ಅಭಿಪ್ರಾಯ / ಸಲಹೆಗಳು

Crime Reported in: Panambur PS

ದಿನಾಂಕ 18-06-2022 ರಂದು ಠಾಣಾ ಪೊಲಿಸ್ ಉಪ  ನಿರೀಕ್ಷಕ ರಾಘವೇಂದ್ರ ನಾಯ್ಕ್  ಮತ್ತು ಸುನಿಲ, ನಿಂಗಪ್ಪ ರವರುಗಳು ಠಾಣಾ ವ್ಯಾಪ್ತಿಯಲ್ಲಿ ಗಸ್ತುಕರ್ತವ್ಯದಲ್ಲಿ ಇದ್ದ ಸಮಯ  ಕೂರಿಕಟ್ಟಾ ಅಯ್ಯಪ್ಪ  ದೇವಸ್ಥಾನದ ಬಳಿ  ಹಾಗೂ ತೋಟ ಬೆಂಗ್ರೆ ಸರಕಾರಿ ಶಾಲೆಯ  ರಸ್ತೆಯ ಬಳಿ    ನಶೆಯಲ್ಲಿ ಇದ್ದ  1) ವಿಜೇಶ್  ಪ್ರಾಯ  20 ವರ್ಷ, ವಾಸ: ಕೂರಿಕಟ್ಟ, ಐಯ್ಯಪ್ಪ ದೇವಸ್ಥಾನದ  ಬಳಿ, ಮೀನಕಳಿಯ, 2) ಇಜಾಜ್ ಅಹಮ್ಮದ್ ಪ್ರಾಯ 21 ವರ್ಷ,   ಮಂಗಳೂರು  ಎಂಬವನನ್ನು   ವಶಕ್ಕೆ ಪಡೆದು ವೈದ್ಯಾಧಿಕಾರಿಗಳು, ಎ.ಜೆ.ಆಸ್ಪತ್ರೆ,  ಮಂಗಳೂರುರವರ  ಮುಖೇನ ಪರೀಕ್ಷಿಸಿಗೊಳಪಡಿಸಿದ್ದಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ. ಆರೋಪಿಗಳ ಮೇಲೆ ಎನ್.ಡಿ.ಪಿ.ಎಸ್ ಕಾಯ್ದೆ ಪ್ರಕಾರ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ. ಎಂಬಿತ್ಯಾದಿಯಾಗಿರುತ್ತದೆ.

 

Crime Reported in: Mangalore East Traffic PS               

ಪಿರ್ಯಾದಿದಾರರಾದ ಕೆ. ಪ್ರಭಾಕರ್ ರವರು ತನ್ನ ಬಾಬ್ತು KA-19-MK-6770 ನಂಬ್ರದ   ಕಾರಿನಲ್ಲಿ  ತನ್ನ ಪತ್ನಿ ಶ್ರೀಮತಿ ಬೇಬಿ ರವರನ್ನು ಬಿಕರ್ನಕಟ್ಟೆಯಲ್ಲಿರುವ ವೈದ್ಯರಲ್ಲಿಗೆ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋಗಲು ಕುಲಶೇಖರದಿಂದ ಹೊರಟು ಬಿಕರ್ನಕಟ್ಟೆ ಕೈಕಂಬ ಪ್ಲೈಓವರ್ ಕಡೆಯಿಂದಾಗಿ ನಂತೂರು ಕಡೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 73 ನೇ ಡಾಮಾರು ರಸ್ತೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಾ ಬೆಳಿಗ್ಗೆ ಸುಮಾರು 8.45 ಗಂಟೆಗೆ ಬಿಕರ್ನಕಟ್ಟೆಯಲ್ಲಿರುವ ಬಾಲಯೇಸು ಚರ್ಚ್ ದ್ವಾರದ ಮುಂಭಾಗ ತೆರೆದ ಡಿವೈಡರ್ ಬಳಿಗೆ ಬಂದು ತಲುಪಿ, ಇಂಡಿಕೇಟರ್ ಹಾಕಿ ಯು ಟರ್ನ್ ತೆಗೆದುಕೊಳ್ಳಲು ಬಲಕ್ಕೆ ತಿರುಗಿಸುತ್ತಿದ್ದ ವೇಳೆ KA-19-AD-1321 ನಂಬ್ರದ ಬೊಲೆರೊ ಪಿಕಪ್ ಗೂಡ್ಸ್ ವಾಹನವನ್ನು ಅದರ ಚಾಲಕ ಮಹಮ್ಮದ್ ನೌಫಾಲ್ ಎಂಬಾತನು ಬಿಕರ್ನಕಟ್ಟೆ ಕೈಕಂಬ ಪ್ಲೈಓವರ್ ಕಡೆಯಿಂದ ನಂತೂರು ಕಡೆಗೆ ಹಾದು ಹೋಗಿರುವ ರಾ.ಹೆ. 73 ನೇ ಡಾಮಾರು ರಸ್ತೆಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಬಲ ಬದಿಗೆ ಡಿಕ್ಕಿಹೊಡೆದ ಪರಿಣಾಮ ಕಾರಿನ ಬಲ ಬದಿಯ ಎರಡು ಡೋರುಗಳು, ಬಲಬದಿಯ ಮುಂಭಾಗದ ಫೆಂಡರ್,  ಬೋನೆಟ್ ಮತ್ತು ಕಾರಿನ ಒಳ ಭಾಗದಲ್ಲಿ ಸ್ಟೇರಿಂಗ್  ಜಖಂಗೊಂಡಿರುತ್ತದೆ. ಈ ಅಪಘಾತದಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ. 

 

Crime Reported in: Kankanady Town PS       

ನಿಶಾನ್ ವರುಣ್ ಮೂವೀಸ್ ಎಂಬ ಸಂಸ್ಥೆಯು “ಪೆಪ್ಪೆರೆರೆ ಪೆರೆರೆರೆ” ಎಂಬ ತುಳು ಚಲನಚಿತ್ರವನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಅನುಮೋದನೆ ಪಡೆದು, ಸುಮಾರು ರೂಪಾಯಿ 1 ಕೋಟಿಗಿಂತ ಹೆಚ್ಚಿನ ಮೊತ್ತದ ವೆಚ್ಚದಲ್ಲಿ ಚಿತ್ರವನ್ನು ನಿರ್ಮಾಣ ಮಾಡಿ ಓ.ಟಿ.ಟಿ ಪ್ಲಾಟ್ ಪಾರ್ಮನಲ್ಲಿ ಪ್ರಸಾರ ಮಾಡಿರುತ್ತಾರೆ. ಸದ್ರಿ ತುಳು ಚಲನಚಿತ್ರವನ್ನು “ತುಳು ಸೂಪರ್ ಕಾಮಿಡಿ 2.0” ಎಂಬ ಯ್ಯೂಟ್ಯೂಬ್ ಚಾನಲ್ ರವರು ಪೈರಸಿ ಮಾಡಿ ಮತ್ತು ಚಲನಚಿತ್ರದ ತಯಾರಕರಾದ ನಿಶಾನ್ ವರುಣ್ ಮೂವೀಸ್ ಸಂಸ್ಥೆಯವರ ಅನುಮತಿ ಪಡೆಯದೆ ಪ್ರಸಾರ ಮಾಡಿ ನಿಶಾನ್ ವರುಣ್ ಮೂವೀಸ್ ಸಂಸ್ಥೆಯವರಿಗೆ ಮೋಸ ಮಾಡಿ ನಷ್ಟ ಉಂಟು ಮಾಡಿರುವುದರಿಂದ “ತುಳು ಸೂಪರ್ ಕಾಮಿಡಿ 2.0” ಎಂಬ ಯ್ಯೂಟ್ಯೂಬ್ ಚಾನಲ್ ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿ.

                

Crime Reported in: Mangalore South PS                                     

 ಪಿರ್ಯಾದಿದಾರರಾದ  ಶ್ರೀಮತಿ  ಅಫ್ರೀನ್ [44] ರವರ ಗಂಡ ಮೊಹಮ್ಮದ್ ಅಶ್ಪಕ್ [42] ದಿನಾಂಕ: 14.06.2022 ರಂದು ಬೆಳಿಗ್ಗೆ 09:30 ಗಂಟೆಗೆ ಮಂಗಳೂರು ನಗರದ ತೊಕ್ಕೊಟ್ಟಿನಲ್ಲಿರುವ ಫ್ಯಾಕ್ಟರಿಗೆ ಕೆಲಸಕ್ಕೆಂದು ಮನೆಯಲ್ಲಿ ತಿಳಿಸಿ ಹೋದವರು ರಾತ್ರಿಯಾದರೂ ಮನೆಗೆ ಬಾರದೇ ಇದ್ದು ಅಲ್ಲದೆ ಅವರ ಮೊಬೈಲ್ ಗೆ ಕರೆ ಮಾಡಿದಾಗಲೂ ಕರೆ ಸ್ವೀಕರಿಸಲಾಗದೆ ಸ್ವೀಚ್ ಆಫ್ ಬರುತ್ತಿರುವುದರಿಂದ ಕೂಡಲೇ ಈ ವಿಷಯವನ್ನು ಮೈದುನ ಉಳ್ಳಾಲದ ಮೊಹಮ್ಮದ್ ಅಕ್ಷತ್ ಅಮೀರ್ ರವರಿಗೆ, ಗಂಡನ ಪರಿಚಯದ ಸ್ನೇಹಿತರಲ್ಲಿ ಹಾಗೂ ನಮ್ಮ ಸಂಭಂದಿಕರಲ್ಲಿ ಪೋನ್ ಕರೆ ಮಾಡಿ ವಿಚಾರಿಸಲಾಗಿ ಪಿರ್ಯಾದಿ ಗಂಡನ ಬಗ್ಗೆ ಯಾವುದೇ ಮಾಹಿತಿ ದೊರೆಯಲಿಲ್ಲ, ಮೊಹಮ್ಮದ್ ಅಶ್ಪಕ್  ರವರು ಎಲ್ಲಿಗೆ ಹೋದರೂ ರಾತ್ರಿ ಸಮಯ ಮನೆಗೆ ಬರುತ್ತಿದ್ದರು, ಹೇಳದೆ ಎಲ್ಲಿಗೂ ಹೋಗುತ್ತಿರಲಿಲ್ಲ ಆದಾಗ್ಯೂ ವ್ಯವಹಾರದ ಬಗ್ಗೆ ಹೋದಾಗ ಉಳಕೊಳ್ಳ ಬೇಕಾದರೆ ಪಿರ್ಯಾದಿಗೆ ತಪ್ಪದೆ ಹೇಳುತ್ತಿದ್ದರು. ಅಲ್ಲದೆ ಅವರ ತಾಯಿಯವರಿಗೆ ಮರೆಯದೆ ದಿನಕ್ಕೆ 2-3 ಬಾರಿ ಪೋನ್ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದರು. ಅವರು ದಿನಾಂಕ: 13.06.2022 ರಂದು ಬೆಳಿಗ್ಗೆ ಕೊನೆಯದಾಗಿ ಅವರ ತಾಯಿಗೆ ನಮ್ಮ ಮನೆಯಿಂದ ಪೋನ್ ಕರೆ ಮಾಡಿ, “ನನ್ನ ಮೊಬೈಲ್ ಪೋನ್ ಸರಿ ಇಲ್ಲ ರಿಪೇರಿ ಮಾಡಿದ ನಂತರ ನಿಮ್ಮಲ್ಲಿ ಮಾತನಾಡುತ್ತೇನೆ.” ಎಂಬುದಾಗಿ ಮಾತನಾಡಿರುತ್ತಾರೆ. ಅಶ್ಪಕ್ ರವರು ವ್ಯವಹಾರದ ವಿಷಯದಲ್ಲಿ ಬೇಸರಗೊಂಡು ಹೋಗಿರಬಹುದಾಗಿರುತ್ತದೆ. ಅವರು ಎಲ್ಲಿ ಹೋಗಿದ್ದಾರೆಂದು ನನಗೆ ತಿಳಿದು ಬರುವುದಿಲ್ಲ. ಇದರಿಂದ ಈ ತನಕ ಅವರು ಬಾರದೇ ಇದ್ದು ಅವರ ಮೊಬೈಲ್ ಸ್ವೀಚ್ ಆಫ್ ಆಗಿದ್ದು, ಕಾಣೆಯಾದ ನನ್ನ ಗಂಡ ಮೊಹಮ್ಮದ್ ಅಶ್ಪಕ್ ರವರನ್ನು ಪತ್ತೆ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿ.

   

Crime Reported in: Moodabidre PS

ಪಿರ್ಯಾದಿದಾರರು TRISHUL SHETTY ಹೆಚ್ ಡಿ ಎಫ್ ಸಿ ಬ್ಯಾಂಕ್‌ನಲ್ಲಿ  ಕೆಲಸ ಮಾಡಿಕೊಂಡಿದ್ದು ಅವರು ತಮ್ಮ ಪ್ತತಿನಿತ್ಯದ ಕೆಲಸಕ್ಕೆ ಪಿರ್ಯಾದಿದಾರರ ತಂದೆಯವರ ಮೋಟಾರು ಸೈಕಲ್  ನಂಬ್ರ ಕೆಎ-19-ಹೆಚ್‌ಡಿ-7144 ನೇದನ್ನು ಉಪಯೋಗಿಸುವುದಾಗಿದ್ದು, ದಿನಾಂಕ: 14-06-2022 ರಂದು ಸಂಜೆ 18.30 ಗಂಟೆಗೆ ಪ್ರತಿನಿತ್ಯದ ಕೆಲಸವನ್ನು ಮುಗಿಸಿಕೊಂಡು ತಮ್ಮ ಮೋಟಾರು ಸೈಕಲ್ ನ್ನು ತಮ್ಮ ಮನೆಯಾದ ಬೆಳುವಾಯಿ ಗ್ರಾಮದ ಕೆಸರುಗದೆ, ಶಿವಕೃಪಾ ಮನೆಯ ಕಂಪೌಡ್ ನ ಒಳಗಡೆ ನಿಲ್ಲಿಸಿದ್ದು, ಮರು ದಿನ ದಿನಾಂಕ:15-06-2022 ರಂದು ಬೆಳ್ಳಿಗ್ಗೆ 07.00 ಗಂಟೆಗೆ ತಮ್ಮ ಮೋಟಾರು ಸೈಕಲ್ ನ್ನು ನೋಡಲಾಗಿ ಅಲ್ಲಿ ಇರಲಿಲ್ಲ ನಂತರ ಪಿರ್ಯಾದಿದಾರರು ಬೆಳುವಾಯಿ ಮತ್ತು ಮೂಡಬಿದ್ರೆಯ ತಮ್ಮ ಸ್ನೇಹಿತರಲ್ಲಿ ವಿಚಾರಿಸಲಾಗಿ ಪತ್ತೆಯಾಗಿರುವುದಿಲ್ಲ, ಆದ್ದರಿಂದ ಯಾರೋ ಕಳ್ಳರು ತಮ್ಮ ಮೋಟಾರು ಸೈಕಲ್ ವಾಹನವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬಿತ್ಯಾದಿ.

 

Crime Reported in: Bajpe PS

ದಿನಾಂಕ 17-04-2022 ರಂದು ಬಜಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನೀರಿಕ್ಷಕರು ಶ್ರೀಮತಿ ಕಮಲ ರವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ ಮಡುತ್ತಾ ಸಂಜೆ ಸುಮಾರು 18-00 ಗಂಟೆಗೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಜಪೆ ಗ್ರಾಮದ ಬಜಪೆ ಪೇಟೆಯ ಬಳಿ ಅಮಲಿನಲ್ಲಿದ್ದ ಅಬ್ದುಲ್ ನಜೀರ್ @ ನಜೀರ್,ಪ್ರಾಯ 40 ವರ್ಷ ವಾಸ ಒಡ್ಡಿದಕಲ್ ಮುಂಡಾರು ಹೌಸ್ ಬಜಪೆ ಅಂಚೆ ಮಂಗಳೂರು ತಾಲೂಕು ಎಂಬವರನ್ನು  ವಶಕ್ಕೆ ಪಡೆದು ಎ.ಜೆ ಆಸ್ಪತ್ರೆಯ ವೈದ್ಯಾದಿಕಾರಿಯವರಿಂದ  ತಪಾಸಣೆಗೆ ಒಳಪಡಿಸಿದಾಗ ಆರೋಪಿಯು ಗಾಂಜಾ ಸೇವನೆ ಮಾಡಿರುವುದಾಗಿ ದೃಡಪಟ್ಟಿರುವ  ಮೇರೆಗೆ ಆರೋಪಿಯ ವಿರುದ್ದ  ಎನ್ ಡಿ ಪಿ ಎಸ್ ಆಕ್ಟ್ ನಂತೆ ಪ್ರಕರಣ ದಾಖಲಿಸಿರುವುದಾಗಿದೆ.

ಇತ್ತೀಚಿನ ನವೀಕರಣ​ : 18-06-2022 06:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080