ಅಭಿಪ್ರಾಯ / ಸಲಹೆಗಳು

Crime Reported in : Mangalore North PS    

ಪಿರ್ಯಾದಿ T MANIMARAN ದಾರರು EIPR (INDIA) PVT.LTD. CHENNAI – 83 ಕಂಪೆನಿಯ ಸೀನಿಯರ್ ಮ್ಯಾನೇಜರ್ ಆಗಿದ್ದು ಅರ್ಜಿದಾರರಿಗೆ ತಾನು ಕೆಲಸ ಮಾಡುವ ಸಂಸ್ಥೆಯು ERD ಉತ್ಪಾದನೆಯ ಸೊತ್ತುಗಳ ಸರ್ವೆ ಇತ್ಯಾದಿ ಮಾಡುವ ಬಗ್ಗೆ  ಅಧಿಕಾರ ಪತ್ರವನ್ನು ಕೊಟ್ಟಿರುತ್ತದೆ ಅದರಂತೆ ERD ಉತ್ಪಾದನೆಯನ್ನು ನಕಲಿಯಾಗಿ ತಯಾರಿಸಿ ಮಾರಾಟ ಮಾಡುವ ಮಾಹಿತಿಯನುಸಾರ ಪಿರ್ಯಾದಿದಾರರು ದಿನಾಂಕ 17-02-2022 ರಂದು ಬೆಳಿಗ್ಗೆ 10-30 ಗಂಟೆಗೆ ಮಂಗಳೂರು ಸಿಟಿ ಮಾರ್ಕೆಟ್ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿರುವ ಮಹದೇವ ಟೆಲಿಕಾಂ ಮತ್ತು ಎಸ್ ವಿ ಮೊಬೈಲ್ಸ್ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ನಕಲಿಯಾಗಿ ತಯಾರಿಸಿದ ERD ಕಂಪೆನಿಯ ಬ್ಯಾಟರಿ ಮತ್ತು ಚಾರ್ಜರ್ ಗಳನ್ನು ಮಾರಾಟ ಮಾಡಲು ಇಟ್ಟಿರುವುದು ಹಾಗೂ ಮಂಗಳೂರು ಎಂ ಜಿ ರೋಡ್ ಕೊಡಿಯಾಲ್ ಗುತ್ತು ಎಂಬಲ್ಲಿ ಗೋಡೌನ್ ಇಟ್ಟುಕೊಂಡಿರುವ ರತನ್ ಎಂಬಾತನು ಸಪ್ಲೈ ಮಾಡುತ್ತಿರುವುದು ಪತ್ತೆಯಾಗಿರುತ್ತದೆ. ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

 

Crime Reported in Traffic North PS

ದಿನಾಂಕ:16-02-2022 ರಂದು ಪಿರ್ಯಾದಿ Padmanav Baral ದಾರರು INDO TIBETIAN BORDER POLICE FORCE ಘಟಕದಲ್ಲಿ DEPUTY COMMANDENT ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ಸದ್ರಿಯವರ ಸುರತ್ಕಲ್ ಮಂಗಳೂರು ಘಟಕದಲ್ಲಿ POLICE INSPECTOR G.D(ITBPF) ಕರ್ತವ್ಯ ನಿರ್ವಹಿಸಿಕೊಂಡಿರುವ ಗೋಪಾಲ್ ಸಿಂಗ್ ರವರು ಹೋಟೆಲ್ ಲಲಿತ್ ಇಂಟರ್ ನ್ಯಾಷನಲ್ ನಲ್ಲಿ ವಾಸ್ತವ್ಯವಿದ್ದು, ಮೆಸ್ ಗೆ ಅಗತ್ಯ ವಸ್ತುಗಳ ಖರೀದಿ ಬಗ್ಗೆ ಸುರತ್ಕಲ್ ಮಾರ್ಕೆಟ್ ಗೆ  ಬಂದವರು  ವಾಪಸ್ಸು ಅವರ ಹೋಟೆಲ್ ಲಲಿತ್ ಇಂಟರ್ ನ್ಯಾಷನಲ್ ಗೆ ವಾಪಸ್ಸು ಹೋಗಲು ಲಲಿತ್ ಇಂಟರ್ ನ್ಯಾಷನಲ್ ಎದುರು ಸುರತ್ಕಲ್ ಕಡೆಗೆ ಹೋಗುವ ರಸ್ತೆಯನ್ನು ದಾಟುತ್ತಾ ಡಿವೈಡರ್ ದಾಟಿ ಸುರತ್ಕಲ್ ಕಡೆಯಿಂದ ಎಂ.ಆರ್.ಪಿ.ಎಲ್ ಕಡೆಗೆ ಹೋಗುವ ರಸ್ತೆಗೆ ಇಳಿಯುತ್ತಿದ್ದ ಸಮಯ 19:30 ಗಂಟೆಗೆ ಸುರತ್ಕಲ್ ಕಡೆಯಿಂದ ಎಂ.ಆರ್.ಪಿಎಲ್ ಕಡೆಗೆ KA-19-HH-8221 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತದಿಂದ ಅಪಾಯಕಾರಿಯಾದ ರೀತಿಯಲ್ಲಿ  ಚಲಾಯಿಸಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ಗೋಪಾಲ್ ಸಿಂಗ್ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಗೋಪಲ್ ಸಿಂಗ್ ರವರು ಕಾಂಕ್ರೀಟ್ ರಸ್ತೆಗೆ ಬಿದ್ದು ಗೋಪಾಲ್ ಸಿಂಗ್ ರವರ ತಲೆಗೆ ಗುದ್ದಿದ ಗಂಭೀರ ಸ್ವರೂಪದ ಒಳಗಾಯ ಅಲ್ಲದೇ ಎಡಕೈ ಹಾಗೂ ಎಡಕಾಲಿಗೆ  ಗುದ್ದಿದ ಗಾಯವಾಗಿ ಮಾತನಾಡುವ ಸ್ಥಿಯಲ್ಲಿ ಇರದೇ ಚಿಕಿತ್ಸೆಯ ಬಗ್ಗೆ ಮಂಗಳೂರು ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿರುತ್ತಾರೆ. ಅಲ್ಲದೇ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲನ್ನು ಅಪಘಾತ ಸ್ಥಳದಲ್ಲಿ ನಿಲ್ಲಿಸದೇ ಮೋಟಾರ್ ಸೈಕಲ್ ಸಮೇತ  ಸ್ಥಳದಿಂದ ಪರಾರಿಯಾಗಿರುವುದಾಗಿದೆ. ಎಂಬಿತ್ಯಾದಿ

 

Crime Reported in Ullal PS

 

ದಿನಾಂಕ. 16-02-2021 ರಂದು ಫಿರ್ಯಾದಿದಾರರಾದ ಉಳ್ಳಾಲ ಠಾಣೆಯ ಪೊಲೀಸ್ ಉಪ-ನೀರಿಕ್ಷಕರಾದ  ಪ್ರದೀಪ್ ಟಿಆರ್ ರವರು ಸಿಹೆಚ್ ಸಿ  ರಂಜಿತ್ , ಪಿ ಸಿ  ಸತೀಶ್ ರವರ ಜೊತೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಉಳ್ಳಾಲ ಪೊಲೀಸ್ ಠಾಣಾ ಸರಹದ್ದಿನ ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ಕುತ್ತಾರು ಶಾಂತಿಭಾಗ್ ಬಳಿ ಇರುವ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕನು ಯಾವುದೋ ನಶೆ ಬರುವ ವಸ್ತುವನ್ನು ಸೇವಿಸಿ ತೂರಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದಾನೆ ಎಂಬುದಾಗಿ ಬಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ ಸಮಯ 20:00 ಗಂಟೆಗೆ ಮಾಹಿತಿ ದೊರೆತ ಸ್ಥಳಕ್ಕೆ  ಸ್ಥಳಕ್ಕೆ ತೆರಳಿದಾಗ ಅಲ್ಲಿ ಒಬ್ಬ  ಯುವಕನು ಯಾವುದೋ ನಶೆ ಬರುವ ವಸ್ತುವನ್ನು ಸೇವಿಸಿ ತೂರಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದವನನ್ನು ವಿಚಾರಿಸಿದಾಗ ಆತನು ನಿಷೇದಿತ ಮಾದಕ ವಸ್ತುವಿನ ತಂಬಾಕು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಹೆಸರು ಕೇಳಲಾಗಿ  1)ನಿಜಾಮುದ್ದೀನ್ @ನಿಜಾಮ್ ಎಂಬುದಾಗಿ ತಿಳೀಸಿರುತ್ತಾನೆ. ಈತನನ್ನು ವಶಕ್ಕೆ ತೆಗೆದುಕೊಂಡು ಬಳಿಕ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರಿಂದ ವೈದ್ಯಕೀಯ ತಪಾಸಣೆಗೊಳಪಡಿಸಿದ್ದಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ವೈದ್ಯರು ಅಭಿಪ್ರಾಯ ಪತ್ರ ನೀಡಿರುವುದರಿಂದ ಆರೋಪಿತನ ವಿರುದ್ಧ  ದಾಖಲಿಸಿದ ಪ್ರಕರಣದ ಸಾರಾಂಶ.

 

 

ಇತ್ತೀಚಿನ ನವೀಕರಣ​ : 17-02-2022 07:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080