ಅಭಿಪ್ರಾಯ / ಸಲಹೆಗಳು

Crime Reported in Urva PS

ದಿನಾಂಕ 18-03-2022 ರಂದು ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಲೇಡಿಹಿಲ್ ಬಸ್ ನಿಲ್ದಾಣದ ಎದುರು ಸಾರ್ವಜನಿಕ ರಸ್ತೆಯಲ್ಲಿ MAHIMA ಎಂಬ ಹೆಸರಿನ ರೂಟ್ ನಂಬ್ರ 1ನೇ  KA-19-D-6829 ನೇ ನೋಂದಣಿ ನಂಬ್ರದ ಬಸ್ಸು ಹಾಗೂ AVE MARIA ಎಂಬ ಹೆಸರಿನ ರೂಟ್ ನಂಬ್ರ 1Bನೇ  KA-19-D-2671 ನೇ ನೋಂದಣಿ ನಂಬ್ರದ ಬಸ್ಸುಗಳನ್ನು ಬೆಳಿಗ್ಗೆ 11-25 ಗಂಟೆಗೆ ಪರಸ್ಪರ ಅಡ್ಡಾದಿಡ್ಡಿಯಾಗಿ ಸಾರ್ವಜನಿಕ ರಸ್ತೆಯಲ್ಲಿ ನಿಲ್ಲಿಸಿ ಸಮಯದ ಪರಿಪಾಲನೆ ವಿಚಾರದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಬೈದಾಡಿಕೊಳ್ಳುತ್ತಾ, ತಳ್ಳಾಡುತ್ತಾ, ಸಾರ್ವಜನಿಕ ರಸ್ತೆಯಲ್ಲಿ ಕಲಹ ಉಂಟು ಮಾಡಿ, ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡಿದ ಆರೋಪಿತರುಗಳಾದ 1) ಗುಣರಾಜ್ ಶೆಟ್ಟಿ, 2) ಸ್ಟೀವನ್ ನೆಲ್ಸನ್ ನೊರೊನ್ಹ, 3) ಧನರಾಜ್, 4) ಶರತ್ ಎಂಬವರುಗಳ ಹಾಗೂ KA-19-D-6829 ನೇ ನೋಂದಣಿ ನಂಬ್ರದ ಬಸ್ಸು ಮತ್ತು KA-19-D-2671 ನೇ ನೋಂದಣಿ ನಂಬ್ರದ ಬಸ್ಸುಗಳನ್ನು ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಕೈಗೊಂಡು ಮಾನ್ಯ ನ್ಯಾಯಾಲಯಕ್ಕೆ ವರದಿ ನಿವೇದಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ.

 

Crime Reported in: Moodabidre PS

ಪಿರ್ಯಾದಿ NAVEENAದಾರರು ನಿನ್ನೆ ದಿನ ದಿನಾಂಕ: 17-03-2022 ರಂದು 21-15 ಗಂಟೆಗೆ ಮೂಡಬಿದರೆ ಮೈಟ್ ಕಾಲೇಜು ಬಳಿಯಿರುವ ದುರ್ಗಾ ಸೆಲೂನ್ ಅಂಗಡಿಯನ್ನು ಬಂದ್ ಮಾಡಿ ತನ್ನ ಮನೆಯಾದ ಪಡುಪಣಂಬೂರು ಕಡೆಗೆ ತನ್ನ ಬಾಬ್ತು ಕೆಎ-19-ಈವಿ-4393  ನೇ ಮೋಟಾರು ಸೈಕಲ್ ನಲ್ಲಿ ರಸ್ತೆಯ ತೀರಾ ಎಡಬದಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಕಲ್ಲಮುಂಡ್ಕೂರು ಗ್ರಾಮದ ಮೊರಂತಬೆಟ್ಟು ತಿರುವು ಎಂಬಲ್ಲಿಗೆ ತಲುಪುವಾಗ ಸಮಯ ಸುಮಾರು 21-30 ಗಂಟೆಗೆ ಕಿನ್ನಿಗೋಳಿ ಕಡೆಯಿಂದ ಮೂಡಬಿದರೆ ಕಡೆಗೆ ಹೋಗುತ್ತಿದ್ದ ಕೆಎ-19-ಎಂ.ಜಿ-9780 ನೇ ಕಾರಿನ ಚಾಲಕ ಪ್ರಸನ್ನ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಪಿರ್ಯಾದಿದಾರರ ಎಡಗಡೆಯ ಭುಜಕ್ಕೆ, ಎಡಕಾಲಿನ ಹೆಬ್ಬೆರಳಿಗೆ ಮೂಳೆ ಮುರಿತದ ಗಾಯವಾಗಿದ್ದು, ತಲೆಗೆ ಗುದ್ದಿದ ನಮೂನೆಯ ಒಳನೋವಾಗಿದ್ದು, ಬಲಕಾಲಿನ ಮದ್ಯದ ಬೆರಳಿಗೆ ರಕ್ತಗಾಯವಾಗಿದ್ದವರು ಚಿಕಿತ್ಸೆಯ ಬಗ್ಗೆ ಮೂಡಬಿದರೆ ಆಳ್ವಾಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಅಪಘಾತಕ್ಕೆ ಕೆಎ-19-ಎಂ.ಜಿ-9780 ನೇ ಕಾರಿನ ಚಾಲಕ ಪ್ರಸನ್ನ ರವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಎಂಬಿತ್ಯಾದಿ

 

Crime Reported in: Traffic South Police Station

ದಿನಾಂಕ: 18-03-2022 ರಂದು ಪಿರ್ಯಾದಿ HAMEED M B ದರರು ಅಟೋ ರಿಕ್ಷಾ ನಂಬ್ರ: KA-19-AC-9020 ನೇದರಲ್ಲಿ ಚಾಲಕರಾಗಿ ನಾಟೆಕಲ್ ನಿಂದ ಕಿನ್ಯಾ ಕಡೆಗೆ ಮೂರು ಜನ ವಿದ್ಯಾರ್ಥಿಗಳನ್ನು ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಅಟೋ ರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 09-00 ಗಂಟೆಗೆ ಮಂಗಳೂರು ತಾಲೂಕು ಕಿನ್ಯಾ ಗ್ರಾಮದ ಸಂಕೇಶ ಎಂಬಲ್ಲಿ ತಲುಪುವಾಗ ವಿರುದ್ದ ದಿಕ್ಕಿನಿಂದ ಅಂದರೆ ಕಿನ್ಯಾ ಕಡೆಯಿಂದ ನಾಟೆಕಲ್ ಕಡೆಗೆ ಟಾಟಾ 407 ಟೆಂಪೋ ನೋಂದಾಣಿ ಸಂಖ್ಯೆ: KA-21-3746 ನೇದನ್ನು ಅದರ ಚಾಲಕ ಅಬ್ಬಾಸ್ ಎಂಬಾತನು  ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಅಟೋ ರಿಕ್ಷಾದ ಬಲ ಬದಿಗೆ ಡಿಕ್ಕಿ ಪಡಿಸಿದನು . ಈ ಅಪಘಾತದ ಪರಿಣಾಮ ಪಿರ್ಯಾದಿದಾರರ  ಅಟೋ ರಿಕ್ಷಾದ ಬಲಬದಿಯ ಕಬ್ಬಿಣದ ಕಂಬವು ತುಂಡಾಗಿ ಅಟೋರಿಕ್ಷಾದ ಹಿಂಬದಿಯ ಸೀಟಿನಲ್ಲಿ ಕುಳ್ಳಿತ್ತಿದ್ದ ಅಜ್ಸಲ್  ಎಂಬ ವಿದ್ಯಾರ್ಥಿಯ ತಲೆಗೆ ಬಡಿದು ಅತನ ತಲೆಯ ಬಲಕ್ಕೆ ಗಂಭೀರ ಸ್ವರೂಪದ ಗಾಯವಾಗಿರುತ್ತದೆ. ಮತ್ತು ಅಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಉಳಿದ ಇಬ್ಬರು ವಿದ್ಯಾರ್ಥಿಗಳಾದ ಸಿನಾನ್ ಮತ್ತು ಮುಹನಾದ್  ರವರಿಗೆ ಯಾವುದೇ ಗಾಯಗಳು ಉಂಟಾಗಿರುವುದಿಲ್ಲ.  ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ಗಾಯಾಳು ಅಜ್ಸಲ್ ನನ್ನು ಬೇರೊಂದು ಅಟೋ ರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಕಣಚೂರು ಅಸ್ಪತ್ರೆಗೆ ಕರೆದು ಕೊಂಡು ಹೋಗಿ ನಂತ್ರ ಅಲ್ಲಿಂದ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಅಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 18-03-2022 08:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080