ಅಭಿಪ್ರಾಯ / ಸಲಹೆಗಳು

Crime Reported in CEN Crime PS

ಪಿರ್ಯಾದಿದಾರರು ದಿನಾಂಕ 13-11-2021 ಸಮಯ 10:17 ಗಂಟೆಗೆ  DHL ಕಸ್ಟಮರ್ ಸರ್ವಿಸ್ ಗೆ  ಕರೆ ಮಾಡಿರುತ್ತಾರೆ ನಂತರ ಪಿರ್ಯಾದಿದಾರರಿಗೆ 9555267257 ನೇ ನಂಬ್ರ ದಿಂದ  ಓರ್ವ ವ್ಯಕ್ತಿಯು ಕರೆ ಮಾಡಿ   DHL ಕಸ್ಟಮರ್ ಕೇರ್ ಎಂದು ತಿಳಿಸಿ  ಪಿರ್ಯಾದಿದಾರರಿಂದ ANY DESK APP ಅನ್ನು DOWNLOAD ಮಾಡಿಸಿರುತ್ತಾರೆ ಬಳಿಕ ಪಿರ್ಯಾದಿದಾರರ ಮೊಬೈಲ್  ನಂಬ್ರಕ್ಕೆ (https://docs.google.com/forms/d/e/1FAlpQLSejDJZi4v3oY_C6jgfD4cnAttnonb4uEWMAFCcGj1_Uc1dzQ/viewform)  ಎಂಬ ಲಿಂಕ್ ಕಳಿಸಿ 5 ರೂಪಾಯಿ ಪಾವತಿಸುವಂತೆ ತಿಳಿಸಿರುತ್ತಾರೆ ಪಿರ್ಯಾದಿದಾರರು ಸದ್ರಿ ಲಿಂಕ್ ಕ್ಲಿಕ್ ಮಾಡಿದ ನಂತರ  ಪಿರ್ಯಾದಿದಾರರ AXIS BANK ಖಾತೆ ನಂಬರ್  ಹಾಗೂ ಕಾರ್ಡ್ ನಂಬರ್ ಹಾಗೂ ಒ.ಟಿ.ಪಿ ಯನ್ನು ನಮೂದಿಸಿರುತ್ತಾರೆ ನಂತರ ಪಿರ್ಯಾದಿದಾರರ AXIS BANK ಖಾತೆಯಂದ 24,999 ಕಡಿತಗೊಂಡಿರುವ ಬಗ್ಗೆ ಪಿರ್ಯಾದಿದಾರಿಗೆ ಸಂದೇಶ ಬಂದಿರುತ್ತದೆ   ನಂತರ ಇನ್ನೊಂದು  ಒ.ಟಿ.ಪಿ ಯನ್ನು ನಮೂದಿಸಿದ್ದು ಸದ್ರಿ ಖಾತೆಯಿಂದ  24,999 ಹಣವನ್ನು ಪುನಃ ಕಡಿತಗೊಂಡಿರುತ್ತದೆ ನಂತರ ಪಿರ್ಯಾದಿದಾರರು ಸದ್ರಿ ಕಾರ್ಡ್ ಬ್ಲಾಕ್ ಮಾಡಿರುತ್ತಾರೆ ಹೀಗೆ ಅಪರಿಚಿತ ವ್ಯಕ್ತಿಯ   ಖಾತೆಗೆ  ಹಂತ ಹಂತವಾಗಿ  ಒಟ್ಟು ರೂ 49,998/- ಹಣವು ವರ್ಗಾಯಿಸಿ ಮೋಸ ಮಾಡಿರುತ್ತಾರೆ   ಎಂಬಿತ್ಯಾದಿ

 

2) ಪಿರ್ಯಾದಿದಾರರಾದ V MURALIDHARAN ರವರು MRPL ನ General Manager Security ಆಗಿ ಕೆಲಸ ಮಾಡುತ್ತಿದ್ದು, MRPL ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಂ ವೆಂಕಟೇಶ್ ರವರ ಹೆಸರಿನಲ್ಲಿ ದಿನಾಂಕ: 13/11/2021 ರಂದು 16:00 ಗಂಟೆಯಿಂದ  ದಿನಾಂಕ: 13/11/2021 ರಂದು 17.00 ಗಂಟೆಯ ಮಧ್ಯಾವಧಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಂ ವೆಂಕಟೇಶ್ ರವರ   ಹೆಸರಿನಲ್ಲಿ ಯಾರೋ ಅಪರಿಚಿತ ವ್ಯಕ್ತಿ  edirector@gmail.com ಎಂಬ ನಕಲಿ ಇಮೇಲ್ ಐಡಿ ರಚಿಸಿ ಸದ್ರಿ ಇಮೇಲ್ ಐಡಿಯಿಂದ MRPL ಕಂಪನಿಯ ಕೆಲವು ಸಿಬ್ಬಂದಿಗಳಿಗೆ ಈಮೇಲ್ ಮುಖೇನ ಸಂದೇಶ ಕಳುಹಿಸಿದ್ದು, ಅದರಲ್ಲಿ ಸಿಬ್ಬಂದಿಗಳ ವಾಟ್ಸಪ್ ನಂಬ್ರಗಳನ್ನು ಕಳುಹಿಸುವಂತೆ ತಿಳಿಸಿರುತ್ತಾರೆ. ಈ ನಕಲಿ ಇಮೇಲ್ ಸಂದೇಶವು MRPL ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ  ಇಮೇಲ್  ಐಡಿ ಎಂದು ನಂಬಿ ಕೆಲವೊಂದು ಸಿಬ್ಬಂದಿಯವರು ತಮ್ಮ ವಾಟ್ಸಾಪ್ ನಂಬ್ರ ಗಳನ್ನು ಮೇಲ್ಕಂಡ ಇಮೇಲ್ ಐಡಿ ಗೆ ಕಳುಹಿಸಿರುತ್ತಾರೆ. MRPL ಕಂಪನಿಯ ಒರ್ವ ಸಿಬ್ಬಂದಿಯವರು ಇಮೇಲ್ ಸಂದೇಶನ್ನು ನೋಡಿ ಅನುಮಾನಗೊಂಡು ವ್ಯವಸ್ಥಾಪಕ ನಿರ್ದೇಶಕರಲ್ಲಿ ಕೇಳಿದಾಗ ಅವರು ಅದು ತನ್ನ  ಇಮೇಲ್ ID ಯಲ್ಲ ಎಂದು ತಿಳಿಸಿರುತ್ತಾರೆ.ಆದರೆ ಕೆಲ ಸಿಬ್ಬಂದಿಗಳು ಈ ಇ-ಮೇಲ್ ಸಂದೇಶಕ್ಕೆ ಉತ್ತರಿಸಿ ತಮ್ಮ ವಾಟ್ಸಪ್ ನಂಬ್ರಗಳನ್ನು ಕಳುಹಿಸಿದ್ದು, ನಂತರ +919600411596 ನಂಬರ್ ನಿಂದ ಕೆಲವು ಸಂದೇಶಗಳು ಇಮೇಲ್ ಸಂದೇಶಕ್ಕೆ ಉತ್ತರಿಸಿದ ಸಿಬ್ಬಂದಿಗಳಿಗೆ ಬಂದಿರುತ್ತದೆ.ಅಲ್ಲದೇ ಸದ್ರಿ ವಾಟ್ಸ್ ಆಫ್ ಖಾತೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಂ ವೆಂಕಟೇಶ್  ರವರ ಫ್ರೋಫೈಲ್ ಫೋಟೋ ವನ್ನು ಹಾಕಿರುತ್ತಾರೆ. ಯಾರೋ ಅಪರಿಚಿತ ವ್ಯಕ್ತಿಗಳು ನಕಲಿ ಇಮೇಲ್ ಐಡಿ ರಚಿಸಿ MRPL ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವೆಂಕಟೇಶ್ ರವರ ಹೆಸರನ್ನು ಬಳಸಿ ವಂಚನೆ ಮಾಡುವ ಉದ್ದೇಶದಿಂದ  ನಕಲಿ ಇ-ಮೇಲ್  ಐಡಿ ರಚಿಸಿರುತ್ತಾರೆ. ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು  ಎಂಬಿತ್ಯಾದಿ

 

Crime Reported in Mangalore North PS

ಪಿರ್ಯಾದಿದಾರರಾದ ANIL LOBO ರವರು ಮಂಗಳೂರು ಹಂಪನಕಟ್ಟೆಯಲ್ಲಿರುವ ಎಂಸಿಸಿ ಬ್ಯಾಂಕ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇವರು ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕಿನ ಬಗ್ಗೆ 2020 ನೇ ಇಸವಿಯಿಂದಲೂ ಜೆರಾರ್ಡ್ ಟವರ್ಸ್ ಶಿವಬಾಗ್ ಕದ್ರಿ ಮಂಗಳೂರು ರವರು ಮತ್ತು ಅವರ ಸಂಗಡಿಗರು ಬ್ಯಾಂಕಿನ ಬಗ್ಗೆ ಜೆರಾರ್ಡ್ ಟವರ್ಸ್ ರವರ ಫೇಸ್ ಬುಕ್ ಮತ್ತು ತನ್ನ ಸಂಗಡಿಗರಿಗೆ ಬ್ಯಾಂಕಿನ ವಿರುದ್ದ ಸುಳ್ಳು ಸುದ್ದಿಯನ್ನು ಹರಡಿ ಬ್ಯಾಂಕಿನ ವ್ಯವಹಾರಕ್ಕೆ ನಷ್ಟ ಉಂಟು ಮಾಡುವ ಉದ್ದೇಶದಿಂದ ಅವಹೇಳನಕಾರಿಯಾದ ಶಬ್ದಗಳನ್ನು ರಚಿಸಿ ಸುಳ್ಳು ಸುದ್ದಿಯನ್ನು ಹರಡುತ್ತಿರುವುದರಿಂದ ಜೆರಾರ್ಡ್ ಟವರ್ಸ್ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

 

Crime Reported in Mangalore East PS  

ಪಿರ್ಯಾದಿದಾರರಾದ Mohammed Imdad ರವರು   ಎ.ಜೆ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 2019 ನೇ ಇಸವಿಯಿಂದ ವೈದ್ಯರಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 15-11-2021 ರಂದು MICU  ನಲ್ಲಿ ರಾತ್ರಿ ಪಾಳಿ  ಕರ್ತವ್ಯದಲ್ಲಿದ್ದು MICU  ನಲ್ಲಿ ದಿನಾಂಕ 30-10-2021 ರಿಂದ ಕಾರವಾರ ಯಲ್ಲಾಪುರ ಬಲ್ಲಿ ಮನೆ ವಾಸಿ ಶ್ರೀಮತಿ ಶಾರದಾ ಎಂಬವರು ಚಿಕಿತ್ಸೆಯಲ್ಲಿದ್ದು ಅವರ ಪರಿಸ್ಥಿತಿ ತೀರ ಚಿಂತಜನಕವಾಗಿದ್ದು ಅವರು ವೆಂಟಿಲೇಟರ್ ಸಹಾಯದಲ್ಲಿದ್ದು ಅವರ ಸ್ಥಿತಿ ದಿನದಿಂದ ದಿನಕ್ಕೆ ಚಿಂತಾಜನಕವಾಗುತ್ತಿದ್ದು ಅದರೂ ಅವರ ಮಗ ಅರವಿಂದ ಅವರನ್ನು ಅಸ್ಪತ್ರೆಯಿಂದ ಬಿಡುಗಡೆಗೊಳಿಸುವಂತೆ ಒತ್ತಾಯಿಸುತ್ತಿದ್ದುದರಿಂದ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ದಾಖಲೆಗಳನ್ನು ಸಿದ್ದ ಪಡಿಸಿದಾಗ ದಿನಾಂಕ 15-11-2021 ರಂದು ರಾತ್ರಿ 10.45 ಗಂಟೆಗೆ ಏಕಾಏಕಿ ಅರವಿಂದ ಹಾಗೂ ಇನ್ನಿಬ್ಬರು MICU ನೊಳಗೆ ಬಂದು ಪಿರ್ಯಾದಿದಾರರಿಗೆ ಕೆಟ್ಟಕೆಟ್ಟದಾಗಿ ಬೈದು ಕೈಯಿಂದ ಹಲ್ಲೆ ನಡೆಸಿ ಕರ್ತವ್ಯಕ್ಕೆ ತಡೆಯುಂಟು ಮಾಡಿರುತ್ತಾರೆ ಎಂಬಿತ್ಯಾದಿ.

Crime Reported in Ullal PS  

ಫಿರ್ಯಾದಿದಾರರಾದ ಶಿವಕುಮಾರ್ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ ದಿನಾಂಕ. 15-11-2021 ರಂದು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಖಚಿತ ಮಾಹಿತಿ ಮೇರೆಗೆ 18-05 ಗಂಟೆಯ ಸಮಯಕ್ಕೆ ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕನು ಯಾವುದೋ ಮಾದಕ ವಸ್ತು ಸೇವಿಸಿ ನಶೆಯ ಅಮಲಿನಲ್ಲಿ ತೂರಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದವನನ್ನು ಹಿಡಿದು ವಿಚಾರಿಸಿಲಾಗಿ, ಆತನ ಹೆಸರು ಶೇಖ್ ಮೊಹಮ್ಮದ್ ನಿಹಾಲ್ (24) ವಾಸ: ಲೋಬೊ ವಿಲ್ಲಾದಲ್ಲಿ ಬಾಡಿಗೆ ಮನೆ  ಕಲ್ಲಾಪು ಪೆರ್ಮನ್ನೂರು ಗ್ರಾಮ ಮಂಗಳೂರು. ಇವನನ್ನು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರಿಂದ ತಪಾಸಣೆಗೊಳಪಡಿಸಿದಾಗ ಇವನು ಮಾದಕ ವಸ್ತು ಗಾಂಜಾ ಸೇವನೆ  ಮಾಡಿರುವುದು ದೃಢಪಟ್ಟಿರುವ ಕಾರಣ ಇವರ ವಿರುದ್ಧ ದಾಖಲಿಸಿಕೊಂಡ ಪ್ರಕರಣದ ಸಾರಾಂಶ.

Crime Reported in Kankanady Town PS

ದಿನಾಂಕ 15-11-2021 ರಂದು  ಪಿರ್ಯಾದಿದಾರರಾದ Sundar Raj ರವರು ಸಿಬ್ಬಂದಿವರೊಂದಿಗೆ  ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಬಾತ್ಮೀದಾರರಿಂದ  ಕೊಡಕ್ಕಲ್ ಬಳಿ ಯುವಕನೊಬ್ಬನು ಗಾಂಜಾ ಸೇವಿಸುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿಯಂತೆ ತಿಳಿಸಿದ ಸ್ಥಳಕ್ಕೆ 18:10 ಗಂಟೆಗೆ ಬಂದಾಗ ಸಾರ್ವಜನಿಕ ಸ್ಥಳದಲ್ಲಿ  ಯುವಕನೊಬ್ಬನು  ನಿಂತು ಸಿಗರೇಟು ಸೇದುತ್ತಿದ್ದು,  ಸದ್ರಿ  ಸಿಗರೇಟ್ ಸೇದುತ್ತಿದ್ದ ಯುವಕನನ್ನು ಹತ್ತಿರ ಕರೆದು ವಿಚಾರಿಸಿದಲ್ಲಿ ಅವನು  ತನ್ನ ಹೆಸರು  ದೀಪಕ್ (24), ವಾಸ: ಸುಂಕದಕಟ್ಟೆ, ಉರ್ವಾಸ್ಟೋರ್, ಮಂಗಳೂರು  ಎಂಬುದಾಗಿ ತಿಳಿಸಿದ್ದು. ವಿಚಾರಣೆ ನಡೆಸಿದಾಗ ಆವರು ತಾವು ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡಿರುತ್ತಾನೆ . ಈ ಬಗ್ಗೆ ಖಚಿತಪಡಿಸಿಕೊಳ್ಳುವ ಸಲುವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ವೈದ್ಯರು ಗಾಂಜಾ ಸೇವನೆ ಮಾಡಿರುವುದಾಗಿ ಧೃಢಿಕರಣ ಪತ್ರವನ್ನು ನೀಡಿರುವುದರಿಂದ ಆತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

 

2) ಪಿರ್ಯಾದಿದಾರರಾದ ಸುಂದರ್ ರಾಜ್ ರವರು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಯುವಕನೊಬ್ಬ ಗಾಂಜಾ ಸೇವಿಸುತ್ತಿದ್ದಾನೆ ಎಂಬುದಾಗಿ  ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿಯಂತೆ ಬಜಾಲ್ ಜಲ್ಲಿಗುಡ್ಡೆ ಬಳಿ ಬಂದಾಗ ಯುವಕನೊಬ್ಬನು    ನಿಂತು ಸಿಗರೇಟು ಸೇದುತ್ತಿದ್ದು,  ಸದ್ರಿ ಯುವಕನನ್ನು ಹತ್ತಿರ ಕರೆದು ವಿಚಾರಿಸಿದಲ್ಲಿ ಅವನು  ತನ್ನ ಹೆಸರು  ಮೊಹಮ್ಮದ್ ಹನೀಝ್ (24),  ವಾಸ : ಎಸ್. ಹೆಚ್. ನಗರ, ಕಣ್ಣೂರು ದಯಾಂಬು, ಮಂಗಳೂರು ಎಂಬುದಾಗಿ ತಿಳಿಸಿದನು. ಬಾಯಿಯಿಂದ ಗಾಂಜಾ ಸೇವನೆ ಮಾಡಿರುವ ವಾಸನೆ ಬರುತ್ತಿದ್ದುದರಿಂದ ಆವರನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ಆತನು ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡಿರುತ್ತಾರೆ. ಖಚಿತಪಡಿಸಿಕೊಳ್ಳುವ ಸಲುವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ವೈದ್ಯರು ಗಾಂಜಾ ಸೇವನೆ ಮಾಡಿರುವುದಾಗಿ ಧೃಢಿಕರಣ ಪತ್ರವನ್ನು ನೀಡಿರುವುದರಿಂದ ಆತನ ವಿರುದ್ದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Crime Reported in Mangalore Rural PS

ತಾರೀಕು 15-11-2021 ರಂದು ಪಿರ್ಯಾದಿದಾರರಾಧ Vinayak Bhavikatti ರವರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ರಾತ್ರಿ ಸಮಯ 08.30 ಗಂಟೆಗೆ ಮಂಗಳೂರು ತಾಲೂಕು ವಳಚ್ಚಿಲ್ ಗ್ರಾಮದ ಶ್ರೀನಿವಾಸ ಕಾಲೇಜು ಬಳಿ  ಮಾದಕ ವಸ್ತುವಾದ ಗಾಂಜ ಸೇವನೆ ಮಾಡುತ್ತಿದ್ದ ಆರೋಪಿ ಅಜ್ಮಲ್ (35 ವರ್ಷ) ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಸ್ವ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ

 

 

ಇತ್ತೀಚಿನ ನವೀಕರಣ​ : 16-11-2021 07:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080