Crime Reported in Mangalore South PS
ದಿನಾಂಕ 14-09-2021ರಂದು ಸಂಜೆ 19-00 ಗಂಟೆಯಿಂದ ದಿನಾಂಕ 15-09-2021ರಂದು ಬೆಳಿಗ್ಗೆ 09-30 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಹಂಪನಕಟ್ಟೆ ಕಡೆಯಿಂದ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯ ಎಡಬದಿಯಲ್ಲಿ ವೆನ್ಲಾಕ್ ಆಸ್ಪತ್ರೆಯ ಅಂಬುಲೆನ್ಸ್ ಪಾರ್ಕ್ ಮಾಡುವ ಕಂಪೌಂಡಿನ ಹೊರಗಡೆ ರಸ್ತೆ ಬದಿಯಲ್ಲಿ ಕೀ ಸಹಿತ ಪಾರ್ಕ್ ಮಾಡಿಟ್ಟಿದ್ದ ಪಿರ್ಯಾದಿದಾರರಾದ ಜನಾರ್ಧನ ಜಯ ಶೆಟ್ಟಿಗಾರ್ ರವರ ಆರ್. ಸಿ. ಮಾಲಕತ್ವದ ಯಮಹಾ ಕಂಪನಿಯ 2014ನೇ ಮೊಡಲ್ ನ KA 19 EL 4415 ನೊಂದಣಿ ಸಂಖ್ಯೆಯ, ME121COJ1E2022818 ಚೆಸಿಸ್ ನಂಬ್ರದ, 21CJ022836 ಇಂಜಿನ್ ನಂಬ್ರದ, ಕಪ್ಪು ಬಣ್ಣದ, ಅಂದಾಜು ಮೌಲ್ಯ 20250/- ರೂಪಾಯಿ ಬೆಲೆಬಾಳುವ ಯಮಹಾ ಕಂಪನಿಯ ಯಮಹಾ FZ BS III ದಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನವನ್ನು ಕಳವಾದ ದಿನದಿಂದ ಈ ದಿನ ದಿನಾಂಕ 17-09-2021ರ ವರೆಗೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.
Crime Reported in Moodabidre PS
ಪಿರ್ಯಾದು SMT GULABI(52) ದಾರರ ಮಗಳಾದ ಚೈತ್ರ, ಪ್ರಾಯ-22 ವರ್ಷ ಎಂಬವರು ದಿನಾಂಕ: 13-09-2021 ರಂದು ಬೆಳಿಗ್ಗೆ ಸುಮಾರು 08:15 ಗಂಟೆಗೆ ಪಿರ್ಯಾದುದಾರರ ಮನೆಯಿಂದ ಹೋದವರು ವಾಪಾಸು ತನ್ನ ಮನೆಗೆ ಬಾರದೇ ಹಾಗೂ ಆಕೆಯ ಗಂಡನ ಮನೆಗೂ ಹೋಗದೇ ಯಾವುದೇ ದೂರವಾಣಿ ಕರೆಯನ್ನು ಸ್ವೀಕರಿಸದೇ ಕಾಣೆಯಾಗಿರುತ್ತಾರೆ ಎಂಬಿತ್ಯಾದಿ.
Crime Reported in Mangalore East PS
ಪಿರ್ಯಾದಿದಾರರಾದ ಪ್ರದೀಪ್ ಕುಮಾರ್ ರವರು ಕೆಎ-19-ಇ.ಜೆ-4259 ಟಿ.ವಿ.ಎಸ್ ವೆಗೋ ಸ್ಕೂಟರ್ ನ್ನು ಉಪಯೋಗಿಸಿಕೊಂಡಿದ್ದು, ಈ ಸ್ಕೂಟರನ್ನು ದಿನಾಂಕ: 30-08-2021 ರಂದು ಸಂಜೆ 7-00 ಗಂಟೆಗೆ ನಗರದ ಮಾನಸಾ ಟವರ್ ನ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿ ತಾವು ಕೆಲಸ ಮಾಡುವ ಮೈಕ್ರೋ ಎಲೆಕ್ಟ್ರೀಕ್ ಶಾಪ್ ಗೆ ಹೋಗಿದ್ದು, ವಾಪಸ್ಸು ಸಂಜೆ 7-30 ಗಂಟೆಗೆ ಬಂದು ನೋಡಿದಾಗ ಅಲ್ಲಿ ಪಿರ್ಯಾದಿದಾರರ ಸ್ಕೂಟರ್ ಇಲ್ಲದೇ ಇದ್ದು, ಪಿರ್ಯಾದಿದಾರರ ಟಿ.ವಿ.ಎಸ್ ಕಂಪನಿಯ ವೆಗೋ ಸ್ಕೂಟರ್ ನ್ನು ದಿನಾಂಕ: 30-08-2021 ರಂದು ಸಂಜೆ 7-00 ಗಂಟೆಯಿಂದ ಸಂಜೆ 7-30 ಗಂಟೆ ಮಧ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಇದರ ಮೌಲ್ಯ ರೂ: 25,000/- ಆಗಬಹುದು. ಇದರ ಚಾಸಿಸ್ ನಂ: MD626AG46D1H14023, ಇಂಜಿನ್ ನಂ: OG4HD1013911 ಮಾಡೆಲ್-2013, ಬಣ್ಣ ಕಪ್ಪು ಆಗಿರುತ್ತದೆ. ಪಿರ್ಯಾದಿದಾರರು ಕಳುವು ಆದ ತನ್ನ ಸ್ಕೂಟರ್ ನ್ನು ನಗರದ ಎಲ್ಲಾ ಕಡೆ ಹುಡುಕಾಡಿದ್ದು, ಪತ್ತೆಯಾಗದ ಕಾರಣ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ.
Crime Reported in Mangalore North PS
ಪಿರ್ಯಾದಿ Mr. ABDUL SAMADದಾರರು ಮಂಗಳೂರು ನಗರದ ಅತ್ತಾವರದ ಎಸ್.ಎಲ್. ಮಥಾಯಿಸ್ ರಸ್ತೆ ಎಂಬಲ್ಲಿರುವ ಐವರಿ ಟವರ್ಸ್ ನಲ್ಲಿ ಪ್ಲ್ಯಾಟ್ ನಂಬ್ರ 104, ಡೋರ್ ನಂಬ್ರ 17-17-1335/53 ನ್ನು ಹೊಂದಿದ್ದು ಸದರಿ ಪ್ಲ್ಯಾಟನ್ನು ಕಾಸರಗೋಡು ಜಿಲ್ಲೆಯ ಉಪ್ಪಳದ ವಾಸಿ ಅಬುಸಾಲಿ ಎಂಬಾತನಿಗೆ ರೂ. 78,00,000/- ಕ್ಕೆ ಮಾರಾಟ ಮಾಡಲು ಕರಾರು ಪತ್ರವನ್ನು ದಿನಾಂಕ: 24-11-2014 ರಂದು ತಯಾರಿಸಿ ಆ ಸಮಯ ಪಿರ್ಯಾದಿದಾರರಿಗೆ ಆರೋಪಿ ಅಬುಸಾಲಿ ರವರು ಕರಾರು ಪತ್ರದ ದಿನ ರೂ. 10,00,000/- ಹಾಗೂ ದಿನಾಂಕ: 07-01-2015 ರಂದು ಚೆಕ್ ಮೂಲಕ ರೂ. 5,00,000/- ನ್ನು ಪಾವತಿಸಿದ್ದು ನಂತರ ಆರೋಪಿತನಿಗೆ ಪಿರ್ಯಾದಿದಾರರು ಪ್ಲ್ಯಾಟನ್ನು ಆರೋಪಿತನ ಹೆಸರಿಗೆ ನೊಂದಾಯಿಸದೇ ಇದ್ದು ತದನಂತರ ಆರೋಪಿತನು ಪಿರ್ಯಾದಿದಾರರ ವಿರುದ್ದ ಸಿವಿಲ್ ವ್ಯಾಜ್ಯವನ್ನು ಹೂಡಿದ್ದು ಆ ಸಮಯ ಆರೋಪಿತನು ಪಿರ್ಯಾದಿದಾರರಿಗೆ ಒಟ್ಟು ರೂ. 43,00,000/- ನೀಡಿದಂತೆ ದಿನಾಂಕ 27.07.2015 ರಂದು ರಶೀದಿ ತಯಾರಿಸಿ ಸದ್ರಿ ರಶೀದಿಯಲ್ಲಿ ಪಿರ್ಯಾದಿದಾರರ ನಕಲಿ ಸಹಿಯನ್ನು ಹಾಕಿ ಪಿರ್ಯಾದಿದಾರರಿಗೆ ಆರೋಪಿತನು ರೂ. 28,00,000/- ನಗದಾಗಿ ನೀಡಿರುವುದಾಗಿ ಕರಾರುಪತ್ರದಲ್ಲಿ ಪಿರ್ಯಾದಿದಾರರ ಗಮನಕ್ಕೆ ತಾರದೇ ಕರಾರು ಪತ್ರದ ಜಾಮೀನುದಾರರಾದ ಮಹಮ್ಮದ್ ಸಲೀಲ್ ಎಂ ಮತ್ತು ಸಿದ್ದೀಕ್ ರವರ ಸಹಕಾರದೊಂದಿಗೆ ಸುಳ್ಳು ದಾಖಲಾತಿ ಸೃಷ್ಟಿಸಿ ಇದಕ್ಕೆ ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿ ಮಾನ್ಯ ಸಿವಿಲ್ ನ್ಯಾಯಾಲಯಕ್ಕೆ ನಿವೇದಿಸಿ ಪಿರ್ಯಾದಿದಾರರಿಗೆ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುತ್ತಾರೆ.
Crime Reported in Traffic South PS
ದಿನಾಂಕ:16.09.2021 ರಂದು ಪಿರ್ಯಾದಿದಾರರಾದ ಗಗನ್ (25) ರವರು ಎಮ್.ಆರ್.ಪಿ.ಎಲ್ ನಲ್ಲಿ ಕೆಲಸ ಮುಗಿಸಿಕೊಂಡು ಸುರತ್ಕಲ್ ನಿಂದ ಅವರ ಮನೆಯಾದ ಜೆಪ್ಪಿನಮೊಗೆರು ಕಡೆಗೆ ನನ್ನ ಸ್ಕೂಟರ್ ನಂಬ್ರ: KA-19-HB-6137 ನೇದರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 05-50 ಗಂಟೆಗೆ ಮಂಗಳೂರು ನಗರದ ಪಂಪವೆಲ್ ಮೇಲ್ಸೇತುವೆಯ ಮೇಲೆ ಬಿ.ಎಮ್ ಆರ್ಕೇಡ್ ಬಿಲ್ಡಿಂಗ್ ನ ಎದುರು ರಾ.ಹೆ – 66 ರ ಡಾಮಾರು ರಸ್ತೆಯಲ್ಲಿ ತಲುಪಿದಾಗ ಪಿರ್ಯಾದಿದಾರರ ಮುಂದಿನಿಂದ ರಸ್ತೆಯ ಬಲಬದಿಯಲ್ಲಿ ಹೋಗುತ್ತಿದ್ದ ಟವೇರಾ ಕಾರು ನಂಬ್ರ: KA-19-AB-5573 ನೇದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಯಾವುದೇ ಸೂಚನೇ ನೀಡದೇ ಪಿರ್ಯಾದಿದಾರರ ಮುಂದೆ ಒಮ್ಮೆಲೇ ರಸ್ತೆಯ ಎಡಬದಿಗೆ ಕಾರನ್ನು ತಂದು ನಿಲ್ಲಿಸಿದ ಪರಿಣಾಮ ಪಿರ್ಯಾದಿದಾರರ ಸವಾರಿ ಮಾಡುತ್ತಿದ್ದ ಸ್ಕೂಟರ್ ನ ನಿಯಂತ್ರಣ ತಪ್ಪಿ ಸದ್ರಿ ಕಾರಿನ ಹಿಂಬದಿಗೆ ಡಿಕ್ಕಿಯಾದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಅವರ ಮೂಗಿಗೆ ಹಾಗೂ ಹಲ್ಲುಗಳಿಗೆ ಗಂಭೀರ ಸ್ವರೂಪದ ಗಾಯವಾಗಿರುತ್ತದೆ. ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ಗಾಯಾಳುವನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಇಂಡಿಯಾನಾ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ.
Crime Reported in Surathkal PS
ದಿನಾಂಕ 16/09/2021 ರಂದು ದೊರೆತ ಮಾಹಿತಿ ಮೇರೆಗೆ ಪಿರ್ಯಾದಿ CHANDRAPPA K ದಾರರು ಸಿಬ್ಬಂದಿಯವರೊಂದಿಗೆ ಹಾಗೂ ರಾಸಾಯನಿಕ ತಜ್ಞರೊಂದಿಗೆ ಸಮಯ ಸುಮಾರು 18.30 ಗಂಟೆಗೆ ಕುಳಾಯಿ ಗ್ರಾಮದ ಕುಳಾಯಿ ವಿದ್ಯಾನಗರದ ಆರೋಪಿಗಳಾದ ಗಂಗಾಧರ ಹಾಗೂ ಯಾದವ ರವರಿಗೆ ಸಂಬಂಧಿಸಿದ ಶೆಡ್ಡಿನೊಳಗೆ ದಾಳಿ ನಡೆಸಿ ಆರೋಪಿಗಳು ಯಾವುದೇ ಪರವಾಣಿಗೆ ಪಡೆಯದೇ ರಾಸಾಯನಿಕ ಸೊತ್ತುಗಳಾದ ಅಲ್ಯೂಮಿನಿಯಂ ಬೀಡ್ ಚಾರ್ಕೋಲ್(ಇದ್ದಿಲು) ಗನ್ ಪೌಡರ್ ಮತ್ತು ಗಂಧಕದ ಗಟ್ಟಿ, ಗಂಧಕದ ಪೌಡರ್ ದಾಸ್ತಾನು ಇರಿಸಿದಲ್ಲದೇ ಪಟಾಕಿಯನ್ನು ತಯಾರಿಸಲು ಸೆಣಬಿನ ಹುರಿ, ಸುರುಳಿ ಮಾಡಿದ ಸಣ್ಣ ಪೇಪರಗಳು ಹಾಗೂ ದೊಡ್ಡ ಪೇಪರಗಳನ್ನು ಹಾಗೂ ಸರಿಗೆ, ವೃತ್ತಾಕಾರದ ಮರದ ಕೋಲು, ಕಬ್ಬಿಣದ ಒಂದು ತುದಿ ಚೂಪಾಗಿರುವ ಕಬ್ಬಿಣದ ತುಂಡು ಇವುಗಳನ್ನು ಕೂಡಾ ಇರಿಸಿದ್ದು ಆರೋಪಿಗಳು ಅನಧೀಕೃತವಾಗಿ ಮೇಲ್ಕಾಣಿಸಿದ ಸ್ಪೋಟಕ ವಸ್ತುಗಳನ್ನು ಅಕ್ರಮವಾಗಿ ದಾಸ್ತಾನು ಇರಿಸಿ ಪಟಾಕಿಗಳನ್ನು ತಯಾರಿಸಿ ಮಾರಾಟವನ್ನು ಮಾಡಿಕೊಂಡಿರುವುದಾಗಿರುತ್ತದೆ. ಸೊತ್ತುಗಳನ್ನು ಮಹಜರು ಮುಖೇನಾ ಸ್ವಾಧೀನಪಡಿದ್ದು, ಸ್ವಾಧೀನಪಡಿಸಿದ ಸೊತ್ತುಗಳ ಅಂದಾಜು ಮೌಲ್ಯ ರೂಪಾಯಿ 4250/- ಆಗಿರುತ್ತದೆ. ಆರೋಪಿಗಳಾದ ಗಂಗಾಧರ ಮತ್ತು ಯಾಧವ ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವರೇ ಎಂಬಿತ್ಯಾದಿ
Crime Reported in Mangalore South PS
ಪಿರ್ಯಾದಿದಾರರಾದ ಜೋಕಿಮ್ ಪಿರೇರಾ ರವರು ದಿನಾಂಕ 16-09-2021 ರಂದು ಬೆಳಿಗ್ಗೆ 11-15 ಗಂಟೆ ಸುಮಾರಿಗೆ ಮಂಗಳೂರು ನಗರದ ಅತ್ತಾವರ ಬಾಬುಗುಡ್ಡೆಯ ತಮ್ಮ ಕ್ರಿಸ್ತಿನ್ ವಿಲ್ಲಾ ಎಂಬ ಮನೆಯ ಎದುರಿನ ಸಿಟ್ ಔಟ್ ನ ಕೆಳಗಡೆ ಕುಳಿತುಕೊಂಡಿದ್ದಾಗ, ಪಿರ್ಯಾದಿದಾರರ ಮನೆಯ ಎದುರು ಪಿರ್ಯಾದಿದಾರರ ಸೋದರ ಸಂಬಂಧಿ ವಿಲ್ಮಾ ಸವಿತಾ ಎಂಬುವರಿಗೆ ಸಂಬಂಧಿಸಿದ ಕಟ್ಟಡದ ಕೆಲಸವು ನಡೆಯುತ್ತಿದ್ದು, ಆ ಸಮಯ ಪಿರ್ಯಾದಿದಾರರ ಮನೆಯ ಬಳಿಯ ರಾಕಿ ಫೆರ್ನಾಂಡಿಸ್ ಎಂಬುವರು ಕಟ್ಟಡ ಕೆಲಸ ಮಾಡುತ್ತಿದ್ದ ಕೆಲಸಗಾರರಲ್ಲಿ “ನೀವು ರಸ್ತೆಯಲ್ಲಿ ತಗಡು ಕಟ್ಟ ಬೇಡಿ” ಎಂಬುದಾಗಿ ಜೋರು ಮಾಡುತ್ತಿದ್ದಾಗ, ಪಿರ್ಯಾದಿದಾರರು ರಾಕಿ ಫೆರ್ನಾಂಡಿಸ್ ರವರಲ್ಲಿ “ಅವರಲ್ಲಿ ಯಾಕೆ ಜೋರು ಮಾಡುತ್ತಿದ್ದೀರಾ” ಎಂದು ಕೇಳಿರುತ್ತಾರೆ. ಆಗ ರಾಕಿ ಫೆರ್ನಾಂಡಿಸ್ ರವರು ಪಿರ್ಯಾದಿದಾರರ ಬಳಿ ಬಂದು ಏಕಾ ಏಕಿ ಪಿರ್ಯಾದಿದಾರರನ್ನುದ್ದೇಶಿಸಿ “ ಬೇವರ್ಷಿ ಮಗನೇ ಅದನ್ನು ಕೇಳಲು ನೀನು ಯಾರು” ಎಂದು ಅವಾಚ್ಯ ಶಬ್ದದಿಂದ ನಿಂದಿಸಿ, ಅಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಬಿದ್ದಿದ್ದ ಒಂದು ಮರದ ದೊಣ್ಣೆಯಿಂದ ಪಿರ್ಯಾದಿದಾರರ ಎಡ ಭುಜಕ್ಕೆ ಹೊಡೆದಿರುತ್ತಾರೆ. ಬಳಿಕ ರಾಕಿ ಫೆರ್ನಾಂಡಿಸ್ ರವರ ಹೆಂಡತಿ ವಿನ್ನಿ ಫೆರ್ನಾಂಡಿಸ್ ರವರು ಕೈಯಲ್ಲಿ ಬಕೆಟ್ ಹಿಡಿದುಕೊಂಡು ಬಂದು ಪಿರ್ಯಾದಿದಾರರ ಹೊಟ್ಟೆಗೆ ಹೊಡೆದಿರುತ್ತಾರೆ. ಆ ಸಮಯ ವಿಲ್ಮಾ ಸವಿತಾ ಹಾಗೂ ಪಿರ್ಯಾದಿದಾರರ ಹೆಂಡತಿ ಜೋಸ್ಪಿನ್ ಪಿರೇರಾ ರವರು ಬಿಡಿಸಲು ಬಂದಾಗ, ಅವರನ್ನು ವಿನ್ನಿ ನಾನ್ಸಿ ಪೆರ್ನಾಂಡಿಸ್ ಹಾಗೂ ರಾಕಿ ಫೆರ್ನಾಂಡಿಸ್ ರವರು ಕೈಯಿಂದ ದೂಡಿ ಹಾಕಿ, ರಾಕಿ ಫೆರ್ನಾಂಡಿಸ್ ರವರು ಕಲ್ಲಿನಿಂದ ಪಿರ್ಯಾದಿದಾರರ ಹೊಟ್ಟೆ ಬಾಗಕ್ಕೆ ಹೊಡೆದಿರುತ್ತಾರೆ. ಆ ಬಳಿಕ ಪಿರ್ಯಾದಿದಾರರು ಬೊಬ್ಬೆ ಹಾಕಿದ್ದು, ರಾಕಿ ಫೆರ್ನಾಂಡಿಸ್ ರವರು ಪಿರ್ಯಾದಿದಾರರಿಗೆ “ಈ ವಿಷಯದಲ್ಲಿ ತಲೆ ಹಾಕಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ, ಎಂಬಿತ್ಯಾದಿಯಾಗಿರುತ್ತದೆ.
Crime Reported in Moodabidre PS
ದಿನಾಂಕ: 03-09-2021 ರಂದು ಮೂಡಬಿದ್ರೆ ಠಾಣಾ ಸರಹದ್ದಿನ ನೆಲ್ಲಿಕಾರು ಗ್ರಾಮದ ಸರ್ವೇ ನಂ: 163/3 ರಲ್ಲಿ ಇರುವ 0.32 ಎಕ್ರೆ ಸರ್ಕಾರಿ ಜಾಗದಲ್ಲಿ ಪಂಚಾಯತ್ ರಸ್ತೆ ನಿರ್ಮಿಸಿದ್ದರೂ, ಆರೋಪಿತನಾದ ಓಬಯ್ಯ ಪೂಜಾರಿ ರವರ ಮಗನಾದ ದಿನೇಶ್ ಪೂಜಾರಿ ಎಂಬಾತನು ಸದ್ರಿ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ ಪಂಚಾಯತ್ ರಸ್ತೆಯನ್ನು ಬಂದ್ ಮಾಡಿ ಸದ್ರಿ ಸ್ಥಳವನ್ನು ಅಪಾದಿತನು ಒತ್ತುವರಿ ಮಾಡಿಕೊಂಡು ಸ್ಥಳದಲ್ಲಿ ಅಡಿಕೆ ಸಸಿಗಳನ್ನು ನೆಟ್ಟು ಒತ್ತುವರಿ ಮಾಡಿಕೊಂಡಿರುತ್ತಾನೆ ಎಂಬಿತ್ಯಾದಿ ಪಿರ್ಯಾದಿ ಸಾರಾಂಶವಾಗಿರುತ್ತದೆ