ಅಭಿಪ್ರಾಯ / ಸಲಹೆಗಳು

Crime Reported in Surathkal PS

1) ದಿ: 17-05-2022 ರಂದು  ಸಂಜೆ ಸುಮಾರು 4:30 ಗಂಟೆಗೆ ಚೇಳ್ಯಾರು ಗ್ರಾಮದ ಖಂಡಿಗೆ ಎಂಬಲ್ಲಿನ ಶ್ರೀಧರ್ಮಅರಸು ಉಳ್ಳಾಯ್ಯ ದೈವಸ್ಥಾನದ ವಾರ್ಷಿಕ ಜಾತ್ರೆ ಪ್ರಯುಕ್ತ  ದೈವಸ್ಥಾನದ ಹಿಂಬದಿ ಗದ್ದೆಯಲ್ಲಿ  ದೇವು ಯಾನೆ ದೇವದಾಸ್ ಮುಂಚೂರು  ಹಾಗೂ ಹರೀಶ  ಎಂಬವರು ಕೋಳಿಗಳ ಕಾಲಿಗೆ ಬಾಲ್ ನ್ನು ಕಟ್ಟಿ ಕಾದಡಲು ಬಿಟ್ಟಲ್ಲಿ ಅದು ಅಲ್ಲಿ ಸೇರಿದ ಸಾರ್ವಜನಿಕರ ಮೇಲೆ  ಬಿದ್ದಲ್ಲಿ ಅವರ ಜೀವಕ್ಕೆ ಹಾನಿಯಾಗುವ ಸಂಭವಿದೆ ಎಂದು ತಿಳುವಳಿಕೆ ಇದ್ದು ಕೂಡ ದೇವು ಯಾನೆ ದೇವದಾಸ್ ಮುಂಚೂರು  ಹಾಗೂ ಹರೀಶ  ಇವರುಗಳು ಅವರವರ ಕೋಳಿಗಳ ಕಾಲಿಗೆ ಬಾಲ್  ( ಸಣ್ಣ ಚೂರಿ ) ನ್ನು ಕಟ್ಟಿ ಕಾದಡಲು ನಿರ್ಲಕ್ಷತನದಿಂದ ಬಿಟ್ಟ ಪರಿಣಾಮ  ಕೋಳಿಯ ಕಾಲಿಗೆ ಕಟ್ಟಿದ ಬಾಲ್ (ಸಣ್ಣ ಚೂರಿ) ಚಂದ್ರಹಾಸ ಎಂಬವರ ಬಲಕಾಲಿನ ಹಿಂಬದಿಯ ಮೊಣಗಂಟಿನ ಕೆಳಗಡೆ ತಿವಿದ್ದು ತೀವ್ರ  ಸ್ವರೂಪದ ಸುಟ್ಟ ಗಾಯವಾಗಲು ಕಾರಣರಾಗಿರುತ್ತಾರೆ. ಅಲ್ಲದೇ ಸದ್ರಿ ಕೋಳಿ ಅಂಕ ನಡೆಸಿದ ಪುರಂದರ ಹಾಗೂ ಇತರರು ಅಲ್ಲಿ ಸೇರಿದವರ  ಜೀವಕ್ಕೆ ಸುರಕ್ಷತೆಗಾಗಿ ಮುಂಜಾಗ್ರತೆಯ ಬಗ್ಗೆ ತಡೆಬೇಲಿಯಾಗಲೀ , ತಡೆ ಗೋಡೆಯಾಗಲೀ ಕಟ್ಟದೇ ಯಾವುದೇ ಕ್ರಮ ಕೈಗೊಳ್ಳದೇ ತೀವ್ರ ನಿರ್ಲಕ್ಷತನ ವಹಿಸಿದ ಪರಿಣಾಮ ಚಂದ್ರಹಾಸ ಇವರು ಗಾಯವಾಗಲು ಕಾರಣರಾಗಿರುತ್ತಾರೆ. ಇದನ್ನು ನೋಡಿದ ಫಿರ್ಯಾಧಿದಾರರು  ಅಲ್ಲಿ ಸೇರಿದವರೊಂದಿಗೆ ಚಂದ್ರಹಾಸನನ್ನು ಚಿಕಿತ್ಸೆ ಬಗ್ಗೆ ಮಂಗಳೂರಿನ ಜ್ಯೋತಿಯಲ್ಲಿರುವ ಕೆ ಎಂ.ಸಿ ಆಸ್ಪತ್ರೆಗೆ ಕೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಿದ್ದಾಗಿರುತ್ತದೆ. ಮೇಲ್ಕಾಣಿಸಿದ ಆರೋಪಿಗಳ ಮೇಲೆ ಸೂಕ್ತ ಕಾನುನು ಕ್ರಮ ಜರಗಿಸಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ.

 

2) ದಿನಾಂಕ:14-05-2022 ರಂದು ಪಿರ್ಯಾದಿದಾರರಾದ ಶ್ರೀಮತಿ ಕಮಲಾಕ್ಷಿ ಇವರು KA 19 MB 3217 ನೇ ನೊಂದಣಿ ಸಂಖ್ಯೆಯ ಕಾರನ್ನು ಸುರತ್ಕಲ್ ಗ್ರಾಮದ ಮುಂಚೂರಿನ ಅಣ್ಣು ಮೂಲ್ಯ ಕಂಪೌಂಡಿನೊಳಗೆ ನಿಲ್ಲಿಸಿ ಹೋದವರು ದಿನಾಂಕ:15-05-2022 ರಂದು ಬೆಳಿಗ್ಗೆ 06-00 ಗಂಟೆಗೆ ಬಂದು ನೋಡಿದಾಗ ಕಾರಿನ ಎಲ್ಲಾ ಗ್ಲಾಸನ್ನು ಯರೋ ಕಿಡಿಗೇಡಿಗಳು ಯಾವುದೋ ಸಾಧನದಿಂದ ಬಡಿದು ಪುಡಿ ಮಾಡಿ ನಷ್ಠ ಉಂಟುಮಾಡಿದ್ದಾಗಿದೆ ಈ ಬಗ್ಗೆ ಕಾನೂನು ಕ್ರಮ ಜರುಗಿಸುವರೇ ಎಂಬಿತ್ಯಾದಿಯಾಗಿರುತ್ತದೆ

 

ಇತ್ತೀಚಿನ ನವೀಕರಣ​ : 18-05-2022 07:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080