ಅಭಿಪ್ರಾಯ / ಸಲಹೆಗಳು

Crime Reported in  Mangalore North PS

ವಿಜಯರಾಜ್ ಪೊಲೀಸ್ ಉಪನಿರೀಕ್ಷಕ ರವರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಂಗಳೂರು ನಗರದ ಅಳಕೆಯ ಬಳಿ ಓರ್ವ ವ್ಯಕ್ತಿ ಯಾವುದೋ ಅಮಲು ಪದಾರ್ಥ ಸೇವಿಸಿ ತೂರಾಡಿಕೊಂಡು ಹೋಗುತ್ತಿದ್ದವನನ್ನು ವಿಚಾರಿಸಿದಲ್ಲಿ ತನ್ನ ಹೆಸರು ಅಮೀರ್ ಸುಹೈಲ್ @ ಅಮೀರ್ ಹುಸೈನ್ (24) ತಂದೆ: ಉಮ್ಮರ್ ವಾಸ: ಗ್ರೀನ್ ಪಾರ್ಕ್ ಅನ್ಸಾರಿ ರಸ್ತೆ ಮಂಗಳೂರು ಎಂಬುದಾಗಿ ತೊದಲುತ್ತಾ ನುಡಿಯುತ್ತಿದ್ದು. ಈತನನ್ನು ಎ.ಜೆ ಆಸ್ಪತ್ರೆಯಲ್ಲಿ ವೈಧ್ಯಕೀಯ ತಪಾಸಣೆಗೆ ಒಳಪಡಿಸಿದಲ್ಲಿ ಅಮೀರ್ ಸುಹೈಲ್ @ ಅಮೀರ್ ಹುಸೈನ್ (24) ಎಂಬಾತನು ಅಮಲು ಪದಾರ್ಥವಾದ ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ವರದಿಯಿಂದ ದೃಡಪಟ್ಟಿರುವುದರಿಂದ ಆಪಾದಿತನ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ

Crime Reported in  Traffic South PS

ದಿನಾಂಕ:15-10-2021 ರಂದು ಪಿರ್ಯಾದಿ HARIPRASAD ದಾರರ ಅಣ್ಣ ಕೃಷ್ಣಪ್ರಸಾದ್(26) ಮತ್ತು ಸ್ನೇಹಿತ ಪ್ರಜೀತ್ ಎಂಬುವರು ಮಂಗಳೂರಿನಲ್ಲಿ ದಸರಾ ಕಾರ್ಯಕ್ರಮ ಮುಗಿಸಿಕೊಂಡು NH-66 ನಲ್ಲಿ ಬೈಕ್ ನಂಬರ್ KL-14-U-7973 ನೇದರಲ್ಲಿ ಸ್ನೇಹಿತ ಪ್ರಜೀತ್ ರವರು ಸವಾರನಗಿ ಮತ್ತು ಪಿರ್ಯಾದಿದಾರರ ಅಣ್ಣ ಕೃಷ್ಣಪ್ರಸಾದ್(26)  ರವರು ಸಹಸವಾರನಾಗಿ  ಮಂಗಳೂರಿನಿಂದ  ಕಾಸರಗೋಡಿನ ಕುಂಬಳ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು 23:45 ಗಂಟೆಗೆ NH-66  ಕೆ.ಸಿ ರೋಡ್ ಹತ್ತಿರ ತಲುಪುತ್ತಿದ್ದಂತೆ ಮಂಗಳೂರಿನಿಂದ ತಲಪಾಡಿ ಕಡೆಗೆ ಹೋಗುತ್ತಿದ್ದ ಅಪರಿಚಿತ ವಾಹನವೊಂದನ್ನು ಅದರ ಚಾಲಕ  ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪ್ರಜೀತ್ ರವರು ಸವಾರಿ ಮಾಡುತ್ತಿದ್ದ  ಬೈಕ್ ಗೆ ಹಿಂಬದಿಯಿಂದ  ಡಿಕ್ಕಿ ಪಡಿಸಿ  ಅಪಘಾತ ಸ್ಥಳದಿಂದ ಪರಾರಿಯಾದ  ಪರಿಣಾಮ ಪಿರ್ಯಾದಿದಾರರ ಅಣ್ಣ ಕೃಷ್ಣಪ್ರಸಾದ್(26) ಮತ್ತು ಸ್ನೇಹಿತ ಪ್ರಜೀತ್(24) ರವರು ಕೆ.ಸಿ ರೋಡ್ ನ ಹತ್ತಿರ ಇರುವ ಸೇತುವೆಗೆ ರಭಸದಿಂದ ಗುದ್ದಿದ್ದು  ಸವಾರ ಪ್ರಜೀತ್(24) ಮತ್ತು ಕೃಷ್ಣಪ್ರಸಾದ್(26)  ಇಬ್ಬರಿಗೂ ಕೂಡ ಮುಖಕ್ಕೆ ಮತ್ತು ತಲೆಗೆ ಹಾಗೂ ಕಾಲಿನ ಮೂಳೆ ಮುರಿದು ರಕ್ತಸ್ರಾವದ ಗಂಭೀರ ಸ್ವರೂಪದ ಗಾಯಗಿದ್ದು ತಕ್ಷಣ ಚಿಕಿತ್ಸೆ ಬಗ್ಗೆ  ಸವಾರ ಪ್ರಜೀತ್(24) ರವರನ್ನು ಇಂಡಿಯಾನ ಆಸ್ವತ್ರೆಗೆ ಹಾಗೂ ಸಹಸವಾರ ಕೃಷ್ಣಪ್ರಸಾದ್(26) ರವರನ್ನು ಕೆ.ಎಸ್ ಹೆಗ್ಡೆ ಆಸ್ವತ್ರೆಗೆ ಸ್ಥಳಿಯರು ದಾಖಲಿಸಿದ್ದು ಅವರನ್ನು ಚಿಕಿತ್ಸೆ ಮಾಡುತ್ತಿದ್ದ ವೈದ್ಯಧಿಕಾರಿಗಳು ಪರಿಕ್ಷೀಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

Crime Reported in  Moodabidre PS               

Kempala House, Ontikatte, Marpady Village ನ ನಿವಾಸಿ ಪಿರ್ಯಾದಿ Smt Pooja ರವರ ಗಂಡನಾದ ಸಂತೋಷ ರವರು ಪಿರ್ಯಾದಿದಾರರೊಂದಿಗೆ ಆಗಾಗ್ಗೆ ಜಗಳ ಮಾಡುತ್ತಿದ್ದು ದಿನಾಂಕ 13-10-2021 ರಂದು ಪಿರ್ಯಾದಿದಾರರಿಗೆ ತನ್ನ ಗಂಡನ ಮೇಲೆ ಮರಳುಗಾರಿಕೆಗೆ ಸಂಬಂದಿಸಿದಂತೆ ಪೊಲೀಸ್ ಕೇಸ್ ಆಗಿದೆ ಎಂಬ ವಿಚಾರ ತಿಳಿದು,  ಆದೇ ದಿನ ರಾತ್ರಿ ಸುಮಾರು 10.00 ಗಂಟೆಗೆ ಪಿರ್ಯಾದಿ ಗಂಡ ಮನೆಗೆ ಬಂದಾಗ ಪಿರ್ಯಾದಿದಾರರು ತನ್ನ ಗಂಡನನ್ನು ಪ್ರಶ್ನಿಸಿದಾಗ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಗುಂಡಿ ತೋಡಿ ಹೂತು ಹಾಕುತ್ತೇನೆ ಎಂಬುದಾಗಿ ಹೇಳಿ ಪಿರ್ಯಾದಿಯನ್ನು ತಡೆದು ನಿಲ್ಲಿಸಿ, ಕೈಯಿಂದ ಕೆನ್ನೆಗೆ ಹೂಡೆದು, ಬಲಗಾಲಿನಿಂದ ಎಡಭಾಗದ ಪಕ್ಕೆಲುಬಿಗೆ ಬಲವಾಗಿ ಕಾಲಿನಿಂದ ಒದ್ದು, ನೀನು ದೂರು ನೀಡಿದ್ದಲ್ಲಿ ನಿನ್ನನ್ನು ಬಿಡುವುದಿಲ್ಲ, ಎಂಬುದಾಗಿ ಜೀವ ಬೆದರಿಕೆ ಹಾಕಿದ್ದು, ಪಿರ್ಯಾದಿದಾರರು ತನ್ನ ಗಂಡ ಹಲ್ಲೆ ಮಾಡಿಸಿದ ಪರಿಣಾಮ ದಿನಾಂಕ 14-10-2021 ರ ಬೆಳಗ್ಗೆ 04.00 ಗಂಟೆಗೆ ಆಳ್ವಾಸ್ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ನಂತರ ನೋವು ಕಡಿಮೆಯಾಗದಿದ್ದಾಗ ಬೆಳಗ್ಗೆ 10.00 ಗಂಟೆಗೆ ಸಮುದಾಯ ಆರೊಗ್ಯ ಕೇಂದ್ರಕ್ಕೆ ಬಂದು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ನೋವು ಮತ್ತೇ ಕಡಿಮೆಯಾಗದೇ ಇದ್ದಾಗ ದಿನಾಂಕ 16-10-2021 ರ ಸಮಯ ಬೆಳಗ್ಗೆ 10.00 ಗಂಟೆಗೆ ಆಳ್ವಾಸ್ ಆಸ್ಪತ್ರೆ ಬಂದು ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ

 

2) ದಿನಾಂಕ: 14-10-2021 ರಂದು ಪ್ರಕರಣದ ಪಿರ್ಯಾದಿ Divakar Rai ದಾರರು ಹೆಚ ಸಿ ಚಂದ್ರಹಾಸ ರೈ ರವರೊಂದಿಗೆ ಇಲಾಖಾ ವಾಹನ ದಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ದಿನಾಂಕ: 15-10-2021 ರಂದು ಬೆಳಗ್ಗಿನ ಜಾವ 03.00 ಗಂಟೆಯ ಸಮಯಕ್ಕೆ ಮೂಡಬಿದ್ರೆ ತಾಲೂಕು ಮಾರ್ಪಾಡಿ ಗ್ರಾಮದ ಮೂಡಬಿದ್ರೆಯ ಇನ್ನರ್ ವ್ಹೀಲ್ ಸರ್ಕಲ್ ಬಳಿ ಮೂಡಬಿದ್ರೆ ಪೇಟೆ ಕಡೆಯಿಂದ ಮಂಗಳೂರು ಕಡೆಗೆ ಒಂದು ಮೋಟಾರ್ ಸೈಕಲ್ ನ್ನು ಅದರ ಸವಾರನು ಸಹ ಸವಾರನೊಬ್ಬನನ್ನು ಕುಳ್ಳಿರಿಸಿಕೊಂಡು ಬರುತ್ತಿರುವುದನ್ನು ಕಂಡು ಪಿರ್ಯಾದಿದಾರರು ಹಾಗೂ ಸಿಬ್ಬಂದಿಗಳೊಂದಿಗೆ ಮೋಟಾರ್ ಸೈಕಲ್ ನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಸವಾರನು ಮೋಟಾರ್ ಸೈಕಲ್ ನ್ನು ರಿಂಗ್ ರೋಡ್ ಕಡೆಗೆ ಚಲಾಯಿಸಲು ಯತ್ನಿಸಿದಾಗ ಪಿರ್ಯಾದಿದಾರರು ಸಿಬ್ಬಂದಿಗಳ ಸಹಾಯದಿಂದ ಮೋಟಾರ್ ಸೈಕಲ್ ನ್ನು ನಿಲ್ಲಿಸಿ ಕೂಲಂಕುಷವಾಗಿ ವಿಚಾರಿಸಲಾಗಿ ಮೋಟಾರ್ ಸೈಕಲ್ ಚಲಾಯಿಸಿದ ವ್ಯಕ್ತಿಯು ಅಬ್ದುಲ್ ತನ್ವೀರ್ ಎಂತಲೂ ಹಾಗೂ ಹಿಂದೆ ಕುಳಿತವನು ಹಕೀಂ ಲುಕ್ಮಾನುಲ್ ಎಂಬುದಾಗಿ ತಿಳಿಸಿದ್ದು. ಅವರುಗಳಲ್ಲಿ ಮೋಟಾರ್ ಸೈಕಲ್ ನ ದಾಖಲಾತಿಗಳನ್ನು ಕೇಳಲಾಗಿ ಅವರಲ್ಲಿ ಯಾವುದೇ ದಾಖಲಾತಿಗಳು ಇರಲಿಲ್ಲ, ದ್ವಿಚಕ್ರ ವಾಹನವನ್ನು ಪರಿಶೀಲಿಸಲಾಗಿ ಯಮಾಹ ಎಫ್ ಝಡ್ ಕಂಪನಿಯ ಹಳೆಯ ಮೋಟಾರ್ ಸೈಕಲ್ ಆಗಿದ್ದು ಇದರ ಮುಂಭಾಗದಲ್ಲಿ ಕೆಎ-21-ಎಲ್-1908 ಎಂದೂ ಹಿಂಭಾಗದಲ್ಲಿ ಕೆಎ-21-ಎಲ್-1808 ಎಂದು ಬರೆದಿರುವ ನಂಬರ್ ಪ್ಲೇಟ್ ಇರುವುದು ಕಂಡು ಬಂದಿದ್ದು ಅವರುಗಳಲ್ಲಿ ವಿಚಾರಿಸಲಾಗಿ ಸಮರ್ಪಕವಾದ ಉತ್ತರ ನೀಡಿರುವುದಿಲ್ಲ. ಇದರ ಅಂದಾಜು ಮೌಲ್ಯ 40.000/- ಆಗಬಹುದು. ಸದ್ರಿ ವ್ಯಕ್ತಿಗಳು ಮೋಟಾರ್ ಸೈಕಲ್ ನ್ನು ಎಲ್ಲಿಯೊ ಕಳುವು ಮಾಡಿಕೊಂಡು ಬಂದು ಮಾರಾಟ ಮಾಡುವರೆ ಕೊಂಡು ಹೋಗುತ್ತಿರುವುದಾಗಿ ಅನುಮಾನ ಕಂಡ ಬಂದಿರುತ್ತದೆ ಎಂಬಿತ್ಯಾದಿ ಪಿರ್ಯಾದಿಯ ಸಾರಾಂಶವಾಗಿರುತ್ತದೆ

3) ಪಿರ್ಯಾದಿ Ashraf ದಾರರ ಬಾಬ್ತು ಮೂಡಬಿದ್ರೆ ತಾಲೂಕು ಪುಚ್ಚಮೊಗರು ಗ್ರಾಮದ ಇರುವೈಲು ಮದರ್ ಇಂಡಿಯಾ ಕೋರೆಯು ಸುಮಾರು ಒಂದು ವರ್ಷದ ಹಿಂದೆ ಬಂದ್ ಆಗಿದ್ದು, ದಿನಾಂಕ: 11-10-2021 ರಂದು ಸಂಜೆ 5.00 ಗಂಟೆಯಿಂದ ದಿನಾಂಕ: 12-10-2021 ರಂದು 09.00 ಗಂಟೆಯ ಮಧ್ಯಾವದಿಯಲ್ಲಿ ಯಾರೋ ಕಳ್ಳರು ತೆರೆದ ಸ್ಥಳದಲ್ಲಿದ್ದ ಕ್ರಷರ್ ಮಿಷನ್ ಗೆ ಅಳವಡಿಸಿದ ಜಲ್ಲಿ ಹುಡಿಯಾಗಿ ಹೋಗುವ ಕ್ರಷರ್ ಮಿಷನ್ ನ ಬೆಲ್ಟ್ ನ್ನು ಯಾವುದೋ ಸಾಧನದಿಂದ ತುಂಡರಿಸಿ ಕಳ್ಳತನ ಮಾಡಿಕೊಂಡು ಹೋಗಿದ್ದು, ಅಲ್ಲದೇ ಈ ಹಿಂದೆಯೂ ಕೂಡಾ ಕ್ರಸರ್ ನ ಶೆಡ್ಡಿನ ಬಳಿ ಇಟ್ಟಿದ್ದ ಕಬ್ಬಿಣದ ಗುಜರಿ ವಸ್ತುಗಳು ಹಾಗೂ ಚಾರ್ಜ ಲೈಟನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನವಾದ ಸೊತ್ತುಗಳ ಒಟ್ಟು ಮೌಲ್ಯ ರೂ 60000/- ಆಗಬಹುದು ಎಂಬಿತ್ಯಾದಿ. ಪಿರ್ಯಾದಿಯ ಸಾರಾಂಶವಾಗಿರುತ್ತದೆ

Crime Reported in  Panambur PS

ಪಿರ್ಯಾದಿ ಸುನೀಲ್ ಪಾಸ್ವಾನ್ ರವರು ಮಂಗಳೂರು ನಗರದ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯಾದ ಅಂಗಾರಗುಂಡಿಯಲ್ಲಿರುವ ಯು.ಬಿ. ಬಿಯರ್ ಕಂಪೆನಿಯಲ್ಲಿ ಲೇಬರ್ ಕೆಲಸ ಮಾಡಿಕೊಂಡಿದ್ದು,  ದಿನಾಂಕ 15-10-2021 ರಂದು ಸಂಜೆ 5 ಗಂಟೆ ಸುಮಾರಿಗೆ ಆಯುಧ ಪೂಜೆಯ ಬಾಬ್ತು ರಜಾದಿನವಾಗಿರುವುದರಿಂದ ಪಣಂಬೂರು ಬೀಚ್ ನ ಮೀನಕಳಿಯದ ಬಳಿ ಕಡಲ ಕಿನಾರೆಯಲ್ಲಿ ಆಟವಾಡಲು ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಅರಬಿಂದ್ ಪಾಸ್ವಾನ್, ಬಿಹಾರ ಮೂಲದ ದೀಪಕ್ ಕುಮಾರ್, ಅಜಿತ್ ಕುಮಾರ್ ರವರುಗಳ ಜೊತೆಯಲ್ಲಿ ಪಣಂಬೂರು ಬೀಚ್ ನಲ್ಲಿ ಆಟವಾಡುತ್ತಿದ್ದಾಗ ಸಂಜೆ 6 ಗಂಟೆ ಸುಮಾರಿಗೆ ಸಮುದ್ರದ ನೀರಿನಲ್ಲಿ ದೊಡ್ಡ ಅಲೆಯೊಂದು ಬಂದಿದ್ದು, ಪಿರ್ಯಾದಿ ಹಾಗೂ ಇತರರು ನೀರಿನ ಅಲೆಗೆ ಸಿಲುಕಿ ಮುಳುಗಿದ್ದು, ಪಿರ್ಯಾದಿ ಹಾಗೂ ದೀಪಕ್ ಕುಮಾರ್ ಮತ್ತು ಅಜಿತ್ ಕುಮಾರ್ ರವರು ಈಜಿಕೊಂಡು ದಡಕ್ಕೆ ಬಂದಿರುತ್ತಾರೆ. ಆದರೆ ಜೊತೆಯಲ್ಲಿದ್ದ ಅರಬಿಂದ್ ಪಾಸ್ವಾನ್ ಪ್ರಾಯ 20 ವರ್ಷ ಎಂಬಾತನು ಸಮುದ್ರದಲ್ಲಿ ಮುಳುಗಿದ್ದು, ಈ ವರೆಗೆ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ. ಆದುದ್ದರಿಂದ ಸಮುದ್ರದಲ್ಲಿ ಆಟವಾಡುತ್ತಿದ್ದ ಸಮಯ ಸಮುದ್ರದಲ್ಲಿ ತೀವ್ರ ಅಲೆ ಎದ್ದು ನೀರಿನಲ್ಲಿ ಮುಳುಗಿ ಕಾಣೆಯಾಗಿರುವ ಅರಬಿಂದ್ ಪಾಸ್ವಾನ್ ಪ್ರಾಯ 20 ವರ್ಷ ಎಂಬವರನ್ನು ಪತ್ತೆ ಹಚ್ಚಿಕೊಡಬೇಕಾಗಿ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 16-10-2021 06:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080