ಅಭಿಪ್ರಾಯ / ಸಲಹೆಗಳು

Crime Reported in  Konaje PS

  ಪಿರ್ಯಾದಿ Abdul Naseer ದಾರರ ನಾಲ್ಕನೇಯ ತಂಗಿಯಾದ  ಕುಮಾರಿ ಸಂಶಾದ್ ಪ್ರಾಯ: 22 ವರ್ಷ ಎಂಬಾಕೆಯು ಕಣಚೂರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, . ನಿನ್ನೆ ದಿನಾಂಕ 16-10-2021 ರಂದು ಬೆಳಿಗ್ಗೆ 6-00 ಗಂಟೆಗೆ ಮಂಗಳೂರು ತಾಲೂಕು ಹರೇಕಳ ಗ್ರಾಮದ ಆಲಡ್ಕ ಎಂಬಲ್ಲಿ ತನ್ನ ಮನೆಯಿಂದ ಯಾರಿಗೂ ತಿಳಿಸದೇ  ಹೋಗಿದ್ದು, ಪಿರ್ಯಾದಿದಾರರು ವಾಪಾಸ್ಸು ಸಾಯಂಕಾಲ  ಮನೆಗೆ ಬಂದು ನೋಡಿದಾಗ ಸಂಶಾದ್ ಳು ಮನೆಯಲ್ಲಿ ಇರದೇ ಇದ್ದು  ಎಲ್ಲಾ ಕಡೆ  ಹುಡುಕಾಡಿದರೂ  ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ ಎಂಬಿತ್ಯಾದಿ

Crime Reported in  Bajpe PS    

“ದಿನಾಂಕ 17.10.2021 ರಂದು 15.50 ಗಂಟೆಗೆ ಪಿರ್ಯಾದಿ S Krishna ದಾರರು ತನ್ನ ಬಾಬ್ತು ಕಾರು ನಂಬ್ರ ಕೆಎ 20 ಎನ್ 4162 ನೇದರಲ್ಲಿ ತನ್ನ ಹೆಂಡತಿ ಹಾಗೂ ಮಕ್ಕಳೊಂದಿಗೆ ಬೋಂದೆಲ್ ಕಡೆಯಿಂದ ಬಜಪೆ ಮಾರ್ಗವಾಗಿ ಕಾರ್ಕಳ ಕಡೆಗೆ ಹೋಗುತ್ತಾ  ಮಂಗಳೂರು ತಾಲೂಕು ಬಜಪೆ ಗ್ರಾಮದ ತಾರಿಕಂಬ್ಳ ನೀರಿನ ಟ್ಯಾಂಕ್  ಬಳಿ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಬಜಪೆ ಕಡೆಯಿಂದ ಮಂಗಳೂರು ಕಡೆಗೆ ಬುಲೆಟ್ ಬೈಕ್ ನಂಬ್ರ ಕೆಎ 20 ಇಎಕ್ಸ್ 5313 ನೇದನ್ನು ಅದರ ಸವಾರ ಸೈಯ್ಯದ್ ಇಬ್ರಾಹಿಂ ರವರು ಅತೀ ವೇಗ ಹಾಗೂ ಅಜಾಗಗೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು  ಬಂದು ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರ ಕಾರಿನ ಎಡಬದಿಗೆ ಡಿಕ್ಕಿಯಾದ ಪರಿಣಾಮ ಬುಲೆಟ್ ಸವಾರ ರಸ್ತೆಗೆ ಬಿದ್ದು ಆತನ ಹಣೆಯ ಎಡಬದಿಗೆ ಮತ್ತು ತುಟಿಗೆ ಗಾಯವಾಗಿದ್ದು  ಅಪಘಾತದಿಂದ ಗಾಯಗೊಂಡ ಬುಲೆಟ್ ಸವಾರ ಚಿಕಿತ್ಸೆ ಬಗ್ಗೆ ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಅಪಘಾತಕ್ಕೆ ಬುಲೆಟ್ ಬೈಕ್ ನಂಬ್ರ ಕೆಎ 20 ಇಎಕ್ಸ್ 5313 ನೇದರ ಚಾಲಕ ಸೈಯ್ಯದ್ ಇಬ್ರಾಹಿಂ ರವರ ಅತೀ ವೇಗ ಹಾಗೂ ಅಜಾಗಗೂಕತೆಯ ಚಾಲನೆಯೇ ಕಾರಣವಾಗಿರುತ್ತದೆ” ಎಂಬಿತ್ಯಾದಿ

 

2) ಪಿರ್ಯಾದಿ Girish ದಾರರ ದೊಡ್ಡಮ್ಮನ ಮಗ  ಸತೀಶ, ಪ್ರಾಯ 31 ವರ್ಷ, ತಂದೆ: ತನಿಯ ಪೂಜಾರಿ, ಎಂಬವರು ಸುಮಾರು 8 ವರ್ಷಗಳಿಂದ ಪಿರ್ಯಾದಿದಾರರೊಂದಿಗೆ ವಾಸವಾಗಿದ್ದು, ಇತ್ತೀಚೆಗೆ 3 ವರ್ಷಗಳ ಹಿಂದೆ ಗಂಜಿಮಠದ ಶ್ವೇತಾ ಎಂಬಾಕೆಯನ್ನು ಮದುವೆಯಾಗಿದ್ದು, ಸುಮಾರು 1 ವರ್ಷಗಳಿಂದ ಸತೀಶ ಹಾಗೂ ಆತನ ಪತ್ನಿ ಶ್ವೇತಾ ರವರ ದಾಂಪತ್ಯದಲ್ಲಿ ತೊಡಕುಂಟಾಗಿರುತ್ತದೆ. ದಿನಾಂಕ: 18-10-2021  ರಂದು ಒಡ್ಡೂರಿನ ಜನಾರ್ಧನ ಎಂಬವರಿಗೆ ವಾಯ್ಸ್ ಮೆಸೇಜ್ ಮಾಡಿದ್ದು ಅದರಲ್ಲಿ ತನ್ನ ಮೋಟಾರ್ ಸೈಕಲ್ ಗುರುಪುರ ಸೇತುವೆ ಬಳಿ ಇರುವುದಾಗಿಯೂ ತಿಳಿಸಿ ನಂತರ ಕಾಣೆಯಾಗಿದ್ದು, ಅದರಂತೆ ಪಿರ್ಯಾದಿದಾರರು ಹಾಗೂ ಇತರರು ಅಲ್ಲಿ ಹೋಗಿ ನೋಡಲಾಗಿ ಸತೀಶ್ ರವರ ಮೋಟಾರ್ ಸೈಕಲ್ ಗುರುಪುರ ಸೇತುವೆ ಬಳಿ ಪತ್ತೆಯಾಗಿರುತ್ತದೆ. ಸತೀಶ್ ರವರು ದಿನಾಂಕ: 18-10-2021 ರಂದು ಬೆಳಗ್ಗೆ 07.00 ಗಂಟೆಗೆ ಒಡ್ಡೂರಿನ ಜನಾರ್ಧನ ಎಂಬವರಿಗೆ ವಾಯ್ಸ್ ಮೆಸೇಜ್ ಕಳುಹಿಸಿ ಮಂಗಳೂರು ತಾಲೂಕು, ಮೂಳೂರು ಗ್ರಾಮದ, ಗುರುಪುರ ಸೇತುವೆ ಬಳಿಯಿಂದ ಕಾಣೆಯಾಗಿದ್ದು, ಈವರೆಗೆ ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ ಎಂಬಿತ್ಯಾದಿ.

ಕಾಣೆಯಾದವರ ಚಹರೆ:-

ಹೆಸರು: ಸತೀಶ್, ಪ್ರಾಯ 31 ವರ್ಷ

ತಂದೆ: ತನಿಯ ಪೂಜಾರಿ

ಎತ್ತರ: 5 ಅಡಿ, ಎಣ್ಣೆ ಕಪ್ಪು ಮೈಬಣ್ಣ

 

Crime Reported in  Mangalore Rural PS

ಪಿರ್ಯಾದಿ Manohar Devadiga ದಾರರು ದಿನಾಂಕ 16/10/2021 ರಂದು ವಿಪರೀತ ಮಳೆ ಬಂದ ಕಾರಣ ರಾತ್ರಿ 09.00 ಗಂಟೆ ಸಮಯಕ್ಕೆ ತನ್ನ ಮನೆಯಾದ ಮಂಗಳೂರು ನಗರದ ಕುಡುಪು ಎಂಬಲ್ಲಿಯ ಮಂಗಳಾನಗರದ ಮನೆ ಎದುರಿನ ಕಚ್ಚಾ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆದಿದ್ದು ಮಳೆ ಬಂದ ಕಾರಣ ನೀರು ಹೋಗಲು ಜಾಗವಿರದೆ ಪಿರ್ಯಾದಿದಾರರು ಮತ್ತು ಹತ್ತಿರದ ಶಶಿಕಲಾ ಎಂಬವರ ಮನೆಗೆ ನೀರು ಬಂದಿದ್ದು ಈ ಬಗ್ಗೆ ಸರಿಪಡಿಸಲು ಪಿರ್ಯಾದಿದಾರರು ಹೋಗಿದ್ದು ಆ ಸಮಯ ನೆರೆಯ ಗಣೇಶ ಮತ್ತು ಅವರ ಅಕ್ಕ ಮಂಜುಳಾ ಎಂಬವರು ನೀರಿನ ವಿಚಾರದಲ್ಲಿ ತಕರಾರು ಮಾಡಿದಾಗ ಅಲ್ಲಿನ ಸ್ಥಳಿಯರು ಬಂದು ಅವರನ್ನು ಸಮಾಧಾನ ಮಾಡಿ ಕಳಿಸಿಕೊಟ್ಟಿರುತ್ತಾರೆ ಆದರೆ ದಿನಾಂಕ 17/10/2021 ರಂದು ಬೆಳಿಗ್ಗೆ ಪಿರ್ಯಾದಿದಾರರು ಸಾಗರ ಎಂಬವರ ಮಗನೊಂದಿಗೆ ಬೆಳಿಗ್ಗೆ 08.00 ರ ಸಮಯಕ್ಕೆ ಅಂಗಡಿಗೆ ಹೋಗುವಾಗ ಗಣೇಶನು ಹಿಂಬದಿಯಿಂದ ಬಂದು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ “ನಿನ್ನೆ ಬಾರಿ ರಾತ್ರಿ ನನ್ನ ಜೊತೆ ಜಗಳ ಮಾಡಿದಿಯ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ “ ಎಂದು ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೆ ಬಿದ್ದಿದ್ದ ಅಲ್ಯುಮಿನಿಯಂ ರಾಡ್ ನಿಂದ ತಲೆಗೆ ಹೊಡೆಯಲು ಬಂದಾಗ ತಡೆಯಲೆಂದು ಪಿರ್ಯಾದಿದಾರರು ತಮ್ಮ ಎಡಕೈಯನ್ನು ಅಡ್ಡ ಹಿಡಿದಿದ್ದು ಆಗ ಎಡಕೈಯ ಕೋಲುಕೈಯಲ್ಲಿ ರಕ್ತಸ್ರಾವವಾಗಿರುತ್ತದೆ ಪಿರ್ಯಾದಿದಾರರನ್ನು ನೆರೆಕರೆಯವರಾದ ಕಾರ್ತಿಕ್ ಎಂಬವರು ಆಟೋರಿಕ್ಷಾದಲ್ಲಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಆದುದರಿಂದ ರಸ್ತೆ ಕಾಮಗಾರಿಕೆಯ ಒಳಚರಂಡಿಯ ವಿಚಾರದಲ್ಲಿ ತಕರಾರು  ಮಾಡಿದ ಗಣೇಶನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬಿತ್ಯಾದಿ.

Crime Reported in  Kankanady Town PS

ಫಿರ್ಯಾದಿ Rajesh (50) ದಾರರ ತಂಗಿಯ ಮಗ ಧನುಷ್ ( 20 ವರ್ಷ)  ಎಂಬಾತನು ಫಿರ್ಯಾದಿದಾರರ ಮನೆಯ ಬಳಿ ಪಚ್ಚೆನಾಡಿಯ ಶಿವಾಜಿನಗರದಲ್ಲಿ ವಾಸವಾಗಿದ್ದು, ಪೈಂಟಿಂಗ್‌ ಕೆಲಸ ಮಾಡುವುದಾಗಿದೆ, ನಿನ್ನೆ ದಿನಾಂಕ 15/10/2021 ರಂದು ರಾತ್ರಿ ಮಂಗಳೂರು ನಗರದ ಕಪಿತಾನಿಯದಲ್ಲಿರುವ ಸಾಯಿ ಪ್ಯಾಲೇಸ್‌ ಲಾಡ್ಜ್‌ ನ ರೂಮ್‌ ನಂಬ್ರ 101 ರಲ್ಲಿ  ಗೆಳೆಯರಾದ ಜೇಸನ್ ಸುರತ್ಕಲ್, ಪ್ರಮೀತ್ ಜೆಪ್ಪು, ಕಾರ್ತಿಕ್‌ ವಾಮಂಜೂರು, ಪ್ರಜ್ವಲ್‌ ಪಚ್ಚೆನಾಡಿ, ದುರ್ಗೆಶ್‌ ಪಚ್ಚನಾಡಿ, ಹೃತಿಕ್  ಎಂಬವರ ಜೊತೆ ಮಧ್ಯಪಾನ ಮಾಡಿ ಮಜಾ ಮಾಡುತ್ತಿದ್ದಂತೆ, ಈ ದಿನ ಮುಂಜಾನೆ 01.30 ಗಂಟೆಯಿಂದ 01.45 ಗಂಟೆಯ ಮಧ್ಯ ಅವರೊಳಗೆ ಗಲಾಟೆಯಾಗಿ ಎಲ್ಲರೂ ಸೇರಿ ಕೈಯಿಂದ ಧನುಷ್‌ ಗೆ ಹೊಡೆಯುತ್ತಿದ್ದಂತೆ, ಜೇಸನ್ ಎಂಬಾತನು ಚೂರಿಯಿಂದ ಧನುಷ್ ನ ಎದೆಯ ಎಡಭಾಗಕ್ಕೆ ಎರಡು ಬಾರಿ ಚುಚ್ಚಿ ಕೊಲೆಗೆ ಯತ್ನಿಸಿದ್ದು, ತೀವೃ ರಕ್ತಗಾಯಗೊಂಡ ಧನುಷ್‌ನನ್ನು ನಂತರ ಅವರೇ ಒಂದು ವಾಹನದಲ್ಲಿ  ಚಿಕಿತ್ಸೆಯ ಬಗ್ಗೆ ಪಂಪ್‌ವೆಲ್‌ನ ಇಂಡಿಯಾನಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಧನುಷ್‌ನು ಮೃತಪಟ್ಟಿರುವ ವಿಚಾರ ತಿಳಿದು ಆರೋಪಿಗಳು  ಅಲ್ಲಿಂದ ಪರಾರಿಯಾಗಿದ್ದು, ಈ ಬಗ್ಗೆ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗಿ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 18-10-2021 07:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080