ಅಭಿಪ್ರಾಯ / ಸಲಹೆಗಳು

Crime Reported in CEN Crime PS      

ಪಿರ್ಯಾದಿದಾರರು ಮಂಗಳೂರು ನಗರದ ಯೂನಿಯನ್ ಬ್ಯಾಂಕ್ ಪದವು ಬ್ರಾಂಚಿನಲ್ಲಿ ಖಾತೆ ಯನ್ನು ಹೊಂದಿರುವುದಾಗಿದೆ. ಪಿರ್ಯಾದಿದಾರರ ಗಂಡ ಪ್ಲೋರ್ ಮಿಲ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದು ಸದ್ರಿಯವರಿಗೆ ದಿನಾಂಕ 17-12-2021 ಬೆಳಿಗ್ಗೆ ಸಮಯ ಸುಮಾರು 11.20 ಗಂಟೆಗೆ  9845146000 ನೇ ನಂಬ್ರದಿಂದ ಕರೆ ಮಾಡಿದ ವ್ಯಕ್ತಿಯು ತನ್ನ ಹೆಸರು ಅಮನ್ ಕುಮಾರ್ ಎಂದು ಹೇಳಿ ತಾನು ಆರ್ಮಿ ಆಫೀಸರ್ ಆಗಿದ್ದು ತಾನು ಮೈದಾ ಹಿಟ್ಟು  ಖರೀದಿಸುವುದಾಗಿ ತಿಳಿಸಿದ್ದು ಅದರ ಹಣ ಪಾವತಿಸಲು QR CODE ಕಳುಹಿಸುವಂತೆ ತಿಳಿಸಿರುತ್ತಾನೆ. ಪಿರ್ಯಾದಿದಾರರ ಗಂಡನ ಕಂಪೆನಿಯಿಂದ ಮತ್ತು ಅವರ ಮೊಬೈಲ್ ನಲ್ಲಿ ಯಾವುದೇ QR CODE ಲಭ್ಯವಿಲ್ಲದ ಕಾರಣ ತನ್ನ ಪಿರ್ಯಾದಿದಾರರ ಮೊಬೈಲ್ ನಂಬ್ರವನ್ನು ಕೊಟ್ಟಿದ್ದು ನಂತರ ಸದ್ರಿ ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರ ಮೊಬೈಲ್ ನಂಬ್ರಕ್ಕೆ ಸಂಪರ್ಕಿಸಿ QR CODE ನ್ನು ಕೇಳಿರುವಂತೆ ಪಿರ್ಯಾದಿದಾರರು QR CODE ನ್ನು ನೀಡಿದ್ದು confirmation ಸಲುವಾಗಿ ಮೊದಲು 1ರೂ  ನಂತರ 2 ರೂ ಪಾವತಿಸಿ ನಂತರ ಅಪರಿಚಿತ ವ್ಯಕ್ತಿ QR CODE ನಲ್ಲಿ 2499  ನಂಬ್ರವನ್ನು  ಹಾಕುವಂತೆ ತಿಳಿಸಿದ್ದು ಪಿರ್ಯಾದಿದಾರರು 2499 ನ್ನು ಹಾಕಿದಂತೆ ಪುನಃ ಆ ವ್ಯಕ್ತಿಯು ಸದ್ರಿ ನಂಬ್ರ ತಪ್ಪಾಗಿದ್ದು ನೀವು ಪುನಃ 24999ನೇ ದನ್ನು QR CODE ನಲ್ಲಿ ಹಾಕುವಂತೆ ತಿಳಿಸಿದ್ದು  ಇದೇ ರೀತಿ ಹಂತ ಹಂತವಾಗಿ ಐದು ಬಾರಿ QR CODE ಮೂಲಕ ಒಟ್ಟು ರೂ.2,94,830/- ನ್ನು ತನ್ನ ಖಾತೆಗೆ ವರ್ಗಾಯಿಸಿರುತ್ತಾನೆ. ಆರ್ಮಿ ಆಫೀಸರ್ ಎಂಬುದಾಗಿ ನಂಬಿಸಿ ಮೋಸದಿಂದ QR CODE ಮೂಲಕ  ರೂ.2,94,830ನ್ನು ತನ್ನ ಖಾತೆ ವರ್ಗಾಯಿಸಿದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ.  ಎಂಬಿತ್ಯಾದಿ.

2) ಪಿರ್ಯಾದಿದಾರರ  ಮೊಬೈಲ್ ನಂಬ್ರ ಗೆ ಒಂದು ಲಿಂಕ್ ಬಂದಿರುತ್ತದೆ ಸದ್ರಿ ಲಿಂಕ್ ನಲ್ಲಿ ಇರುವ ಮೊಬೈಲ್ ನಂಬರ್ ಗೆ ಸಂಪರ್ಕಿಸಿದು ಸದ್ರಿ ಲಿಂಕ್ ಪಿರ್ಯಾದಿದಾರರ ಮೊಬೈಲ್ ನಿಂದ ಡಿಲೀಟ್ ಅಗಿರುತ್ತಾದೆ +15199131816  ನೇ ನಂಬ್ರದ  ವ್ಯಕ್ತಿಯು ದಿನಾಂಕ 16-10-2021 ರಂದು  bluewaterheathbwh@mail2doctor.com  ಇ-ಮೇಲ್ ಮೂಲಕ  ಪಿರ್ಯಾದಿದಾರರಿಗೆ  ಕೆನಡಾ ದಲ್ಲಿ ಕೆಲಸದ ಬಗ್ಗೆ ಮಾಹಿತಿ ಬಂದಿರುತ್ತದೆ. ಕೆನಡದ  ಹಾಸ್ಪಿಟಲ್ ನಲ್ಲಿ ಅನಸೇಶಿಯಾ ಟೆಕ್ನೀಶಿಯನ್ ಹುದ್ದೆ ಖಾಲಿಯಿರುವುದಾಗಿ ಸದ್ರಿ ಇ-ಮೇಲ್ ನಲ್ಲಿ   ಸಂದೇಶ ಬಂದಿರುತ್ತದೆ ನಂತರ  ಪಿರ್ಯಾದಿದಾರರು ತಮ್ಮ ಎಲ್ಲಾ ಸರ್ಟಿಪಿಕೆಟ್ ಗಳು ಮತ್ತು ಡಾಕ್ಯುಮೆಂಟ್ಸ್ ಗಳ ಜರಾಕ್ಸ್ ಪ್ರತಿಯನ್ನು ಸದ್ರಿ ಇ-ಮೇಲ್ ಗೆ ಕಳುಹಿಸಿರುತ್ತಾರೆ.  ಆ ದಿನ ಹೆಚ್.ಆರ್ ಮೇನೆಜರ್ ಅಲೆಕ್ಸ್ ಮೆನ್ಜೀಸ್ ಎಂಬುವವರು  +15199131816 ನೇ ನಂಬ್ರದಿಂದ ವಾಟ್ಸ ಆಫ್ ಕಾಲ್ ಮಾಡಿ ಮಾತಾನಾಡಿ ಪಿರ್ಯಾದಿದಾರರು ಆನ್ ಲೈನ್ ಇಂಟರ್ ವ್ಯೂ ಮಾಡಿರುತ್ತಾರೆ. ನಂತರ ಸದ್ರಿ ವ್ಯಕ್ತಿಯು mumbainternational.gc.ca@mil2diplomat.com ಎಂಬ ಇ-ಮೇಲ್ ಹಾಗೂ mr George allen R/o Canada consulate Mumbai india ವಿಳಾಸವನ್ನು ಕಳುಹಿಸಿರುತ್ತಾರೆ. ನಂತರ 918095135549 ನೇದರ ಜಾರ್ಜ್ ಅಲೆನ್ ಎಂಬ ವ್ಯಕ್ತಿಯು ಪೋನ್ ಮಾಡಿ ಓರಿಜಿನಲ್ ಪಾಸ್ ಪೋರ್ಟ್ ಕಳುಹಿಸುವಂತೆ ತಿಳಿಸಿದು high commssion of india new delhi to George allen mumbai 7/8 shantipath chanakyapuri new delhi 110021 india ಎಂಬ ವಿಳಾಸಕ್ಕೆ ಪಿರ್ಯಾದಿದಾರರು ತಮ್ಮ  ಓರಿಜಿನಲ್ ಪಾಸ್ ಪೋರ್ಟ್ ಅನ್ನು speed post ಮುಲಕ ಕಳುಹಿಸಿರುತ್ತಾರೆ.  ನಂತರ VK-INPOST  ನಿಂದ ಓರಿಜಿನಲ್ ಪಾಸ್ ಪೋರ್ಟ್ ಕಳುಹಿಸಿ ಬಗ್ಗೆ ದಿನಾಂಕ 1-11-2021 ರಂದು RECEIVED  ಮೆಸೇಜ್ ಬಂದಿರುತ್ತಾದೆ (Delivered by vinay mohan beat no B7)  ನಂತರ ಒಂದು ವಾರದ ನಂತರ ಪಿರ್ಯಾದಿದಾರರ  WHATSAPP ಗೆ  8095135549 ನೇ ದರಿಂದ ವೀಸಾ ಪ್ರತಿ ಕಳುಹಿಸಿರುತ್ತಾರೆ  ಅದನ್ನು ನಂಬಿದ ಪಿರ್ಯಾದಿದಾರರು ದಿನಾಂಕ 30-10-2021 ರಂದು ಖಾತೆ ನಂಬ್ರ 50210002155098 ನೇದಕ್ಕೆ 20,000/- ಹಣವನ್ನು ವರ್ಗಾವಣೆ ಮಾಡಿರುತ್ತಾರೆ. ನಂತರ  ದಿನಾಂಕ 09-11-2021 AXIS BANK AC/NO  ನೇದರಿಂದ ಅಪರಿಚಿತ ವ್ಯಕ್ತಿಯು ಕಳುಹಿಸಿದ ಖಾತೆ ನಂಬರ್  1964104006112 ಗೆ   ಹಂತ ಹಂತವಾಗಿ ಒಟ್ಟು ರೂ. 17,000/-  ಹಾಗೂ1964104006112  ನೇ ಖಾತೆ ನಂಬರ್ ಗೆ ದಿನಾಂಕ 20-11-2021 ರಿಂದ  29-11- 2021 ರ ವರೆಗೆ ಬ್ಯಾಂಕ್ ನಿಂದ ನೆರವಾಗಿ ಹಣವನ್ನು 1,30,000 ಜಮಮಾಡಿರುತ್ತಾರೆ ಮತ್ತು 01/12/2021 ರಂದು ಅಪರಿಚಿತ ವ್ಯಕ್ತಿಯ ಕೆನರ ಬ್ಯಾಂಕ್  ಖಾತೆ ನಂಬರ್  1964104006112 ನೇದಕ್ಕೆ 5,000/- ರೂ ಪಿರ್ಯಾದಿದಾರರು ತಮ್ಮ AXIS BANK ಖಾತೆ ನಂಬ್ರದಿಂದ ಹಣವನ್ನು  ಪಾವತಿಸಿರುತ್ತಾರೆ ಹೀಗೆ ಪಿರ್ಯಾದಿದಾರರು ಹಂತ ಹಂತವಾಗಿ ಒಟ್ಟು 1,72,000/- ಹಣವನ್ನು ಹಾಗೂ ಓರಿಜಿನಲ್ ಪಾಸ್ ಪೋರ್ಟ್ ಕಳುಹಿಸಿ  ಮೋಸ ಹೋಗಿರುವುದಾಗಿದೆ ಎಂಬಿತ್ಯಾದಿಯಾಗಿದೆ.

Crime Reported in Mangalore North PS

ಫಿರ್ಯಾದಿದಾರರಾದ  ಮಹಾವೀರ ಜೈನ್ ಎಂಬವರು ಮಂಗಳೂರು ನಗರದ ಬಿ ಬಿ ಅಲಾಬಿ ರಸ್ತೆಯಲ್ಲಿರುವ ಇಲೈಟ್ ಕಮರ್ಷಿಯಲ್ ಕಾಂಪ್ಲೆಕ್ಸ್ ನ ಗ್ರೌಂಡ್ ಪ್ಲೋರ್ ನಲ್ಲಿ ಟಾಯ್ಸ್ ಗಳ ವರ್ಧಮಾನ್ ಎಂಟರ್ ಪ್ರೆಸಸ್ ಹೋಲ್ ಸೇಲ್ಸ್ ವ್ಯಾಪಾರ ಮಾಡಿಕೊಂಡಿದ್ದು ದಿನಾಂಕ: 16.12.2021 ರಂದು ರಾತ್ರಿ 7-30 ಗಂಟೆಗೆ ಅಂಗಡಿಗೆ ಬೀಗ ಹಾಕಿ ಹೋಗಿದ್ದು ದಿನಾಂಕ: 17.12.2021 ರಂದು ಬೆಳಿಗ್ಗೆ 09-30 ಗಂಟೆಗೆ ಬಂದು ನೋಡಿದಾಗ ಶಟರ್ ನ ಬೀಗ ಮುರಿದು ಅಂಗಡಿ ಒಳಗಿದ್ದ ಮೇಜಿನ ಡ್ರಾವರ್ ನ ಬೀಗ ಮುರಿದು ಡ್ರಾವರ್ ನಲ್ಲಿದ್ದ ನಗದು ಹಣ 6,00,000/- ವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ.

Crime Reported in Bajpe PS

ಮಂಗಳೂರು ತಾಲೂಕು ಮುತ್ತೂರು ಗ್ರಾಮದ ಫಿರ್ಯಾದು Kiran kumar ದಾರರ ತಾಯಿ ಮತ್ತು ಕುಟುಂಬದವರಿಗೆ ಸೇರಿದ ಜಾಗಕ್ಕೆ ಹೋಗಲು ಆಲಿಸ್ ಬಾಯಿಯವರ ಜಾಗದಲ್ಲಿ ಆಲಿಸ್ ಬಾಯಿ ಮತ್ತು ಮಕ್ಕಳ ಅನುಮತಿ ಮೇರೆಗೆ ರಸ್ತೆ ಮಾಡಿ ರಸ್ತೆಯಲ್ಲಿ ಕಬ್ಬೀನ ಗೇಟ್ ಅಳವಡಿಸಿಕೊಂಡಿದ್ದರು ದಿನಾಂಕ 12-07-2021ರ ಬೆಳಿಗ್ಗೆ ಆರೋಪಿ Smt Prathima, Prakash Chandra,  Ramanna Karkera,  Rejinald Pinto ತರು ಸ್ಥಳಕ್ಕೆ ಕೆಎ 19 ಬಿ 8933 ಟೆಂಪೋದಲ್ಲಿ ಬಂದು ಫಿರ್ಯಾದುದಾರರು ಮತ್ತು ಕುಟುಂಬಕ್ಕೆ ಸೇರಿದಕಬ್ಬಿಣದ ಗೇಟನ್ನು ಕೆಡವಿ ಕಳವು ಮಾಡಿಕೊಂಡು ಹೋಗಿರುವುದರಿಂದ ಫಿರ್ಯಾದುದಾರರು ಮತ್ತು ಕುಟುಂಬದವರಿಗೆ 25000/- ರೂ ನಷ್ಟುಉಂಟಾಗಿರುತ್ತದೆ ಎಂಬಿತ್ಯಾದಿ.

Crime Reported in Ullal PS

ದಿನಾಂಕ 16-12-2021 ರಂದು ಸಮಯ 20-30 ಗಂಟೆಗೆ ಪಿರ್ಯಾದಿ Amith Kumar ದಾರರು ದೀಪಕ್ ಬಾರಗೆ ಬಂದಾಗ ಅಲ್ಲಿ ಊಟಮಾಡುವ ಸಮಯ ಪಿರ್ಯಾದಿದಾರರಿಗೆ ಪರಿಚಯವಿರುವ ಭಿನ್ನತ್ ಮತ್ತು ಕೌಶಿಕ್ ಎಂಬುವರು ಬಾರಿಗೆ ಬಂದು ಊಟ ಮಾಡುವ ಸಮಯದಲ್ಲಿ ಅವರ ಬಳಿಗೆ ಪಿರ್ಯಾದಿದಾರರು ಹೋಗಿ ಈ ಹಿಂದೆ ಹಣಕಾಸಿನ ವಿಷಯದ ಬಗ್ಗೆ Sorry ಕೇಳಿ ಹೋರಹೊದರು, ನಂತರ ಸುಮಾರು 50 ಮೀಟರ್ ದೂರ ಅಡ್ಡ ಪದವು ಕಡೆಗೆ ಹೋಗುವ ಡಾಮರ ರಸ್ತೆಯಲ್ಲಿ ಪಿರ್ಯಾದಿದಾರರು ಹೋಗುತ್ತಿದ್ದರು, ಆ ಸಮಯ ಆಕ್ಟಿವ ಹೊಂಡಾದಲ್ಲಿ ಬಂದ ಬಿನ್ನಿತ್ ಹಾಗೂ ಕೌಶಿಕ್  ರವರು ಪಿರ್ಯಾದಿದಾರರ ಮುಂದೆ ಬಂದು ಅವರ ಆಕ್ಟಿವಾ ಹೊಂಡಾವನ್ನು ಪಿರ್ಯಾದಿದಾರರ ಬೈಕಗೆ  ಅಡ್ಡಿರಿಸಿ ಇಳಿದು ಬೇವರ್ಸಿ ..ಮಗ ಎಂದು ಬೈದು ಬಿನ್ನತ್ ಆತನ ಕೈಯಲ್ಲಿದ್ದ ಚೂರಿಯಿಂದ ಪಿರ್ಯಾದಿದಾರರ ಎಡಕೈ ತೊಳಿನಿಂದ ಕೇಳಗೆ ಮೊಣಗಟ್ಟಿನ ತನಕ ಇರಿದನು ನಂತರ ಇದೆ ಸಮಯದಲ್ಲಿ ಕೌಶಿಕ ಆತನ ಕೈಯಲ್ಲಿದ್ದ ಹೇಲ್ಮೇಟ್ ನಿಂದ ಪಿರ್ಯಾದಿದಾರರ ತೆಲೆಯ ಹಿಂಬಾಗಕ್ಕೆ ಹೋಡೆದನು, ಬಳಿಕ ಇಬ್ಬರು ಪಿರ್ಯಾದಿದಾರರನ್ನು ಕೇಳಗೆ ದೂಡಿ ಹಾಕಿ ತುಳಿದರು. ಇದರಿಂದ ಕೈ ತೋಳಿನಿಂದ ಮೊಣ ಗಟ್ಟಿನ ತನಕ ರಕ್ತಗಾಯ ವಾಗಿರುತ್ತದೆ. ಹಾಗೂ ತೆಲೆಯ ಹಿಂಬಾಗ ರಕ್ತಗಾಯ ವಾಗಿರುತ್ತದೆ. ಮೈ ಕೈಗೆ ಗುದ್ದಿದ ಗಾಯ ಮಾಡಿರುತ್ತಾರೆ. ಈ ಸಮಯ ಪಿರ್ಯಾದಿದಾರರು ಜೋರಾಗಿ ಬೋಬ್ಬೆಹೊಡೆದಾಗ ಭಿನ್ನತ್ ಮತ್ತು ಕೌಶಿಕ್ ರವರು ಬೇವರ್ಸಿ ಈ ಸಲ ಬದುಕಿದ್ದಿಯಾ ಇನ್ನೊಂದು ಸಲ ಸಿಕ್ಕರೆ ಕೊಲ್ಲದೆ ಬಿಡುವುದಿಲ್ಲ, ಎಂದು ಕೊಲೆ ಬೆದರಿಕೆ ಹಾಕಿ  ಓಡಿಹೋಗಿರುತ್ತಾರೆ. ನಂತರ ಪಿರ್ಯಾದಿದಾರರು ಅವರ ಗೆಳೆಗೆ ಅಶ್ವಿನ್ ರವರಿಗೆ ಕರೆ ಮಾಡಿದಾಗ ಅಶ್ವೀನ್ ಸ್ಥಳಕ್ಕೆ ಬಂದು ಪಿರ್ಯಾದಿದಾರರನ್ನು ನೇತಾಜಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯೆರು ಪರಿಕ್ಷೀಸಿ ಪಿರ್ಯಾದಿದಾರನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಹಿಂದೆ ಪಿರ್ಯಾದಿದಾರಿಗೆ  ಭಿನ್ನತ್ ಮತ್ತು ಕೌಶಿಕ್ ರವರಿಗೆ ಹಣಕಾಶಿನ ವಿಚಾರದಲ್ಲಿ ಈ ಹಿಂದೆ ತಕರಾರು ಉಂಟಾಗಿದ್ದು ಇದರಿಂದ ದ್ವೇಷವನ್ನು ಇಟ್ಟುಕೊಂಟು ಈ ರೀತಿ ಹಲ್ಲೆ ಮಾಡಿರುತ್ತಾರೆ ಎಂಬಿತ್ಯಾದಿಯಾಗಿ  ನೀಡಿದ ಪಿರ್ಯಾದಿಯ ಸಾರಾಂಶ

Crime Reported in Urva PS

ದಿನಾಂಕ 16-12-2021 ರಂದು ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಅಶೋಕನಗರದ ಶೇಡಿಗುರಿ ಜಂಕ್ಷನ್ ನಲ್ಲಿ KA19AD0589 PTC ರೂಟ್ ನಂಬ್ರ 31 ಬಸ್ ಹಾಗೂ KA19D0477 ST SEBASTIAN ರೂಟ್ ನಂಬ್ರ 31ಎ ಬಸ್ ಗಳನ್ನು ಸಂಜೆ 6-30 ಗಂಟೆಗೆ ಪರಸ್ಪರ ಅಡ್ಡಾದಿಡ್ಡಿಯಾಗಿ ಸಾರ್ವಜನಿಕ ರಸ್ತೆಯಲ್ಲಿ ನಿಲ್ಲಿಸಿ ಸಮಯದ ಪಾಲನೆ ವಿಚಾರದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಬೈದಾಡಿಕೊಳ್ಳುತ್ತ, ತಳ್ಳಾಡುತ್ತಾ ಸಾರ್ವಜನಿಕ ರಸ್ತೆಯಲ್ಲಿ ಕಲಹ ಉಂಟು ಮಾಡಿ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟು ಮಾಡಿದ ಅರೋಪಿತರಾದ 1) ಅಜರುದ್ದೀನ್ ಮೊಹಮ್ಮದ್, 2) ಯೋಗೀಶ್, 3) ಸಾಗರ್, 4) ಸ್ಟೀವನ್ ಎಂಬವರುಗಳು ಹಾಗೂ KA19AD0589 ಹಾಗೂ KA19D0477 ನೇ ನಂಬ್ರದ ಬಸ್ ಗಳನ್ನು ನಾನು ಸಿಬ್ಬಂಧಿಯವರೊಡನೆ ವಶಕ್ಕೆ ಪಡೆದು ಠಾಣೆಗೆ ತಂದು ಕಾನೂನು ಕ್ರಮ ಕೈಗೊಂಡು ಮಾನ್ಯ ನ್ಯಾಯಾಲಯಕ್ಕೆ ವರದಿ ನಿವೇದಿಸಿಕೊಂಡಿರುವುದಾಗಿದೆ. ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 17-12-2021 07:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080