಂಧನವಿರುವುದು ಕಂಡುಬಂದಿರುತ್ತದೆ. ಸದ್ರಿ ಯಮುನಾ ಅರ್ಥ್ ಮೂವರ್ಸ್ ನ ಮಾಲಕ ಪುರುಷೋತ್ತಮ ಶೆಟ್ಟಿ ಎಂಬಾತನು ಅಕ್ರಮ ಲಾಭಗಳಿಸುವ ಉದ್ದೇಶದಿಂದ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಹಾಗೂ ಸೂಕ್ತ ಪ್ರಾಧಿಕಾರದಿಂದ ಅನುಮತಿಯನ್ನು ಸಹ ಪಡೆಯದೇ ದಾಸ್ತಾನು ಮಾಡಿರುವುದರಿಂದ ಸದ್ರಿ  ಟ್ಯಾಂಕರ್ ಲಾರಿಯ ಟ್ಯಾಂಕ್  ಹಾಗೂ ಇಂಧನ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 12.5 ಲಕ್ಷ ರೂಪಾಯಿಗಳಾಗಬಹುದು ಎಂಬಿತ್ಯಾದಿಯಾಗಿರುತ್ತದೆ. ದೂರಿನ ಮೂಲ ಪ್ರತಿಯನ್ನು ಲಗತ್ತಿಸಲಾಗಿದೆ.

Crime Reported in Traffic North PS

ದಿನಾಂಕ 14-09-2021 ರಂದು ಪಿರ್ಯಾದಿದಾರರಾದ ಕುಮಾರ್ ಎಸ್ ಎಂಬವರು ರಾ ಹೆ 66 ರ ರಸ್ತೆಯ ಬೈಕಂಪಾಡಿ ಮಾಧವ ಮೆಡಿಕಲ್ಸ್ ಎದುರು ರಸ್ತೆ ಬದಿಯಲ್ಲಿ ಸಮಯ ಸುಮಾರು 22:30 ಗಂಟೆಗೆ ನಿಂತುಕೊಂಡಿರುವಾಗ ಮಂಗಳೂರು ಕಡೆಯಿಂದ ಕಾರೊಂದನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದವರನ್ನು ಅಲ್ಲಿ ಸೇರಿದ ಜನರು ಉಪಚರಿಸಿ, ನೋಡಲಾಗಿ ಪಿರ್ಯಾದಿದಾರರ ಎಡ ಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ಕಾರಿನ ಚಾಲಕ ಕಾರನ್ನು ಸ್ಥಳದಲ್ಲಿ ನಿಲ್ಲಿಸದೇ ಉಡುಪಿ ಕಡೆಗೆ ಚಲಾಯಿಸಿಕೊಂಡು ಹೋಗಿರುವುದಾಗಿ, ಬಳಿಕ ಅಲ್ಲಿ ಸೇರಿದ ಜನರು ಪಿರ್ಯಾದಿದಾರರನ್ನು ಸುರತ್ಕಲ್ ಅಥರ್ವ ಆಸ್ಪತ್ರೆಗೆ ಕಳುಹಿಸಿ ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿರುವುದು ಎಂಬಿತ್ಯಾದಿ.

 

2) ದಿನಾಂಕ 14-09-2021 ರಂದು ಪಿರ್ಯಾದಿದಾರರಾದ ತಮೀಮ್ ರವರು ತಮ್ಮ ಬಾಬ್ತು ಕಾರಿನಲ್ಲಿ ಕೃಷ್ಣಾಪುರ ಕಡೆಯಿಂದ ಕೂಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು 21:50 ಗಂಟೆಗೆ ಚೊಕ್ಕಬೆಟ್ಟು ಜಂಕ್ಷನ್ ಬಳಿ ತಲುಪಿದಾಗ ದ್ವಿಪತ ರಸ್ತೆಯ ಇನ್ನೊಂದು ಬದಿಯಲ್ಲಿ ಅಂದರೆ ಸುರತ್ಕಲ್ ಕಡೆಯಿಂದ ಕೃಷ್ಣಾಪುರ ಕಡೆಗೆ KA-19-HF-0084 ನಂಬ್ರದ ಸ್ಕೂಟರಿನಲ್ಲಿ ಸಹ ಸವಾರನನ್ನು ಕುಳ್ಳರಿಸಿಕೊಂಡು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯಲ್ಲಿ ಓಡುತ್ತಿದ್ದ ಬಿದಿ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಒಮ್ಮಲೇ ಬ್ರೇಕ್ ಹಾಕಿದಾಗ ಸವಾರನ ಹತೋಟಿ ತಪ್ಪಿ ರಸ್ತೆಯಲ್ಲಿ ಸ್ಕಿಡ್ ಆಗಿ  ಸವಾರರಿಬ್ಬರೂ ರಸ್ತೆಗೆ ಬಿದ್ದ ಪರಿಣಾಮ ಸಹ ಸವಾರ ನೌಶದ್ ರವರ ಎಡ ಕೋಲು ಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ, ಎರಡು ಕೈಗಳಿಗೆ ತರಚಿದ ಗಾಯವಾಗಿದ್ದು ಹಾಗೂ ಸವಾರ ಇಮ್ರಾನ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ, ಸಹ ಸವಾರ ನೌಶದ್ ರವರು ತೇಜಸ್ವಿನಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕಣಚೂರು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ಪಿರ್ಯಾದಿ ಸಾರಾಂಶ.

 

Crime Reported in Moodabidre PS   

ದಿನಾಂಕ: 08-09-2021 ರಂದು ಬೆಳಿಗ್ಗೆ 5:45 ಗಂಟೆಗೆ ಆರೋಪಿಗಳು ಅಕ್ರಮ ಕೂಟ ಸೇರಿಕೊಂಡು ಸಮಾನ ಉದ್ದೇಶದಿಂದ ಮಾರಕಾಯುಧವನ್ನು ಹಿಡಿದುಕೊಂಡು ಬಂದು ಪಿರ್ಯಾಧಿ SANDEEP K POOJARY ದಾರರು ನಡೆಸಿಕೊಂಡು ಬರುತಿದ್ದ ಕಲ್ಲಮುಂಡ್ಕೂರು ಗ್ರಾಮದ ನಿಡ್ಡೋಡಿ ದಡ್ಡು ಎಂಬಲ್ಲಿರುವ PLAY FOR FIT ಎಂಬ ಶಟಲ್ ಕೋಟ್ ನ ಒಳಗಡೆ ಅಕ್ರಮ ಪ್ರವೇಶ ಮಾಡಿ ಪಿರ್ಯಾಧಿದಾರರ ಮಾವ ಕೇಶವರವರನ್ನು  ತಡೆದು ದೂಡಾಡಿ ಕೋರ್ಟಿನ ಒಳಗಡೆ ಹೋಗಿ ಶಟಲ್ ಕೋಟ್ ಗೆ ಹಾಕಿದ ಸಿಂಥೆಟಿಕ್ ಮ್ಯಾಟನ್ನು ತಾವುಗಳು ತಂದಿದ್ದ ಅಕ್ರಮ ಆಯುಧದಿಂದ ಹರಿದು ನಾಶ ಮಾಡಿದ್ದು, ತಡೆಯಲು ಬಂದ ಪಿರ್ಯಾಧಿದಾರ ಮಾವ ಕೇಶವರವರಿಗೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಬೇವರ್ಷಿ ಎಂಬಿತ್ಯಾದಿಯಾಗಿ ಬೈದು ಹೋಗಿರುತ್ತಾರೆ. ಈ ಕೃತ್ಯಕ್ಕೆ  ಆರೋಪಿಗಳಾದ ರಾಹುಲ್ ಶೆಟ್ಟಿ ಹಾಗು ಸಚಿನ್ ಭಟ್ ರವರ ಒಳ ಜಗಳದ ಕುಮ್ಮಕ್ಕಿನಿಂದ ಅಯ್ಯಪ್ಪ ಹಾಗು ಇತರರು ಈ ಕೃತ್ಯವನ್ನು ಮಾಡಿರುವುದಾಗಿದೆ. ಆರೋಪಿಗಳ ಈ ಕೃತ್ಯದಿಂದ ಪಿರ್ಯಾಧಿದರರ ಬಾಬ್ತು PLAY FOR FIT ಹೆಸರಿನ ಕ್ರಿಡಾಂಗಣಕ್ಕೆ ಅಳವಡಿಸಿದ್ದ ಸಿಂಥೆಟಿಕ್ ಮ್ಯಾಟ್ ಹರಿದು ಸುಮಾರು 8 ಲಕ್ಷದಷ್ಟು ನಷ್ಟವನ್ನುಂಟು ಮಾಡಿರುತ್ತಾರೆ ಎಂಬುವುದಾಗಿ ಪಿರ್ಯಾಧಿ ಸಾರಾಂಶವಾಗಿದೆ.

 

2) ದಿನಾಂಕ 14-09-2021ರಂದು ಪಿರ್ಯಾಧಿ MOHAMMED ASHRAF ದಾರರ ಅಕ್ಕನ ಮಗನಾದಂತಹ ಮಹಮ್ಮದ್ ದಾವೂದ್ ನು ಕೆಎ19ಇವಿ3987 ನಂಬ್ರದ ಮೋಟಾರು ಸೈಕಲಿನಲ್ಲಿ ಆತನ ಮಿತ್ರ ಫಹಾದ್ ಎಂಬಾತನನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಮೂಡಬಿದ್ರೆಯಿಂದ ವಿದ್ಯಾಗಿರಿ ಕಡೆಗೆ ಹೋಗುತ್ತಾ 11:00 ಗಂಟೆ ಸಮಯಕ್ಕೆ ಮಾರ್ಪಾಡಿ ಗ್ರಾಮದ ಗಾಂಧಿನಗರ ಎಂಬಲ್ಲಿಗೆ ತಲುಪುತಿದ್ದಂತೆ ಮಂಗಳೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಕೆಎ02ಎಮ್ 8955 ನಂಬ್ರದ ಕಾರನ್ನು ಅದರ ಚಾಲಕ ಸಾಗರ್ ಎಂಬಾತನು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ  ಮೋಟಾರು ಸೈಕಲಿನಲ್ಲಿದ್ದ ಇಬ್ಬರೂ ರಸ್ತೆಗೆ ಬಿದ್ದು, ಮಹಮ್ಮದ್ ದಾವೂದ್ ನ ಬಲ ಕಾಲಿಗೆ ಮೂಳೆ ಮುರಿತದ ಗಂಭೀರ ರೀತಿಯ ಗಾಯ ಮತ್ತು ಸಹ ಸವಾರ ಫಹಾದ್ ನ ಕೈಗೆ ಸಾಮಾನ್ಯ ಸ್ವರೂಪದ ಗಾಯವುಂಟಾಗಿರುವುದಾಗಿ

ಇತ್ತೀಚಿನ ನವೀಕರಣ​ : 16-09-2021 07:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080