ಅಭಿಪ್ರಾಯ / ಸಲಹೆಗಳು

Crime Reported in CEN Crime PS

ಫಿರ್ಯಾದಿದಾರರು ಕೆನರಾ ಬ್ಯಾಂಕ್ ಕೂಳೂರು ಬ್ರಾಂಚಿನಲ್ಲಿ ಖಾತೆ ಯನ್ನು ಹೊಂದಿರುತ್ತಾರೆ. ಪಿರ್ಯಾದಿದಾರರಿಗೆ ದಿನಾಂಕ 20-09-21 ರಂದು ಬೆಳಿಗ್ಗೆ ಸಮಯ ಸುಮಾರು  10.00 ಗಂಟೆಗೆ ತನ್ನ  ಮೊಬೈಲ್ ಸಂಖ್ಯೆಗೆ +22953861930ನೇ ನಂಬ್ರದಿಂದ ವಾಟ್ಸಪ್ ನಲ್ಲಿ ಮೆಸೆಜ್ ಬಂದಿದ್ದು ಸದ್ರಿ ಮೆಸೆಜ್ ನಲ್ಲಿ ವ್ಯಕ್ತಿಯೋರ್ವರು ಪಿರ್ಯಾದಿದಾರರಿಗೆ ಮನೆಯನ್ನು ಕಟ್ಟಲು ಹಣವನ್ಜು ನೀಡುವುದಾಗಿ ಹಾಗೂ ಗಿಫ್ಟನ್ನು ಕೂಡಾ ಕಳುಹಿಸುವುದಾಗಿ ಆಗಾಗ ವಾಟ್ಸಪ್ ಮೂಲಕ ಮೆಸೆಜ್ ಮಾಡುತ್ತಿದ್ದರು. ನಂತರ ಅದೇ ವ್ಯಕ್ತಿಯು ದಿನಾಂಕ  05-10-2021 ರಂದು 8453027805ನೇ  ನಂಬ್ರದಿಂದ ಪಿರ್ಯಾದಿದಾರರಿಗೆ ಕರೆ ಮಾಡಿ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿದ್ದು ಪಿರ್ಯಾದಿದಾರರ  ಗಿಫ್ಟ್ ದಿಲ್ಲಿಗೆ ಬಂದಿರುತ್ತದೆ. ಅದನ್ನು ಮಂಗಳೂರಿಗೆ ಕಳುಹಿಸಲು ರೂ.35,000/-ನ್ನು ಕಳುಹಿಸುವಂತೆ ತಿಳಿಸಿದ್ದು ಪಿರ್ಯಾದಿದಾರರು ಇದನ್ನು ನಂಬಿ ರೂ.35000/- ನ್ನ ಆತನ 8453027805ನೇ ನಂಬ್ರಕ್ಕೆ ಗೂಗಲ್ ಪೇ ಮಾಡಿರುತ್ತಾರೆ.  ಸದ್ರಿ ವ್ಯಕ್ತಿಯು ಪುನಃ ಅದೇ ನಂಬ್ರದಿಂದ ಪೋನ್ ಮಾಡಿದ್ದು ರೂ.97,000/- ನ್ನು  ನೆದರ್ ಲ್ಯಾಂಡ್ ಡಾಲರ್ ಬಗ್ಗೆ ಪಾವತಿಸಬೇಕೆಂದು ತಿಳಿಸಿದ್ದರಿಂದ ಪಿರ್ಯಾದಿದಾರರು ದಿನಾಂಕ 07-10-2021 ರಂದು 97000/- ಹಾಗೂ ದಿನಾಂಕ 08-10-2021  ರಂದು ರೂ.1,60,000ವನ್ನು NEFT ಮೂಲಕ ಆತನ ಎಸ್.ಬಿ.ಐ ಖಾತೆ ಸಂಖ್ಯೆ 40417352907 (IFSC SBIN0000691) ನೇ ದಕ್ಕೆ ಪಾವತಿಸಿದ್ದು ಇದೇ ರೀತಿ  ಒಟ್ಟು ರೂ.2,92,000/- ನ್ನು ಆತನ ಖಾತೆಗೆ ವರ್ಗಾಯಿಸಿರುತ್ತಾರೆ.  ಆದುದರಿಂದ ತನಗೆ ವಾಟ್ಸಪ್ ಮೂಲಕ ಮನೆ ಕಟ್ಟಲು ಹಣ ಹಾಗೂ ಗಿಫ್ಟ್ ನೀಡುವುದಾಗಿ ತಿಳಿಸಿ  ನಂಬಿಸಿ ಮೋಸದಿಂದ ತನ್ನ ಖಾತೆಗೆ ರೂ.2,92,000/- ನ್ನು ವರ್ಗಾಯಿಸಿರುವ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ

 

Moodabidre PS

ಪಿರ್ಯಾದಿ Nishan Saliyan ದಾರರ ಎದುರುಗಡೆಯಿಂದ ಹೋಗುತ್ತಿದ್ದ ಅವರ ಪರಿಚಯದ ಮಿಥುನ್ ಎಂಬವರು ತನ್ನ ಬಾಬ್ತು KA 19 HC 9056 ನೇ ಮೋಟಾರು ಸೈಕಲ್ ನಲ್ಲಿ ಮೂಡಬಿದರೆ ಕಡೆಯಿಂದ ಪಕ್ಷಿಕೆರೆ ಕಡೆಗೆ ರಸ್ತೆಯ ಎಡಬದಿಯಲ್ಲಿ ಸವಾರಿ ಮಾಡಿಕೊಂಡು ರಸ್ತೆಯಲ್ಲಿ ಹೋಗುತ್ತಾ ನಿಡ್ಡೋಡಿ ತಲುಪುವಾಗ ನಿಕಿತಾ ಹಾಲ್ ಕಡೆಯಿಂದ ಒರ್ವ ಮೋಟಾರು ಸ್ಕೂಟರ್ ಸವಾರನು ಯಾವುದೇ ಸೂಚನೆಯನ್ನು ನೀಡದೇ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಒಮ್ಮೇಲೆ ಮುಖ್ಯ ರಸ್ತೆಗೆ ಬಂದು ಮಿಥುನ್ ರವರ ಮೋಟಾರು ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಮಿಥುನ್ ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ಮಿಥುನ್ ರವರಿಗೆ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಕೈಕಾಲುಗಳಿಗೆ ತರಚಿದ ನಮೂನೆಯ ಗಾಯವಾದವರನ್ನು ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಕಿನ್ನಿಗೋಳಿ ಕನ್ಸೆಂಟಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿಯ ವೈದ್ಯರು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆಯನ್ನು ನೀಡಿದ್ದು, ಅಪಘಾತಪಡಿಸಿದ ಮೋಟಾರು ಸೈಕಲ್ ನಂಬ್ರವನ್ನು ನೋಡಲಾಗಿ KA 19 HA 4210 ಆಗಿದ್ದು, ಅದರ ಸವಾರನ ಹೆಸರು ಮಹಾಬಲ ಎಂಬುದಾಗಿ ತಿಳಿಯಿತು. ಅಪಘಾತದ ಪರಿಣಾಮ KA 19 HC 9056 ನೇ ಮೋಟಾರು ಸೈಕಲ್ ಜಖಂಗೊಂಡಿರುತ್ತದೆ. ಈ ಅಪಘಾತಕ್ಕೆ KA 19 HA 4210 ನೇ ಮೋಟಾರು ಸ್ಕೂಟರ್ ಸವಾರ ಮಹಾಬಲನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 18-01-2022 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080