ಅಭಿಪ್ರಾಯ / ಸಲಹೆಗಳು

Crime Reported in : Mangalore Rural PS     

ದಿನಾಂಕ 18-02-2022 ರಂದು ಪಿರ್ಯಾದಿ VINAYAKA BHAVIKATTE  ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ ಸುಮಾರು 10-00 ಗಂಟೆಗೆ ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯಂತೆ ಮಂಗಳೂರು ತಾಲೂಕು ಅರ್ಕುಳ ಗ್ರಾಮದ ವಳಚ್ಚಿಲ್ ಪದವು ಹತ್ತಿರ ಒಬ್ಬ ವ್ಯಕ್ತಿ ಗಾಂಜಾ ಎಂಬ ಅಮಲು ಪದಾರ್ಥವನ್ನು ಸೇವನೆ ಮಾಡುತ್ತಿದ್ದಾನೆ ಎಂಬುದಾಗಿ ಬಂದ ಮಾಹಿತಿಯಂತೆ ಸಮಯ ಸುಮಾರು 10-15 ಗಂಟೆಗೆ ಠಾಣಾ ಸಿಬ್ಬಂದಿಯವರೊಂದಿಗೆ  ಇಲಾಖಾ ವಾಹನದಲ್ಲಿ ಅರ್ಕುಳ ಗ್ರಾಮದ ವಳಚ್ಚಿಲ್ ಪದವು ಹತ್ತಿರ ಹೋದಾಗ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಮಾಹಿತಿದಾರರು ತಿಳಿಸಿದ ಚಹರೆಯ  ವ್ಯಕ್ತಿಯೊಬ್ಬ ಕಂಡುಹಿಡಿದು  ಆತನು ಗಾಂಜಾ ಎಂಬ ಅಮಲು ಪದಾರ್ಥವನ್ನು ಸೇವಿಸಿದಂತೆ ಕಂಡು ಬಂದಿದ್ದು, ಆತನನ್ನು ವಿಚಾರಿಸಿದಾಗ ಆತನು ತನ್ನ ಹೆಸರು ವರುಣ್ ಕುಮಾರ್ ಎಮ್.ಕೆ (23), ವಾಸ- ಕ್ವಾಟರ್ಸ್ ನಂಬ್ರ-2428,ಗ್ರಾಮೀಣ ಪೊಲೀಸ್ ಠಾಣೆ ಹಿಂಬದಿ ಸಕಲೇಶಪುರ ಹಾಸನ ಜಿಲ್ಲೆ ಜಿಲ್ಲೆ ಎಂದು ತಿಳಿಸಿರುತ್ತಾನೆ. ಸದ್ರಿಯವರನ್ನು ಮಂಗಳೂರು ಎ.ಜೆ ವೈದ್ಯಕೀಯ ಪರೀಕ್ಷೆಗೆ ನಡೆಸಲಾಗಿ  ಆತನು ಮಾದಕ ವಸ್ತುವಾದ ಗಾಂಜಾವನ್ನು ಸೇವಿಸಿರುತ್ತಾನೆ ಎಂಬುದಾಗಿ ದೃಢಪತ್ರ ನೀಡಿರುತ್ತಾರೆ. ವೈದ್ಯಾಧಿಕಾರಿಯವರು ನೀಡಿದ ವೈದ್ಯಕೀಯ ವರದಿಯಂತೆ ವರುಣ್ ಕುಮಾರ್ ಎಮ್.ಕೆ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

 

Crime Reported in Kankanady Town PS                                   

ಪಿರ್ಯಾದಿ Chandrakanth ದಾರರು  ಅಳಪೆಯಲ್ಲಿರುವ “ಅಕ್ಷಯ್ ಎಂಟರ್ ಪ್ರೈಸಸ್” ಎಂಬ ಹೆಸರಿನಲ್ಲಿ ವಾಟರ್ ಸರ್ವಿಸ್ ನೀರಿನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿರುವುದಾಗಿದೆ. ಪಿರ್ಯಾದಿದಾರರು ಕೆಲಸ ಕಾರ್ಯಗಳಿಗೆ  ಹೆಂಡತಿ ಶ್ರೀಮತಿ ಶ್ವೇತಾ ರವರ ಹೆಸರಿನಲ್ಲಿ KA-19-EP-6271 ನೇ ಹೀರೋ ಮೆಸ್ಟ್ರೋ ಸ್ಕೂಟರನ್ನು ಉಪಯೋಗಿಸುತ್ತಿದ್ದು, . ದಿನಾಂಕ 16-02-2022 ರಂದು ಪಿರ್ಯಾದಿದಾರರು  ಸದರಿ “ಅಕ್ಷಯ್ ಎಂಟರ್ ಪ್ರೈಸಸ್ ” ಅಂಗಡಿಯ ಎದುರುಗಡೆ ಸಂಜೆ 6.00 ಗಂಟೆಗೆ KA-19-EP-6271 ನೇ ಹೀರೋ ಮೆಸ್ಟ್ರೋ ಸ್ಕೂಟರನ್ನು ಇರಿಸಿ   ಅಂಗಡಿಯಲ್ಲಿ ಕೆಲಸ ಮಾಡಿ ನಂತರ ಸುಮಾರು ರಾತ್ರಿ 8.20 ಗಂಟೆಗೆ  ಸ್ಕೂಟರ್ ಇರಿಸಿದ ಸ್ಥಳಕ್ಕೆ ಬಂದು ನೋಡಿದಾಗ ಸ್ಕೂಟರ್   ಪಾರ್ಕ್ ಮಾಡಿದ ಸ್ಥಳದಲ್ಲಿ ಇಲ್ಲದೇ ಇದ್ದು, ಪರಿಸರದಲ್ಲಿ ಹುಡುಕಾಡಿದರೂ ಸಿಗದೇ ಇದ್ದು ಯಾರೋ ಕಳ್ಳರು ಕಳ್ಳತನ ಮಾಡಿರುವುದಾಗಿದೆ. ಕಳವಾದ ಸ್ಕೂಟರ್ ನ ನೊಂದಾವಣೆ ಸಂಖ್ಯೆ:KA-19-EP-6271 ಹೀರೋ ಮೆಸ್ಟ್ರೋ ಸ್ಕೂಟರ್ ಆಗಿದ್ದು. ಸ್ಕೂಟರ್ ನ ಚೇಸಿಸ್ ಸಂಖ್ಯೆ: MBLJF32ADFGF00928, ಇಂಜಿನ್ ಸಂಖ್ಯೆ: JF32AAFGF01069 ಆಗಿರುತ್ತದೆ. ಸ್ಕೂಟರ್ ನ ಅಂದಾಜು ಮೌಲ್ಯ ರೂ 25,000/- ಆಗಬಹುದು ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 18-02-2022 06:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080