ಅಭಿಪ್ರಾಯ / ಸಲಹೆಗಳು

Crime Reported in Traffic North Police Station       

ದಿನಾಂಕ 18-04-2022 ರಂದು ಪಿರ್ಯಾದಿದಾರರಾದ ರವೀಂದ್ರ ಎಂ (46) ರವರು ಅವರ ಬಾಬ್ತು KA-19-EB-3558 ನಂಬ್ರದ ಸ್ಕೂಟರಿನಲ್ಲಿ ತನ್ನ ಪತ್ನಿಯಾದ ಶ್ರೀಮತಿ ಲಾವಣ್ಯ ಎನ್ (37) ಎಂಬವರನ್ನು ಸಹಸವಾರೆಯಾಗಿ ಕುಳ್ಳಿರಿಸಿಕೊಂಡು ಬೊಂದೆಲ್ ಕಡೆಯಿಂದ ಕಾವೂರು ಜಂಕ್ಷನ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 10:30 ಗಂಟೆಗೆ Hotel Coriander ಕಟ್ಟಡದ ಸ್ವಲ್ಪ ಎದುರಿನಲ್ಲಿರುವ ತೆರೆದ ಡಿವೈಡರ್ ಬಳಿ ಯುಟರ್ನ್ ಮಾಡುವ ಸಲುವಾಗಿ ಪಿರ್ಯಾದಿದಾರು ತನ್ನ ಸ್ಕೂಟರನ್ನು ನಿಧಾನಿಸುತ್ತಿದ್ದಂತೆ ಪಿರ್ಯಾದಿದಾರರ ಸ್ಕೂಟರಿನ ಹಿಂಬದಿಯಿಂದ ಅಂದರೆ ಬೊಂದೆಲ್ ಕಡೆಯಿಂದ ಕಾವೂರು ಕಡೆಗೆ KL-60-R-4020 ನಂಬ್ರದ ಕಾರನ್ನು ಅದರ ಚಾಲಕನಾದ Thomos Joseph ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ತೆರೆದ ಡಿವೈಡರ್ ಜಾಗದಲ್ಲಿ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿನ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿಯಾರರು ಹಾಗೂ ಸಹಸವಾರೆ ಸ್ಕೂಟರ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಕೈಯ ಮೊಣಗಂಟಿನ ಹಿಂಭಾಗ ತರಚಿದ ರೀತಿಯ ಗಾಯ ಹಾಗೂ ಸಹಸವಾರೆಗೆ ಬಲಬದಿಯ ಕುತ್ತಿಗೆಯ ಬಳಿ ಹಾಗೂ ಬಲಕೈ ಭುಜಕ್ಕೆ ಗುದ್ದಿದ ರೀತಿಯ ಒಳಗಾಯವಾಗಿದ್ದು ಎ.ಜೆ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬಿತ್ಯಾದಿ.

 

Crime Reported in Ullal PS

ಪಿರ್ಯಾದಿ Sanjay Bansi Rathod ದಾರರು ಬರಕಾ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರರು ಅವರ ಅಕ್ಕ ಆರತಿ ಬಾಯಿ, ಅಣ್ಣ ಮಂಗೇಶ್, ತಂಗಿಯಂದಿರಾದ ಹೀನಾ ಬನ್ಸಿ ರಾಥೋಡ್(23), ಸಪ್ನಾ ಬನ್ಸಿ ರಾಥೋಡ್(19) ಮತ್ತು ಸನ್ನಿ ರವರರೊಡನೆ ಬರಾಕಾ ಪ್ಯಾಕ್ಟರಿಯ ಹೊರಗೆ ಕೆಲಸಗಾರರ ಕ್ವಾಟ್ರಸ್ ನಲ್ಲಿ ವಾಸ್ತವ್ಯವಿದ್ದು ದಿನಾಂಕ 16-04-2022 ರಂದು ಬೆಳಿಗ್ಗೆ 7-00 ಗಂಟೆಗೆ ಕೆಲಸಕ್ಕೆಂದು ಪಿರ್ಯಾದಿ ಅವರ ಅಕ್ಕ ಆರತಿ ಬಾಯಿ, ಅಣ್ಣ ಮಂಗೇಶ್ ರವರುಗಳು ಹೊರಟಾಗ ತಂಗಿಯರಾದ ಹೀನಾ ಬನ್ಸಿ ರಾಥೋಡ್, ಸಪ್ನಾ ಬನ್ಸಿ ರಾಥೋಡ್ ರವರು ಹುಷಾರಿಲ್ಲ ಎಂದು  ರೂಮನಲ್ಲಿದ್ದು,ಪಿರ್ಯಾದಿದಾರರು ಕೆಲಸದಿಂದ ಚಾ ಕುಡಿಯುವ ಎಂದು ಬೆಳಿಗ್ಗೆ 9-30 ಗಂಟೆಗೆ ರೂಮಿಗೆ ಬಂದು ನೋಡಲಾಗಿ ಪಿರ್ಯಾದಿದಾರರ ತಂಗಿಯರಿಬ್ಬರು ಕಾಣದೇ ಇದ್ದು ಈ ಬಗ್ಗೆ ಪಿರ್ಯಾದಿದಾರರು ತಮ್ಮ ಸನ್ನಿಯಲ್ಲಿ ಕೇಳಿದಾಗ ಸನ್ನಿಯು ಇಬ್ಬರು ಬೆಳಿಗ್ಗೆ 9-00 ಗಂಟೆಯ ವೇಳೆಗೆ ಕೆಲಸಕ್ಕೆ ಹೋಗಿರುವುದಾಗಿ ತಿಳಿಸಿ ರೂಮಿನಿಂದ ಹೋಗಿರುತ್ತಾರೆ ಎಂದು ಪಿರ್ಯಾದಿದಾರರಿಗೆ ತಿಳಿಸಿದ್ದು, ನಂತರ ಪಿರ್ಯಾದಿದಾರರು ತಂಗಯರಿಬ್ಬರನ್ನು ಉಳ್ಳಾಲ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಊರಿನಲ್ಲಿರುವ ತಂದೆ-ತಾಯಿಯರಲ್ಲಿ ವಿಚಾರಿಸಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ.

  ದಿನಾಂಕ 16-04-2022 ರಂರು ಬೆಳಿಗ್ಗೆ 9-00 ಗಂಟೆಗೆ ಮನೆಯಲ್ಲಿ ಕೆಲಸಕ್ಕೆಂದು ಹೋಗುವುದಾಗಿ ತಿಳಿಸಿ ಹೋದ ಪಿರ್ಯಾದಿದಾರರ ತಂಗಿಯಂದಿರಾದ ಹೀನಾ  ಬನ್ಸಿ ರಾಥೋಡ್ ಇವರುಗಳನ್ನು ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗದೇ ಇರುವುದರಿಂದ ಈ ದಿನ ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

 

ಇತ್ತೀಚಿನ ನವೀಕರಣ​ : 18-04-2022 05:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080