Feedback / Suggestions

Crime Reported  in Mangalore East PS

ಫಿರ್ಯಾದಿ Ashok K ASI ರವರು ದಿನಾಂಕ: 17-08-2021 ರಂದು  ಮಂಗಳೂರು ನಗರ ಪೂರ್ವ ಪೊಲೀಸ್ ಠಾಣಾ ಸರಹದ್ದಿನಲ್ಲಿ ಪಿಸಿ  ಸತೀಶ್ ರವರನ್ನು ಕರೆದುಕೊಂಡು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ಇರುತ್ತಾ ರಾತ್ರಿ ಸುಮಾರು 23-30 ಗಂಟೆಗೆ ಕೆ.ಪಿ.ಟಿ. ಸಪ್ತಗಿರಿ ಪೆಟ್ರೋಲ್ ಬಂಕ್ ನ ಬಳಿಗೆ ತಲುಪಿದಾಗ ರಾಷ್ಟ್ರೀಯ ಹೆದ್ದಾರಿ 66 ರ ಪೂರ್ವ ಬದಿಯಲ್ಲಿ ಎರಡು ಕಾರು ಮತ್ತು ಒಂದು ಜೀಪನ್ನು ರಸ್ತೆಯ ಅಂಚಿನಲ್ಲಿ ನಿಲ್ಲಿಸಿಕೊಂಡು 7-8 ಜನ ಯುವಕರು ಒಬ್ಬರನ್ನೊಬ್ಬರು ಬೈದಾಡಿಕೊಂಡು ಪರಸ್ಪರ ದೂಡಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಕಲಹ ಮಾಡುತ್ತಿದ್ದುದನ್ನು ನೋಡಿ ಸದರಿ ಯುವಕರ ಬಳಿ ಹೋಗಿ ಗಲಾಟೆ ಮಾಡದಂತೆ ಸಮಾಧಾನ ಮಾಡಿದರೂ ಕೂಡಾ ಅವರು ಕಲಹವನ್ನು ಮುಂದುವರಿಸಿದಾಗ ವೈಯಕ್ತಿಕ ವಿಚಾರದಲ್ಲಿ ತಗಾದೆ ಬಂದು ಕಲಹ ಮಾಡುತ್ತಿರುವುದಾಗಿ ತಿಳಿದು ಬಂದಿದ್ದು, ಕಲಹ ಮಾಡುತ್ತಿದ್ದ 8 ಮಂದಿ ಯುವಕರು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವಿಕೆ ಬಗ್ಗೆ ಸರಕಾರದ ಮಾರ್ಗ ಸೂಚಿ ಹಾಗೂ ಮಾನ್ಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ದ.ಕ. ಜಿಲ್ಲೆಯವರ ರಾತ್ರಿ ಕರ್ಫ್ಯೂ ಆದೇಶವನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರಿಕೊಂಡು ಎರಡು ತಂಡಗಳಾಗಿ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಹಾಗೂ ಜನರ ಸಂಚಾರಕ್ಕೆ ತೊಂದರೆವುಂಟಾಗುವ ರೀತಿ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಪರಸ್ಪರ ಕೈಕೈ ಮಿಲಾಯಿಸಿ ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರಿ ಒಬ್ಬರಿಗೊಬ್ಬರು ದೂಡಾಡಿಕೊಂಡು ಕಲಹ ಮಾಡುತ್ತಿದ್ದು, ಇವರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದು ಎಂಬಿತ್ಯಾದಿ.

2) ಪಿರ್ಯಾದಿದಾರರಾದ ಸುರೇಂದ್ರ ರವರು ಕೆಲಸ ಮಾಡುತ್ತಿರುವ ಮಂಗಳೂರು  ನಗರದ  ಕರಂಗಲ್ಪಾಡಿ ಜೈಲ್ ರಸ್ತೆಯಲ್ಲಿರುವ ತಂದೂರು ಬಾರ್ ಗೆ ದಿನಾಂಕ: 16-8-2021 ರಂದು ರಾತ್ರಿ ಅಂದರೆ ದಿನಾಂಕ; 17-8-2021 ರಂದು ಬೆಳಿಗ್ಗಿನ ಜಾವ 1—15 ಗಂಟೆಗೆ  3 ಜನರು ಕಳ್ಳರು ಬೈಕ್ ನಲ್ಲಿ ಬಂದು  ತಂದೂರು ಬಾರ್  ಆಂಡ್ ರೆಸ್ಟೋರೆಂಟ್ ನ ಎದುರಿನ ಬಾಗಿಲಿನ ಮತ್ತು ಶಟರ್ ನ ಬೀಗವನ್ನು  ಅವರಲ್ಲಿದ್ದ ಹತ್ಯಾರಿನಿಂದ ಮುರಿದು 2 ಜನ ಕಳ್ಳರು ಬಾರ್ ನ ಒಳ ಪ್ರವೇಶಿಸಿ  ಬಾರ್ ನ ಸಿಸಿ ಕ್ಯಾಮರಾಗಳನ್ನು ಜಖಂ ಗೊಳಿಸಿ  ಕ್ಯಾಶ್ ಕೌಂಟರ್ ನಲ್ಲಿದ್ದ ಸುಮಾರು: ರೂ: 20,000/-ಹಣವನ್ನು ಸುಲಿಗೆ ಮಾಡಿದ್ದು,  ಆ ಸಮಯ ಶಬ್ದ ಕೇಳಿ  ಪಿರ್ಯಾದಿದಾರರು ಮತ್ತು ಬಾರ್ ನಲ್ಲಿ ಕೆಲಸ ಮಾಡುವ ಪುರಂದರ, ಪುರುಶೋತ್ತಮ ಚಂದ್ರಕಾಂತ್, ಮತ್ತು  ಇತರ ಕೆಲಸದವರು  ಬಂದು  2 ಜನ ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದಾಗ ಪಿರ್ಯಾದಿದಾರರಿಗೆ ಮತ್ತು ಇತರರಿಗೆ ಕಳ್ಳರು ಅವರ ಕೈಯಲ್ಲಿದ್ದ ಹತ್ಯಾರ್ ಗಳಿಂದ ಹಲ್ಲೆ ನಡೆಸಲು ಮುಂದಾದಾಗ ಪಿರ್ಯಾದಿದಾರರು ಮತ್ತು ಇತರರು ಎಲ್ಲರೂ ಸೇರಿ 2 ಜನ ಕಳ್ಳರನ್ನು ಹಿಡಿದಾಗ ಅವರು ಉರುಡಾಟ ಮಾಡಿ ಪಿರ್ಯಾದಿದಾರರಿಗೆ ಮತ್ತು ಇತರರಿಗೆ ಹಲ್ಲೆ ನಡೆಸಿರುತ್ತಾರೆ. ಇದನ್ನು ಹೊರಗಿನಿಂದ ಬೈಕ್ ನಲ್ಲಿ ನಿಂತು ನೋಡುತ್ತಿದ್ದ ಅವರ ಸಹಚರ  ಅಲ್ಲಿಂದ ಅವರು ಬಂದಿದ್ದ ಬೈಕ್ ನಲ್ಲಿ ಪರಾರಿಯಾಗಿರುವುದಾಗಿದೆ ಎಂಬಿತ್ಯಾದಿ

Crime Reported in  Moodabidre PS

ದಿನಾಂಕ 17-08-2021 ರಂದು ಸಂಜೆ 18.00 ಗಂಟೆಗೆ VISHVANATH POOJARY ರವರು ತನ್ನ ಕೆಲಸ ನಿಮ್ಮಿತ್ತ ಮಠದ ಮನೆ ಎಂಬಲ್ಲಿಗೆ ತೆರೆಳಿದ ವೇಳೆ ಅಲ್ಲಿ ರಾಜ್‌ಭಟ್ ಎಂಬ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆರೋಪಿ ದಿನರಾಜ್ ಎಂಬಾತನು ತನ್ನ ಹೆಂಡತಿ ಸುನೀತಾ ಎಂಬಾಕೆಗೆ ಒನಕೆ ಮಾದರಿಯ ಕಟ್ಟಿಗೆ (ಬಲಾಯಿ) ಯಿಂದ ತಲೆಗೆ ಹಲ್ಲೆಯನ್ನು ನಡೆಸಿದ್ದು ಗಂಭೀರ ಗಾಯಗೊಂಡ ಸುನೀತರನ್ನು ಚಿಕಿತ್ಸೆಗಾಗಿ ಕಾರ್ಕಳ ಸ್ಪಂದನಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸಗೆ ಮಂಗಳೂರಿನ ಎಜೆ ಆಸ್ಪತ್ರೆಗೆ ಕೆರದುಕೊಂಡು ಹೋಗಿ ಅಲ್ಲಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸಗಾಗಿ ಕೊಂಡುಹೋಗಿ ದಾಖಲಿಸಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದ ಸುನೀತಳು ಚಿಕಿತ್ಸೆ ಫಲಕಾರಿ ಯಾಗದೇ ದಿನಾಂಕ 18-08-2021 ರಂದು ರಾತ್ರಿ ಸಮಯ  00.20 ಗಂಟೆಗೆ ಮೃತಪಟ್ಟಿರುವುದಾಗಿದೆ. ಆರೋಪಿಯು ಗಾಯಾಳು ಸುನೀತಾಳನ್ನು ಚಿಕಿತ್ಸಗಾಗಿ ದಾಖಲಿಸುವ ಸಮಯ ತಾನು ಮಾಡಿದ ಕೃತ್ಯವನ್ನು ಮರೆಮಾಚುವ ಉದ್ದೆಶದಿಂದ ಸುನೀತಾಳು ಸ್ಲಪ್‌ನಿಂದ ಬಿದ್ದಿರುವುದಾಗಿ ಉದ್ದೇಶಪೂರ್ವಕವಾಗಿ ವೈದ್ಯರ ಮುಂದೆ ಸುಳ್ಳನ್ನು ಹೇಳಿ ಚಿಕಿತ್ಸೆಗಾಗಿ ದಾಖಲಿಸಿರುವುದಾಗಿದೆ.    ಆರೋಪಿ ದಿನುರಾಜನಿಗೆ ಕುಡಿಯುವ ಚಟವಿದ್ದು ಹೆಂಡತಿ ಸುನೀತಾ ಬಗ್ಗೆ ಸಂಶಯ ದೃಷ್ಟಿಯಿಂದ ನೋಡುತ್ತಿದ್ದನು.  ಪ್ರತಿದಿನವು ಕುಡಿದು ಬಂದು ಹೆಂಡತಿಯನ್ನು ಹಾಗೂ ಆಕೆಯ ತಾಯಿಯನ್ನು ಹೊಡೆಯುತ್ತಿದ್ದುನು.  ದಿನಾಂಕ 17-08-2021 ರಂದು ಸಮಯ 18.15  ಹೆಂಡತಿಯ ಜೊತೆ ಜಗಳ ಮಾಡುತ್ತಾ ಮನೆಯಲ್ಲಿದ್ದ ಮರದ ಒನಕೆ ಮಾದರಿಯ ಕಟ್ಟಿಗೆಯಿಂದ (ಬಲಾಯಿ) ದಿಂದ ಕೊಲೆ ಮಾಡುವ ಉದ್ದೇಶದಿಂದ  ಆಕೆಯ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ಪರಿಣಾಮ  ಸುನಿತಾಳಿಗೆ  ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಸಮಯ ಈ ದಿನ ದಿನಾಂಕ: 18-08-2021 ರಂದು ರಾತ್ರಿ 00-20 ಗಂಟೆಗೆ ಮೃತಪಟ್ಟಿರುವುದಾಗಿ ಎಂಬಿತ್ಯಾದಿಯಾಗಿ ಪಿರ್ಯಾದಿಯ ಸಾರಾಂಶವಾಗಿದೆ

Crime Reported in  Mangalore South PS

ಪ್ರಕರಣದ ಪಿರ್ಯಾದಿದಾರರಾದ ಎ.ಎಸ್.ಐ ಶ್ರೀಮತಿ ಮೀರಾ ರವರು ಪಿ.ಸಿ  ಸತೀಶ್ ರವರ ಜೊತೆ ದಿನಾಂಕ : 16/17-08-2021 ರಂದು 23-00 ಗಂಟೆಯಿಂದ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಎ-19-ಜಿ-552 ನೇ ವಾಹನದಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಮಂಗಳೂರು ನಗರದ ಕರಂಗಲ್ಪಾಡಿಯ ತಂದೂರ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಗಲಾಟೆ ನಡೆಯುತ್ತಿದೆ ಅಲ್ಲಿಗೆ ಹೋಗುವಂತೆ ಪೂರ್ವ ಠಾಣೆಯಿಂದ ಸಮಯ 1-40 (17-08-2021) ರ ಗಂಟೆಗೆ ತಿಳಿಸಿದಂತೆ  ತಂದೂರು ಬಾರ್ ಅಂಡ್ ರೆಸ್ಟೋರೆಂಟ್ ನ ಬಳಿ ಹೋದಾಗ, ತಂದೂರ್ ಬಾರ್ ನಲ್ಲಿ ಸುಲಿಗೆ ಮಾಡುತ್ತಿದ್ದ ನಾಲ್ವರ ಪೈಕಿ ಇಬ್ಬರನ್ನು ತಂದೂರ್ ಬಾರ್ ನ ಸಿಬ್ಬಂದಿಗಳು ಹಿಡಿದಿಟ್ಟಿದ್ದು, ಅವರುಗಳು ಗಾಯಗೊಂಡಿದ್ದುದ್ದರಿಂದ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರ ಆದೇಶದಂತೆ ಕೆಎ-19-ಜಿ-552 ನೇ ವಾಹನದಲ್ಲಿ ಪಿರ್ಯಾದಿದಾರರು, ಪಿ.ಸಿ  ಸತೀಶ್ ಹಾಗೂ ಹೆಚ್.ಸಿ  ನರೇಶ್ ರವರು ಚಿಕಿತ್ಸೆಗೆ ರಾತ್ರಿ ಸುಮಾರು 2-15 ಗಂಟೆಯ ವೇಳೆಗೆ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಆವರಣಕ್ಕೆ ಇಲಾಖಾ ವಾಹನದಲ್ಲಿ ಕರೆದುಕೊಂಡು ಹೋಗಿ ವಾಹನ ನಿಲ್ಲಿಸಿ ಅವರಿಬ್ಬರನ್ನು ಇಳಿಸಲು ಮುಂದಾದಾಗ ಆರೋಪಿಗಳಿಬ್ಬರು ಪಿರ್ಯಾದಿದಾರರಿಗೆ ಹಾಗೂ ಸಿಬ್ಬಂದಿಗಳಿಗೆ ಹಲ್ಲೆ ನಡೆಸಿ, ಬಲವಾಗಿ ದೂಡಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾಗಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

2) ದಿನಾಂಕ : 17-08-2021 ರಂದು 22-00 ಗಂಟೆಗೆ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗ, ಡಿ.ಸಿ.ಪಿ  ರವರು ಪಿರ್ಯಾದಿ RAVISH S NAYAK ACP CCRB ರವರಿಗೆ   ಮಂಗಳೂರು ನಗರದ ಬೋಳಾರದ ಟೈಲರಿ ರಸ್ತೆಯಲ್ಲಿ ಪ್ರತಿ ದಿನ ರೂಟ್ ನಂಬ್ರ : 27 ನೇ ಗಣೇಶ್ ಪ್ರಸಾದ್, ಸಿಟಿ ಬಸ್ ಹಾಗೂ ಇತರ ವಾಹನಗಳಿಗೆ ಸುವರ್ಣ ಫ್ಯೂಯಲ್ಸ್ ಎಂಬ ಹೆಸರಿನ ಡೋರ್ ಟು ಡೋರ್ ಡೆಲವರಿ ಬೌಸರ್ ಟ್ಯಾಂಕ್ ಟ್ರಕ್ ವಾಹನದಲ್ಲಿ ಹೈಸ್ಪೀಡ್ ಡೀಸೆಲ್ ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ 20-00 ಗಂಟೆಗೆ ಭಾತ್ಮಿದಾರರಿಂದ ಮಾಹಿತಿ ಬಂದಿರುವುದಾಗಿ  ಹಾಗೂ ಈ ಬಗ್ಗೆ ಪಿರ್ಯಾದಿದಾರರನ್ನು ಅಧಿಕಾರಿಯುತ ಅಧಿಕಾರಿಯೆಂದು ನೇಮಿಸಿ ದಾಳಿ ನಡೆಸುವಂತೆ ಆದೇಶ ನೀಡಿದಂತೆ, ಪಿರ್ಯಾದಿದಾರರು ಸಿಬ್ಬಂದಿಗಳ ಸಮೇತ  ದಿನಾಂಕ : 17-08-2021 ರಂದು 23-00 ಗಂಟೆಗೆ ಬೋಳಾರದ ಮುಳಿಹಿತ್ಲು ಎಂಬಲ್ಲಿಗೆ ಹೋಗಿ, ಕೆಎ-19-ಎಡಿ-2881 ನೇ ಟ್ಯಾಂಕ್ ಟ್ರಕ್ ವಾಹನದಲ್ಲಿದ್ದ ನೋಝಲ್ ಪೆಟ್ರೋಲ್ ಗನ್ ನಿಂದ ಐಒಸಿಎಲ್ ಹೈ ಸ್ಪೀಡ್ ಡಿಸೇಲ್ ನ್ನು ಕೆಎ-19-ಸಿ-2027 ನೇ ಸಿಟಿ ರೂನ್ ನಂಬ್ರ 27 ನೇ ಬಸ್ ನ ಡಿಸೇಲ್ ಟ್ಯಾಂಕ್ ನ ಒಳಗಡೆ ಇಳಿಸಿ ಇಂಧನ ತುಂಬಿಸುತ್ತಿದ್ದ ಶರತ್ ಕುಮಾರ್ ಮತ್ತು ಕೇಶವ ಪೂಜಾರಿ ಎಂಬವರನ್ನು ಸಿಬ್ಬಂದಿ ಮೂಲಕ ವಶಕ್ಕೆ ಪಡೆದುಕೊಂಡಾಗ, ಆರೋಪಿಗಳು ಪೆಟ್ರೋಲಿಯಂ ಹಾಗೂ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕಾರ ಅಗತ್ಯ ವಸ್ತುಗಳ ಕಾಯ್ದೆ 1955 ರ ಪ್ರಕಾರ ಅಗತ್ಯ ವಸ್ತುವೆಂದು ಘೋಸಿದ್ದು, ಆರೋಪಿಗಳು ಅನಧಿಕೃತವಾಗಿ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಮಾರಾಟ ಮಾಡುತ್ತಿರುವುದು ತಿಳಿದು ಬಂದಿದ್ದರಿಂದ ಕೆಎ-19-ಎಡಿ-2881 ನೇ ಟ್ಯಾಂಕ್ ಟ್ರಕ್ ವಾಹನವನ್ನು, ಡಿಸೇಲ್ ಸ್ಯಾಂಪಲ್ ಗಳನ್ನು, ನಗದು ಹಣ 3000/- ಹಾಗೂ 2 ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಪಂಚರ ಸಮಕ್ಷಮ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 32,23,000/- ರೂ ಆಗಬಹುದು ಎಂಬಿತ್ಯಾದಿಯಾಗಿರುತ್ತದೆ 

Crime Reported in  Surathkal PS    

ಪ್ರಕರಣದ ಪಿರ್ಯಾದಿ Muneer Katipalla ರವರು ಭಾರತ ಪ್ರಜಾಸತ್ತಾತ್ಮಕ ಯುವ ಜನ ಫೆಡರೇಷನ್ ಇದರ ರಾಜ್ಯ ಘಟಕದ ಅಧ್ಯಕ್ಷರಾಗಿದ್ದು ಪಿರ್ಯಾದಿದಾರರ ಹೆಸರಿನಲ್ಲಿ ಪುತ್ತೂರಿನ ಕಬಕದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಸಾರ್ವಕರ ಪೊಟೋ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ವಿವಾದ, ಮಂಗಳೂರಿನಲ್ಲಿ ಬಂದರ್ ನಲ್ಲಿ ಸ್ಪೋಟಕ ದಾಸ್ತಾನು ಪತ್ತೆಯಾಧ ಪ್ರಕರಣ, ಮೂಡಬಿದ್ರೆಯಲ್ಲಿ ಕಾಡು ಪ್ರಾಣಿ ಬೇಟೆಗಾರರ ಬಂಧನ ಪ್ರಕರಣಗಳನ್ನು ಸೇರಿಸಿ ಕಿಡಿಗೇಡಿಗಳು ಹೇಳಿಕೆಯೊಂದನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವುದು ಪಿರ್ಯಾದಿದಾರರ ಗಮನಕ್ಕೆ ಬಂದಿರುತ್ತದೆ. ಫೆಸ್ ಬುಕ್ ಖಾತೆಯಲ್ಲಿ ಪೋಸ್ಟ್  ಮಾಡಿದ ಬರಹಗಳು ಪಿರ್ಯಾದಿದಾರದ್ದು ಆಗಿರುವುದಿಲ್ಲ. ಇಲ್ಲಿ ದುರುದ್ದೇಶಪೂರಕವಾಗಿ ಒಂದಕ್ಕೊಂದು ಸಂಬಂಧವಿಲ್ಲದ  ಪ್ರಕರಣಗಳನ್ನು ಜೋಡಿಸಿ, ಸಾರ್ವಜನಿಕ ಘನತೆಗೆ ತಕ್ಕುದಲ್ಲದ ಪದಗಳನ್ನು ಬಳಸಿ ಪಿರ್ಯಾದಿದಾರರ  ಹೆಸರಿನಲ್ಲಿ ಹೇಳಿಕೆಯನ್ನು ಸೃಷ್ಟಿಸಲಾಗಿದೆ. ಇದು ಸಮಾಜದಲ್ಲಿರುವ ಎರಡು ಕೋಮುಗಳ ನಡುವೆ ಸಂಘರ್ಷವುಂಟುಮಾಡಿ ಧರ್ಮಗಳ ನಡುವಿನ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಯು ಪಿರ್ಯಾದಿದಾರರ  ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಸಾಮಾಜಿಕ ಜಾಲತಾನವಾದ ವಾಟ್ಸ್ ಪ್ ನಲ್ಲಿ ಹರಿದಾಡುತ್ತಿರುವುದು ಪಿರ್ಯಾದಿದಾರರ ಗಮನಕ್ಕೆ ದಿನಾಂಕ 17-08-2021 ರಂದು ಸಂಜೆ 17-59 ನಿಮಿಷಕ್ಕೆ  ಗಮನಕ್ಕೆ ಬಂದಿರುತ್ತದೆ. ಪಿರ್ಯಾದಿದಾರರ  ಹೆಸರಿನಲ್ಲಿ ಸೃಷ್ಟಿಸಲಾಗಿದ ಈ ಹೇಳಿಕೆಯು ಸಮಾಜದಲ್ಲಿರುವ ಎರಡು ಕೋಮುಗಳ ನಡುವೆ ಸಂಘರ್ಷಂಟುಮಾಡಿ ಧರ್ಮಗಳ ನಡುವಿನ ಭಾವನೆಗಳಿಗೆ ಧಕ್ಕೆ ತರುವ ಸಾಧ್ಯತೆ ಇರುವುದರಿಂದ ತಪ್ಪಿಸತ್ತರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿ ಆಗಿರುತ್ತದೆ.

Crime Reported in  Mangalore Women PS

ಪ್ರಕರಣದ ಪಿರ್ಯಾದಿದಾರರಾದ ಪ್ರತೀಕ್ಷ ಎಂಬುವರನ್ನು ದಿನಾಂಕ 12-11-2020 ರಂದು ರಿತೇಶ್ ಎಂಬುವರು ಮದುವೆಯಾಗಿದ್ದು, ಒಂದು ಮಗು ಇರುತ್ತದೆ. ನಂತರದ ದಿನಗಳಲ್ಲಿ ರಿತೇಶನು ಪ್ರತೀಕ್ಷಾಳಿಗೆ ಆಗಾಗ ಹಿಂಸೆ ನೀಡಲು ಪ್ರಾರಂಭಿಸಿದ್ದು, ಮದುವೆಯಾಗಿ 06 ತಿಂಗಳ ನಂತರ ಆಕೆಯ ಅತ್ತೆ ಅವರ ಮನೆಗೆ ಬರುವುದು ಬೇಡವೆಂದು ಹೇಳಿದಾಗ ಪ್ರತೀಕ್ಷಾಳು ತನ್ನ ಗಂಡ ಹಾಗೂ ಮಗುವಿನೊಂದಿಗೆ ಬೊಕ್ಕಪಟ್ನದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದು, ಅಲ್ಲಿ ಕೂಡ ರಿತೇಶನು ಪ್ರತೀಕ್ಷಳಿಗೆ ಮಾನಸಿಕ ಹಾಗೂ ದೈಹಿ ಹಿಂಸೆ ನೀಡುತ್ತಿದ್ದು, ದಿನಾಂಕ 16-08-2021 ರಂದು ರಾತ್ರಿ ಸುಮಾರು 11.00 ಗಂಟೆಗೆ ರಿತೇಶನು ಕುಡಿದು ಬಂದು ಪ್ರತೀಕ್ಷಳ ಹೊಡೆದು ಹಿಂಸೆಯನ್ನು ನೀಡಿ ಗಾಯಗೊಳಿಸಿದ್ದಲ್ಲದೇ ಪ್ರತೀಕ್ಷಳ ತಂದೆ ತಾಯಿ ತಮ್ಮನಿಗೆ  ಜೀವ ಬೆದರಿಕೆಯನ್ನು ಹಾಕಿರುತ್ತಾರೆ. ಪಿರ್ಯಾದಿದಾರರಾದ ಪ್ರತೀಕ್ಷಳಿಗೆ ಹಾಗೂ ಆಕೆಯ ಮಗುವಿಗೆ ರಕ್ಷಣೆ ನೀಡಿ ರಿತೇಶನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ

Crime Reported in Traffic South PS

ದಿನಾಂಕ:15-08-2021 ರಂದು ಪಿರ್ಯಾದಿದಾರರಾದ ಖತೀಜ ಭಾನು (35) ರವರ ತಾಯಿ ಮೈಮುನಾ ರವರ ಬಾಬ್ತು ದನ ಪರಂಗಿಪೇಟೆ ಸೇತುವೆ ಬಳಿ ರಾ ಹೆ 73 ರ ರಸ್ತೆ ದಾಟುತ್ತಿರುವ ಸಮಯ ಸುಮಾರು ಸಂಜೆ 05:45 ಗಂಟೆಗೆ ಬಿ ಸಿ ರೋಡ್ ಕಡೆಯಿಂದ  ಮಂಗಳೂರು ಕಡೆಗೆ ರಾ ಹೆ 73 ರಲ್ಲಿ  ಬರುತ್ತಿದ್ದ ಕಾರು ನೊಂದಣಿ ಸಂಖ್ಯೆ  KA-21-M-7899  ನೇದನ್ನು ಅದರ  ಚಾಲಕ ಮೊಹಮ್ಮದ್ ಮುನೀರ್  ಎಂಬುವವರು ಕಾರನ್ನು  ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ದನಕ್ಕೆ  ಡಿಕ್ಕಿಪಡಿಸಿದ ಪರಿಣಾಮ ದನ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವುದಾಗಿದೆ ಈ ಅಪಘಾತಕ್ಕೆ  ಕಾರು ನೊಂದಣಿ ಸಂಖ್ಯೆ KA-21-M-7899 ನೇದರ  ಚಾಲಕ ಮೊಹಮ್ಮದ್ ಮುನೀರ್ ಎಂಬುವವರ ದುಡುಕುತನ ಹಾಗೂ ನಿರ್ಲಕ್ಷತನದ ಚಾಲನೆಯೆ ಕಾರಣ ವಾಗಿರುತ್ತದೆ ಎಂಬಿತ್ಯಾದಿ,

Crime Reported in  Moodabidre PS

ದಿನಾಂಕ 15-08-2021 ರಂದು ಸಂಜೆ 19.30 ಗಂಟೆ ಸಮಯಕ್ಕೆ  ಠಾಣೆಯಲ್ಲಿದ್ದ ವೇಳೆ ಬಂದ ಖಚಿತ ಮಾಹಿತಿಯಂತೆ, ಮೂಡಬಿದ್ರೆ ತಾಲೂಕು ಪುತ್ತಿಗೆ ಗ್ರಾಮದ ಕೊಡ್ಯಡ್ಕದ ಗುಡ್ಡೆಯಂಗಡಿ ಮೆನೆಜಸ್ ಕಂಪೌಂಡ್ ಎಂಬಲ್ಲಿಯ ಜಾನ್ ಸಿ ಮೆನೆಜಸ್ ಎಂಬವರ ಮನೆಯ ಹಿಂಬದಿಯಲ್ಲಿರುವ ಯಾವುದೋ ಜಾಗದಲ್ಲಿ,  ಜಾನ್ ಸಿ ಮೆನೆಜಸ್ , ಶ್ರೀನಿವಾಸ್, ಜೆರಾಲ್ಡ ಡಿ ಕೋಸ್ತ , ಮೈಕಲ್ ಡಿಸೋಜಾ, ಗುರುಪ್ರಸಾದ್ ಮುಂತಾದವರು ಹಾಗೂ ಇನ್ನು ಹಲವರು ಕೃಷಿಗಾಗಿ ಹಾಗೂ ಕೃಷಿ ರಕ್ಷಣೆಗಾಗಿ ಬಳಕೆಯಾಗಬೇಕಾಗಿರುವ ಬಂದೂಕುಗಳನ್ನು ಬಳಸಿ ಕೆಲವು ವಾಹನಗಳಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಸುಸಜ್ಜಿತವಾದ ಬಲೆ, ಬರ್ಚೀ, ಈಟಿ, ಬಳಸಿ ಸರಕಾರಿ ರಕ್ಷಿತ ಅರಣ್ಯ ಮತ್ತು ಇತರ ಕಡೆ ಭೇಟೆಗೆ ಹೋಗಿ ಕಾಡು ಪ್ರಾಣಿಗಳಾದ ಕಾಡು ಹಂದಿ, ಮೊಲ, ನೀಲಗಾಯ್, ಮುಳ್ಳು ಹಂದಿ ಮುಂತಾದ ಮೃಗಗಳನ್ನು ಬೇಟೆಯಾಡಿ ನಂತರ  ಅಕ್ರಮವಾಗಿ ವನ್ಯ ಜೀವಿಗಳನ್ನು ಭೇಟೆಯಾಡಿ ಅದರ ಮಾಂಸವನ್ನು ಹೆಚ್ಚಿನ ಬೆಲೆಗೆ ಮಾರಿ ಲಾಭ ಪಡೆದುಕೊಂಡು ಮೂಡಬಿದ್ರೆ ಸುತ್ತಮುತ್ತ ಇರುವ ರಕ್ಷಿತ ಅರಣ್ಯಗಳಲ್ಲಿ  ವನ್ಯ ಮೃಗ ಜೀವಿಗಳ ಬೇಟೆಯಾಡುವುದೇ ವೃತ್ತಿಯನ್ನಾಗಿ ಮಾಡಿಕೊಂಡು, ಲಾಭಗಳಿಸುವ ಉದ್ದೇಶದಿಂದ ಮಾಂಸ ತಯಾರಿಸಲು ಕಸಾಯಿ ಖಾನೆಯಾಗಿ ಮಾಡಿಕೊಂಡಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

 

Last Updated: 21-08-2021 06:26 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080