ಅಭಿಪ್ರಾಯ / ಸಲಹೆಗಳು

Crime Reported in Kavoor PS

 ದಿನಾಂಕ 18/01/2022 ರಂದು ಮಧ್ಯಾಹ್ನ 12.00 ರ ವೇಳೆಗೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತೀಯ ಮರಕಡ ಜಂಕ್ಷನ್ ಬಳಿಯ ಹೊಸ ಕಟ್ಟಡದ ಎದುರಿನ ಏರ್ ಪೋರ್ಟ್ ರಸ್ತೆಯಲ್ಲಿ ಪಿರ್ಯಾದಿ ಮೊಹಮ್ಮದ್ ಇರ್ಷಾದ್ ರವರನ್ನು ಆಪಾದಿತ ಮುನೀರ್ ಎಂಬವನು ಅವಾಚ್ಯ ಶಬ್ದಗಳಿಂದ ಬೈದು ಕಾರಿನಿಂದ ಕೆಳಗಿಳಿಸಿ ಯಾವುದೋ ಹಳೆಯ ದ್ವೇಷದಿಂದ ಕಬ್ಬಿಣದ ರಾಡಿನಿಂದ ಪಿರ್ಯಾದಿದಾರರ ತಲೆಯ ಎಡ ಬಲ ಎದುರು ಅಲ್ಲಲ್ಲಿ ಹೊಡೆದು ರಕ್ತ ಗಾಯ ಉಂಟುಮಾಡಿ ಹಲ್ಲೆಗೊಳಿಸಿ ಜೀವಬೇದರಿಕೆ  ಉಂಟುಮಾಡಿರುತ್ತಾರೆ, ಎಂಬಿತ್ಯಾದಿ.

Crime Reported in Ullal PS

ಪಿರ್ಯಾದಿ ರಿಯಾಜ್ ರವರ ಹೆಸರಿನಲ್ಲಿರುವ KA-19 HA-2384 ನೇ ನಂಬ್ರದ TVS Apache ಮೋಟಾರು ಬೈಕ್ ನ್ನು ದಿನಾಂಕ 11-01-2022ರಂದು ರಾತ್ರಿ 10-00 ಗಂಟೆಗೆ ಉಳ್ಳಾಲದ ಬಸ್ತಿಪಡ್ಪುನಲ್ಲಿರುವ ಪ್ಲಾಟ್ ನ ಬಳಿಯ ಕಂಪೌಂಡ್ ಬದಿಯಲ್ಲಿ ಹ್ಯಾಂಡ್ ಲಾಕ್ ಹಾಕಿ ಪಾರ್ಕ್ ಮಾಡಿ, ಪಿರ್ಯಾದಿದಾರರು ತಮ್ಮ ತಮ್ಮನ ಜೊತೆಗೆ ಮನೆಗೆ ತೆರಳಿದ್ದು, ಮರು ದಿನ ದಿನಾಂಕ 12-01-2022 ರಂದು ಬೆಳಿಗ್ಗೆ 6-00 ಗಂಟೆಯ ಸಮಯಕ್ಕೆ ನಿಲ್ಲಿಸಿದ್ದ ಮೋಟಾರು ಬೈಕ್ ನ ಬಳಿಗೆ ಬಂದು ನೋಡಿದಾಗ ಮೋಟಾರು ಬೈಕ್ ಕಾಣಿಸದೇ ಇದ್ದು, ಅಲ್ಲೇ ಅಕ್ಕಪಕ್ಕದಲ್ಲಿ ಹುಡುಕಾಡಿದ್ದು ಎಲ್ಲಿಯೂ ಕಂಡು ಬಂದಿರುವುದಿಲ್ಲ. ಮೋಟಾರು ಬೈಕ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಬೈಕ್ ನ್ನು ಅಂದಿನಿಂದ ಇಂದಿನ ತನಕ ಹುಡುಕಾಡಿದ್ದು ,ವಿಚಾರಿಸಿಕೊಂಡಿದ್ದು, ಆದರೆ ಮೋಟಾರು ಬೈಕ್ ಪತ್ತೆಯಾಗಿರುವುದಿಲ್ಲ. ಅಲ್ಲದೇ ಮೋಟಾರು ಬೈಕ್ ನ್ನು ತೆಗೆದುಕೊಂಡು ಹೋದವರು ಪುನಃ ಅಲ್ಲಿಯೇ ತಂದು ಇಡಬಹುದೆಂದು ತಿಳಿದು ಈತನಕ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಕಳವಾದ ಪಿರ್ಯಾದಿದಾರರ ಬಾಬ್ತು KA-19 HA-2384 ನೇ ನಂಬ್ರದ TVS Apache ಮೋಟಾರು ಬೈಕ್ ನ ಅಂದಾಜು ಮೌಲ್ಯ 60,000/- ಆಗಬಹುದು.ಎಂಬಿತ್ಯಾದಿ.

Crime Reported in Panambur PS

ಪಿರ್ಯಾದಿದಾರರ  ಗಂಡ ಗಿರೀಶ್ ಪ್ರಾಯ: 27 ವರ್ಷ ರವರು ಅವರ 4 ವರ್ಷದ ಮಗಳೊಂದಿಗೆ  ದಿನಾಂಕ: 19-01-2021 ರಂದು ಬೆಳಿಗ್ಗಿನ ಜಾವ ಸುಮಾರು 3.30 ಗಂಟೆಗೆ ಪಣಂಬೂರು ಠಾಣಾ ಸರಹದ್ದಿನ  ಕಿಸ್ಕೋ ಕಂಪನಿಯ ಎದುರು ಫಲ್ಗುಣಿ  ನದಿ ತೀರದ ಗುಡಿಸಲಿನಿಂದ  ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಕಾಣೆಯಾದ ಪಿರ್ಯಾದುದಾರರ ಗಂಡ ಗಿರೀಶ್ ಮತ್ತು ಮಗಳು ಸ್ವಪ್ನಾ ಎಂಬಾಕೆಯನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿಯಾಗಿ ಪಿರ್ಯಾದಿಯ ಸಾರಾಂಶವಾಗಿರುತ್ತದೆ.

Crime Reported in Mangalore East Traffic PS

ದಿನಾಂಕ: 19-01-2022  ರಂದು ಸಮಯ ಸುಮಾರು ಬೆಳಿಗ್ಗೆ 07.50 ಗಂಟೆಗೆ ಪಿರ್ಯಾದಿದಾರರಾದ  ತಾಯಿ ಶ್ರೀಮತಿ ಮೋಹಿನಿ  ಬಿ ಎ ಶೆಟ್ಟಿ (74) ರವರು ಮಲ್ಲಿಕಟ್ಟೆ ಕಡೆಗೆ ಹೋಗುವ ಸಲುವಾಗಿ ಆಟೋರಿಕ್ಷಾ ಹತ್ತುವ ಸಲುವಾಗಿ  ಬಿಕರ್ನಕಟ್ಟೆ ಬಳಿಯ ಬಸ್ ಸ್ಟಾಪ್ ಬಳಿ  ರಸ್ತೆ ದಾಟುತ್ತಿದ್ದ ವೇಳೆ  KA-19-ML-9750  ನಂಬ್ರದ ಕಾರನ್ನು ಅದರ ಚಾಲಕ  ಸಾದಿಕ್ ಎಂಬಾತನು ರಾ ಹೆದ್ದಾರಿ 73 ನೇ ಡಾಮಾರು ರಸ್ತೆಯಲ್ಲಿ  ಬಿಕರ್ನಕಟ್ಟೆ ಕೈಕಂಬ ಕಡೆಯಿಂದ ನಂತೂರು ಕಡೆಗೆ  ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ  ಪಾದಚಾರಿ ಶ್ರೀಮತಿ ಮೋಹಿನಿ ಎ ಶೆಟ್ಟಿರವರ ಎಡಬದಿಗೆ ಡಿಕ್ಕಿ ಪಡಿಸಿದ ಪರಿಣಾಮ,ಸದ್ರಿಯವರು ಡಾಮಾರು ರಸ್ತೆಗೆ ಬಿದ್ದು,ಬಲಕಾಲಿಗೆ,ಬಲ ಕಣ್ಣಿನ ಬಳಿ ಹಾಗೂ ಹಣೆಯ ಬಳಿ ಗಾಯವಾಗಿದ್ದು, ಅಪಘಾತ ಪಡಿಸಿದ ಕಾರಿನ ಚಾಲಕನು ಸದ್ರಿಯವರನ್ನು ಚಿಕಿತ್ಸೆಯ ಬಗ್ಗೆ  ಸಿಟಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.ಸದ್ರಿ ಅಪಘಾತ ಪಡಿಸಿದ KA-19-ML-9750  ಕಾರಿನ ಚಾಲಕನ ಮೇಲೆ  ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ ಕೋರಿಕೆ ಎಂಬಿತ್ಯಾದಿ.

Crime Reported in Traffic North PS

ದಿನಾಂಕ 17-01-2022 ರಂದು ಪಿರ್ಯಾದಿದಾರರ ಅಣ್ಣ ಜೋನ್ ಕುಟಿನ್ಹೋ (57) ರವರು ಹಳೆಯಂಗಡಿ ಸಮೀಪ ಕೂಲಿ ಕೆಲಸ ಮುಗಿಸಿಕೊಂಡು ವಾಪಾಸು ಮನೆ ಕಡೆಗೆ ಬರುವ ಸಲುವಾಗಿ ಹಳೆಯಂಗಡಿ ಜಂಕ್ಷನ್ ಸಮೀಪದ ಚೈನೀಸ್ ಫಾಸ್ಟ್ ಫುಡ್ ಅಂಗಡಿ ಸಮೀಪ NH 66 ನೇ ಡಾಮಾರು ರಸ್ತೆಯನ್ನು ದಾಟುತ್ತಾ ರಸ್ತೆಯ ಇನ್ನೊಂದು ಬದಿಗೆ ಸಮೀಪಿಸುತ್ತಿದ್ದಂತೆ ಸಂಜೆ ಸಮಯ ಸುಮಾರು 5:30 ಗಂಟೆಗೆ ಪಾವಂಜೆ ಜಂಕ್ಷನ್ ಕಡೆಯಿಂದ ಹಳೆಯಂಗಡಿ ಜಂಕ್ಷನ್ ಕಡೆಗೆ KA-20-EL-9742 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರನಾದ ಪ್ರಶಾಂತ್ ಕುಮಾರ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ NH 66ನೇ ಡಾಮಾರು ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ಜೋನ್ ಕುಟಿನ್ಹೋ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ತಲೆಯ ಹಿಂಭಾಗಕ್ಕೆ ಗುದ್ದಿದ ರೀತಿಯ ಒಳ ಗಾಯವಾಗಿದ್ದು ಅಲ್ಲದೇ ಬಲಕಾಲಿನ ಕೋಲುಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

Crime Reported in Traffic South PS

ದಿನಾಂಕ: 18-01-2022 ರಂದು ಪಿರ್ಯಾದಿದಾರರ ಗಂಡನಾದ ಲೂವಿಸ್ ಡಿಸೋಜಾ ರವರು ಕೂಲಿ ಕೆಲಸಕ್ಕೆ ಉಳ್ಳಾಲಕ್ಕೆ ಹೋಗಿದ್ದು ಅಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ಸು ಉಳ್ಳಾಲ ಕಡೆಯಿಂದ ಕುತ್ತಾರ್ ಕಡೆಗೆ ಅವರ ಸೈಕಲ್ ಸವಾರಿ ಮಾಡಿಕೊಂಡು ಹೊಗುತ್ತಾ ಸಮಯ ಸುಮಾರು ಸಂಜೆ 3-45 ಗಂಟೆಗೆ ಪಂಡಿತ್ ಹೌಸ್ ಏರು ಡಾಮಾರು ರಸ್ತೆಯಲ್ಲಿ ತಲುಪಿದಾಗ ಸೈಕಲ್ ನಿಂದ ಇಳಿದು ಸೈಕಲ್ ದೂಡಿಕೊಂಡು ರಸ್ತೆಯ ಎಡಬದಿಯಲ್ಲಿ ಹೊಗುತ್ತಿರುವಾಗ  ಹಿಂದಿನಿಂದ ಅಂದರೆ ತೊಕ್ಕೊಟ್ಟು ಕಡೆಯಿಂದ ಕುತ್ತಾರ್ ಕಡೆಗೆ ಹೊಗುತ್ತಿದ್ದ ಟಿಪ್ಪರ್ ಲಾರಿ ನಂಬ್ರ KA-19-AD-0043 ನೇದನ್ನು ಅದರ ಚಾಲಕ ಇಬ್ರಾಹಿಂ ಖಲೀಲ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡುಹೋಗಿ  ಸೈಕಲ್ ದೂಡಿಕೊಂಡು ಹೊಗುತ್ತಿದ್ದ ಪಿರ್ಯಾದಿದಾರರ ಗಂಡನ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರ ಗಂಡ ಲೂವಿಸ್ ಡಿಸೋಜಾ ರವರು ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಬಲಕೈ ಅಂಗೈ ಮೇಲೆ ಮೂಳೆ ಮುರಿತದ ಗಾಯ ಹಾಗೂ ಎಡಕೈ ಅಂಗೈ ಗೆ ತರಚಿದ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಹಾಗೂ ಡಿಕ್ಕಿಪಡಿಸಿದ ಟಿಪ್ಪರ್ ಲಾರಿ ಚಾಲಕ ಸೇರಿ ಚಿಕಿತ್ಸೆ ಬಗ್ಗೆ ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಎಂಬಿತ್ಯಾದಿ.

Crime Reported in Mangalore South PS

ಪಿರ್ಯಾದುದಾರರಾಧ KISHORE KUMAR ರವರು  ದಿನಾಂಕ 30-12-2021 ರಂದು ಸಂಜೆ 6-00 ಗಂಟೆಯಿಂದ ಅದೇ ದಿನ ರಾತ್ರಿ 9-00 ಗಂಟೆಯ ಮದ್ಯಾವಧಿಯಲ್ಲಿ ಮಂಗಳೂರು ನಗರದ ಮೋಡರ್ನ್ ಬೆಡ್ ಹೌಸ್, ಕಾಶಿಯಾ ಹೈಸ್ಕೂಲ್ ಎದುರುಗಡೆ, ಜೆಪ್ಪು ಮಂಗಳೂರು ಇಲ್ಲಿ ಪಾರ್ಕ್ ಮಾಡಿ ಇಟ್ಟಿದ್ದ ಪಿರ್ಯಾದಿದಾರರ ಆರ್. ಸಿ. ಮಾಲಕತ್ವದ  ಯಮಹಾ ಕಂಪನಿಯ ಆರ್. ಎಕ್ಸ್-100,  2002 ನೇ ಮೊಡಲ್ ನ KA 01 U 8637 ನೊಂದಣಿ ಸಂಖ್ಯೆಯ 02H4TL536500 ಚೆಸಿಸ್ ನಂಬ್ರದ, 4TL536500 ಇಂಜಿನ್ ನಂಬ್ರದ, ಮೇರೂನ್ ಬಣ್ಣದ, ಅಂದಾಜು ಮೌಲ್ಯ 25,000/- ರೂಪಾಯಿ ಬೆಲೆಬಾಳುವ ದ್ಚಿಚಕ್ರ ವಾಹನವನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಎಂಬಿತ್ಯಾದಿಯಾಗಿರುತ್ತದೆ. .

 

ಇತ್ತೀಚಿನ ನವೀಕರಣ​ : 19-01-2022 07:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080