Crime Reported in Urva PS
ಪಿರ್ಯಾದಿ Dhanraj ದಾರರು ದಿನಾಂಕ 16-11-2021 ರಂದು ಬೆಳಿಗ್ಗೆ KA-19-D-2671 ರೂಟ್ ನಂಬ್ರ 1ಬಿ ಅವೆಮಾರಿಯ ಬಸ್ ನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಸಂಜೆ 4-05 ಗಂಟೆಗೆ ಬಸ್ ನ್ನು ಕೋಡಿಕಲ್ ಕ್ರಾಸ್ ನಲ್ಲಿ ಚಲಾಯಿಸಿಕೊಂಡು ಬರುತ್ತಿದ್ದಾಗ ರಸ್ತೆ ಮಧ್ಯೆ KA-19-MF-3034 ನೇ ಎಕ್ಸ್ ಯು ವಿ ಕಾರನ್ನು ಅದರ ಚಾಲಕನು ನಿಲ್ಲಿಸಿದ್ದು ತಾನು ಬದಿಗೆ ಹೋಗುವಂತೆ ಆತನಿಗೆ ಹಾರನ್ ಹಾಕಿ ಸೂಚಿಸಿದಂತೆ ಆತನು ಕಾರಿನ ಗ್ಲಾಸನ್ನು ಸರಿಸಿ ತನ್ನನ್ನು ಕೆಕ್ಕರಿಸಿ ನೋಡಿದ್ದಾಗಿ ಬಳಿಕ ನಿಧಾನವಾಗಿ ಕಾರನ್ನು ಚಲಾಯಿಸಿಕೊಂಡು ಮುಂದೆ ಹೊದುದಾಗಿಯು ತಾನು ಬಸ್ಸನ್ನು ಹಿಂದಿನಿಂದ ಚಲಾಯಿಸಿಕೊಂಡು ಹೋಗುತ್ತ ಸಂಜೆ 4-07 ಗಂಟೆಗೆ ವಿವೇಕಾನಂದ ನಗರ ಕ್ರಾಸ್ ಬಳಿ ತಲುಪಿದಾಗ ಸದರಿ ಕಾರಿನ ಚಾಲಕನು ಕಾರನ್ನು ತನ್ನ ಬಸ್ ಗೆ ಅಡ್ಡವಾಗಿ ನಿಲ್ಲಿಸಿ ತಡೆದು ಕಾರಿನಿಂದ ಕೆಳಗಿಳಿದ ಚಾಲಕನು ನೇರವಾಗಿ ಬಸ್ ನೊಳಗೆ ಬಂದು ತನ್ನ ಕಾಲರ್ ಪಟ್ಟಿಯನ್ನು ಹಿಡಿದೆಳೆದು “ಬೇವರ್ಶಿ ನಿನಗೆ ಜೀವ ಎಳೆಯುತ್ತದೆಯಾ ನಿನ್ನನ್ನು ಬಿಡುವುದಿಲ್ಲ ಕೋಡಿಕಲ್ ರೂಟ್ ನಲ್ಲಿ ನೀನು ಹೇಗೆ ಕೆಲಸ ಮಾಡುತ್ತೀಯಾ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೈದು ಬೆದರಿಸಿ ಕೈಯಿಂದ ಹೊಡೆದು ಹಲ್ಲೆ” ಮಾಡಿರುವುದಾಗಿದೆ. ಎಂಬಿತ್ಯಾದಿ
2) ದಿನಾಂಕ 16/17-11-2021 ರಂದು ಪಿರ್ಯಾದಿ ಊರ್ವ ಠಾಣಾ ಪೊಲೀಸ್ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿರುತ್ತಾ, ಮಾಹಿತಿ ಮೇರೆಗೆ ದಿನಾಂಕ 17-11-2021 ರಂದು ಮುಂಜಾನೆ 04-00 ಗಂಟೆಗೆ ಮಂಗಳೂರು ನಗರದ ಬಿಜೈ ಕಾಪಿಕಾಡ್ ಬಳಿ ತಲುಪಿದಾಗ ಬಿಜೈ ಕಾಪಿಕಾಡ್ ಸಾರ್ವಜನಿಕ ಸ್ಥಳದ ಖಾಲಿ ಜಾಗದಲ್ಲಿ ಯುವಕರು ಸೇರಿ ಸಿಗರೇಟನ್ನು ಸೇದುತ್ತಿದುದ್ದನ್ನು ಕಂಡು ಫಿರ್ಯಾಧುದಾರರು ಹಾಗೂ ಸಿಬ್ಬಂದಿಗಳು ವಾಹನದಿಂದ ಇಳಿದು ಹತ್ತಿರ ಹೋಗಿ ವಿಚಾರಿಸಿದಲ್ಲಿ ಅವರು ಅಸ್ಪಷ್ಟವಾಗಿ ತೊದಲು ನುಡಿಯಲ್ಲಿ ಉತ್ತರವನ್ನು ನೀಡಿದ್ದು, ಅವರು ಮಾತನಾಡುವಾಗ ಬಾಯಿಯಿಂದ ಗಾಂಜಾ ಸೇವನೆ ಮಾಡಿರುವ ವಾಸನೆ ಬರುತ್ತಿದ್ದು, ಅವರನ್ನು ಕೂಲಂಕುಷವಾಗಿ ವಿಚಾರಿಸಿ ಹೆಸರು ವಿಳಾಸವನ್ನು ಕೇಳಿದಾಗ ಅವರ ಹೆಸರು 1) ರುತಿನ್(20) 2) ಹರಿಕೃಷ್ಣನ್ ಕೆ.ಆರ್ (22) 3) ಆಕಾಶ್ .ಕೆ.(19) 4) ಅಕ್ಷಯ್ (20) 5) ಮಾರ್ಟಿನ್ (20) ಎಂಬವರಾಗಿದ್ದು ಅವರುಗಳು ಶ್ರೀ ದೇವಿ ಇಂಜನಿಯರಿಂಗ್ ಕಾಲೇಜು, ಕೆಂಜಾರು, ಮಂಗಳೂರು, ಇಲ್ಲಿನ ವಿದ್ಯಾರ್ಥಿಗಳೆಂದು ತಿಳಿಸಿದ್ದು, ಅವರು ಗಾಂಜಾ ಸೇವನೆ ಮಾಡಿದ್ದನ್ನು ಒಪ್ಪಿಕೊಂಡ ಮೇರೆಗೆ ಆವರನ್ನು ವಶಕ್ಕೆ ಪಡೆದುಕೊಂಡು ಕುಂಟಿಕಾನ ಎ.ಜೆ ಆಸ್ಪತ್ರೆಯ ವೈದ್ಯಾದಿಕಾರಿಯವರಿಂದ ಪರೀಕ್ಷೆಗೊಳಪಡಿಸಿದಲ್ಲಿ ಗಾಂಜಾ ಸೇವನೆ ಮಾಡಿರುವುದು ಧಡಪಟ್ಟಿರುವ ಹಿನ್ನೆಲೆಯಲ್ಲಿ ಅವರುಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ
3) ದಿನಾಂಕ 16/17-11-2021 ರಂದು ಪಿರ್ಯಾದಿ ಊರ್ವ ಠಾಣಾ ಪೊಲೀಸ್ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿರುತ್ತಾ, ಮಾಹಿತಿ ಮೇರೆಗೆ ದಿನಾಂಕ 17-11-2021 ರಂದು ಮುಂಜಾನೆ 05-00 ಗಂಟೆಗೆ ಮಂಗಳೂರು ನಗರದ ಉರ್ವ ಠಾಣಾ ವ್ಯಾಪ್ತಿಯ ಕೊಟ್ಟಾರ ಕ್ರಾಸ್ ಬಳಿ ತಲುಪಿದಾಗ ಕೊಟ್ಟಾರ ಕ್ರಾಸ್ ಸಾರ್ವಜನಿಕ ಸ್ಥಳದ ಖಾಲಿ ಜಾಗದಲ್ಲಿ ಓರ್ವ ವ್ಯಕ್ತಿಯು ಸಿಗರೇಟನ್ನು ಸೇದುತ್ತಿದುದ್ದನ್ನು ಕಂಡು ವಾಹನದಿಂದ ಇಳಿದು ಹತ್ತಿರ ಹೋಗಿ ವಿಚಾರಿಸಿದಲ್ಲಿ ಆತನು ಮಾತನಾಡುವಾಗ ಬಾಯಿಯಿಂದ ಗಾಂಜಾ ಸೇವನೆ ಮಾಡಿರುವ ವಾಸನೆ ಬರುತ್ತಿದ್ದು, ಆತನನ್ನು ವಿಚಾರಿಸಿ ಹೆಸರು ವಿಳಾಸವನ್ನು ಕೇಳಿದಾಗ ಆತನ ಹೆಸರು ವಸಂತ ಕುಮಾರ್, ಪ್ರಾಯ 42 ವರ್ಷ, ವಾಸ: ಡೋರ್. ನಂ. 5-8/510, ಯೂನಿವರ್ಸಲ್ ಗ್ಯಾರೇಜ್ ಹಿಂಭಾಗ, ದಡ್ಡಲ್ ಕಾಡ್, ದೇರೆಬೈಲ್, ಮಂಗಳೂರು, ಎಂದು ತಿಳಿಸಿದ್ದು, ಆತನು ಗಾಂಜಾ ಸೇವನೆ ಮಾಡಿದ್ದನ್ನು ಒಪ್ಪಿಕೊಂಡ ಮೇರೆಗೆ ಆತನನ್ನು ವಶಕ್ಕೆ ಪಡೆದುಕೊಂಡು ಕುಂಟಿಕಾನ ಎ.ಜೆ ಆಸ್ಪತ್ರೆಯ ವೈದ್ಯಾದಿಕಾರಿಯವರಿಂದ ಪರೀಕ್ಷೆಗೊಳಪಡಿಸಿದಲ್ಲಿ ಗಾಂಜಾ ಸೇವನೆ ಮಾಡಿರುವುದು ಧಡಪಟ್ಟಿರುವ ಹಿನ್ನೆಲೆಯಲ್ಲಿ ಅವರುಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ
Crime Reported in Mangalore East PS
ಪಿರ್ಯಾದಿದಾರರಾದ ನಿತೇಶ್ ರವರು ತನ್ನ ಬಾಬ್ತು ಕೆಎ 19-ಆರ್- 2857 ನೇ ಯಮಹಾ ಬೈಕ್ ನ್ನು ದಿನಾಂಕ: 19-10-2021 ರಂದು ಮದ್ಯಾಹ್ನ 12-00 ಗಂಟೆಗೆ ಮಂಗಳೂರು ನಗರದ ಮೌರಿಷ್ಕಾ ಟವರ್ ನ ಎದುರು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದು, ನಂತರ ಮರು ದಿನ ಅಂದರೆ ದಿನಾಂಕ: 20-10-2021 ರಂದು ಬೆಳಿಗ್ಗೆ 10-00 ಗಂಟೆಗೆ ನೋಡಿದಾಗ ಬೈಕ್ ಇಲ್ಲದೇ ಇದ್ದು, ಈ ಬೈಕನ್ನು ದಿನಾಂಕ: 19-10-2021 ರಂದು ರಾತ್ರಿ 12-00 ಗಂಟೆ ಯಿಂದ ದಿನಾಂಕ: 20-10-2021 ರಂದು ಬೆಳಿಗ್ಗೆ 10-00 ಗಂಟೆ ಮಧ್ಯೆ ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿದ್ದು, ಇದರ ಮೌಲ್ಯ ರೂ: 10,000/- ಆಗಬಹುದು. ಮಾಡೆಲ್- 2003, ಬಣ್ಣ: ಕಪ್ಪು ಆಗಿರುತ್ತದೆ. ಪಿರ್ಯಾದಿದಾರರು ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದ ಕಾರಣ ಮತ್ತು ಕಳವಾದ ತನ್ನ ಬೈಕ ನ್ನು ನಗರದ ಎಲ್ಲಾ ಕಡೆ ಹುಡಕಾಡಿದ್ದು, ಪತ್ತೆಯಾಗದ ಕಾರಣ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ.
Crime Reported in Moodabidre PS
ಪಿರ್ಯಾದಿ SHANKARA ದಾರರು ದಿನಾಂಕ: 17-11-2021 ರಂದು ಕೆಎ-19-ಎಬಿ-3444 ನಂಬ್ರದ ಅಟೋರಿಕ್ಷಾದಲ್ಲಿ ಪ್ರಯಾಣಿಸುತ್ತಾ ಮೂಡಬಿದ್ರೆ ತಾಲೂಕು ಮಾರ್ಪಾಡಿ ಗ್ರಾಮದ ಮೂಡಬಿದ್ರೆ ನ್ಯೂಪಡಿವಾಳ್ಸ್ ಹೊಟೇಲಿನ ಮುಂಭಾಗಕ್ಕೆ ತಲುಪುವಾಗ ಸಾಯಂಕಾಲ ಸುಮಾರು 6-10 ಗಂಟೆಗೆ ಅಟೋರಿಕ್ಷಾದ ಮುಂದಿನಿಂದ ಹೋಗುತ್ತಿದ್ದ ಕಾರನ್ನು ಅದರ ಚಾಲಕರು ಬ್ರೇಕ್ ಹಾಕಿ ನಿಲ್ಲಿಸಿದಾಗ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಅಟೋರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದ ಅದರ ಚಾಲಕರು ಒಮ್ಮೆಲೇ ಬ್ರೇಕ್ ಹಾಕಿ ನಿಲ್ಲಿಸಿದಾಗ ಆ ಅಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರು ಅಟೋರಿಕ್ಷಾದಿಂದ ಹೊರಗೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡಕೈಯ ಮೂಳೆ ಮುರಿತವಾಗಿದವರು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ದಾಖಲಾಗಿರುವುದು
Crime Reported in Mangalore Rural PS
ಪಿರ್ಯಾದಿ AJEETH S (56) ದಾರರು ತಮ್ಮ ಸಂಸಾರದೊಂದಿಗೆ ಮಾತಾಶ್ರಯ ನಿಲಯ ಪಚ್ಚನಾಡಿ ಮಂಗಳೂರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು CISF ನಲ್ಲಿ ಸಬ್ ಇನ್ಸ್ ಪೆಕ್ಟರ್ ರಾಗಿ ಕೆಲಸ ನಿರ್ವಹಿಸಿಕೊಂಡಿರುತ್ತಾರೆ. ಪಿರ್ಯಾದಿದಾರರ ಮಗನಾದ ಆಕಾಶ್.ಎ (20) ಎಂಬವನು ಬಾಲ್ಯದಿಂದಲೂ ತೊದಲು ಮಾತನಾಡುತ್ತಿರುತ್ತಾನೆ. ಈತನು ಕಳೆದ 2 ವರ್ಷಗಳಿಂದ ಮನೆಯಲ್ಲಿದ್ದುಕೊಂಡಿದ್ದು ದಿನಾಂಕ 17/11/2021 ರ ಬೆಳಿಗ್ಗೆ 10.30 ಗಂಟೆಗೆ ಮಂಗಳೂರಿನ ಬೋಂದೆಲ್ ಜಂಕ್ಷನ್ ಬಳಿ ಹಾಲು ಮೊಸರು ತರಲೆಂದು ತೆರಳಿದವನು ಮನೆಗೆ ಬಾರದೆ ಕಾಣೆಯಾಗಿದ್ದು ಈತನ ಬಗ್ಗೆ ಹತ್ತಿರದ ಸುತ್ತಮುತ್ತಲು ಪರಿಚಯದವರಲ್ಲಿ ಹುಡುಕಾಡಿದ್ದು ಇದುವರೆಗೂ ಪತ್ತೆಯಾಗಿರುವುದಿಲ್ಲ ಕಾಣೆಯಾದ ತಮ್ಮ ಮಗನನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂಬಿತ್ಯಾದಿ
ಕಾಣೆಯಾದವರ ಚಹರೆ ವಿವರ
ಹೆಸರು: ಆಕಾಶ್ ಎ,
ಪ್ರಾಯ: 20 ವರ್ಷ
ಎತ್ತರ 165 ಸೆಂ.ಮಿ, ಎಣ್ಣೆಗಪ್ಪು ಮೈಬಣ್ಣ, ಕಪ್ಪು ಕೂದಲು
Crime Reported in Ullal PS
ಪಿರ್ಯಾದಿ Althaf ದಾರರ ತಂಗಿ ತಸ್ಲೀಮಾ (30) ಎಂಬುವರು ದಿನಾಂಕ 16-11-2021 ರಂದು ಬೆಳಿಗ್ಗೆ 11-30 ಗಂಟೆಗೆ ಆಕೆಯ ಸಣ್ಣ ಮಗು ಸಾರಾ (2) ಎಂಬುವಳನ್ನು ಜೋತೆಯಲ್ಲಿ ಕರೆದುಕೊಂಡು ಮಂಗಳೂರು ಕಾರ್ಮಿಲ್ ಶಾಲೆಯಲ್ಲಿ ಮಿಟಿಂಗ್ ಇದೆ ಎಂದು ಮಂಗಳೂರಿಗೆ ಹೊದವಳು ಶಾಲೆಗೆ ಹೋಗದೇ, ಮನೆಗೂ ವಾಪಾಸು ಬಾರೆದೆ ಮಗುವಿನೊಂದಿಗೆ ಕಾಣೆ ಯಾಗಿರುತ್ತಾಳೆ.ಅವರ ಗಂಡ ಸಂಶಿರ್ ಹಾಗೂ ಮನೆಯವರು ಈತನಕ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ ಎಂಬಿತ್ಯಾದಿ