ಅಭಿಪ್ರಾಯ / ಸಲಹೆಗಳು

Crime Reported in Mangalore East Traffic PS       

ಪಿರ್ಯಾದಿದಾರರಾದ ಶ್ರೀ.ಬಿ.ಎನ್.ರವೀಂದ್ರ (53) ರವರು ಕೆಲಸದ ನಿಮಿತ್ತ ತಮ್ಮ ಬಾಬ್ತು  KA-19-EA-2003  ನಂಬ್ರದ ಸ್ಕೂಟರನ್ನು ಚಲಾಯಿಸಿಕೊಂಡು ಸಿಟಿ ಸೆಂಟರ್ ಮಾರ್ಗವಾಗಿ ಹಂಪನಕಟ್ಟೆ ಜಂಕ್ಷನ್ ಗೆ ತಲುಪಿ ರೈಲ್ವೇ ಸ್ಟೇಷನ್  ಹೋಗಲು ಬಲಕ್ಕೆ ತಿರುಗಿದಾಗ ಸಮಯ ಸುಮಾರು ರಾತ್ರಿ 21.50 ಗಂಟೆಗೆ ಮಿಲಾಗ್ರಿಸ್ ಕಡೆಯಿಂದ  ಕ್ಲಾಕ್ ಟವರ್ ಕಡೆಗೆ  KA-21-N-4525  ನಂಬ್ರದ ಕಾರಿನ ಚಾಲಕನು ದುಡುಕುತನ, ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟರಿನ ಎಡಬದಿಯ ಮುಂಬದಿ ಬಾಡಿಗೆ ಡಿಕ್ಕಿ ಪಡಿಸಿ ಕಾರಿನ ಚಾಲಕನು ಅಪಘಾತ ಪಡಿಸಿದ ಸ್ಥಳದಿಂದ ಪರಾರಿಯಾಗಿರುತ್ತಾರೆ.ಈ ಅಪಘಾತದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಸದ್ರಿಯವರ ಎಡಭುಜದ ಕೀಲು ಜಜ್ಜಿ ಹೋಗಿದ್ದು ಮೂಳೆ ಮುರಿತದ  ಗಾಯ ಉಂಟಾಗಿದ್ದು, ಎಡಕಾಲಿನ ಮಣಿಗಂಟು ಮತ್ತು ಮೊಣಗಂಟಿನಲ್ಲಿ ತರಚು ಗಾಯಗಳು ಬಲ ಅಂಗೈ ತಟ್ಟುಗಳಲ್ಲಿ ತರಚಿದ ಗಾಯ ಮತ್ತು ಹಣೆಯ ಎಡಭಾಗದಲ್ಲಿ ಎಡಕಣ್ಣಿನ ಕೆಳಗೆ  ಗಾಯಗೊಂಡವರನ್ನು ಅಲ್ಲಿ ಸೇರಿದ ಸಾರ್ವಜನಿಕರು ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ನಂತರದಲ್ಲಿ ಪಿರ್ಯಾದಿದಾರರು ಯೆನೆಪೋಯಾ ಆಸ್ಪತ್ರೆಯಲ್ಲಿ  ಹೆಚ್ಚಿನ ಚಿಕಿತ್ಸೆ ಪಡೆದಿರುತ್ತಾರೆ. ಬಳಿಕ ಮನೆಯಲ್ಲಿದ್ದು ಚಿಕಿತ್ಸೆ ಪಡೆದಿರುತ್ತಾರೆ. ಪಿರ್ಯಾದಿದಾರರು ಚಿಕಿತ್ಸೆ ನಿಮಿತ್ತ ಮನೆಯಲ್ಲಿಯೇ ಇದ್ದುರಿಂದ ಪಿರ್ಯಾದಿ ನೀಡಲು ತಡವಾಗಿರುತ್ತದೆ ಅಪಘಾತ ಪಡಿಸಿದ  ಕಾರಿನ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ  ಎಂಬಿತ್ಯಾದಿ.

2) ಪಿರ್ಯಾದಿದಾರರಾದ ಗ್ರೇಟಾ ಆಶಾ ಡಿಸಿಲ್ವ (42) ರವರ ಚಿಕ್ಕಪ್ಪ ಜೆರಾಲ್ಡ್ ಡಿಸಿಲ್ವ (73) ರವರು ದಿನಾಂಕ:05-12-2021 ರಂದು ಬೆಳಿಗ್ಗೆ ಸಮಯ ಸುಮಾರು 5.30 ಗಂಟೆಗೆ ಶಕ್ತಿ ನಗರ ಕ್ರಾಸ್ ಬಳಿರುವ   SOMAYAJI ELITE  APARTMENT  ಮುಂಭಾಗ ರಾಷ್ಟ್ರೀಯ ಹೆದ್ದಾರಿ 169 ನೇ ರಸ್ತೆಯನ್ನು ದಾಟಿ ಹೋಟೆಲ್ ಆಶೀರ್ವಾದ ಬಳಿಗೆ ಚಹಾ ಕುಡಿಯಲು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ವೇಳೆ  ವಾಮಂಜೂರು ಕಡೆಯಿಂದ ಕುಲಶೇಖರ ಕೈಕಂಬ ಕಡೆಗೆ ಆಟೋರಿಕ್ಷಾ ಚಾಲಕನು ಆಟೋರಿಕ್ಷಾವನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಭಾಗಕ್ಕೆ ಬಂದು ಜೆರಾಲ್ಡ್ ಡಿಸಿಲ್ವ (73)ರವರಿಗೆ ಡಿಕ್ಕಿ ಪಡಿಸಿ ಪರಾರಿಯಾಗಿರುತ್ತಾರೆ. ಈ ಅಪಘಾತದಿಂದ ಜೆರಾಲ್ಡ್ ಡಿಸಿಲ್ವ (73)ರವರ ಎಡಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ತಲೆಯ ಎಡಭಾಗ ಹಿಂಬದಿಗೆ ಚರ್ಮ ಹರಿದ ಗಾಯವಾಗಿರುತ್ತದೆ. ಚಿಕಿತ್ಸೆಯ ಬಗ್ಗೆ  ವೆನ್ಲಾಕ್  ಆಸ್ಪತ್ರೆಗೆ ದಾಖಲಾದವರು, ಈ ದಿನ ದಿನಾಂಕ:15-12-2021 ರಂದು ಬೆಳಿಗ್ಗೆ 10.46 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುತ್ತಾರೆ. ಈವರೆಗೂ ಅಪಘಾತ ಪಡಿಸಿದ ಆಟೋ ರಿಕ್ಷಾದ ನೊಂದಣಿ ಸಂಖ್ಯೆ ತಿಳಿಯದೇ ಇದ್ದುದ್ದರಿಂದ ತಡವಾಗಿ ದೂರು ನೀಡಿದ್ದು,ಅಪಘಾತ ಪಡಿಸಿದ ಆಟೋರಿಕ್ಷಾ ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವರೇ ಎಂಬಿತ್ಯಾದಿ

Crime Reported in Traffic North PS                      

ದಿನಾಂಕ 16-12-2021 ರಂದು ಪಿರ್ಯಾದಿ Imthiyaz ದಾರರ ಹೆಂಡತಿಯ ತಂದೆ ಅಬ್ಬಾಸ್ ರವರು ಎಂದಿನಂತೆ ಪ್ಯಾಕ್ಟರಿಗೆ ತನ್ನ ಕೆಲಸದ ಬಗ್ಗೆ ಅವರ ಬಾಬ್ತು KA-19-HB-9447 ನಂಬ್ರದ ಸ್ಕೂಟರಿನಲ್ಲಿ ಜೋಕಟ್ಟೆ ಮನೆಯಿಂದ ಬೈಕಂಪಾಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 06:00 ಗಂಟೆಗೆ ಮುಂಗಾರು ಜಂಕ್ಷನ್ ಸಮೀಪದ ಐಸ್ ಪ್ಯಾಕ್ಟರಿ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರುಗಡೆಯಿಂದ ಅಂದರೆ ಮುಂಗಾರು ಜಂಕ್ಷನ್ ಕಡೆಯಿಂದ ಜೋಕಟ್ಟೆ ಕಡೆಗೆ KA-19-AA-9972 ನಂಬ್ರದ 12 ಚಕ್ರದ ಲಾರಿಯನ್ನು ಅದರ ಚಾಲಕ ಅಬ್ದುಲ್ ನಿಯಾಜ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಅಬ್ಬಾಸ್ ರವರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಲಾರಿಯ ಎದುರಿನ ಬಲ ಬದಿ ಮುಖಾಮುಖಿ ಡಿಕ್ಕಿ ಪಡಿಸಿದ ಪರಿಣಾಮ ಅಬ್ಬಾಸ್ ರವರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಅವರ ಬಲ ಕಾಲಿನ ಕೋಲು ಕಾಲಿಗೆ ರಕ್ತಗಾಯ, ಎಡಕಾಲಿನ ಮಣಿ ಗಂಟಿನಲ್ಲಿ ಚರ್ಮ ತರಚಿದ ರೀತಿ ಗಾಯ, ಬಲಕೈ ಬೆರಳುಗಳ ತುದಿಗಳಿಗೆ ಗುದ್ದಿದ ಗಾಯವಾಗಿದ್ದು ಅಲ್ಲದೇ ಹಣೆಯ ಎಡ ಬದಿಗೆ ಗುದ್ದಿದ ರೀತಿಯ ಗಾಯವಾಗಿ ಚಿಕಿತ್ಸೆಯ ಬಗ್ಗೆ ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Crime Reported in Mangalore South PS

ದಿನಾಂಕ 09-11-2021 ರಂದು ರಾತ್ರಿ 23-00 ಗಂಟೆಯಿಂದ ಅದೇ ದಿನ ರಾತ್ರಿ 23-50 ಗಂಟೆಯ ಮದ್ಯಾವಧಿಯಲ್ಲಿ ಮಂಗಳೂರು ನಗರದ ಸರ್ವಿಸ್ ಬಸ್ಸ್ ನಿಲ್ದಾಣ ಹತ್ತಿರವಿರುವ ಟೆಂಪೋ ಪಾರ್ಕಿಂಗ್ ಹತ್ತಿರದ ಒಂದು ಮಿಲ್ಕ್ ಪಾರ್ಲರ್ ಬಳಿ ಪಾರ್ಕ್ ಮಾಡಿ ಇಟ್ಟಿದ್ದ ಪಿರ್ಯಾದಿ Rakesh Kumar  ಉಪಯೋಗಿಸುತ್ತಿದ್ದ. ಸುಂದರ್ ಶೆಟ್ಟಿ ರವರ ಆರ್. ಸಿ. ಮಾಲಕತ್ವದ HERO HONDA SPLENDOR 08/2002 ನೇ ಮೊಡಲ್ ನ KA 20 L 4244 ನೊಂದಣಿ ಸಂಖ್ಯೆಯ 02F20C27191 ಚೆಸಿಸ್ ನಂಬ್ರದ, 02F18M28611 ಇಂಜಿನ್ ನಂಬ್ರದ, ಆರೆಂಜ್-ಕಪ್ಪು ಬಣ್ಣದ, ಅಂದಾಜು ಮೌಲ್ಯ 10,000/- ರೂಪಾಯಿ ಬೆಲೆಬಾಳುವ ದ್ಚಿಚಕ್ರ ವಾಹನವನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಮಂಗಳೂರು ನಗರದ ಬರ್ಕೆ ಪೊಲೀಸರು ದ್ಚಿಚಕ್ರ ವಾಹನ ಕಳವು ಮಾಡುವ ಕಳ್ಳರಿಂದ ದ್ಚಿಚಕ್ರ ವಾಹನವನ್ನು ಸ್ವಾಧೀನಪಡಿಸಿಕೊಂಡಿರುವ ವಿಚಾರ ತಿಳಿದು ಬರ್ಕೆ ಠಾಣೆಗೆ ಹೋಗಿ ದ್ಚಿಚಕ್ರ ವಾಹನವನ್ನು ಗುರುತಿಸಿ ದಿನಾಂಕ 16-12-2021 ರಂದು ಈ ಪಿರ್ಯಾದು ನೀಡಿರುವುದಾಗಿದೆ

Mangalore East PS

ಪಿರ್ಯಾಧಿ Seeta Bayi ದಾರರ ಎರಡನೇ ಮಗನಾದ ನಾಗೇಂದ್ರ ನಾಯಕ್ ರವರು ಸ್ಟೇಟ್ ಬ್ಯಾಂಕ್ ಬಳಿ ಇರುವ ಹೋಟಲ್ ಸಾರಥಿಯಲ್ಲಿ ಕೆಲಸ ಮಾಡಿಕೊಂಡು ರಾತ್ರಿ ಮನೆಗೆ ಬಂದು ಬೆಳಿಗ್ಗೆ  ಎಂದಿನಂತೆ ಕೆಲಸಕ್ಕೆ ಹೋಗುತ್ತಿದ್ದರು ಅದರಂತೆ ದಿನಾಂಕ 11-12-2021 ರಂದು ಬೆಳಿಗ್ಗೆ ಸುಮಾರು 8.30 ಗಂಟೆಗೆ ಹೋಟಲ್ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಮನೆಗೂ ಬಾರದೇ ಮತ್ತು ಊರಿಗೂ ಹೋಗದೇ ಕಾಣೆಯಾಗಿರುತ್ತಾನೆ. ನನ್ನ ಮಗನನ್ನು ಸಂಬಂಧಿಕರ ಹಾಗೂ ಊರಿನಲ್ಲಿ ಮತ್ತು ಆತನ ಸ್ನೇಹಿತರಲ್ಲಿ ವಿಚಾರಿಸಿ ದೂರು ನೀಡಲು ತಡವಾಗಿರುತ್ತದೆ. ಕಾಣೆಯಾದ  ನನ್ನ ಮಗನನ್ನು ಪತ್ತೆ ಮಾಡಿಕೊಡಬೇಕು ಎಂಬಿತ್ಯಾದಿ.

ಕಾಣೆಯಾದವರ ಚಹರೆ

ಹೆಸರು : ನಾಗೇಂದ್ರ ನಾಯಕ್

ಪ್ರಾಯ : 24 ವರ್ಷ

ಎತ್ತರ :5.5 ಅಡಿ

ಬಣ್ಣ : ಗೋದಿ ಮೈ ಬಣ್ಣ, ಸಪೂರ ಶರೀರ

ಭಾಷೆ : ಲಂಬಾಣಿ, ಕನ್ನಡ, ತುಳು, ತೆಲಗು, ಹಿಂದಿ

ಬಟ್ಟೆ : ನೀಲಿ ಬಣ್ಣದ ನೈಟ್ ಪ್ಯಾಂಟ್, ಗುಲಾಬಿ  ಬಣ್ಣದ ಶರ್ಟ್

ವಿಧ್ಯಾಭ್ಯಾಸ- 8ನೇ ತರಗತಿ

 

 

ಇತ್ತೀಚಿನ ನವೀಕರಣ​ : 16-12-2021 06:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080