ಅಭಿಪ್ರಾಯ / ಸಲಹೆಗಳು

Crime Reported in Moodabidre PS                 

ದಿನಾಂಕ: 16-05-2022 ರಂದು ಪಿರ್ಯಾದು HARISH ದಾರರು ಸುಮಾರು ಸಂಜೆ 7-00 ಗಂಟೆಯ ಸಮಯಕ್ಕೆ ತನ್ನ ಬೈಕಿನಲ್ಲಿ ಮೂಡಬಿದ್ರೆಯ ಕಿನಾರಾ ಹೋಟೆಲ್ ನ ಬಳಿ ತಲುಪುತ್ತಿದ್ದಂತೆ ಮಂಗಳೂರು ಕಡೆಯಿಂದ ಕೆ.ಎ-19-ಎನ್-7734 ಆಲ್ಟೋ ಕಾರನ್ನು ಅದರ ಚಾಲಕ ಹರೀಶ್ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ಪಿರ್ಯಾದಿದಾರರ ಮಿತ್ರ ಅಶೋಕ ಎಂಬವರ ತಂದೆ ವಿನಯ್ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ಕಾಲಿನ ಮೂಳೆಗಳು ಮುರಿದು ತಲೆಗೆ ರಕ್ತದ ಗಾಯವಾಗಿದ್ದು ಇವರನ್ನು ಚಿಕಿತ್ಸೆಯ ಸಲುವಾಗಿ ಉಡುಪಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿನಾಂಕ: 17-05-2022 ರಂದು ಬೆಳಗಿನ ಜಾವ 5-30 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬಿತ್ಯಾದಿಯಾಗಿದೆ.

 

Crime Reported in Traffic South Police Station   

 ದಿನಾಂಕ: 16-05-2022 ರಂದು ಪಿರ್ಯಾದಿ RIYAZ ದಾರರು ಮದುವೆ ಕಾರ್ಯಕ್ರಮಕ್ಕೆ ಹೋಗಲು ತಮ್ಮ ಬಾಬ್ತು ಆಟೋರಿಕ್ಷಾ ನಂಬ್ರ KA-19-AD-4019 ನೇದರಲ್ಲಿ ಚಾಲಕರಾಗಿಯೂ ಹಾಗೂ ಅವರ ಅಣ್ಣ ಅತ್ತಿಗೆಯವರನ್ನು ಸಹ ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಪಾಣೆ ಮಂಗಳೂರು ಕಡೆಯಿಂದ ತೊಕ್ಕೊಟ್ಟು ಕಡೆಗೆ ಡಾಮಾರು ರಸ್ತೆಯಲ್ಲಿ ಬರುತ್ತಿರುವಾಗ ಸಮಯ ಸುಮಾರು ಸಂಜೆ 7-00 ಗಂಟೆಗೆ ಕೊಣಾಜೆ ಗಣೇಶ್ ಮಹಲ್, BSNL ಕ್ವಾರ್ಟಸ್ ಬಳಿ ತಲುಪಿದಾಗ ಒರ್ವ ವ್ಯಕ್ತಿ ರಸ್ತೆಯಲ್ಲಿ ಬಿದ್ದದ್ದನ್ನು ನೋಡಿ ಕೂಡಲೇ ಆಟೋರಿಕ್ಷಾವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಸದ್ರಿ ಆ ವ್ಯಕ್ತಿಯನ್ನು  ನೋಡಲಾಗಿ ಆತನಿಗೆ ಯಾವುದೋ ಅಪರಿಚಿತ ವಾಹನ ಡಿಕ್ಕಿ ಪಡಿಸಿ ಪರಾರಿಯಾಗಿದ್ದು ಗಂಭೀರ ಗಾಯಗೊಂಡು ಮಾತನಾಡುವ ಸ್ಥಿತಿಯಲ್ಲಿಲ್ಲದವನನ್ನು ನೋಡಿ ಕೂಡಲೇ ಪಿರ್ಯಾದಿದಾರರು ತಮ್ಮ ಅಣ್ಣ ಮತ್ತು ಅತ್ತಿಗೆಯನ್ನು ಬೇರೊಂದು ವಾಹನದಲ್ಲಿ ಹೋಗುವಂತೆ ಹೇಳಿ ಗಂಭೀರ ಗಾಯಗೊಂಡ ವ್ಯಕ್ತಿಯನ್ನು ತಮ್ಮ ಆಟೋರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ನಂತರ ಅಲ್ಲಿನ ವೈದ್ಯಾದಿಕಾರಿಗಳು ಪರೀಕ್ಷಿಸಿ  ಮ್ರತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 17-05-2022 07:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080