ಅಭಿಪ್ರಾಯ / ಸಲಹೆಗಳು

Crime Reported in Traffic North PS

ದಿನಾಂಕ 17-11-2021 ರಂದು ಪಿರ್ಯಾದಿದಾರರಾದ ಶಕುಂತಲಾ ರವರು ತನ್ನ ಮನೆಯಾದ ಪಡುಬಿದ್ರಿಯಿಂದ ಹಳೆಯಂಗಡಿಗೆ ಖಾಸಗಿ ಬಸ್ಸಿನಲ್ಲಿ ಬಂದು ಬಸ್ ನಿಂದ ಇಳಿದು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ರಾ ಹೆ 66 ನೇ ರಸ್ತೆಯನ್ನು ದಾಟುವ ಸಲುವಾಗಿ ರಸ್ತೆಯಲ್ಲಿ ನಡೆದುಕೊಂಡು ಡಿವೈಡರ್ ಬಳಿ ತಲುಪಿದ ವೇಳೆ ಬೆಳಿಗ್ಗೆ ಸಮಯ ಸುಮಾರು 08:45 ಗಂಟೆಗೆ ಮುಲ್ಕಿ ಕಡೆಯಿಂದ ಮಂಗಳೂರು ಕಡೆಗೆ KA-19-EQ-7313 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆ ಬಿದ್ದು ಅವರ ಬಲಕೈ ಮೊಣಗಂಟಿಗೆ ತರಚಿದ ರಕ್ತಗಾಯವಾಗಿದ್ದು ಹಾಗೂ ಬಲಕೈ, ಬಲ ಸೊಂಟ ಬಳಿ ಗುದ್ದಿದ ಗಾಯವಾಗಿ ಚಿಕತ್ಸೆ ಬಗ್ಗೆ ಅಥರ್ವ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ X-Ray ಮಾಡಿದ ವೈದ್ಯರು ಸೊಂಟದ ಬಳಿ ಮೂಳೆ ಮುರಿತವಾಗಿದ್ದು ಹಾಗೂ ಬಲ ಕೈ ಮುಂಗೈ ಮುರಿದಿರುವುದಾಗಿ ತಿಳಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ.

 

2) ದಿನಾಂಕ 15-11-2021 ರಂದು ರಾತ್ರಿ ಸಮಯ ಸುಮಾರು 8:30 ಗಂಟೆಗೆ ಪಿರ್ಯಾದಿ Vinod Raj

ದಾರರ ತಮ್ಮ ಮಹೇಶ್ ರವರು KA-19-ER-3087 ನಂಬ್ರದ ಸ್ಕೂಟರಿನಲ್ಲಿ ಸವಾರಿ ಮಾಡಿಕೊಂಡು ಕೃಷ್ಣಾಪುರ ಚೊಕ್ಕಬೆಟ್ಟು ಹಿಲ್ ಸೈಡ್ 2 ನೇ ಅಡ್ಡ ರಸ್ತೆಯ ಸಮೀಪ ಬೀದಿ ನಾಯಿಯೊಂದು ಅಡ್ಡವಾಗಿ ಕಾಂಕ್ರೀಟ್ ರಸ್ತೆಯಲ್ಲಿ ಓಡಿ ಬರುವುದನ್ನು ಕಂಡ ಮಹೇಶ್ ರವರು ಸವಾರಿ ಮಾಡುತ್ತಿದ್ದ ಸ್ಕೂರಿಗೆ ಒಮ್ಮಲೇ ನಿರ್ಲಕ್ಷ್ಯತನದಿಂದ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್ ಮೇಲಿನ ಹತೋಟಿ ತಪ್ಪಿ ಮಹೇಶ್ ರವರು ಸ್ಕೂಟರ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದ ಪರಿಣಾಮ ಅವರ ಬಲಕೈ ಮೊಣಗಂಟಿನ ಬಳಿ ತರಚಿದ ರೀತಿಯ ರಕ್ತಗಾಯ, ತಲೆಗೆ ಗುದ್ದಿದ ರೀತಿಯ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಅತ್ತಾವರದ KMC ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಮಹೇಶ್ ರವರ ತಲೆಗೆ ಗಂಭೀರ ಸ್ವರೂಪದ ಒಳಗಾಯ ಆಗಿರುವುದಾಗಿ ತಿಳಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ

Crime Reported in Bajpe PS

“ಫಿರ್ಯಾದಿ Hemavathi Devadiga ದಾರರ ಕಿರಿಯ ಮಗಳು ಸಂಗೀತಾ (28 ವರ್ಷ) ಎಂಬಾಕೆಯು ಬಿಗ್ ಬ್ಯಾಗ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ 16.11.2021 ರಂದು ಬೆಳಿಗ್ಗೆ ಸುಮಾರು 10:00 ಗಂಟೆಗೆ ತನ್ನ ಮನೆಯಾದ ಮಂಗಳೂರು ತಾಲೂಕು, ಬಡಗ ಎಡಪದವು ಗ್ರಾಮದ, ಪೂಪಾಡಿ ಕಲ್ಲು ಕರೆಂಕಿ ಸೈಟ್ ಎಂಬಲ್ಲಿಂದ ಕುಡುಪು ದೇವಸ್ಥಾನಕ್ಕೆ ಹೋಗ ಬರುತ್ತೇನೆ ಎಂದು ಹೇಳಿ ಹೋದವಳು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಕಾಣೆಯಾದ ಸಂಗೀತಾಳನ್ನು ಪತ್ತೆ ಮಾಡಿ ಕೊಡಬೇಕಾಗಿ ಕೋರಿಕೆ” ಎಂಬಿತ್ಯಾದಿ

ಕಾಣೆಯಾದ ಹೆಂಗಸಿನ ಚಹರೆ

ಹೆಸರು : ಸಂಗೀತಾ, ಪ್ರಾಯ: 28 ವರ್ಷ

ಎತ್ತರ : 4 ಅಡಿ ಸಪೂರ ಶರೀರ, ಬಿಳಿ ಮೈ ಬಣ್ಣ

ಪಿಂಕ್ ಕಲರಿನ ಟಾಪ್ ಮತ್ತು ನೀಲಿ ಕಲರಿನ ಪ್ಯಾಂಟ್ ಧರಿಸಿರುತ್ತಾಳೆ

ಕನ್ನಡ ತುಳು ಭಾಷೆ ಮಾತನಾಡುತ್ತಾಳೆ

ಇತ್ತೀಚಿನ ನವೀಕರಣ​ : 17-11-2021 07:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080