ಅಭಿಪ್ರಾಯ / ಸಲಹೆಗಳು

Crime Reported in: Traffic North Police Station                                                

ಪಿರ್ಯಾದಿ Abdul Rashid Ahamed ರವರ ಮಗ ರಾಝೀ ರಶೀದ್ (10) ಎಂಬಾತನು ದಿನಾಂಕ: 17-07-2022 ರಂದು ಮದುವೆ ಕಾರ್ಯಕ್ರಮದ ನಿಮಿತ್ತ ಪಂಜಿಮೊಗರಿಗೆ ಹೋಗಿ ಬಸ್ಸು ಸ್ಟಾಪ್ ಎದುರು ಮಸೀದಿ ರಸ್ತೆ ಕಡೆಗೆ ಹೋಗಲು ರಸ್ತೆಯನ್ನು ಗಮನಿಸುತ್ತಾ ದಾಟಿಕೊಂಡು ಇನ್ನೊಂದು ಅಂಚಿಗೆ ತಲುಪುತ್ತಿದ್ದಂತೆ ಸಮಯ ಸುಮಾರು ಮದ್ಯಾಹ್ನ 1:00 ಗಂಟೆಗೆ ಕೂಳೂರು ಕಡೆಯಿಂದ ಕಾವೂರು ಕಡೆಗೆ KA-19-EU-7669 ನಂಬ್ರದ ಮೋಟಾರ್ ಸೈಕಲ್ ನ್ನು ಅದರ ಸವಾರ ಪ್ರವೀಣ್ ಕುಮಾರ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ, ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ಮಗ ಅಹಮ್ಮದ್ ರಾಝೀ ರಶೀದ್ ನಿಗೆ ಡಿಕ್ಕಿ ಪಡಿಸಿದ ಪರಿಣಾಮ ಅಹಮ್ಮದ್ ರಾಝೀ ರಶೀದ್ ರವರು ಕಾಂಕ್ರೀಟ್ ರಸ್ತೆಗೆ ಎಸೆಯಲ್ಪಟ್ಟು ಕಾಲಿಗೆ, ಸೊಂಟದ ಬಳಿ ಗಾಯ ಮತ್ತು ತಲೆಗೆ ಸಣ್ಣಪುಟ್ಟ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

                                               

2)  ದಿನಾಂಕ: 18-07-2022 ರಂದು ಪಿರ್ಯಾದಿದಾರರ Lohithaksha ಅತ್ತೆಯಾದ ಶ್ರೀಮತಿ ಉಮಾವತಿ (50) ರವರು ತನ್ನ ಗಂಡನಾದ ದೇಜಪ್ಪ ಪೂಜಾರಿ ರವರಿಗೆ ಮೆಡಿಸಿನ್ ತರುವ ಸಲುವಾಗಿ ಮನೆಯಿಂದ ಹೊರಟು ಕೃಷ್ಣಾಪುರ ಎಂಬಲ್ಲಿಂದ ಹಸಿರು ಬಣ್ಣದ KA-42-F-1867 ನಂಬ್ರದ ರೂಟ್ ನಂಬ್ರ 45(S) ಬಸ್ಸಿನಲ್ಲಿ ಹತ್ತಿ ಗಣೇಶಪುರ ಕೈಕಂಬ ಜಂಕ್ಷನಿನ ಸರ್ಕಲ್ ಬಳಿ ಬಸ್ಸು ನಿಂತ ವೇಳೆ ಬಸ್ಸಿನ ಇತರ ಪ್ರಯಾಣಿಕರು ಬಸ್ಸಿನಿಂದ ಕೆಳಗಿಳಿದ ಬಳಿಕ ಉಮಾವತಿ ರವರು ಕೂಡಾ ಬಸ್ಸಿನಿಂದ ಕೆಳಗೆ ಇಳಿಯುತ್ತಿದ್ದಂತೆ ಬೆಳಿಗ್ಗೆ 08:30 ಗಂಟೆಗೆ ಬಸ್ಸಿನ ನಿರ್ವಾಹಕನ ಸೂಚನೆಗೆ ಕಾಯದೇ ಆರೋಪಿ ಚಾಲಕನಾದ ಶರಣ ಬಸಪ್ಪ ಎಂಬಾತನು ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಬಸ್ಸನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ ಉಮಾವತಿ ರವರು ಬಸ್ಸಿನಿಂದ ಕೆಳಗೆ ಕಾಂಕ್ರೀಟ್ ರಸ್ತೆಗೆ ಬಿದ್ದಿದ್ದು ಇದೇ ವೇಳೆ ಬಸ್ಸಿನ ಹಿಂದಿನ ಎಡಬದಿ ಚಕ್ರ ಉಮಾವತಿ ರವರ ಬಲಕಾಲಿನ ಮೇಲೆ ಚಲಿಸಿ ಬಲಕಾಲಿನ ಮೊಣಗಂಟಿನ ಕೆಳಭಾಗ ಕೋಲು ಕಾಲಿನಲ್ಲಿ ಚರ್ಮ ಹಾಗೂ ಮಾಂಸ ಕಿತ್ತು ಹೋದ ರೀತಿಯ ರಕ್ತಗಾಯವಾಗಿದ್ದು, ತೊಡೆಯ ಭಾಗದಲ್ಲಿ ಚರ್ಮ ತರಚಿದ ರೀತಿಯ ಗಾಯವಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ದೇರಳಕಟ್ಟೆಯ K S ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Crime Reported in: Traffic South Police Station

ಪಿರ್ಯಾದಿದಾರರು SANWAZ  ದಿನಾಂಕ:16-07-2022 ರಂದು ಅವರ ಸಂಬಂದಿಕಾರದ ಸುಹೇಲ್ ಹೊಸ್ಮಾನ್ ರವರೊಂದಿಗೆ ಸ್ಕೂಟರ್ ನಂಬ್ರ KA-17-E-8227 ನೇದರಲ್ಲಿ ಸುಹೇಲ್ ಹೊಸ್ಮಾನ್ ಸವಾರನಾಗಿ ಹಾಗೂ ಪಿರ್ಯಾದಿದಾರನು ಸಹ ಸವಾರನಾಗಿ ಸವಾರಿಮಾಡಿಕೊಂಡು ಅರ್ಕುಳದಿಂದ ಮಂಗಳೂರಿಗೆ ಬರುತ್ತಿರುವ ಸಮಯ ಸುಮಾರು ರಾತ್ರಿ 08:00 ಗಂಟೆಗೆ ರಾ.ಹೆ-73 ವಳಚ್ಚಿಲ್ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರ್ ಮುಂಭಾಗದಲ್ಲಿ ಚಲಿಸುತ್ತಿದ್ದ ಕಾರೊಂದು ರಸ್ತೆಯಲ್ಲಿದ್ದ ಗುಂಡಿಯನ್ನು ತಪ್ಪಿಸಲು ತೀರಾ ಎಡ ಬದಿಗೆ ಬಂದಾಗ ಸ್ಕೂಟರ್ ಸವಾರನಾದ ಸುಹೇಲ್ ರವರು ಅಪಘಾತವನ್ನು ತಪ್ಪಿಸಲು ಸ್ಕೂಟರಿನ ಬ್ರೇಕನ್ನು ಒಮ್ಮೆಲೆ ಹಾಕಿ ಬದಿಗೆ ಹೋದಾಗ ಸ್ಕೂಟರ್ ಆಯ ತಪ್ಪಿ ಸ್ಕೂಟರ್ ಸಮೇತ ಸವಾರ ಹಾಗೂ ಪಿರ್ಯಾದಿದಾರರು ಡಾಮಾರು ರಸ್ತೆಗೆ ಬಿದ್ದರು ಈ ಅಪಘಾತಕ್ಕೆ ಸ್ಕೂಟರ್ ಸವಾರನಾದ ಸುಹೇಲ್ ಹೊಸ್ಮಾನ್ ರವರ ದುಡುಕುತನ ಹಾಗೂ ನಿರ್ಲಕ್ಷತನದ ಸವಾರಿ ಕಾರಣವಾಗಿದ್ದು ಇದರಿಂದ ಪಿರ್ಯಾದಿದಾರರಿಗೆ ಮುಖಕ್ಕೆ,ಕಣ್ಣಿಗೆ, ಕೆನ್ನೆಗೆ ಹಾಗೂ ದವಡೆಗೆ ಗುದ್ದಿದ ರಕ್ತ ಗಾಯವಾಗಿದ್ದು ಹಾಗೂ ಸವಾರ ಸುಹೇಲ್ ರವರಿಗೆ ಬಲಗಾಲಿಗೆ ಗುದ್ದಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಾಗಿದ್ದು ಅಲ್ಲಿ ಪರೀಕ್ಷಿಸಿದ ವೈಧ್ಯರು ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ, ಎಂಬಿತ್ಯಾದಿ.

 

Crime Reported in : Barke PS

 ಪಿರ್ಯಾದಿದಾರರಾದ ನಾಗರಾಜ್ ಗಣೇಶ್ ಎಂಬುವರು ಸರ್ವೇ ನಂಬ್ರ: 1181/2 ರಲ್ಲಿ 12 ಸೆಂಟ್ಸ್ ಜಾಗವನ್ನು ಹೊಂದಿದ್ದು, ಸದ್ರಿಯವರು ಮನೆಯ ಕಂಪೌಂಡ್ ಗೋಡೆಯನ್ನು ದಿನಾಂಕ: 16/07/2022 ರವರೆಗೆ ಮೂಕ್ಕಲು ಭಾಗ ಗೋಡೆಯನ್ನು  ಕಟ್ಟಿಸಿದ್ದು, ದಿನಾಂಕ: 17-07-2022 ರಂದು ಬೆಳಿಗ್ಗೆ 08-30 ಗಂಟೆಗೆ ಪಿರ್ಯಾದಿದಾರರ ನೆರೆಮನೆಯ ತುಕರಾಮ ಪುತ್ರನ್, ಗಿರೀಜ, ಭವಾನಿ, ಅಶ್ವಿನಿ, ಮೇಘ, ಮನೀಶ್ ಎಂಬುವರು ಒಟ್ಟಿಗೆ ಸೇರಿ ಪಿರ್ಯಾದಿದಾರರು ಕಟ್ಟಿಸಿದ ಕಂಪೌಂಡ್ ಗೋಡೆಯನ್ನು ಕೇಡುವುತ್ತಿರುವ ಸಮಯ ಕೇಳಲು ಹೋದ ಪಿರ್ಯಾದಿದಾರರಿಗೆ ತುಕಾರಾಮ ಎಂಬುವರು ಕೈಯಿಂದ ದೂಡಿ ತಡೆದು ನಿಲ್ಲಿಸಿದ್ದು ಈ ಬಗ್ಗೆ ಪಿರ್ಯಾದಿಯ ಭಾವ ರವಿ ಸಪಲ್ಯಾ ಕೇಳಲು ಬಂದಾಗ ಅವರಿಗೆ ಮತ್ತು ಪಿರ್ಯಾದಿದಾರರನ್ನು ಉದ್ದೇಶಿಸಿ ರಂಡೇ ಮಕ್ಕಳೇ, ಬ್ಯಾವರ್ಸಿ ಸೋಳೆ ಮಕ್ಕಳೆ ನಿಮ್ಮನ್ನ ಕೊಲ್ಲುತ್ತೇನೆ, ಗೋಡೆ ಕಟ್ಟಲು ಬೀಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿ, ಗೋಡೆ ಕೆಡವಿ ಪಿರ್ಯಾದಿದಾರರಿಗೆ ಸುಮಾರು 20,000/- ರೂ ನಷ್ಟ ಉಂಟು ಮಡಿರುತ್ತಾರೆಂಬಿತ್ಯಾದಿ ಸಾರಾಂಶ.

Crime Reported in : Traffic North Police Station                                     

ದಿ: 16-07-2022 ರಂದು ಸುಮಾರು ರಾತ್ರಿ 8: 40 ಗಂಟೆಗೆ ಪಿರ್ಯಾದಿದಾರರ Karthik H  ತಂದೆ ಹರೀಶ್ ಟಿ ರವರು ಅವರ ಬಾಬ್ತು KA-19-AC-9876 ನೇ ಆಟೋ ರಿಕ್ಷಾದಲ್ಲಿ ಮುಕ್ಕಕ್ಕೆ ಹೋದವರು ಪಾವಂಜೆ ಜಂಕ್ಷನ್ ನಲ್ಲಿ ಹಳೆಯಂಗಡಿ ಕಡೆಯಿಂದ ಬರುವ ವಾಹನಗಳನ್ನು ಗಮನಿಸುತ್ತಾ ಇಂಡಿಕೇಟರ್ ಹಾಕಿ ಬಲಕ್ಕೆ ತಿರುಗಿಸಿ ಹಳೆಯಂಗಡಿ ಕಡೆಯಿಂದ ಸುರತ್ಕಲ್ ಕಡೆಗೆ ಹಾದು ಹೋಗುವ ರಸ್ತೆಯ ಎಡ ಬದಿಯ ಅಂಚಿನಲ್ಲಿ ತಲುಪಿದ ಸಮಯ KA-51-MA-2319 ನಂಬರಿನ ಕಾರನ್ನು ಅದರ ಚಾಲಕ ರಮೀಝುದ್ದೀನ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂದೆ ಚಲಿಸುತಿದ್ದ ಆಟೋರಿಕ್ಷಾದ ಎಡಭಾಗಕ್ಕೆ ಡಿಕ್ಕಿ ಪಡಿಸಿದ್ದು ಇದರಿಂದ ಹರೀಶ್ ಟಿ ರವರ ಮೇಲೆ ಆಟೋರಿಕ್ಷಾ ಬಿದ್ದು ಎಡಕಾಲಿನ ತೊಡೆಯ ಬಳಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಹಾಗೂ ಬಲ ಕಾಲು ಮೊಣ ಗಂಟಿನ ಬಳಿ, ತುಟಿಯ ಮೇಲ್ಭಾಗ ತರಚಿದ ರೀತಿಯ ರಕ್ತ ಗಾಯವಾಗಿ ಚಿಕಿತ್ಸೆ ಬಗ್ಗೆ ಪದ್ಮಾವತಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ..

ಇತ್ತೀಚಿನ ನವೀಕರಣ​ : 18-07-2022 07:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080